Vinayaka Vrata Story: ಈಶ್ವರ ಪುತ್ರನ ತಲೆ ಕಡಿದಿದ್ದು ಯಾಕೆ? ಗಣೇಶನ ಮೂಲ ಕಥೆ, ವಿನಾಯಕ ವ್ರತದ ವಿಶೇಷ ತಿಳಿಯಿರಿ
ಶಿವನ ಕೊಪದಿಂದ ಮನೆಯ ಕಾವಲುಗಾರ ಹುಡುಗನೊಬ್ಬ ತಲೆಯನ್ನು ಕಳೆದುಕೊಳ್ಳಬೇಕಾಗುತ್ತೆ. ನಂತರ ಪಾರ್ವತಿಯ ಅಕ್ರಂದನಿಂದ ನೋಡಲಾರದೆ ಆ ಬಾಲಕನಿಗೆ ಶಿವ ಆನೆಯ ತಲೆಯನ್ನು ಅಳವಡಿಸಿ ಜೀವನ ನೀಡಿ ಗಜಾನನ ಅಂತ ಹೆಸರಿಡುತ್ತಾನೆ. ವಿನಾಯಕ ವ್ರತದ ಹಿಂದಿನ ಕಥೆಯನ್ನು ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ವಿವರಿಸಿದ್ದಾರೆ.
Vinayaka Vrata Story: ಹಿಂದೂಗಳಿಗೆ ಅತ್ಯಂತ ಮಹತ್ವದ ಹಬ್ಬ ಗಣೇಶ ಚತುರ್ಥಿ. ಯಾವುದೇ ಕಾರ್ಯಕ್ರಮ ಆರಂಭಿಸುವ ಮುನ್ನ ಗಣೇಶನಿಗೆ ಪೂಜೆ ಮಾಡಲಾಗುತ್ತದೆ. ಗಣಪತಿಯನ್ನು ಅನಾದಿಕಾಲದಿಂದಲೂ ಸರ್ವ ಅನಿಷ್ಟಗಳನ್ನು ಹೋಗಲಾಡಿಸುವ ಹಾಗೂ ಸರ್ವ ಕುಲಗಳ ಮುಖ್ಯಸ್ಥನಾಗಿರುವ ದೇವರೆಂದು ಪೂಜಿಸಲಾಗುತ್ತಿದೆ. ಭಗವಾನ್ ಗಣೇಶನ ಜನ್ಮದಿನವಾದ ಭಾದ್ರಪದ ಶುದ್ಧ ಚವಿತಿಯನ್ನು ವಿಶ್ವಾದ್ಯಂತ ಹಿಂದೂಗಳು ಗಣೇಶ ಚತುರ್ಥಿ ಎಂದು ಆಚರಿಸುತ್ತಾರೆ. ಒಂಬತ್ತು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ವಿನಾಯಕನನ್ನು ಪೂಜಿಸಿ 10 ನೇ ದಿನ ನಿಮಜ್ಜನ ಮಾಡಲಾಗುತ್ತದೆ. ಇದು ಅನಾದಿ ಕಾಲದ ಸಂಪ್ರದಾಯವಾಗಿದೆ.
ಗಣೇಶನ ಮೂಲದ ಕಥೆಗಳನ್ನು ಪುರಾಣಗಳಲ್ಲಿ ವಿವಿಧ ರೀತಿಯಲ್ಲಿ ವಿವರಿಸಲಾಗಿದೆ. ಶಿವಪುರಾಣದಲ್ಲಿರುವ ಕಥೆ ಪ್ರಕಾರ, ಒಮ್ಮೆ ಪಾರ್ವತಿ ದೇವಿಯು ಸ್ನಾನ ಮಾಡುವ ಮುನ್ನ ದೇಹಕ್ಕೆ ಸ್ನಾನದ ಪುಡಿಯನ್ನುಹಚ್ಚಿಕೊಳ್ಳುತ್ತಾಳೆ. ಉಳಿದ ಹಿಟ್ಟಿನಿಂದ ಗೊಂಬೆಯನ್ನು ಮಾಡಿ ಅದಕ್ಕೆ ಜೀವ ತುಂಬುತ್ತಾಳೆ. ನಂತರ ಹುಡುಗನಿಗೆ ಗೇಟ್‌ನಲ್ಲಿ ಕಾವಲು ಕಾಯಲು ಬಿಡುತ್ತಾಳೆ. ನಾನು ಸ್ನಾನ ಮಾಡಿ ಬರುವವರೆಗೆ ಮನೆಯೊಳಗೆ ಯಾರನ್ನೂ ಬಿಡಬೇಡ ಎಂದು ಹೇಳಿ ಹೋಗಿರುತ್ತಾಳೆ. ಅದೇ ಸಮಯಕ್ಕೆ ಶಿವನು ಬರುತ್ತಾನೆ. ಆಗ ಕಾವಲು ಹುಡುಗ ಮನೆಯೊಳಗೆ ಹೋಗದಂತೆ ಶಿವನನ್ನು ತಡೆಯುತ್ತಾನೆ. ಇಬ್ಬರ ನಡುವೆ ದೊಡ್ಡ ಜಟಾಪಟಿ ನಡೆಯುತ್ತೆ.
ನನ್ನನ್ನೇ ತಡಿತೀಯಾ ಅಂತ ಕೋಪಗೊಂಡ ಶಿವನು ತನ್ನ ತ್ರಿಶೂಲದಿಂದ ಬಾಲಕನ ತಲೆಯನ್ನು ಕತ್ತರಿಸುತ್ತಾನೆ. ಸ್ನಾನ ಮುಗಿಸಿ ಬಂದ ಪಾರ್ವತಿ ತಲೆ ಕತ್ತರಿಸಿದ ಹುಡುಗನನ್ನು ನೋಡಿ ಅಳಲು ಪ್ರಾರಂಭಿಸುತ್ತಾಳೆ. ಆಕೆಯ ನೋವನ್ನು ನೋಡಲಾಗದೆ ಶಿವನು ಕಾಡಿಗೆ ಹೋಗಿ ಆನೆಯ ತಲೆಯನ್ನು ತಂದು ಹುಡುಗನ ದೇಹಕ್ಕೆ ಜೋಡಿಸಿ ಮತ್ತೆ ಜೀವ ನೀಡುತ್ತಾನೆ. ಗಜಾನನ ಹೆಸರಿಟ್ಟನು. ಅವನಿಂದಾಗಿ ಹುಡುಗನಿಗೆ ವಿಕಾರ ರೂಪ ಬಂದಿದೆ ಎಂದು ಭಾವಿಸಿ, ಪರ್ಯಾಯವಾಗಿ ಅಗ್ರಪೂಜೆಯನ್ನು ಏರ್ಪಡಿಸಿದನು. ದೇವತೆಗಳೆಲ್ಲರೂ ಮಾಲಾಮಂತ್ರದಿಂದ ಗಜಾನನನ್ನು ಪೂಜಿಸಿದರು. ವಿನಾಯಕ ವತ್ರವನ್ನು ಮಾಡಿದರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗಿದೆ.
ಪವರ್‌ಫುಲ್ ಮಂತ್ರವಿದು
ಶ್ಲೋ ಓಂ ಶ್ರೀಂ ಹ್ರೀಂ ಕ್ಲೀಂ ಗಣೇಶ್ವರಾಯ ಬ್ರಹ್ಮರೂಪಾಯ ಚರವೇ ಸರ್ವಸಿದ್ಧಿ ಪ್ರದೇಶಾಯ ವಿಘ್ನೇಶಾಯ ನಮೋನಮಃ ಮಾಲಾಮಂತ್ರಂ ಮೂವತ್ತೆರಡು ಅಕ್ಷರಗಳ ಮಹಾಮಂತ್ರ. ಈ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ. ಮೋಕ್ಷ ಪ್ರಾಪ್ತಿಯಾಗುತ್ತೆ.
ಗಣೇಶನಿಗೆ ಅನೇಕ ಸಮಾನಾರ್ಥಕ ಪದಗಳಿವೆ. ವಿಘ್ನೇಶ್ವರನು ಎಲ್ಲಾ ಅನಿಷ್ಟಗಳನ್ನು ನಾಶಮಾಡುವವನು. ಭಾದ್ರಪದ ಶುದ್ಧ ಚವತಿಯನ್ನು ವಿನಾಯಕ ಚತುರ್ಥಿ ಅಥವಾ ಗಣೇಶ ಚತುರ್ಥಿ ಎಂದು ಕರೆಯಲಾಗುತ್ತದೆ. ಗಣಪತಿಯು ಭಕ್ತರ ರಕ್ಷಕ. ಪೂರ್ವದಲ್ಲಿ ಹೇರಂಬ, ಪಶ್ಚಿಮದಲ್ಲಿ ವಕ್ರತುಂಡ, ದಕ್ಷಿಣದಲ್ಲಿ ಲಂಬೋದರ, ಉತ್ತರದಲ್ಲಿ ಗಣಪತಿ, ಈಶಾನ್ಯದಲ್ಲಿ ಈಶಾನಂದ, ಆಗ್ನೇಯದಲ್ಲಿ ಅಗ್ನಿತೇಜಸ, ನೈಋತ್ಯದಲ್ಲಿ ಪಾರ್ವತೀಸುತ, ವಾಯುವ್ಯದಲ್ಲಿ ವರದ ಎಂಬ ಹೆಸರಿನಿಂದ ಭಕ್ತರನ್ನು ರಕ್ಷಿಸುತ್ತಾನೆ.
ಭಾದ್ರಪದ ಶುದ್ಧ ಚತುರ್ಥಿಯಂದು ಜನರು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸುತ್ತಾರೆ. ಮನೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾನೆ. ಮೂರ್ತಿ ಪ್ರತಿಷ್ಠಾಪನೆಗಾಗಿ ಪೆಂಡಾಲ್ ಹಾಗುತ್ತಾರೆ. ಇದರಲ್ಲಿ ವೇದಿಕೆ ನಿರ್ಮಿಸಿ ಅದರಡಿ ಅಕ್ಕಿಯನ್ನು ಸುರಿಯುತ್ತಾರೆ. ಆ ಅಕ್ಕಿಯ ಮೇಲೆ ಗಣೇಶನ ಮೂರ್ತಿನ್ನು ಪ್ರತಿಷ್ಠಾಪಿಸಲಾಗುತ್ತದೆ.
ಜೇಡಿಮಣ್ಣಿನಿಂದ ಮಾಡಿದ ಗಣೇಶನ ವಿಗ್ರಹವು ಅತ್ಯುತ್ತಮವಾಗಿದೆ. ಮಾಂತ್ರಿಕವಾಗಿ ಪೂಜಿಸಿದರು. ದೂರ್ವಾಪತ್ರಗಳು ಅಂದರೆ ಗರಿಕಾಪೋಚಗಳು ಮತ್ತು ಹೂವುಗಳನ್ನು ಪೂಜೆಗೆ ಬಳಸಲಾಗುತ್ತದೆ. 21 ನೇ ಸಂಖ್ಯೆಯು ಗಣೇಶನಿಗೆ ತುಂಬಾ ಪ್ರಿಯವಾಗಿದೆ. ಆದ್ದರಿಂದ ಗಣೇಶನನ್ನು ಇಪ್ಪತ್ತೊಂದು ಎಲೆಗಳಿಂದ ಪೂಜಿಸಲಾಗುತ್ತದೆ. ಇದು ಶುಭಫಲಗಳನ್ನು ನೀಡುತ್ತದೆ ಎಂದು ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ವಿವರಿಸಿದ್ದಾರೆ.