ದೀಪಾವಳಿಯ ಆರಂಭವೇ ನೀರು ತುಂಬುವ ಹಬ್ಬದಿಂದ; ಈ ಶಾಸ್ತ್ರಗಳನ್ನು ತಿಳಿದುಕೊಂಡು ಆಚರಿಸಿ, ಹಬ್ಬ ಇನ್ನಷ್ಟು ಅರ್ಥಪೂರ್ಣವಾಗಿರುತ್ತದೆ-diwali begins with the water filling festival know these shastras and celebrate festival will be more meaningfull sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೀಪಾವಳಿಯ ಆರಂಭವೇ ನೀರು ತುಂಬುವ ಹಬ್ಬದಿಂದ; ಈ ಶಾಸ್ತ್ರಗಳನ್ನು ತಿಳಿದುಕೊಂಡು ಆಚರಿಸಿ, ಹಬ್ಬ ಇನ್ನಷ್ಟು ಅರ್ಥಪೂರ್ಣವಾಗಿರುತ್ತದೆ

ದೀಪಾವಳಿಯ ಆರಂಭವೇ ನೀರು ತುಂಬುವ ಹಬ್ಬದಿಂದ; ಈ ಶಾಸ್ತ್ರಗಳನ್ನು ತಿಳಿದುಕೊಂಡು ಆಚರಿಸಿ, ಹಬ್ಬ ಇನ್ನಷ್ಟು ಅರ್ಥಪೂರ್ಣವಾಗಿರುತ್ತದೆ

ದೇವರ ಮುಂದೆ ಬೆಳಗುವ ದೀಪಕ್ಕೆ ಕುಟುಂಬದ ಎಲ್ಲರ ಜೀವನ ಬೆಳಗುವ ಶಕ್ತಿ ಇರುತ್ತದೆ. ತುಪ್ಪದ ಬದಲು ಎಣ್ಣೆಯನ್ನು ಸಹ ದೀಪಗಳನ್ನೇ ಉಪಯೋಗಿಸಬೇಕು. ಕಾರಣವೇನೆಂದರೆ ಶಾಸ್ತ್ರ ಸಂಪ್ರದಾಯಗಳ ಅನ್ವಯ ದೀಪದ ಎಣ್ಣೆಯಲ್ಲಿ ಸ್ವಯಂ ಮಹಾಲಕ್ಷ್ಮಿಯೇ ನೆಲೆಸಿರುತ್ತಾಳೆ. (ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು)

ಈ ಶ್ರಾಸ್ತ್ರಗಳನ್ನು ತಿಳಿದುಕೊಂಡು ಹಬ್ಬ ಆಚರಿಸಿ
ಈ ಶ್ರಾಸ್ತ್ರಗಳನ್ನು ತಿಳಿದುಕೊಂಡು ಹಬ್ಬ ಆಚರಿಸಿ

ಹಿಂದಿನ ದಿನಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸುತ್ತಿದ್ದರು. ಹಬ್ಬಕ್ಕೆ ನಿಜವಾದ ರೂಪವನ್ನು ನೀಡುವುದೇ ಹೆಣ್ಣುಮಕ್ಕಳು. ವೇದಗಳ ಕಾಲದಿಂದಲೂ ಇದು ನಿಜವಾಗಿದೆ.

ಮಾನವನ ಸಹಿತ ಪ್ರಪಂಚದ ಪ್ರಾಣಿ,ಪಕ್ಷಿಗಳು ಮತ್ತು ಗಿಡಮರಗಳು ಸಹ ಪಂಚಭೂತವನ್ನು ಅವಲಂಭಿಸಿದೆ. ಹಾಗೆಯೇ ದೀಪಾವಳಿ ಹಬ್ಬದಲ್ಲಿ ನೀರಿಗೆ ಪೂಜನೀಯ ಸ್ಥಾನಮಾನವನ್ನು ನೀಡಿದೆ. ದೀಪಾವಳಿ ಆರಂಭವೇ ನೀರನ್ನು ಪೂಜಿಸುವುದರಿಂದ. ಮೊದಲು ಸಂಜೆಯವೇಳೆಯಲ್ಲಿ ನೀರು ತುಂಬುವ ಹಬ್ಬದ ದಿನ ನೀರನ್ನು ಸಂಗ್ರಹಿಸುವ ಪ್ರತಿಯೊಂದು ಪಾತ್ರೆ ಪರಿಕರಗಳನ್ನು ಶುಚಿಗೊಳಿಸಬೇಕು. ಅವುಗಳಿಗೆ ಸುಣ್ಣವನ್ನು ಹಚ್ಚಿ ಅರಿಸಿನ ಮತ್ತು ಕುಂಕುಮದಿಂದ ಅಲಂಕರಿಸಬೇಕು. ಹಿಂದಿನ ದಿನಗಳಂತೆ ಈಗ ಹಂಡೆ, ಗುಂಡಿ ಇರುವುದಿಲ್ಲ. ಇಂದಿನ ದಿನಗಳಲ್ಲಿನ ಬಾಯ್ಲರ್ ಇದ್ದರೆ ಅದನ್ನೇ ಅರಿಸಿನ ಕುಂಕುಮದಿಂದ ಅಲಂಕರಿಸಬೇಕು. ಸೂರ್ಯೋದಯಕ್ಕೆ ಮುನ್ನ ಸ್ನಾನಾದಿಗಳನ್ನು ಪೂರೈಸಿ ಆನಂತರ ಮನೆಯ ಮುಂಬಾಗಿಲಲ್ಲಿ ಬಿಳಿರಂಗವಲ್ಲಿಯನ್ನು ಇಡಬೇಕು. ಕೆಮ್ಮಣ್ಣಿನಿಂದ ಅಲಂಕರಿಸಬೇಕು.

ಹೆಣ್ಣುಮಕ್ಕಳಲ್ಲಿ ದುರ್ಗೆಯ ಅಂಶವಿದೆ

ವೈದಿಕ ಗ್ರಂಥಗಳ ಪ್ರಕಾರ ಪ್ರತಿಯೊಂದು ಹೆಣ್ಣುಮಕ್ಕಳಲ್ಲಿಯೂ ದುರ್ಗೆಯ ಅಂಶ ಇರುತ್ತದೆ. ಈ ಕಾರಣದಿಂದಲೆ ಯಾವುದೇ ಕೆಲಸವನ್ನು ಮಾಡಬಲ್ಲ ದೈಹಿಕ ಶಕ್ತಿ ಮತ್ತು ಮಾನಸಿಕ ಶಕ್ತಿಯು ಅವರನ್ನು ಆವರಿಸಿರುತ್ತದೆ. ಇದೇ ದಿನ ಲಕ್ಷೀದೇವಿಯು ಉದ್ಭವಿಸಿದಳು ಎಂದು ದಾರ್ಮಿಕ ಗ್ರಂಥಗಳಿಂದ ತಿಳಿದುಬರುತ್ತದೆ. ಆದ್ದರಿಂದಲೆ ತಾಯಿಯಾಗಲಿ, ಪತ್ನಿಯಾಗಲಿ , ಮಗಳಾಗಲಿ ಅಥವ ಇನ್ನಾರೆ ಆಗಲಿ ಅವರನ್ನು ಗೌರವದಿಂದ ಕಾಣಬೇಕಾಗುತ್ತದೆ. ಇದೆ ದಿನ ಸೋದರರು,ಯಕ್ಷ ,ಕಾಮಧೇನು ಮಾತ್ರವಲ್ಲದೆ ಇನ್ನೂ ಅನೇಕ ಮುಖ್ಯಜೀವಿಗಳ ಉಗಮವಾಗಿದೆ.

ಪುರುಷರನ್ನು ಪೂರ್ವದಿಕ್ಕಿಗೆ ಮುಖಮಾಡಿ ಕೂರಿಸಬೇಕು

ಮಾರನೆಯ ದಿನದಂದು ಅಲಂಕರಿಸಿದ ನೀರು ಕಾಯಿಸಲು ಬಳಸುವ ಪಾತ್ರೆಗಳು ಮತ್ತು ಒಲೆಯನ್ನು ಅರಿಷಿಣ, ಕುಂಕುಮ, ಹೂಗಳಿಂದ ಪೂಜಿಸಬೆಕು. ದೇವರ ಮುಂದೆ ಹರಳೆಣ್ಣೆ ಮತ್ತು ಸೀಗೇಕಾಯಿಯಪುಡಿಯನ್ನು ಇಟ್ಟು ಪೂಜಿಸಬೇಕು. ಪುರುಷರನ್ನು ಪೂರ್ವದಿಕ್ಕಿಗೆ ಮುಖಮಾಡಿ ಕೂರಿಸಬೇಕು. ಮನೆಯಲ್ಲಿನ ಹಿರಿಯ ಸ್ತ್ರೀಯರು ಮೊದಲು ಅವರ ಹಣೆಗೆ ಕುಂಕುಮವನ್ನು ಇಟ್ಟು, ಅನಂತರ ಹರಳೆಣ್ಣೆಯನ್ನು ಹಚ್ಚಬೇಕು. ಯಾವುದೇ ಭೇದಾ ಭಾವ ತೋರದೆ ಮನೆಯಲ್ಲಿರುವ ಹಿರಿಯರು ಮೊದಲ ಬಾರಿ ತಲೆಗೆ ನೀರನ್ನು ಹಾಕಬೇಕು. ಇದರಿಂದ ಆಯುಷ್ಯಾಭಿವೃದ್ಧಿ ಆಗುತ್ತದೆ ಎಂದು ಹೇಳಲಾಗಿದೆ. ಆನಂತರ ಕುಟುಂಬದಲ್ಲಿನ ಹಿರಿಯರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯಬೇಕು. ಅವರು ನೀಡುವ ಹೊಸಬಟ್ಟೆಯನ್ನು ಧರಿಸಬೇಕು.

ಎಣ್ಣೆ ದೀಪವನ್ನು ಹಚ್ಚಬೇಕು

ಹಿಂದಿನ ಕಾಲದಲ್ಲಿ ಕೆಲವು ಪ್ರಾಂತ್ಯಗಳಲ್ಲಿ ದೀಪಾವಳಿಯನ್ನು ಏಳುದಿನಗಳು ಆಚರಿಸುತ್ತಿದ್ದರು. ಈ ದಿನಗಳಲ್ಲಿಯೂ ಸಹ ಈ ರೀತಿ ನೀತಿ ಮುಂದುವರೆದಿದೆ. ದೀಪಾವಳಿ ಹಬ್ಬದ ವೇಳೆಯಲ್ಲಿ ಕೇವಲ ದೇವರ ಕೋಣೆ ಅಲ್ಲದೆ ಮನೆಯ ಮುಂಬಾಗಿಲ ಹೊಸ್ತಿಲಮೇಲೂ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಲು ಊದಿನಕಡ್ಡಿಯನ್ನು ಬಳಸಬೇಕು. ಯಾವುದೇ ಕಾರಣಕ್ಕೂ ಪೊರಕೆಯ ಕಡ್ಡಿಯನ್ನು ಬಳಸಬಾರದು. ಹಾಗೆಯೇ ಕಾಗದ ಅಥವ ಬಟ್ಟೆಯಿಂದಲೂ ಹಚ್ಚಬಾರದು. ದೀಪಹಚ್ಚುವ ವೇಳೆ ಬಾಯಿಯಿಂದ ಗಾಳಿ ಊದಬಾರದು. ವಿಧ್ಯುತ್ ದೀಪಗಳಿದ್ದರೂ ಕನಿಷ್ಠಪಕ್ಷ ಶಾಸ್ತ್ರಕ್ಕಾದರೂ ಮನೆಯ ಹೊರಬಾಗಿಲಿನಲ್ಲಿ ಎಣ್ಣೆ ದೀಪವನ್ನು ಹಚ್ಚುವುದು ಒಳ್ಳೆಯದು. ಮನೆಯನ್ನು ಅಲಂಕರಿಸುವ ವೇಳೆ ಯಾವುದೇಕಾರಣಕ್ಕೂ ಕಪ್ಪು ಬಣ್ಣದ ಬಟ್ಟೆಯನ್ನು ಬಳಸಬಾರದು. ಮನೆಯ ಹೊರಭಾಗಕ್ಕೆ ಕಾವಿ ಬಟ್ಟೆಯನ್ನು ಬಳಸಬಾರದು.

ಜೋಡಿ ಬಟ್ಟೆಯನ್ನು ಮಾತ್ರ ಧರಿಸಬೇಕು

ಒಂಟಿ ಬಟ್ಟೆಯನ್ನು ಧರಿಸಬಾರದು. ಹೊಸದಾಗಿ ತಂದ ಜೋಡಿ ಬಟ್ಟೆಯನ್ನು ಮಾತ್ರ ಧರಿಸಬೇಕು. ಯಾವುದೇ ಕಾರಣಕ್ಕೂ ಹರಿದ ಒಳ ಉಡುಪುಗಳನ್ನು ಸಹ ಧರಿಸಬಾರದು. ಕಪ್ಪು ಬಟ್ಟೆಗಳನ್ನೂ ಧರಿಸುವುದು ತಪ್ಪು. ಹೊಸ ಬಟ್ಟೆ ಧರಿಸುವ ಮುನ್ನ ಹೊಸ ಬಟ್ಟೆಗೆ ಅರಿಷಿಣವನ್ನು ಇಡಬೇಕು. ಹೊಸಬಟ್ಟೆ ಧರಿಸಿದ ನಂತರ ಕುಲದೇವರಿಗೆ ನಮಿಸಬೇಕು. ಆನಂತರ ಕುಟುಂಬದ ಹಿರಿಯರಿಗೆ ನಮಿಸಿ ಆಶೀರ್ವಾದವನ್ನು ಪಡೆಯಬೇಕು. ಹೆತ್ತವರ ಆಶೀರ್ವಾದ ಬೇಡುವುದನ್ನು ಮರೆಯಬಾರದು.

ಮನೆಗಾಗಿರುವ ದೃಷ್ಠಿ ಪರಿಹಾರವಾಗುವುದು

ದೇವರ ಮುಂದೆ ಬೆಳಗುವ ದೀಪಕ್ಕೆ ಕುಟುಂಬದ ಎಲ್ಲರ ಜೀವನ ಬೆಳಗುವ ಶಕ್ತಿ ಇರುತ್ತದೆ. ತುಪ್ಪದ ಬದಲು ಎಣ್ಣೆಯನ್ನು ಸಹ ದೀಪಗಳನ್ನೇ ಉಪಯೋಗಿಸಬೇಕು. ಕಾರಣವೇನೆಂದರೆ ಶಾಸ್ತ್ರ ಸಂಪ್ರದಾಯಗಳ ಅನ್ವಯ ದೀಪದ ಎಣ್ಣೆಯಲ್ಲಿ ಸ್ವಯಂ ಮಹಾಲಕ್ಷ್ಮಿಯೇ ನೆಲೆಸಿರುತ್ತಾಳೆ. ದೀಪಾವಳಿಯ ದಿನಗಳಂದು ಮನೆಯ ಮುಂದೆ ದೀಪವನ್ನು ಹಚ್ಚಿದಲ್ಲಿ ಮನೆಗಾಗಿರುವ ದೃಷ್ಠಿ ಪರಿಹಾರವಾಗುವುದು ಎಂದು ಹೇಳಲಾಗುತ್ತದೆ. ಈ ಕಾರಣಗಳಿಂದಲೇ ಉರಿಯುತ್ತಿವ ಜ್ಯೋತಿಯನ್ನು ಬಾಯಿಯಿಂದ ಊದಿ ಆರಿಸಬಾರದು.

ಸ್ನಾನಮಾಡುವ ನೀರಿನಲ್ಲಿ ಸ್ವಯಂ ಗಂಗಾದೇವಿಯೇ ನೆಲೆಸಿರುತ್ತಾಳೆ. ಇದೇ ಕಾರಣದಿಂದ ನೀರು ತುಂಬಿರುವ ಲೋಟಕ್ಕೆ ಸಹ ಕಾಲನ್ನು ಸೋಕಿಸಬಾರದು. ನೆಲದ ಮೇಲಿರುವ ನೀರನ್ನು ಸಹ ಅಂಗಾಲಿನಿಂದ ಒರೆಸಬಾರದು.

mysore-dasara_Entry_Point

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.