Deepavali Horoscope 2024: ಹೊಸ ವರ್ಷದಲ್ಲಿ ನಿರೀಕ್ಷೆಗೆ ಮೀರಿದ ಯಶಸ್ಸು ನಿಮ್ಮದಾಗುತ್ತೆ, ಆದಾಯದ ಮೂಲಗಳು ಹೆಚ್ಚಾಗುತ್ತವೆ
ಪ್ರತಿಯೊಂದು ರಾಶಿಯವರಿಗೂ ಗ್ರಹಗಳ ಸ್ಥಾನ ಬದಲಾವಣೆಯಿಂದ ಶುಭ, ಅಶುಭ ಫಲಗಳು ಇರುತ್ತವೆ. 2024ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಯಾವ ರಾಶಿವರಿಗೆ ಏನು ಪ್ರಯೋಜನಗಳಿವೆ, ಹೊಸ ವರ್ಷದಲ್ಲಿ ನಿರೀಕ್ಷೆಗೆ ಮೀರಿದ ಯಶಸ್ಸು ಯಾವ ರಾಶಿಯವರಿಗೆ ಇದೆ ಎಂಬುದನ್ನು ತಿಳಿಯೋಣ.

ಭಾರತ ಹಾಗೂ ವಿದೇಶಗಳಲ್ಲಿರುವ ಹಿಂದೂಗಳು ಅತ್ಯಂತ ಅದ್ಧೂರಿಯಾಗಿ ಆಚರಿಸುವ ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಕತ್ತಲೆಯೆಂಬ ಅಜ್ಞಾನವನ್ನು ಸರಿಸಿ ಬೆಳಕೆಂಬ ಜ್ಞಾನವನ್ನು ಮೂಡಿಸುವ ಈ ಹಬ್ಬದಲ್ಲಿ ವಿಶೇಷವಾಗಿ ನೀವು ನಿಮ್ಮ ಆಶೀರ್ವಾದಗಳನ್ನು ಅರ್ಥಪೂರ್ಣ, ಶಾಶ್ವತ ಗುರಿಗಳಿಗೆ ತಿರುಗಿಸಿಕೊಳ್ಳುತ್ತೀರಿ. ಪ್ರತಿ ರಾಶಿಚಕ್ರ ಚಿಹ್ನೆಗೆ ದೀಪಾವಳಿ ಜಾತಕ ಹೇಗಿರುತ್ತದೆ, ಯಾವ ರಾಶಿಯವರಿಗೆ ಹೆಚ್ಚಿನ ಲಾಭಗಳಿವೆ, ಯಾವ ರಾಶಿಯವರಿಗೆ ಸವಾಲುಗಳು ಇರುತ್ತವೆ ಎಂಬುದನ್ನು ದೀಪಾವಳಿ ಭವಿಷ್ಯದಲ್ಲಿ ನೀಡಲಾಗಿದೆ.
ಮೇಷ ರಾಶಿ
ಈ ರಾಶಿಯವರಿಗೆ ಅದೃಷ್ಟವು ಇವರ ಪರವಾಗಿಯೇ ಇರುತ್ತದೆ. ನಿಮಲ್ಲಿ ಕೃತಜ್ಞತೆಯ ಭಾವನೆ ಹೆಚ್ಚಿರುತ್ತದೆ. ಸಹಾಯ ಹಸ್ತ ಅಥವಾ ದಯಾಪರ ಕೆಲಸಗಳನ್ನು ಮಾಡುತ್ತೀರಿ. ನಿಮ್ಮನ್ನು ಸಂಪೂರ್ಣವಾಗಿ ಪ್ರೀತಿಸುವವರನ್ನು ನೀವು ಎಂದಿಗೂ ಬಿಟ್ಟುಕೊಡುವುದಿಲ್ಲ. ಕೊಡುವುದು ಮತ್ತು ಸ್ವೀಕರಿಸುವುದು ಎರಡೂ ಸುಂದರವಾದ ಸಮತೋಲನವನ್ನು ಸೃಷ್ಟಿಸುತ್ತವೆ ಎಂಬುದನ್ನು ಅರಿತುಕೊಳ್ಳುತ್ತೀರಿ. ದೊಡ್ಡ ಸಾಧನೆ ಮಾಡುವ ಭಾವನೆ ನಿಮ್ಮಲ್ಲಿರುತ್ತದೆ.
ವೃಷಭ ರಾಶಿ
ಬಾಲ್ಯದ ಆಳವಾದ ಗಾಯವು ಈಗ ಗುಣವಾಗುತ್ತದೆ, ಇದು ಪರಿಹಾರದ ಅಲೆಯನ್ನು ತರುತ್ತದೆ. ಈ ದೀಪಾವಳಿಯಲ್ಲಿ ಆರಾಮ ಮತ್ತು ಐಷಾರಾಮಿ ಜೀವನಕ್ಕಾಗಿ ನಿಮ್ಮ ಕನಸುಗಳು ಕೈಗೆಟುಕುವ ಹಂತದಲ್ಲಿ ಇರುತ್ತವೆ. ಅಭಿವ್ಯಕ್ತಿಗಳು ವಾಸ್ತವದ ಕಡೆಗೆ ವೇಗವಾಗಿ ಚಲಿಸುತ್ತವೆ. ದೀರ್ಘಕಾಲದಿಂದ ಬಯಸಿದ ನಿಧಿಯಲ್ಲಿ ನೆಲೆಸುತ್ತಿದ್ದಂತೆ ಸಮೃದ್ಧಿಯನ್ನು ಆನಂದಿಸುತ್ತೀರಿ. ಜೀವನದಲ್ಲಿ ನಿರೀಕ್ಷೆಗೆ ಮೀರಿದ ಯಶಸ್ಸು ನಿಮ್ಮದಾಗುತ್ತೆ. ಹಣಕ್ಕೆ ಕೊರತೆಯೇ ಇರುವುದಿಲ್ಲ.
ಮಿಥುನ ರಾಶಿ
ನಿಮ್ಮ ಉದ್ದೇಶದ ಪ್ರಜ್ಞೆ ಬದಲಾಗುತ್ತದೆ. ದೀರ್ಘ ಪ್ರಯಾಣದ ನಂತರ ನಿಮಗೆ ಉಲ್ಲಾಸದಾಯಕ ವಿರಾಮದಂತೆ ಭಾಸವಾಗುತ್ತದೆ. ನಿಮ್ಮ ಜೀವನದಲ್ಲಿ ದೊಡ್ಡ ತಿರುವು ಇರುತ್ತದೆ. ಸುಲಭವಲ್ಲದಿದ್ದರೂ ಪ್ರತಿಫಲಗಳು ಇರುತ್ತವೆ. ನಿಮ್ಮ ಜೀವನದ ಪ್ರತಿಯೊಂದು ತಿರುವುಗಳನ್ನು ಮುಂದಿನ ಹಂತಕ್ಕೆ ಅವಕಾಶಗಳನ್ನಾಗಿ ಮಾರ್ಪಡಿಸುತ್ತೀರಿ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುವಲ್ಲಿ ಸಫಲರಾಗುತ್ತೀರಿ.
ಕಟಕ ರಾಶಿ
ಸಂಪಾದನೆಯ ವೇಗವನ್ನು ಹೆಚ್ಚಿಸುತ್ತೀರಿ. ಕಂಪನಿಯಲ್ಲಿನ ಉದ್ಯೋಗವನ್ನು ತೊರೆದು ಸ್ವಂತ ಉದ್ಯಮವನ್ನು ಆರಂಭಿಸುತ್ತೀರಿ. ನಿಮ್ಮ ಹಣೆಬರಹವನ್ನು ನೀವೇ ಬದಲಾಯಿಸಿಕೊಳ್ಳುತ್ತೀರಿ. ಜೀವನದಲ್ಲಿ ಎಂದೂ ನೋಡಿರದ ದೊಡ್ಡ ಮೊತ್ತದ ಹಣವನ್ನು ನೋಡುತ್ತೀರಿ. ಧೈರ್ಯದಿಂದ ಎಲ್ಲವನ್ನು ಎದುರಿಸುತ್ತೀರಿ. ಯಾವುದಕ್ಕೂ ಕೊರತೆ ಇರದಂತೆ ಕುಟುಂಬವನ್ನು ನೋಡಿಕೊಳ್ಳುತ್ತೀರಿ.
ಸಿಂಹ ರಾಶಿ
ನೀವು ಅಧಿಕಾರದಲ್ಲಿ ದೊಡ್ಡ ಜವಾಬ್ದಾರಿಯನ್ನು ಹೊಂದಿರುತ್ತೀರಿ. ಭ್ರಮೆ ಮತ್ತು ಅಡೆತಡೆಗಳನ್ನು ಇರುತ್ತವೆ. ಸಂಬಂಧಗಳನ್ನು ಶುದ್ಧೀಕರಿಸುತ್ತೀರಿ. ಗೊಂದಲವನ್ನುಂಟುಮಾಡುವ ಯಾವುದೇ ಕೆಲಸದ ಮೇಲೆ ಹೆಚ್ಚು ಗಮನವನ್ನು ಹರಿಸುವುದಿಲ್ಲ. ವ್ಯಾಪಾರಿಗಳಿಗೆ ಯಶಸ್ಸು ಇರಲಿದೆ. ಹೊಸ ಉದ್ಯಮವನ್ನು ಆರಂಭಿಸುತ್ತೀರಿ. ಸಿಂಹ ರಾಶಿಯವರಿಗೆ 2025ರ ಹೊಸ ವರ್ಷ ಉತ್ತಮ ಫಲಗಳನ್ನು ನೀಡುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಒತ್ತಡದಿಂದ ಮುಕ್ತರಾಗಲು ಸಾಕಷ್ಟು ಪ್ರಯತ್ನ ಮಾಡುತ್ತೀರಿ.
ತುಲಾ ರಾಶಿ
ನಿಮ್ಮ ನಿಜವಾದ ಸಂಪತ್ತು ನಿಮ್ಮ ಹೃದಯದಲ್ಲಿರುತ್ತೆ. ಇದನ್ನು ಅರಿತುಕೊಂಡಾಗ ನಿಮ್ಮ ಕನಸುಗಳಿಗೆ ವಿಶೇಷ ವ್ಯಕ್ತಿಯೊಬ್ಬರು ಮಾರ್ಗದರ್ಶನ ನೀಡುತ್ತಾರೆ. ಸ್ಪಷ್ಟ ಉದ್ದೇಶಗಳೊಂದಿಗೆ ಇರಬೇಕಾದ ಸ್ಥಳದತ್ತ ನೀವು ಚಲಿಸುತ್ತೀರಿ. ನಿಮ್ಮ ಸಾಮರ್ಥ್ಯ ಏನೆಂಬುದನ್ನು ಬೇರೆಯವರಿಗೆ ನಿಧಾನವಾಗಿ ಅರ್ಥವಾಗುತ್ತವೆ. ಕೆಲಸದಲ್ಲಿ ಒತ್ತಡ ಇರುತ್ತದೆ.
ಕನ್ಯಾ ರಾಶಿ
ಶ್ರಾಂತಿ ಮತ್ತು ಸಂತೋಷದ ದಿನಗಳು ಇರುತ್ತವೆ. ಆರಾಮದ ಜಗತ್ತಿನಿಂದ ಹೊರ ಬರುತ್ತೀರಿ. ಪ್ರತಿ ಕ್ಷಣವನ್ನು ಸವಿಯಲು ಸಿದ್ಧರಾಗಿರಿ. ಉದ್ಯೋಗದ ಸ್ಥಳದಲ್ಲಿ ಸಂತೋಷ ವಾತಾವರಣವನ್ನು ನಿರ್ಮಿಸುತ್ತೀರಿ. ಕುಟುಂಬದಲ್ಲಿ ನಿಮ್ಮ ಸ್ಥಾನ ಮುಖ್ಯವಾಗಿರುತ್ತದೆ. ಬೇರೆಯವರ ಮಾತುಗಳಿಗೆ ಕಿವಿಕೊಡದೆ ಕೆಲಸದತ್ತ ಮಾತ್ರ ಗಮನವನ್ನು ಹರಿಸುತ್ತೀರಿ. ಅವಿವಾಹಿತರಿಗೆ ಮದುವೆ ನಿಶ್ಚಯವಾಗುತ್ತದೆ.
ವೃಶ್ಚಿಕ ರಾಶಿ
ಜೀವನದ ಸಂತೋವನ್ನು ನಿಮ್ಮ ಹತ್ತಿರದವರೊಂದಿಗೆ ಆಚರಿಸುತ್ತೀರಿ. ನಿಮ್ಮ ಕನಸು ತೆರೆದುಕೊಳ್ಳುತ್ತದೆ. ದೇವದೂತರ ಆಶೀರ್ವಾದಗಳು ನಿಮ್ಮನ್ನು ಸುತ್ತುವರೆಯುತ್ತವೆ. ನೀವು ಎದುರಿಸಿದ ಸವಾಲುಗಳು ನಿಮ್ಮನ್ನು ದೊಡ್ಡ ಮಟ್ಟಕ್ಕೆ ತಲುಪಿಸುತ್ತವೆ. ಹೊಸ ಜನರ ಪರಿಚಯವಾಗಲಿದೆ. ವ್ಯಾಪಾರವನ್ನು ವಿಸ್ತರಿಸುತ್ತೀರಿ. ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೊಸ ಕೆಲಸಗಳು ಉತ್ತಮ ಲಾಭವನ್ನು ತರುತ್ತವೆ.
ಧನು ರಾಶಿ
ನಿಮ್ಮನ್ನು ನೀವು ಬದಲಾಯಿಸಿಕೊಳ್ಳುತ್ತೀರಿ. ಕೆಲಸದಲ್ಲಿ ಸ್ಥಿರತೆ ಇರುತ್ತದೆ. ಪ್ರೀತಿ, ವಿಶ್ವಾಸ ಮತ್ತು ಸಂಪನ್ಮೂಲಗಳು ನಿಮ್ಮ ದಾರಿಯಲ್ಲಿ ಇರುತ್ತವೆ. ಯಾವುದು ಹೆಚ್ಚು ಮುಖ್ಯವೋ ಅದರ ಮೇಲೆ ಕೇಂದ್ರೀಕರಿಸುತ್ತೀರಿ. ದೈವಿಕ ಶಕ್ತಿ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಅಧ್ಯಾತ್ಮಿಕದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಿಂದಿನ ಬಾಕಿ ಹಣವನ್ನು ವಸೂಲಿ ಮಾಡಿಕೊಳ್ಳುತ್ತೀರಿ. ಜಮೀನು ವಿವಾದಗಳು ಬಗೆಹರಿಯುತ್ತವೆ. ಕೋರ್ಟ್ ಪ್ರಕರಣಗಳು ಇತ್ಯಾರ್ಥವಾಗುತ್ತವೆ. ಸಾಲದ ಹೊರೆ ಕಡಿಮೆಯಾಗುತ್ತದೆ.
ಮಕರ ರಾಶಿ
ದೀಪಾವಳಿಯ ಸಮಯದಲ್ಲಿ ನಿಮಗೆ ಹೆಚ್ಚಿನ ಅದೃಷ್ಟ ಇರುತ್ತದೆ. ಪ್ರಯಾಣವು ಸುಲಭವಲ್ಲದಿದ್ದರೂ ನಿಮ್ಮ ಅಚಲ ನಿರ್ಧಾರಗಳು ದೊಡ್ಡ ಲಾಭಗಳನ್ನು ತರುತ್ತವೆ. ಆರೋಗ್ಯ ಉತ್ತಮವಾಗಿರುತ್ತದೆ. ದೈವಿಕ ಬೆಂಬಲವು ಅಗತ್ಯದ ಸಮಯದಲ್ಲಿ ನಿಮ್ಮನ್ನು ಮೇಲಕ್ಕೆ ಎತ್ತುತ್ತದೆ. ಪ್ರತಿ ಬಾರಿಯೂ ನೀವು ಬಲಶಾಲಿಯಾಗಿ ಹೊರ ಹೊಮ್ಮುತ್ತೀರಿ. ನಿಮ್ಮ ಸ್ವಂತ ಸ್ಥಿತಿಸ್ಥಾಪಕತ್ವದಿಂದ ಫೀನಿಕ್ಸ್ ಪಕ್ಷಿಯಂತೆ ಏರಲು ಇದು ನಿಮ್ಮ ಸಮಯ. ಆರ್ಥಿಕ ಲಾಭ ಇರುತ್ತದೆ.
ಕುಂಭ ರಾಶಿ
ನಿಮ್ಮ ಕನಸುಗಳು ನನಸಾಗುತ್ತವೆ, ನಿಮ್ಮ ಜೀವನದಲ್ಲಿ ಸಂತೋಷ ಇರುತ್ತವೆ. ದಂಪತಿ ನಡುವೆ ಹೊಂದಾಣಿಕೆ ಉತ್ತಮವಾಗಿರುತ್ತವೆ. ಉದ್ಯೋಗದಲ್ಲಿ ಬಡ್ತಿ ಇರುತ್ತವೆ. ವ್ಯಾಪಾರವನ್ನು ವಿಸ್ತರಿಸಿಕೊಳ್ಳುತ್ತೀರಿ. ಉನ್ನತ ಸ್ಥಾನಕ್ಕೆ ಹೋಗುತ್ತೀರಿ. ಸಾಲದ ಹೊರೆ ಕಡಿಮೆಯಾಗುತ್ತದೆ. ಕುಂಭ ರಾಶಿಯವರು ದಾನವನ್ನುಇಷ್ಟಪಡುತ್ತಾರೆ. ಹೀಗಾಗಿ ಈ ಹೊಸ ವರ್ಷದಲ್ಲಿ ಸಂಪಾದನೆಯ ಒಂದು ಭಾಗವನ್ನು ದಾನ ಮಾಡುತ್ತೀರಿ. ಇದರಿಂದ ಹೆಚ್ಚಿನ ಶುಭ ಫಲಗಳು ಇರುತ್ತವೆ.
ಮೀನ ರಾಶಿ
ನಿರಂತರವಾಗಿ ಸಹಾಯ ಮಾಡುತ್ತೀರಿ. ವಿಶ್ರಾಂತಿ ಪಡೆಯುವ ಸಮಯವಾಗಿರುತ್ತದೆ. ಆರೋಗ್ಯ ಸ್ಪಂದಿಸುತ್ತದೆ. ನಿಮ್ಮ ಶಕ್ತಿ ಏನೆಂಬುದು ಸುತ್ತಮುತ್ತಲಿನ ಜನರಿಗೆ ಗೊತ್ತಾಗಲಿದೆ. ಪ್ರತಿ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ. ದಾಂಪತ್ಯದಲ್ಲಿ ಸಣ್ಣ ಬಿರುಕು ಇರುತ್ತದೆ. ಆದರೆ ಚರ್ಚೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೀರಿ. ರಾಜಕೀಯವಾಗಿ ಹೆಸರು ಮಾಡುತ್ತೀರಿ. ಸರ್ಕಾರಿ ಉದ್ಯೋಗದಲ್ಲಿ ನಿವೃತ್ತಿಯಾಗುತ್ತಿದ್ದಂತೆ ರಾಜಕೀಯವನ್ನು ಪ್ರವೇಶಿಸುತ್ತಾರೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
ವಿಭಾಗ