Ganesha Idol: ಗಣೇಶ ಚತುರ್ಥಿ ದಿನ ಮನೆಯಲ್ಲಿ ಪ್ರತಿಷ್ಠಾಪಿಸಲು ವಿನಾಯಕ ಮೂರ್ತಿ ಎಷ್ಟು ಎತ್ತರ ಇರಬೇಕು-devotional festival season how tall should be idol of ganesha to install at home on chaturthi rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ganesha Idol: ಗಣೇಶ ಚತುರ್ಥಿ ದಿನ ಮನೆಯಲ್ಲಿ ಪ್ರತಿಷ್ಠಾಪಿಸಲು ವಿನಾಯಕ ಮೂರ್ತಿ ಎಷ್ಟು ಎತ್ತರ ಇರಬೇಕು

Ganesha Idol: ಗಣೇಶ ಚತುರ್ಥಿ ದಿನ ಮನೆಯಲ್ಲಿ ಪ್ರತಿಷ್ಠಾಪಿಸಲು ವಿನಾಯಕ ಮೂರ್ತಿ ಎಷ್ಟು ಎತ್ತರ ಇರಬೇಕು

Ganesha Idol: ದೇಶಾದ್ಯಂತ ಗಣೇಶ ಹಬ್ಬಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮೂರ್ತಿ ಪ್ರತಿಷ್ಠಾಪಿಸಲು ಎಲ್ಲರೂ ಮಂಟಪಗಳನ್ನು ಸ್ಥಾಪಿಸುತ್ತಿದ್ದಾರೆ. ಚತುರ್ಥಿಯ ದಿನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಮನೆಯಲ್ಲಿ ಎಷ್ಟು ಎತ್ತರದ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಪ್ರತಿಷ್ಠಾಪಿಸಬೇಕು ಎಂಬುದನ್ನು ತಿಳಿಯಿರಿ.

ಗಣೇಶ ಚತುರ್ಥಿಯ ದಿನ ಮನೆಯಲ್ಲಿ ಪ್ರತಿಷ್ಠಾಪಿಸಲು ವಿನಾಯಕ ಮೂರ್ತಿ ಎಷ್ಟು ಎತ್ತರ ಇರಬೇಕು ಅನ್ನೋದನ್ನು ತಿಳಿಯಿರಿ.
ಗಣೇಶ ಚತುರ್ಥಿಯ ದಿನ ಮನೆಯಲ್ಲಿ ಪ್ರತಿಷ್ಠಾಪಿಸಲು ವಿನಾಯಕ ಮೂರ್ತಿ ಎಷ್ಟು ಎತ್ತರ ಇರಬೇಕು ಅನ್ನೋದನ್ನು ತಿಳಿಯಿರಿ.

ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ಥಿ ತಿಥಿಯಿಂದ ಸತತ 10 ದಿನಗಳ ಕಾಲ ಗಣೇಶ ಉತ್ಸವಗಳನ್ನು (Ganesh Utsava 2024) ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಂಟಪ ಪ್ರತಿಷ್ಠಾಪಿಸಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ವಿಧಿ ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ ಗಣೇಶೋತ್ಸವವು ಈ ವರ್ಷ ಸೆಪ್ಟೆಂಬರ್ 7 (ಶನಿವಾರ) ರಿಂದ ಪ್ರಾರಂಭವಾಗಲಿದೆ. ಈ ದಿನ ವಿನಾಯಕ ಚತುರ್ಥಿ ಆಚರಿಸಲಾಗುತ್ತದೆ. ಅದೇ ಸಮಯದಲ್ಲಿ ಗಣೇಶ ಉತ್ಸವವು ಸೆಪ್ಟೆಂಬರ್ 17 ರಂದು ಅನಂತ ಚತುರ್ದಶಿಯಂದು ಗಣೇಶ ನಿಮಜ್ಜನದೊಂದಿಗೆ ಕೊನೆಗೊಳ್ಳುತ್ತದೆ.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ದೇಶಾದ್ಯಂತ ಸಂಭ್ರಮದ ವಾತಾವರಣ ಇರುತ್ತದೆ. ಮಹಾರಾಷ್ಟ್ರದಲ್ಲಿ ಈ ಹಬ್ಬಕ್ಕೆ ವಿಶೇಷ ವೈಭವವಿದೆ. ಗಣಪತಿ ಬಪ್ಪನ ಆಗಮನವನ್ನು ಆಚರಿಸಲು ದೇವಾಲಯಗಳು ಮತ್ತು ಮನೆಗಳಲ್ಲಿ ವಿವಿಧ ಬಣ್ಣದ ಹೂವುಗಳು ಹಾಗೂ ಹಣ್ಣುಗಳಿಂದ ಅಲಂಕರಿಸಲಾಗುತ್ತದೆ. ವಾಸ್ತು ಪ್ರಕಾರ ಗಣಪತಿ ಹಬ್ಬದಲ್ಲಿ ಗಣೇಶ ಮೂರ್ತಿಯನ್ನು ಖರೀದಿಸುವಾಗ ಕೆಲವು ವಿಶೇಷ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ವೈಷ್ಣವ ವಿಗ್ರಹ ತಜ್ಞರಿಂದ ವಾಸ್ತು ಸಲಹೆಗಳನ್ನು ತಿಳಿಯೋಣ.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಇರುವ ನಿಯಮಗಳು

ವಾಸ್ತು ತಜ್ಞರ ಪ್ರಕಾರ, ಹಸಿರು ಗಣೇಶ ಮೂರ್ತಿಯನ್ನು ಉತ್ತರ ದಿಕ್ಕಿಗೆ ಇಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಕಪ್ಪು ಗಣೇಶ ಮೂರ್ತಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ವಾಸ್ತು ಪ್ರಕಾರ ಇದನ್ನು ಮಾಡುವುದರಿಂದ ಮಾನಸಿಕ ಒತ್ತಡ ಮತ್ತು ರೋಗ ದೋಷಗಳು ನಿವಾರಣೆಯಾಗುತ್ತದೆ.

ಕಿತ್ತಳೆ ಬಣ್ಣದ ಗಣಪತಿ ಮೂರ್ತಿಯನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಇದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ ಎನ್ನುತ್ತಾರೆ. ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ ಗಣಪತಿಯ ಆಶೀರ್ವಾದವನ್ನು ಪಡೆಯಲು ನೀವು ಮನೆಯಲ್ಲಿ ಬಿಳಿ ಗಣೇಶ ಮೂರ್ತಿಯನ್ನು ತರಬಹುದು. ಈ ಬಣ್ಣದ ಗಣಪತಿಯನ್ನು ವಾಯುವ್ಯ ದಿಕ್ಕಿನಲ್ಲಿ ಇಡಬೇಕು.

ವಾಸ್ತು ದೋಷಗಳನ್ನು ಹೋಗಲಾಡಿಸಲು ಮನೆಯ ಪೂಜಾ ಕೋಣೆ ಮತ್ತು ಕಚೇರಿಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ ಮಂಗಳಕರ ಎನ್ನುತ್ತಾರೆ ವಾಸ್ತು ತಜ್ಞರು. ವಾಸ್ತು ಪ್ರಕಾರ ಮನೆಯಲ್ಲಿ ಹೆಚ್ಚು ಗಣೇಶ ಮೂರ್ತಿಗಳನ್ನು ಇಡಬಾರದು. ಅಷ್ಟೇ ಅಲ್ಲ, ಗಣೇಶನ ವಿಗ್ರಹದ ಪಕ್ಕದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಹಣದ ಕೊರತೆ ಇಲ್ಲ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎರಡು ಮೂರ್ತಿಗಳನ್ನು ಅಕ್ಕಪಕ್ಕದಲ್ಲಿ ಪೂಜಿಸುವುದರಿಂದ ವಿಶೇಷ ಫಲ ಸಿಗುತ್ತದೆ.

ಚತುರ್ಥಿಯ ದಿನ ಮನೆಯಲ್ಲಿ ಗಣೇಶ ಮೂರ್ತಿಯ ಎತ್ತರ ಎಷ್ಟಿರಬೇಕು?

ಮನೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಬಯಸುವಿರಾ? ಆದರೆ ಗಣಪತಿಯ ಸೊಂಡಿಲಿನ ಎಡಭಾಗದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗೆಯೇ ಮನೆಯಲ್ಲಿ ಗಣೇಶನ ಮೂರ್ತಿ ಇಡಬೇಕಾದರೆ ಮೂರ್ತಿಯ ಎತ್ತರ 6 ಇಂಚು ಮೀರಬಾರದು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.