ಫೆಬ್ರವರಿ 2025 ಮಾಸ ಭವಿಷ್ಯ: ಜಮೀನು ಖರೀದಿಸುವ ಅವಕಾಶ, ವ್ಯಾಪಾರದಲ್ಲಿ ಲಾಭ; ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ತಿಂಗಳ ಭವಿಷ್ಯ
ಫೆಬ್ರವರಿ 2025 ಮಾಸ ಭವಿಷ್ಯ: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025ರ ಫೆಬ್ರವರಿ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ತಿಂಗಳ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಫೆಬ್ರವರಿ 2025 ಮಾಸ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. 2025ರ ಫೆಬ್ರವರಿಯಲ್ಲಿ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಮಾಸ ಭವಿಷ್ಯ ಇಲ್ಲಿದೆ.
ಮೇಷ ರಾಶಿ
ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಯಶಸ್ಸನ್ನು ಗಳಿಸುತ್ತಾರೆ. ಸ್ವಂತ ಜಮೀನನ್ನು ಕೊಳ್ಳುವ ಅವಕಾಶವಿರುತ್ತದೆ. ಹಣಕಾಸಿನ ವಿಚಾರದಲ್ಲಿ ತಾಯಿಯವರ ಸಲಹೆ ದೊರೆಯುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಬಂಧು ಬಳಗದವರ ಜೊತೆಯಲ್ಲಿ ವಾದ ವಿವಾದಗಳಿರುತ್ತವೆ. ಸೋದರ ಅಥವಾ ಸೋದರಿಯ ಆರೋಗ್ಯದಲ್ಲಿ ತೊಂದರೆ ಕಂಡು ಬರಬಹುದು. ಹಿರಿಯರಿಗೆ ವಿಶೇಷ ಅನುಕೂಲತೆ ದೊರೆಯುತ್ತದೆ. ಸರ್ಕಾರದ ಕೆಲಸ ಕಾರ್ಯಗಳು ಗೆಲುವನ್ನು ಸಾಧಿಸುತ್ತದೆ. ತಂದೆಯವರಿಗೆ ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಮನೆತನದ ಆಸ್ತಿಯ ವಿವಾದವು ಬಗೆಹರಿಯುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಸಂಗಾತಿಯ ಸಲುವಾಗಿ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಮಹಿಳಾ ಉದ್ಯಮಿಗಳಿಗೆ ಉತ್ತಮ ಅವಕಾಶ ಮತ್ತು ವರಮಾನ ಇರುತ್ತದೆ. ದಂಪತಿ ನಡುವೆ ಮನಸ್ತಾಪ ಇರಲಿದೆ. ಸಹನೆಯಿಂದ ವರ್ತಿಸುವುದು ಬಲು ಮುಖ್ಯ.
ವೃಷಭ ರಾಶಿ
ಒಳ್ಳೆಯ ಕ್ರಯಕ್ಕೆ ಮನೆ ಅಥವಾ ಜಮೀನು ಮಾರಾಟವಾಗುತ್ತದೆ. ವಿದೇಶದಲ್ಲಿ ಉದ್ಯೋಗದ ದೊರೆಯುವ ಸಾಧ್ಯತೆಗಳಿವೆ. ಗೃಹಿಣಿಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಹಣಕಾಸಿನ ಕೊರತೆ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಮಾತ್ರ ಉತ್ತಮ ವರಮಾನ ಇರುತ್ತದೆ. ಸೋದರಿಯರಿಗೆ ಅನಾವಶ್ಯಕ ಚಿಂತೆ ಇರುತ್ತದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ತಾಯಿಯವರ ಕೈಕಾಲುಗಳಿಗೆ ಪೆಟ್ಟಾಗುವ ಸಾಧ್ಯತೆಗಳಿವೆ. ಪ್ರವಾಸದ ವೇಳೆ ಎಚ್ಚರಿಕೆ ವಹಿಸಿ. ಹಳೆಯ ವಾಹನವನ್ನು ಆತ್ಮೀಯರಿಗೆ ಉಡುಗೊರೆಯಾಗಿ ನೀಡುವಿರಿ. ಅನಾರೋಗ್ಯದ ಕಾರಣ ವಿದ್ಯಾರ್ಥಿಗಳು ಕಲಿಕೆಯನ್ನು ಅಡತಡೆ ಎದುರಿಸಬಹುದು. ಕುಟುಂಬದ ಹಿರಿಯರಿಗೆ ಉತ್ತಮ ಆದಾಯ ದೊರೆಯುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ತಂದೆಯ ಜೊತೆಯಲ್ಲಿ ಮನಸ್ತಾಪ ಉಂಟಾಗುತ್ತದೆ. ಅನಿರೀಕ್ಷಿತವಾದ ಶುಭಫಲಗಳು ದೊರೆಯುತ್ತವೆ. ಹಠದ ಗುಣ ಎಲ್ಲರಲ್ಲೂ ಬೇಸರ ಮೂಡಿಸುತ್ತದೆ.
ಮಿಥುನ ರಾಶಿ
ಸೋದರರ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ವಿರೋಧಿಗಳ ಉಪಟಳಗಳ ನಡುವೆಯೂ ಯಶಸ್ಸನ್ನು ಗಳಿಸುವಿರಿ. ನಿಮ್ಮ ಮನಸ್ಸಿನ ದುಗುಡವನ್ನು ಯಾರಿಗೂ ತಿಳಿಸುವುದಿಲ್ಲ. ಮಾನಸಿಕ ಚಿಂತಯಿಂದ ಬಳಲುವಿರಿ. ಸಂಗಾತಿಯಿಂದ ಹಣದ ಸಹಾಯ ಇರುತ್ತದೆ. ಸಂತಾನ ಭಾಗ್ಯವಿದೆ. ಗೃಹಿಣಿಯರು ಬುದ್ದಿವಂತಿಕೆಯಿಂದ ಹಣ ಉಳಿತಾಯ ಮಾಡುತ್ತಾರೆ. ಉತ್ತಮ ಅವಕಾಶ ದೊರೆಯುವ ಕಾರಣ ಉದ್ಯೋಗವನ್ನು ಬದಲಿಸುವಿರಿ. ಕುಟುಂಬದ ಹಿರಿಯರ ಜೊತೆಯಲ್ಲಿ ವಾದ ವಿವಾದ ಇರುತ್ತದೆ. ಮನೆತನದ ಮನೆಯನ್ನು ನವೀಕರಣಗೊಳಿಸುವಿರಿ. ವಿರೋಧಿಗಳ ಚಟುವಟಿಕೆಯನ್ನು ಗಮನಿಸುವುದು ಒಳ್ಳೆಯದು. ಬಂಧು-ಬಳಗದವರ ಜೊತೆ ಉತ್ತಮ ಸಾಮರಸ್ಯ ಇರುವುದಿಲ್ಲ. ಗಂಟಲಿಗೆ ಸಂಬಂಧಿಸಿದ ತೊಂದರೆ ಇರುತ್ತದೆ. ಮನಸ್ಸು ಒಳ್ಳೆಯದಾದರೂ ದುಡುಕುತನದಿಂದ ಮಾತನಾಡುವಿರಿ.
ಕಟಕ ರಾಶಿ
ಕುಟುಂಬದ ಹಿರಿಯರ ಕಷ್ಟ ನಷ್ಟಗಳು ದೂರವಾಗುತ್ತವೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಕುಟುಂಬದಲ್ಲಿ ಅಶಾಂತಿಯ ಸನ್ನಿವೇಶವು ಎದುರಾಗುತ್ತದೆ. ಮಕ್ಕಳ ವಿಚಾರದಲ್ಲಿ ಅನಾವಶ್ಯಕ ಚಿಂತೆ ಇರುತ್ತದೆ. ತಪ್ಪು ನಿರ್ಧಾರದಿಂದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿದೆ. ಮೊಣಕಾಲು ಅಥವಾ ಮೊಣಕೈಗಳಲ್ಲಿ ನೋವಿರುತ್ತದೆ. ತಂದೆಯವರ ಆರೋಗ್ಯದಲ್ಲಿ ತೊಂದರೆ ಕಾಣುತ್ತದೆ. ಭಿನ್ನಾಭಿಪ್ರಾಯ ಮರೆತು ದೂರವಾಗಿದ್ದ ಸೋದರರು ಮರಳಿ ಬರುತ್ತಾರೆ. ಸೋದರ ಮಾವನಿಂದ ಹಣದ ಸಹಾಯ ದೊರೆಯಲಿದೆ. ಹೊಸ ವಾಹನ ಕೊಳ್ಳುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭಂಶ ದೊರಕುತ್ತದೆ. ಆಭರಣ ಕೊಳ್ಳುವ ಯೋಗವಿದೆ. ಗೃಹಿಣಿಯರಿಗೆ ಮಾನಸಿಕ ಒತ್ತಡವಿರುತ್ತದೆ. ಮನೆತನದ ವ್ಯಾಪಾರವನ್ನು ಮುಂದುವರಿಸಬೇಕಾದ ಅನಿವಾರ್ಯತೆ ಕಂಡು ಬರುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
