ಪ್ರತಿದಿನದ ಜೀವನದಲ್ಲಿ ಫೆಂಗ್‌ಶೂಯಿ ಪಾತ್ರ; ಮನೆಯ ಗೋಡೆ ಯಾವ ಬಣ್ಣದ್ದಾಗಿರಬೇಕು, ಮುಂಬಾಗಿಲು ಯಾವ ರೀತಿ ಇರಬೇಕು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರತಿದಿನದ ಜೀವನದಲ್ಲಿ ಫೆಂಗ್‌ಶೂಯಿ ಪಾತ್ರ; ಮನೆಯ ಗೋಡೆ ಯಾವ ಬಣ್ಣದ್ದಾಗಿರಬೇಕು, ಮುಂಬಾಗಿಲು ಯಾವ ರೀತಿ ಇರಬೇಕು?

ಪ್ರತಿದಿನದ ಜೀವನದಲ್ಲಿ ಫೆಂಗ್‌ಶೂಯಿ ಪಾತ್ರ; ಮನೆಯ ಗೋಡೆ ಯಾವ ಬಣ್ಣದ್ದಾಗಿರಬೇಕು, ಮುಂಬಾಗಿಲು ಯಾವ ರೀತಿ ಇರಬೇಕು?

ಭಾರತದಲ್ಲಿ ವಾಸ್ತುಶಾಸ್ತ್ರ ಅಳವಡಿಸಿಕೊಳ್ಳುವಂತೆ ಚೀನಿಯರು ಫೆಂಗ್‌ಶೂಯಿ ಬಳಸುತ್ತಾರೆ. ಇದರ ಪ್ರಕಾರ ಮನೆಗೆ ಒಳಿತಾಗಲು ಗಾಳಿಗಂಟೆಗಳನ್ನು ಅಳವಡಿಸುವುದು, ಮನೆಗೆ ನೀಲಿ ಬಣ್ಣ ಬಳಿಸುವುದು, ಗೋಡೆಗಳ ಮೇಲೆ ಸುಂದರ ಚಿತ್ರಗಳನ್ನು ಹಾಕಿಕೊಳ್ಳುವುದು ಸೇರಿದಂತೆ ಅನೇಕ ಅಂಶಗಳನ್ನು ಫೆಂಗ್‌ಶೂಯಿಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಪ್ರತಿದಿನದ ಜೀವನದಲ್ಲಿ ಫೆಂಗ್‌ಶೂಯಿ ಪಾತ್ರ; ಮನೆಯ ಗೋಡೆ ಯಾವ ಬಣ್ಣದ್ದಾಗಿರಬೇಕು, ಮುಂಬಾಗಿಲು ಯಾವ ರೀತಿ ಇರಬೇಕು?
ಪ್ರತಿದಿನದ ಜೀವನದಲ್ಲಿ ಫೆಂಗ್‌ಶೂಯಿ ಪಾತ್ರ; ಮನೆಯ ಗೋಡೆ ಯಾವ ಬಣ್ಣದ್ದಾಗಿರಬೇಕು, ಮುಂಬಾಗಿಲು ಯಾವ ರೀತಿ ಇರಬೇಕು? (PC: Unsplash)

ಫೆಂಗ್‌ಶೂಯಿ ಎಂಬುದು ಚೀನಿ ವಾಸ್ತು ಶಾಸ್ತ್ರ. ಇದು ಬಹುತೇಕ ನಮ್ಮ ವೇದ ವಿಜ್ಞಾನವನ್ನು ಹೋಲುತ್ತದೆ. ಮುಖ್ಯವಾಗಿ ಯಿನ್ ಮತ್ತು ಯಾಂಗ್ ಶಕ್ತಿಯ ಬಗ್ಗೆ ವಿಶೇಷವಾದ ವಿವರಣೆ ಇದೆ. ಜೀವನದಲ್ಲಿ ಈ ಫೆಂಗ್‌ಶುಯಿ ಅಳವಡಿಸಿಕೊಂಡರೆ ಸುಖ, ಸಂತೋಷದಿಂದ ಬಾಳಬಹುದು ಎಂದು ಫೆಂಗ್‌ಶೂಯಿ ತಜ್ಞರು ಹೇಳುತ್ತಾರೆ.

ಉದ್ಯೋಗದಲ್ಲಿ ಆಗಲಿ ನಿತ್ಯ ಜೀವನದಲ್ಲಿ ಆಗಲಿ ಅನಾವಶ್ಯಕ ವಾದ ವಿವಾದಗಳು, ಬೇಸರದ ಸನ್ನಿವೇಶಗಳು ಎದುರಾದರೆ ಅದನ್ನು ಸರಿಸೂಗಿಸಬೇಕಾದ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ ಮನೆಯ ಮುಂಭಾಗದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತೇವೆ. ಇದೇ ರೀತಿ ಮನೆಯ ಪ್ರಮುಖ ದ್ವಾರಗಳಿಗೆ ಹಸಿರು ತೋರಣ ಕಟ್ಟುವುದು ಅಥವಾ ಶುಭ ಚಿನ್ಹೆಗಳನ್ನು ಬರೆಸುವುದು ಮಾಡುತ್ತೇವೆ. ಇದನ್ನೆ ಹೋಲುವ ವಿಚಾರಗಳು ಚೀನಿ ವಾಸ್ತುವಿನಲ್ಲಿ ಕಂಡು ಬರುತ್ತವೆ.

ಮನೆಯ ಮುಂಭಾಗ ಗಾಳಿ ಗಂಟೆ ಅಳವಡಿಕೆ

  • ಮನೆಗೆ ಒಳಗೆ ಧನಾತ್ಮಕ ಶಕ್ತಿಯು ಪ್ರವೇಶಿಸುವ ಸಲುವಾಗಿ ಗಾಳಿ ಗಂಟೆಯನ್ನು ಮನೆಯ ಮುಂಭಾಗಿಲಿನಲ್ಲಿ ಅಳವಡಿಸಬೇಕು. ಮನೆಯ ಮುಂಭಾಗಿಲಿನಲ್ಲಿ ಬೆಳಕು ಇರುವುದು ಬಹಳ ಮುಖ್ಯ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ: ಹುಟ್ಟಿದ ಮನೆ ಮಾತ್ರವಲ್ಲ, ಈ ರಾಡಿಕ್ಸ್‌ ನಂಬರ್‌ ಹುಡುಗಿಯರು ಮೆಟ್ಟಿದ ಮನೆಗೂ ಕೀರ್ತಿ ತರುತ್ತಾರೆ

  • ಮನೆಯ ಕಿಟಕಿಗಳಿಗೆ ಬಿಳಿ ಬಣ್ಣದ ಪರದೆಯನ್ನು ಬಳಸಿದಲ್ಲಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಮನೆಯ ಮುಂಭಾಗದಲ್ಲಿ ಅಥವಾ ಮುಂಭಾಗಲಿನ ಎದುರು ಭಾಗದಲ್ಲಿ ಹಸಿರು ಬಣ್ಣದ ಗಿಡಗಳನ್ನು ಬೆಳೆಸುವುದು ಒಳ್ಳೆಯದು.
  • ಸಾಧ್ಯವಾದಷ್ಟು ಮನೆಯ ಮುಂಬಾಗಿಲಿನಲ್ಲಿ ಗುಲಾಬಿ ಮತ್ತು ಕೆಂಪು ಬಣ್ಣದ ಗಿಡಗಳನ್ನು ಬೆಳೆಸಬಾರದು. ಮನೆಯ ಮೇಲ್ಚಾವಣಿಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಹೂಗಳಿರುವ ಗಿಡಗಳನ್ನು ಬೆಳೆಸಬಹುದು. ಮನೆಯ ಒಳಭಾಗದಲ್ಲಿ ಅಲಂಕಾರಕ್ಕಾಗಿ ಇಟ್ಟಿರುವ ಹೂದಾನಿಗಳಲ್ಲಿ ಹೂಗಳನ್ನು ಅವಶ್ಯಕವಾಗಿ ಇಡಬೇಕು.
  • ಸಂಪೂರ್ಣವಾಗಿ ಅಲ್ಲದೇ ಹೋದರೂ ಮನೆಯ ಮುಂಭಾಗಕ್ಕೆ ನೀಲಿ ಬಣ್ಣ ಬಳಸಬೇಕು. ಮನೆಯ ಮುಂದಿನ ಬಾಗಿಲಿಗೆ ಕೆಂಪು ಬಣ್ಣದ ದೀಪ ಇರಬಾರದು
  • ಮನೆಯ ಮುಂದೆ ಹುಲ್ಲು ಬೆಳೆಸಬಹುದು. ನೈಸರ್ಗಿಕವಲ್ಲದ ಹಸಿರು ಹುಲ್ಲನ್ನುಸಹ ಬಳಸಬಹುದು. ಮನೆಯ ಒಳಭಾಗದಲ್ಲಿ ನೀರಿನ ಕಾರಂಜಿಯನ್ನು ಇಡಿ.
  • ಮನೆಯ ಒಳಗಿನ ಗೋಡೆಗಳಿಗೆ ನೀರಿರುವ ನದಿ, ಸರೋವರ ಅಥವಾ ಇನ್ನಿತರ ಛಾಯಾ ಚಿತ್ರಗಳನ್ನು ಬಳಸಬೇಕು. ಮನೆಯ ಅಂಗಳ ಅಥವಾ ಅಡುಗೆ ಮನೆಗೆ ನೀಲಿ ಬಣ್ಣವಿರುವ ಪರದೆಯನ್ನು ಉಪಯೋಗಿಸಬೇಕು. ಉತ್ತರದಿಕ್ಕಿನಲ್ಲಿ ಕುಳಿತು ಹಣಕಾಸಿನ ವ್ಯವಹಾರವನ್ನು ಆರಂಭಿಸಬಾರದು, ಪಶ್ಚಿಮ ದಿಕ್ಕಿನಲ್ಲಿ ಕುಳಿತು ಆಹಾರ ಸ್ವೀಕರಿಸುವುದು ಅಥವಾ ಔಷಧಿಯನ್ನು ಸ್ವೀಕರಿಸುವುದನ್ನು ಮಾಡಬಾರದು.

ಇದನ್ನೂ ಓದಿ: ಜೀವನದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಫಿಶ್‌ ಟ್ಯಾಂಕ್‌; ಮನೆಗೆ ಅಕ್ವೇರಿಯಂ ತರುವ ಯೋಚನೆಯಿದ್ದರೆ ಈ ಮೀನುಗಳನ್ನೇ ಆಯ್ದುಕೊಳ್ಳಿ

ಉತ್ತರ ದಿಕ್ಕಿನ ಗೋಡೆ ಹೇಗಿರಬೇಕು?

  • ದಕ್ಷಿಣ ದಿಕ್ಕಿನಲ್ಲಿ ನೀರಿನ ತೊಟ್ಟಿ ಇರಬಾರದು, ಉತ್ತರ ದಿಕ್ಕಿನ ಗೋಡೆಯಲ್ಲಿ ಬೆಂಬಿಸುವ ಚಿತ್ರಗಳಿರಬೇಕು. ಉತ್ತರ ದಿಕ್ಕಿನಲ್ಲಿ ವಂಶದ ಹಿರಿಯರ ಅಥವಾ ರಾಜ ಮಹಾರಾಜರ ಚಿತ್ರಗಳನ್ನು ಹಾಕಬಹುದು . ನೈರುತ್ಯ ದಿಕ್ಕಿನಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು ಅಥವಾ ಮಣ್ಣಿನ ಆಕೃತಿಗಳನ್ನು ಇಡಬಹುದು . ನಮ್ಮ ಜೀವನಕ್ಕೆ ಅವಶ್ಯಕವಾದ ಆಮ್ಲಜನಕವನ್ನು ನೀಡುವ ಹಸಿರು ಗಿಡಗಳನ್ನು ಇಡಬಹುದು ಅಥವಾ ಚಿತ್ರಗಳನ್ನು ಬಳಸಬಹುದು.
  • ದಿನನಿತ್ಯ ಸೇವಿಸುವ ಔಷಧಿಯನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಕಾರಣ ಪೂರ್ವ ದಿಕ್ಕಿನಲ್ಲಿ ಜೀವ ವಾಯುವಿರುತ್ತದೆ. ವಾಯವ್ಯದಲ್ಲಿ ವಾಯುವಿನ ಪ್ರಭಾವವು ಇರುತ್ತದೆ ಆದ್ದರಿಂದ ಈ ದಿಕ್ಕಿನಲ್ಲಿ ಶಬ್ದವನ್ನು ಉಂಟುಮಾಡುವ ತೂಗು ಗಂಟೆಯನ್ನು ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿಯೂ ಬಳಸಬಹುದು.
  • ಮನೆಯ ಸುತ್ತಮುತ್ತ ಹಾಳಾದ ಮನೆಗಳಾಗಲಿ ಬಳಸಲು ಯೋಗ್ಯವಲ್ಲದ ಮೈದಾನವಾಗಲೀ ಇರಬಾರದು, ಮನೆಯ ಹಿಂಭಾಗದಲ್ಲಿ ಎತ್ತರದ ಪ್ರದೇಶವಿರುವುದು ಒಳ್ಳೆಯದು, ಮನೆಯ ಆಕಾರವು ಚೌಕ ಅಥವಾ ಆಯತಾಕಾರದಲ್ಲಿ ಇರುವುದು ಒಳ್ಳೆಯದು.
  • ಯಾವುದೇ ಕಾರಣಕ್ಕೂ ಮನೆಯ ಆಕಾರವು ತ್ರಿಕೋನಾಕಾರವಾಗಿ ಇರಬಾರದು, ಮನೆಯ ಮುಖ್ಯದ್ವಾರದ ಎದುರಿಗೆ ಕಸ, ಕಸದ ವಸ್ತುಗಳು ಇರಬಾರದು, ಮನೆಯ ಮುಂಬಾಗಿಲಿನಲ್ಲಿ ಮನೆಯ ಸಂಖ್ಯೆಯನ್ನು ಬಂಗಾರದ ಬಣ್ಣದಿಂದ ಬರೆಸಬೇಕು.
  • ಮುಂಬಾಗಿಲಿನ ಮೇಲೆ ಕಸ ಅಥವಾ ಧೂಳು ಇರಬಾರದು, ಈಶಾನ್ಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಒಳ್ಳೆಯ ಕನ್ನಡಿಯನ್ನು ಬಳಸಬಹುದು. ಒಡೆದ ಕನ್ನಡಿಗರನ್ನು ಬಳಸಿದರೆ ಕುಟುಂಬದಲ್ಲಿ ಅನಾವಶ್ಯಕ ಜಗಳ ಕದನ ಕಂಡು ಬರುತ್ತದೆ.

ಇದನ್ನೂ ಓದಿ: ಸಂಪತ್ತನ್ನು ಕರುಣಿಸುವ ಸಂಪದ ಗೌರಿ ವ್ರತ ಸೇರಿದಂತೆ ಈ ದಿನ ಏನೆಲ್ಲಾ ವಿಶೇಷವಿದೆ? ಬುಧವಾರದ ದಿನ ವಿಶೇಷ

ಇದಲ್ಲದೆ ಇನ್ನೂ ಅನೇಕ ವಿಚಾರಗಳು ಫೆಂಗ್‌ಶೂಯಿಯಲ್ಲಿ ಕಂಡುಬರುತ್ತದೆ. ನಿಮ್ಮ ಮನೆಯಲ್ಲೂ ಫೆಂಗ್‌ಶೂಯಿ ಅಳವಡಿಸಿಕೊಳ್ಳಬೇಕೆಂದರೆ ತಜ್ಞ ಜ್ಯೋತಿಷಿಗಳ ಸಲಹೆ ಪಡೆಯಿರಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.