ಈ ವರ್ಷ ಈಸ್ಟರ್ ಭಾನುವಾರ ತುಂಬಾ ತಡವಾಗುತ್ತಿರುವುದು ಏಕೆ; ಕ್ರಿಶ್ಚಿಯನ್ ಹಬ್ಬಗಳು, ಆಚರಣೆಯ ಆಸಕ್ತಿಕರ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ವರ್ಷ ಈಸ್ಟರ್ ಭಾನುವಾರ ತುಂಬಾ ತಡವಾಗುತ್ತಿರುವುದು ಏಕೆ; ಕ್ರಿಶ್ಚಿಯನ್ ಹಬ್ಬಗಳು, ಆಚರಣೆಯ ಆಸಕ್ತಿಕರ ಮಾಹಿತಿ ಇಲ್ಲಿದೆ

ಈ ವರ್ಷ ಈಸ್ಟರ್ ಭಾನುವಾರ ತುಂಬಾ ತಡವಾಗುತ್ತಿರುವುದು ಏಕೆ; ಕ್ರಿಶ್ಚಿಯನ್ ಹಬ್ಬಗಳು, ಆಚರಣೆಯ ಆಸಕ್ತಿಕರ ಮಾಹಿತಿ ಇಲ್ಲಿದೆ

ಇಂದು (ಏಪ್ರಿಲ್ 13) ಗರಿಗಳ ಭಾನುವಾರ. ಇದು ಪವಿತ್ರ ವಾರದ ಸಂಕೇತವಾಗಿದ್ದು, ಮುಂದಿನ ಭಾನುವಾರ (ಏಪ್ರಿಲ್ 20) ಈಸ್ಟರ್ ಭಾನುವಾರವನ್ನು ಆಚರಿಸಲಾಗುತ್ತದೆ. ಈಸ್ಟರ್ ಸಂಡೇಯನ್ನು ತಡವಾಗಿ ಆಚರಿಸುವುದು ಏಕೆ ಎಂಬುದನ್ನು ತಿಳಿಯಿರಿ.

ಈಸ್ಟರ್ ಭಾನುವಾರವನ್ನು ಈ ವರ್ಷ (2025) ತಡವಾಗಿ ಆಚರಿಸುತ್ತಿರುವುದಕ್ಕೆ ನಿಖರವಾದ ಕಾರಣವನ್ನು ತಿಳಿಯಿರಿ.
ಈಸ್ಟರ್ ಭಾನುವಾರವನ್ನು ಈ ವರ್ಷ (2025) ತಡವಾಗಿ ಆಚರಿಸುತ್ತಿರುವುದಕ್ಕೆ ನಿಖರವಾದ ಕಾರಣವನ್ನು ತಿಳಿಯಿರಿ.

Easter Sunday 2025: ಯೇಸುಕ್ರಿಸ್ತನು ಪುನರುತ್ಥಾನಗೊಂಡ ದಿನವನ್ನು ವಿಶ್ವದಾದ್ಯಂತದ ಕ್ರೈಸ್ತರು ಈಸ್ಟರ್ ದಿನವೆಂದು ಆಚರಿಸುತ್ತಾರೆ. ಕ್ರಿಸ್ ಮಸ್ ಗಿಂತ ಭಿನ್ನವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈಸ್ಟರ್ ಗೆ ಯಾವುದೇ ನಿಗದಿತ ದಿನಾಂಕವಿಲ್ಲ. ಇದು ವಸಂತಕಾಲದಲ್ಲಿ ಬರುತ್ತದೆ. ಕ್ರಿಸ್ತನ ಶಿಲುಬೆಗೇರಿಸುವಿಕೆ ಮತ್ತು ಸಮಾಧಿಯ ನಂತರದ ಮೂರನೇ ದಿನದಂದು ಗುಡ್ ಫ್ರೈಡೆ ಆಚರಿಸಲಾಗುತ್ತದೆ.

2025ರ ಈಸ್ಟರ್ ಭಾನುವಾರವನ್ನು ಏಪ್ರಿಲ್ 20ರ ಭಾನುವಾರ ಆಚರಿಸಲಾಗುತ್ತದೆ. ಕ್ರಿಶ್ಚಿಯಲ್ ಕ್ಯಾಲೆಂಡರ್ ಪ್ರಕಾರ, ಸಾಮಾನ್ಯವಾಗಿ ಹುಣ್ಣಿಮೆಯ ನಂತರ ಈಸ್ಟರ್ ಭಾನುವಾರವನ್ನು ಆಚರಿಸಲಾಗುತ್ತದೆ. ಏಪ್ರಿಲ್ 12 ರಂದು ಹುಣ್ಣಿಮೆ ಸಂಭವಿಸಿದೆ. ಏಪ್ರಿಲ್ 13 ರಂದು ಅಂದರೆ ಇಂದು ಗರಿಗಳ ಭಾನುವಾರವನ್ನಾಗಿ ಆಚರಿಸಲಾಗಿದೆ. ಇದಾದ ನಂತರ ಈಸ್ಟರ್ ಭಾನುವಾರ ಆಚರಿಸುವ ವಾಡಿಕೆ ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಯೇಸು ಕ್ರಿಸ್ತನು ಈ ಲೋಕದಲ್ಲಿನ ಪಾಪಿಗಳಾಗಿ ಮರಣಹೊಂದಿ ಮತ್ತೆ ಮೂರನೇ ದಿನ ಜೀವಂತವಾಗಿ ಎದ್ದು ಬಂದಿದ್ದಾನೆ ಎಂಬುದನ್ನು ಬೈಬಲ್ ಹೇಳುತ್ತದೆ. ಇದು ಕ್ರೈಸ್ತ ಬಾಂಧವರ ನಂಬಿಕೆ ಕೂಡ ಇದೇ ಆಗಿದೆ. ಹೀಗಾಗಿ ಯೇಸುವಿನ ಪುನರುತ್ಥಾನವನ್ನು ಸ್ಮರಿಸುವ ದಿನವೇ ಈಸ್ಟರ್ ಭಾನುವಾರ. ಇದನ್ನು ಪಾಸ್ಚೆಲ್ ಹುಣ್ಣಿಮೆ ಅಂತಲೂ ಕರೆಯಲಾಗುತ್ತದೆ.

ಈ ವರ್ಷ ಈಸ್ಟರ್ ಭಾನುವಾರ ತಡವಾಗುತ್ತಿರುವುದು ಏಕೆ

ಈಸ್ಟರ್ ಭಾನುವಾರವನ್ನು ಪ್ರತಿ ವರ್ಷ ಮಾರ್ಚ್ 22 ಮತ್ತು ಏಪ್ರಿಲ್ 25 ರ ನಡುವೆ ಆಚರಿಸಲಾಗುತ್ತದೆ. ಈ ಬಾರಿ ಈಸ್ಟರ್ ಸಂಡೇಯನ್ನು ಏಪ್ರಿಲ್ 20 ರಂದು ಆಚರಿಸಲಾಗುತ್ತದೆ. ಏಪ್ರಿಲ್ 20 ಈಸ್ಟರ್ ಭಾನುವಾರ ಆಚರಣೆ ಅವಧಿ ಅಂತ್ಯದಲ್ಲಿದೆ. ಏಕೆಂದರೆ ಪಾಸ್ಚಲ್ ಹುಣ್ಣಿಮೆ ಏಪ್ರಿಲ್ 12 ರಂದು ಇತ್ತು. ಮಾರ್ಚ್ 21ರ ವಿಷುವತ್ ಸಂಕ್ರಾಂತಿ ನಂತರದ ಮೊದಲ ಹುಣ್ಣಿಮೆಯಾಗಿದೆ. ಹೀಗಾಗಿ ಮುಂದಿನ ಭಾನುವಾರ ಈಸ್ಟರ್ ಸಂಡೇಯನ್ನಾಗಿ ಆಚರಿಸಲಾಗುತ್ತದೆ ಧಾರ್ಮಿಕ ನಂಬಿಕೆಗಳು ಹಾಗೂ ಕ್ಯಾಲೆಂಡರ್ ಗಳನ್ನು ಆಧರಿಸಿ ಕೆಲ ಸಂಸ್ಥೆಗಳು ವರದಿ ಮಾಡಿವೆ.

ಇಂದು (ಏಪ್ರಿಲ್ 13) ಗರಿಗಳ ಭಾನುವಾರ (Palm Sunday)

ಇಂದು ಎಲ್ಲೆಡೆ ಕ್ರೈಸ್ತ ಸಮುದಾಯದವರು ಗರಿಗಳ ಭಾನುವಾರವನ್ನು ಆಚರಿಸುತ್ತಿದ್ದಾರೆ. ಪವಿತ್ರ ವಾರವು ಪಾಮ್ (ಗರಿಗಳು) ಭಾನುವಾರದೊಂದಿಗೆ ಪ್ರಾರಂಭವಾಗುತ್ತದೆ, ಇದು ಯೇಸು ಕ್ರಿಸ್ತನು ತನ್ನ ಕತ್ತೆಯ ಮೇಲೆ ಜೆರುಸಲೇಂಗೆ ವಿಜಯಶಾಲಿಯಾಗಿ ಆಗಮಿಸಿದ ನೆನಪಿಗಾಗಿ ಪ್ರಾರಂಭವಾಗುತ್ತದೆ. ಯೇಸು ಯೆರೂಸಲೇಮಿಗೆ ಬಂದಾಗ, ಜನರು ಕೈಬೀಸಿ ಆತನ ಮುಂದೆ ನೆಲದ ಮೇಲೆ ತಾಳೆ ಕೊಂಬೆಗಳನ್ನು ಇಟ್ಟರು ಎಂದು ಬೈಬಲ್ ಹೇಳುತ್ತದೆ. ಪಾಮ್ ಭಾನುವಾರದಂದು, ಈ ದಿನದ ನೆನಪಿಗಾಗಿ ತಾಳೆ ಕೊಂಬೆಗಳನ್ನು ಹೆಚ್ಚಾಗಿ ಚರ್ಚ್ ಗಳಲ್ಲಿ ವಿತರಿಸಲಾಗುತ್ತದೆ. ಚರ್ಚ್ ಪ್ರವೇಶಿಸುವ ಮೊದಲು, ಪಾದ್ರಿ ಆಶೀರ್ವದಿಸಿದ ನಂತರ ಜನರು ಅಂಗೈಗಳನ್ನು ಗರಿಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಾರೆ. ತಾಳೆ ಗರಿಗಳು ಲಭ್ಯವಿಲ್ಲದಿದ್ದರೆ ತೆಂಗಿನ ಗರಿಗಳನ್ನು ಬಳಸುವುದನ್ನು ಕಾಣಬಹುದು.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.