ಮಹಿಳೆಯರಿಗೆ ನಿರ್ಬಂಧವಿಲ್ಲ, ಎಲ್ಲಾ ಭಕ್ತರಿಗೂ ಸಿಗುತ್ತೆ ದೀಕ್ಷೆ; ಉತ್ತರಾಂಧ್ರ ಶಬರಿಮಲೆಯ ವಿಶೇಷ ಮತ್ತು ಮಹತ್ವ ತಿಳಿಯಿರಿ-devotional degula darshana no restriction for women uttarandhra sabarimala special and importance here rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಿಳೆಯರಿಗೆ ನಿರ್ಬಂಧವಿಲ್ಲ, ಎಲ್ಲಾ ಭಕ್ತರಿಗೂ ಸಿಗುತ್ತೆ ದೀಕ್ಷೆ; ಉತ್ತರಾಂಧ್ರ ಶಬರಿಮಲೆಯ ವಿಶೇಷ ಮತ್ತು ಮಹತ್ವ ತಿಳಿಯಿರಿ

ಮಹಿಳೆಯರಿಗೆ ನಿರ್ಬಂಧವಿಲ್ಲ, ಎಲ್ಲಾ ಭಕ್ತರಿಗೂ ಸಿಗುತ್ತೆ ದೀಕ್ಷೆ; ಉತ್ತರಾಂಧ್ರ ಶಬರಿಮಲೆಯ ವಿಶೇಷ ಮತ್ತು ಮಹತ್ವ ತಿಳಿಯಿರಿ

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಉತ್ತರಾಂಧ್ರ ಶಬರಿಮಲೆ ಜನಪ್ರಿಯವಾಗುತ್ತಿದೆ. ದೂರದ ಕೇರಳದಲ್ಲಿನ ದೇವಾಲಯಕ್ಕೆ ಹೋಗಲು ಸಾಧ್ಯವಾಗದ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆಯುತ್ತಾರೆ. ವರ್ಷದಿಂದ ವರ್ಷಕ್ಕೆ ಅಯ್ಯಪ್ಪ ಮಾಲಾಧಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಂಧ್ರದ ಈ ದೇವಾಲಯದ ವಿಶೇಷವನ್ನು ಇಲ್ಲಿ ನೀಡಲಾಗಿದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಉತ್ತರಾಂಧ್ರ ಶಬರಿಮಲೆ ದೇವಾಲಯ
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಉತ್ತರಾಂಧ್ರ ಶಬರಿಮಲೆ ದೇವಾಲಯ

ಭಾರತದ ಅತ್ಯಂತ ಪ್ರಾಚೀನ, ಹಿಂದೂಗಳ ಪುಣ್ಯ ಕ್ಷೇತ್ರ ಹಾಗೂ ವಿಶ್ವವಿಖ್ಯಾತ ದೇವಾಲಯಗಳಲ್ಲಿ ಕೇರಳದ ಶಬರಿಮಲೆ (Kerala Sabarimala Temple) ಕೂಡ ಒಂದು. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಲ್ಲಿರುವ ಪತ್ತಿನಂತಿಟ್ಟು ಜಿಲ್ಲೆಯಲ್ಲಿ ಈ ದೇವಾಲಯವಿದೆ. ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಹಿಡುಮುಡಿ ಹೊತ್ತು ಬರುತ್ತಾರೆ. ಆದರೆ ಆಂಧ್ರ ಪ್ರದೇಶದಲ್ಲೂ ಒಂದು ಶಬರಿಮಲೆ ದೇವಸ್ಥಾನವಿದ್ದು, ಈ ದೇವಾಲಯದ ಅಯ್ಯಪ್ಪನಿಗೂ ಸಾವಿರಾರು ಭಕ್ತರಿದ್ದಾರೆ. ಪತ್ತಿನಂತಿಟ್ಟುವಿನ ಶಬರಿಮಲೆಯಂತೆ ಉತ್ತರಾಂಧ್ರ ಶಬರಿಮಲೆ (Uttarandhra Sabarimala) ಕೂಡ ತುಂಬಾ ಜನಪ್ರಿಯವಾಗುತ್ತಿದೆ. ಭಕ್ತರ ಸಂಕಷ್ಟಗಳನ್ನು ದೂರಮಾಡಿ ಸುಖ-ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಕರುಣಿಸುವ ಈ ಅಯ್ಯಪ್ಪನ ದೇವಾಲಯದಲ್ಲಿನ ವಿಶೇಷಗಳು ಹಾಗೂ ಮಹತ್ವವನ್ನು ಇಲ್ಲಿ ತಿಳಿಯೋಣ.

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪೆಂಡುರ್ತಿ ಸಮೀಪದಲ್ಲಿರುವ ಈ ದೇವಾಲಯ ಉತ್ತರಾಂಧ್ರ ಶಬರಿಮಲೆ ಅಂತಲೇ ಜನಪ್ರಿಯವಾಗಿದೆ. ಈ ದೇವಾಲಯದಲ್ಲಿ ಅಯ್ಯಪ್ಪಸ್ವಾಮಿಯ ವಿಗ್ರಹವನ್ನು 2020 ರಲ್ಲಿ ಸ್ಥಾಪಿಸಲಾಗಿದೆ. ಪಂಚ ಲೋಹಗಳಾದ ಚಿನ್ನ, ಬೆಳ್ಳಿ, ಸೀಸ, ತಾಮ್ರ ಹಾಗೂ ಕಬ್ಬಿಣವನ್ನು ಬಳಸಿ ವಿಗ್ರಹವನ್ನು ತಯಾರಿಸಲಾಗಿದೆ. ಕೇರಳದ ಶಬರಿಮಲೆಯಲ್ಲಿ ಇರುವಂತೆಯೇ ಇಲ್ಲೂ ಕೂಡ 18 ಪವಿತ್ರ ಮೆಟ್ಟಿಲುಗಳು ಇವೆ.

ಅಯ್ಯಪ್ಪ ಮಾಲೆಯನ್ನು ಧರಿಸುವ ಭಕ್ತರು ಈ ದೇವಾಲಯಕ್ಕೆ ಬಂದು ಸ್ವಾಮಿಯ ದರ್ಶನ ಪಡೆಯುತ್ತಾರೆ. ಪತ್ತಿನಂತಿಟ್ಟುವಿನ ದೇವಾಲಯದಂತೆ ಇಲ್ಲೂ ಕೂಡ ಮಹಿಳಾಯ ಭಕ್ತರಿಗೆ ವಯಸ್ಸಿನ ನಿರ್ಬಂಧವಿಲ್ಲ. ಯಾರು ಬೇಕಾದರೂ ಪವಿತ್ರ ದೇಗುಲಕ್ಕೆ ಭೇಟಿ ನೀಡಬಹುದು. ದೂರದ ಶಬರಿಮಲೆಗೆ ಹೋಗಲಾದ ಭಕ್ತರು ಇದೇ ದೇಗುಲಕ್ಕೆ ಮಾಲೆಯ ದೀಕ್ಷೆಯನ್ನು ಮುಗಿಸುತ್ತಾರೆ. ಮಕರ ಜ್ಯೋತಿ ಮತ್ತು ಮಕರ ವಿಳಕ್ಕು ವೀಕ್ಷಿಸಲು ಈ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಸಕರ ಸಂಕ್ರಾಂತಿಯಂದು ಅಯ್ಯಪ್ಪ ಸ್ವಾಮಿಯನ್ನು ಹಂಸ ಆಕಾರದ ರಥದ ಮೇಲೆ ಮೆರವಣಿಗೆ ಮಾಡಲಾಗುತ್ತದೆ. ಈ ಅದ್ಧೂರಿ ಮೆರವಣಿಗೆಗೆ ಭಕ್ತರು ಸಾಕ್ಷಿಯಾಗುತ್ತಾರೆ.

2024 ರ ಶಬರಿಮಲೆ ತೀರ್ಥಯಾತ್ರೆ ಯಾವಾಗ ಆರಂಭವಾಗುತ್ತೆ?

ಶಬರಿಮಲೆಗೆ ತೀರ್ಥಯಾತ್ರೆ ನವೆಂಬರ್ 14 ರಿಂದ 17ರ ನಡುವೆ ಆರಂಭವಾಗುತ್ತದೆ. ಮಲಯಾಳಂ ತಿಂಗಳ ವೃಚಿಕಂ 1 ರಿಂದ ಪ್ರಾರಂಭವಾಗುತ್ತದೆ. ಅಯ್ಯಪ್ಪ ಸ್ವಾಮಿಗೆ ಅತ್ಯಂತ ಮುಖವಾದ ದಿನವೆಂದರೆ ಅದು ಮಕರ ಸಂಕ್ರಾಂತಿ ದಿನ. ಅಂದು ಮಕರದ 1ನೇ ದಿನವಾಗಿದೆ. ಸಂಕರ ದಿನ ಜನವರಿ 14 ರಿಂದ 16 ರ ನಡುವೆ ಬರುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಮಕರ ಸಂಕ್ರಾಂತಿಯಂದು ಪವಾದ ಸದೃಶ ಘಟನೆಗಳು ನಡೆಯುತ್ತವೆ.

ಶಬರಿಯಲ್ಲಿನ ಈ ವರ್ಷದ ವಿಶೇಷ ಹೇಗಿರುತ್ತೆ?

ತಿರುವಾಭರಣಂ ಅಂತಲೂ ಕರೆಯಲಾಗುವ ಸ್ವಾಮಿಯ ಆಭರಣಗಳನ್ನು ಹಳೆಯ ಪಂದಳಂ ಅರಮನೆಯಿಂದ ಶಬರಿಮಲೆಗೆ ಸಾಗಿಸುವಾಗ, ಕೃಷ್ಣಪರುಂತ್ (ಪವಿತ್ರ ಗರುಡ, ಹದ್ದು, ಭಗವಾನ್ ವಿಷ್ಣುವಿನ ವಾಹನ) ಅಮೂಲ್ಯ ಆಭರಣಗಳ ಮೇಲೆ ವೃತ್ತಗಳು ರಕ್ಷಕವಾಗಿ ಇರುತ್ತವೆ. ಈ ಅಪರೂಪದ ಹದ್ದು ದೀರ್ಘಕಾಲದವರೆಗೆ ಜನರ ಮಧ್ಯೆ ಅಪರೂಪವಾಗಿ ಕಂಡುಬರುತ್ತದೆ, ಆದರೂ ಮಂಗಳಕರವಾದ ಪಕ್ಷಿಯು ತಿರುವಾಭರಣಂ ಮೆರವಣಿಗೆಯನ್ನು ಅನುಸರಿಸುತ್ತದೆ. ಅಂತಿಮವಾಗಿ ಶಬರಿಮಲೆಯಲ್ಲಿ ಸನ್ನಿಧಾನಂ ಮೇಲೆ 9 ಬಾರಿ ಪ್ರದಕ್ಷಿಣೆ ಹಾಕಿ ಭಗವಾನ್ ಅಯ್ಯಪ್ಪನಿಗೆ ಗೌರವ ಸಲ್ಲಿಸಲಾಗುತ್ತದೆ. ಈ ಬಾರಿಯೂ ಲಕ್ಷಾಂತರ ಮಂದಿ ಮಾಲಾಧಾರಿಗಳು ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.