ಶ್ರಾವಣ ಮಾಸ ಅತ್ಯಂತ ಮಂಗಳಕರ ಯಾಕೆ? ಶಿವನ ಪೂಜೆ, ಚಿನ್ನಾಭರಣ ಖರೀದಿಗೂ ಒಳ್ಳೆಯ ಸಮಯ, ವಿಶೇಷ ಹೀಗಿರುತ್ತೆ
ಚಿನ್ನ ಮತ್ತು ಬೆಳ್ಳಿಯ ಜೊತೆಗೆ ಬಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಖರೀದಿಸಿದರೆ ಮಂಗಳಕರವಾಗಿರುತ್ತದೆ ಎಂಬುದು ಹಲವರ ನಂಬಿಕೆ. ಅವಿವಾಹಿತ ಹೆಣ್ಣು ಮಕ್ಕಳು ಈ ಮಾಸದಲ್ಲಿಯೇ ಒಳ್ಳೆ ಪತಿಗಾಗಿ ವ್ರತಗಳನ್ನು ಮಾಡುತ್ತಾರೆ. ಶ್ರಾವಣ ಮಾಸ ಯಾಕೆ ಮಂಕಳಕರ ಎಂಬುದನ್ನು ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಸರ್ಮಾ ತಿಳಿಸಿರುವ ವಿವರನ್ನು ಇಲ್ಲಿ ನೀಡಲಾಗಿದೆ.
ಶ್ರಾವಣ ಮಾಸವು ಅತ್ಯಂತ ಮಂಗಳಕರವಾಗಿದೆ. ಯಾಕೆ ಎಂಬುದನ್ನು ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ವಿವರಿಸಿರುವ ಭಾಗವನ್ನು ಇಲ್ಲಿ ನೀಡಲಾಗಿದೆ. ಈ ತಿಂಗಳ ಮುಂದಿನ ನಾಲ್ಕು ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ಶನಿವಾರಗಳು ಅತ್ಯಂತ ಪವಿತ್ರವಾಗಿವೆ. ಜಂಧ್ಯಾಲ ಪೌರ್ಣಮಿ, ಕೃಷ್ಣಾಷ್ಟಮಿ, ಅಮಾವಾಸ್ಯೆಯಂತಹ ಅನೇಕ ಹಬ್ಬಗಳಿರುವ ಈ ಮಾಸದಲ್ಲಿ ಹಿಂದೂಗಳು ಅಧ್ಯಾತ್ಮಿಕ ಜೀವನವನ್ನು ನಡೆಸುತ್ತಾರೆ.
ಚಿನ್ನ ಮತ್ತು ಬೆಳ್ಳಿಯ ಜೊತೆಗೆ ಬಟ್ಟೆಗಳನ್ನು ಖರೀದಿಸಲು ಇದು ಮಂಗಳಕರ ತಿಂಗಳು ಎಂದು ಹೇಳಲಾಗುತ್ತದೆ. ಅವಿವಾಹಿತ ಹೆಣ್ಣು ಮಕ್ಕಳು ಈ ಮಾಸದಲ್ಲಿಯೇ ಒಳ್ಳೆ ಪತಿಗಾಗಿ ವ್ರತಗಳನ್ನು ಮಾಡಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಾರೆ. ಪ್ರತಿ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಅರಿಶಿನ ಕುಂಕುಮ ಹಚ್ಚಲಾಗುತ್ತದೆ. ದೇವರ ಫೋಟೊಗಳಿಗೆ ಪೂಜೆ ಮಾಡಲಾಗುತ್ತದೆ. ಒಂದು ರೀತಿಯಲ್ಲಿ ಮನೆಯಲ್ಲಿ ಲಕ್ಷ್ಮಿ ಕಳೆ ಎದ್ದು ಕಾಣುತ್ತದೆ ಎಂದು ಚಲಕರ್ಮತಿ ಅವರು ಹೇಳಿದ್ದಾರೆ.
ಶ್ರಾವಣ ಮಾಸದ ವಿಶೇಷ ಹೀಗಿರುತ್ತೆ
ಶ್ರಾವಣ ಮಾಸದಲ್ಲಿನ ನಾಲ್ಕು ಸೋಮವಾರಗಳಲ್ಲಿ ಶಿವನ ಭಕ್ತರು ಉಪವಾಸ ಮಾಡುತ್ತಾರೆ. ದೀಕ್ಷೆಯೊಂದಿಗೆ ಉಪವಾಸ, ಶಿವನಿಗೆ ಅಭಿಷೇಕ ಮತ್ತು ರುದ್ರಾಭಿಷೇಕವನ್ನು ಮಾಡಲಾಗುತ್ತಾರೆ. ಪಾರ್ವತಿ ದೇವಿಗೆ ಕುಂಕುಮ ಹಚ್ಚಿ ಪೂಜಿಸಿದರೆ ಶಾಶ್ವತವಾಗಿ ಆಶೀರ್ವಾದವನ್ನು ಹೊಂದುತ್ತೇವೆ ಎಂಬುದು ಭಕ್ತರ ನಂಬಿಕೆ. ಶ್ರೀಕೃಷ್ಣನು ದ್ರೌಪದಿ ದೇವಿಗೆ ಮತ್ತು ನಾರದ ಮುನೀಂದ್ರರು ಸಾವಿತ್ರಿ ದೇವಿಗೆ ಮಂಗಳಗೌರಿ ವ್ರತಕಥೆ ಮತ್ತು ಪೂಜಾವಿಧಾನವನ್ನು ಕಲಿಸಿದರು. ಮಂಗಳಗೌರಿ ದೇವಿಯ ದರ್ಶನವನ್ನು ಹೊಂದಿರುವ ಸ್ತ್ರೀಯರಿಗೆ ವಿಧವೆಯ ಬಾಧೆ ಇರುವುದಿಲ್ಲ. ಅವರು ಎಲ್ಲಾ ರೀತಿಯ ಆಶೀರ್ವಾದಗಳೊಂದಿಗೆ ಜೀವನಲ್ಲಿ ಸುಖವಾಗಿ ಇರುತ್ತಾರೆ. ಆದ್ದರಿಂದಲೇ ಅನಾದಿ ಕಾಲದಿಂದಲೂ ವಿವಾಹಿತ ಮಹಿಳೆ ಶ್ರಾವಣ ಮಂಗಳವಾರ ಮಂಗಳ ಗೌರಿ ವಿಶೇಷ ಪೂಜೆ ಮತ್ತು ವ್ರತವನ್ನು ಮಾಡುತ್ತಾರೆ. ಅರಿಶಿನ, ಕುಂಕುಮ, ಹೂವುಗಳು, ಮಸಾಲೆ ಹಾಗೂ ಹಸುವಿನ ಹಾಲನ್ನು ಈ ವ್ರತಕ್ಕೆ ಬಳಸಬೇಕು. ಈ ವ್ರತವನ್ನು ಶ್ರಾವಣ ಮಾಸದ ಮಂಗಳವಾರದಂದು ಮಾಡಲಾಗುತ್ತದೆ.
ಮಂಗಳಗೌರಿ ವ್ರತವನ್ನು ಹೊಸದಾಗಿ ಮದುವೆಯಾದ ಮಹಿಳೆಯರು ಹೆಚ್ಚಾಗಿ ಆಚರಿಸುತ್ತಾರೆ. ಈ ದಿನ ಮುಂಜಾನೆ ಎದ್ದು ತಲೆಸ್ನಾನ ಮಾಡಿ ಮಂಗಳಗೌರಿ ವ್ರತಕ್ಕೆ ಬೇಕಾದ ಹೂವು, ಎಲೆ-ಅಡಿಕೆ, ಪನ್ನೀರ್ ಎಲೆ, ಕುಂಕುಮ, ಮುಂತಾದ ಸಾಮಗ್ರಿಗಳನ್ನು ಸಿದ್ಧಮಾಡಿಕೊಳ್ಳಬೇಕು. ಅರಿಶಿನ ದಾರಕ್ಕೆ ಹೂವುಗಳು, ಎಲ್ಲಾ ಕೇಡುಗಳಿಂದ ರಕ್ಷಣೆ ನೀಡುವಂತ ರಕ್ಷಾ ತೋರಣವನ್ನು ತಯಾರಿಸಲಾಗುತ್ತದೆ. ಪೂಜೆಯ ಸಂದರ್ಭದಲ್ಲಿ ಗೌರಿ ದೇವಿಯ ಮೇಲೆ ಹಾಕಿ ಪೂಜೆಯಾದ ನಂತರ ಒಂದು ಗೌರಿ ದೇವಿಗೆ ಇಟ್ಟು, ಮತ್ತೊಂದನ್ನು ಮುತ್ತೈದೆಗೆ ನೀಡಲಾಗುತ್ತದೆ.
ಈ ದಾರವನ್ನ ಕೊಟ್ಟಾಗ ಸೌಭಾಗ್ಯ ಪ್ರದಾಯಿನಿ ಶ್ರಾವಣ ಗೌರಿ 'ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ॥ ಶರಣ್ಯೇ ತ್ರ್ಯಂಬಿಕೇ ಗೌರೀ ನಾರಾಯಣೀ ನಮೋಸ್ತುತೇ ॥ ಎಂದು ದೇವಿಯನ್ನು ಆರಾಧಿಸುತ್ತಾರೆ. ಭಾರತೀಯ ಸನಾತನ ಸಂಸ್ಕೃತಿ ಸಂಪ್ರದಾಯಗಳಲ್ಲಿ ಶ್ರಾವಣ ಮಾಸಕ್ಕೆ ಅತ್ಯಂತ ಪ್ರಾಧಾನ್ಯವಿದೆ. ನೂತನ ವಧುಗಳು ಸೌಭಾಗ್ಯ ಸಿದ್ಧಿಗಾಗಿ ಈ ಮಾಸದಲ್ಲಿಯೇ ಮಂಗಳಗೌರಿ, ವರಲಕ್ಷ್ಮಿ ವ್ರತಾಚರಣೆ ಮಾಡುವುದು ಅನಾದಿ ಕಾಲದಿಂದಲೂ ಬಂದಿರುವ ಸಂಪ್ರದಾಯ.
ಗೌರಿ ದೇವಿಯನ್ನು ಪೂಜಿಸಿದರೆ ಒಳ್ಳೆಯ ಪತಿ ಸಿಗುತ್ತಾನೆ ಎಂದು ಮದುವೆಯಾದ ಕನ್ಯೆಯರ ವಿಶ್ವಾಸವಾಗಿರುತ್ತದೆ. ಪತಿವ್ರತ್ಯ ಶಕ್ತಿ ಹೊಂದಿರುವ ಪಾರ್ವತೀದೇವಿ. ಪರಮೇಶ್ವರನಿ ದೇಹದಲ್ಲಿ ಅರ್ಧಭಾಗ ಪಡೆದ ಅರ್ಧನಾರೀಶ್ವರಿ. ಶ್ರಾವಣ ಮಂಗಳವಾರ ಗೌರಿ ಪೂಜೆ ಮಾಡುವವರಿಗೆ ಸೌಭಾಗ್ಯ ಸಿಗುತ್ತದೆ. ಇಷ್ಟಕಾಮ್ಯಾರ್ಧಸಿದ್ಧಿ ಪ್ರಾಪ್ತಿಸುತ್ತಿದೆಯೆಂದು ಪುರಾಣಗಳು ಹೇಳುತ್ತಿವೆ ಎಂದು ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ತಿಳಿಸಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)