Dominating Zodiac Signs: ಎಲ್ಲದರಲ್ಲೂ ಅಧಿಪತ್ಯ ಸಾಧಿಸುವ 8 ರಾಶಿಗಳಿವು; ನಿಮ್ಮ ರಾಶಿಯೂ ಇದೆಯಾ ಪರಿಶೀಲಿಸಿ
Dominating Zodiac Signs: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ರಾಶಿಗಳು ಸೌಮ್ಯ ಸ್ವಭಾವದಿಂದ ಕೂಡಿದ್ದರೆ, ಇನ್ನು ಕೆಲವು ಅಧಿಪತ್ಯವನ್ನು ಸಾಧಿಸುವ ರಾಶಿಗಳಾಗಿವೆ. ನಾಯಕತ್ವದ ಗುಣ ಮತ್ತು ಬಲವಾದ ಸ್ವಯಂ ಪ್ರಜ್ಞೆಯನ್ನು ಪ್ರದರ್ಶಿಸುವ ರಾಶಿಗಳಾಗಿರುತ್ತವೆ. ಈ ರೀತಿಯ 8 ರಾಶಿಗಳಲ್ಲಿ ನಿಮ್ಮ ರಾಶಿ ಚಕ್ರ ಚಿಹ್ನೆಯೂ ಇದೆಯಾ ಪರಿಶೀಲಿಸಿ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ರಾಶಿಯು ತನ್ನದೇ ಆದ ಗುಣಲಕ್ಷಣಗಳನ್ನು ಮತ್ತು ಪ್ರವೃತ್ತಿಯನ್ನು ಹೊಂದಿರುತ್ತದೆ. ಕೆಲವು ರಾಶಿಗಳು ಪ್ರಾಬಲ್ಯವನ್ನು ಹೊಂದಿರುವುದರ ಜೊತೆಗೆ ಆಜ್ಞೆ ಮಾಡುವ ಗುಣಲಕ್ಷಣವನ್ನು ಹೊಂದಿರುತ್ತವೆ. ಆ ರಾಶಿಗಳು ಸಾಮಾನ್ಯವಾಗಿ ನಾಯಕತ್ವ, ಅಧಿಕಾರ ಮತ್ತು ಸ್ವಯಂ ಪ್ರಜ್ಞೆಯಿಂದ ನಿರೂಪಿಸಲ್ಪಡುತ್ತವೆ. ಈ ಪ್ರಬಲ ಗುಣಗಳಿಂದ ಅವರು ತಮ್ಮ ಅಧಿಪತ್ಯವನ್ನು ಸಾಧಿಸುತ್ತಾರೆ. ಈ ರಾಶಿಯವರು ಇತರರಿಗಿಂತ ಭಿನ್ನವಾಗಿರುತ್ತಾರೆ. ಹನ್ನೆರಡು ರಾಶಿಗಳ ಕೂಟದಲ್ಲಿ ಪ್ರಾಬಲ್ಯವನ್ನು ಹೊಂದಿರುವ ಮತ್ತು ತಮ್ಮ ಅಧಿಪತ್ಯವನ್ನು ಸಾಧಿಸುವ ರಾಶಿಗಳು ಯಾವುವು ಎಂದು ತಿಳಿಯೋಣ.
ಪ್ರಾಬಲ್ಯವನ್ನು ತೋರಿಸುವ ರಾಶಿಗಳು
1. ಮೇಷ ರಾಶಿ: ಮೇಷ ರಾಶಿಯವರು ತುಂಬಾ ಹಠಮಾರಿ ಸ್ವಭಾವದವರು ಮತ್ತು ಯಾವುದೇ ಭಯವಿಲ್ಲದವರಾಗಿದ್ದಾರೆ. ಅವರು ಹುಟ್ಟಿನಿಂದಲೇ ಶ್ರೇಷ್ಠ ನಾಯಕರು. ಅವರು ಯಾವಾಗಲೂ ಇತರರಿಗೆ ಉತ್ತಮ ಸ್ಪರ್ಧೆಯನ್ನು ನೀಡುತ್ತಾರೆ.
2. ಸಿಂಹ ರಾಶಿ: ಸಿಂಹ ರಾಶಿಯವರು ತುಂಬಾ ಆತ್ಮವಿಶ್ವಾಸ ಹೊಂದಿರುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುತ್ತಾರೆ. ಇತರರನ್ನು ಮೆಚ್ಚಿಸುವ ಗುಣ ಈ ರಾಶಿಯವರಿಗಿದೆ. ಇವರು ಹುಟ್ಟಿನಿಂದಲೇ ಒಳ್ಳೆಯ ನಾಯಕರು ಹಾಗೂ ಇತರರಿಗೂ ಸ್ಫೂರ್ತಿ ನೀಡುತ್ತಾರೆ.
3. ವೃಶ್ಚಿಕ ರಾಶಿ: ಇವರು ಬಯಸಿದ್ದನ್ನು ಸಾಧಿಸಲು ಕಷ್ಟಪಡುತ್ತಾರೆ. ತುಂಬಾ ಬಲಶಾಲಿಗಳು. ಆಲೋಚನೆಗಳು ಮತ್ತು ಕಾರ್ಯತಂತ್ರಗಳು ವಿಶಿಷ್ಟವಾಗಿರುತ್ತದೆ. ಈ ಗುಣಲಕ್ಷಣಗಳಿಂದ ಅವರು ಇತರರನ್ನು ಬದಲಾಯಿಸುತ್ತಾರೆ ಹಾಗೂ ನಿಯಂತ್ರಿಸುತ್ತಾರೆ.
4. ಮಕರ ರಾಶಿ: ಈ ರಾಶಿಯ ವ್ಯಕ್ತಿಗಳು ಶಿಸ್ತು ಬದ್ಧರಾಗಿರುತ್ತಾರೆ. ತಮಗೆ ಬೇಕಾದುದನ್ನು ಪೂರ್ಣಗೊಳಿಸಲು ಶ್ರಮಿಸುತ್ತಾರೆ. ತಮ್ಮ ಅಧಿಕಾರ ಮತ್ತು ಶಕ್ತಿಯಿಂದ ಇತರರ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ.
5. ಧನು ರಾಶಿ: ಧನು ರಾಶಿಯವರು ಹಠಮಾರಿಗಳಾಗಿರುತ್ತಾರೆ. ಇವರು ಇತರರ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ಧನು ರಾಶಿಯವರು ಯಾವಾಗಲೂ ಹೊಸ ಅವಕಾಶಗಳನ್ನು ಹುಡುಕುತ್ತಿರುತ್ತಾರೆ.
6. ವೃಷಭ ರಾಶಿ: ವೃಷಭ ರಾಶಿಯ ಜನರು ತುಂಬಾ ಹಠಮಾರಿಗಳು. ಜೊತೆಗೆ ಇವರು ತುಂಬಾ ಪ್ರಾಬಲ್ಯ ಹೊಂದಿರುತ್ತಾರೆ. ಅವರು ಯಾವಾಗಲೂ ಜನರ ಮುಂದೆ ತಮ್ಮ ಪ್ರಾಬಲ್ಯವನ್ನು ತೋರುತ್ತಾರೆ.
7. ಮಿಥುನ ರಾಶಿ: ಇವರು ಕೂಡ ಪ್ರಬಲವಾಗಿರುತ್ತಾರೆ. ಯಾವಾಗಲೂ ತಮ್ಮ ಆಲೋಚನೆಗಳು ಮತ್ತು ಸಂವಹನ ಕೌಶಲ್ಯದಿಂದ ಇತರರ ಮೇಲೆ ಪ್ರಭಾವ ಬೀರುತ್ತಾರೆ.
8. ಕನ್ಯಾ ರಾಶಿ: ಬಲವಾದ ಕೌಶಲ್ಯಗಳನ್ನು ಹೊಂದಿರುತ್ತಾರೆ. ಯಾವಾಗಲೂ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತಾರೆ. ಈ ಗಣಗಳಿಂದಲೇ ಈ ರಾಶಿಯವರು ಹೆಚ್ಚು ಪ್ರಬಲರಾಗಿರುತ್ತಾರೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
