ರುಚಿ ರುಚಿ ಆಹಾರ ತಿನ್ಬೇಕೆಂದ್ರೆ ಈ ರಾಶಿಯವರಿಗೆ ಬಹಳ ಇಷ್ಟ; ಗ್ರಹಗಳು ಬಲವಾಗಿದ್ದರೆ ನೀವಾಗುತ್ತೀರಿ ಆಹಾರ ಪ್ರಿಯರು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರುಚಿ ರುಚಿ ಆಹಾರ ತಿನ್ಬೇಕೆಂದ್ರೆ ಈ ರಾಶಿಯವರಿಗೆ ಬಹಳ ಇಷ್ಟ; ಗ್ರಹಗಳು ಬಲವಾಗಿದ್ದರೆ ನೀವಾಗುತ್ತೀರಿ ಆಹಾರ ಪ್ರಿಯರು

ರುಚಿ ರುಚಿ ಆಹಾರ ತಿನ್ಬೇಕೆಂದ್ರೆ ಈ ರಾಶಿಯವರಿಗೆ ಬಹಳ ಇಷ್ಟ; ಗ್ರಹಗಳು ಬಲವಾಗಿದ್ದರೆ ನೀವಾಗುತ್ತೀರಿ ಆಹಾರ ಪ್ರಿಯರು

Food Astrology: ರಾಶಿಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಹೇಳುವುದರ ಜೊತೆಗೆ, ಅವರ ಗುಣಸ್ವಭಾವಗಳನ್ನು ಸಹ ತಿಳಿಯಬಹುದು. ರಾಶಿ, ಗ್ರಹಗಳ ಆಧಾರದ ಮೇಲೆ ಅವರ ಆಹಾರ, ಹವ್ಯಾಸಗಳನ್ನು ತಿಳಿದುಕೊಳ್ಳಬಹುದು. ಈ ಗ್ರಹಗಳೊಂದಿಗೆ ಸಂಬಂಧ ಹೊಂದಿದ್ದರೆ ಹೆಚ್ಚು ತಿನ್ನಲು ಮತ್ತು ಕುಡಿಯಲು ಇಷ್ಟಪಡುತ್ತಾರೆ. (ಬರಹ: ಅರ್ಚನಾ ವಿ. ಭಟ್‌)

ರುಚಿ ರುಚಿ ಆಹಾರ ತಿನ್ಬೇಕೆಂದ್ರೆ ಈ ರಾಶಿಯವರಿಗೆ ಬಹಳ ಇಷ್ಟ
ರುಚಿ ರುಚಿ ಆಹಾರ ತಿನ್ಬೇಕೆಂದ್ರೆ ಈ ರಾಶಿಯವರಿಗೆ ಬಹಳ ಇಷ್ಟ (PC: Freepik)

ಪ್ರತಿಯೊಂದು ರಾಶಿಯು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುತ್ತದೆ. ಕೆಲವರ ಸ್ವಭಾವ ಒಂದೇ ಆಗಿದ್ದರೆ, ಇನ್ನು ಕೆಲವರದ್ದು ಬೇರೆ ಬೇರೆ ಸ್ವಭಾವವಾಗಿರುತ್ತದೆ. ರಾಶಿಯ ಆಧಾರದ ಮೇಲೆ ಅನೇಕ ವಿಷಯಗಳನ್ನು ಹೇಳಬಹುದು. ರಾಶಿಗಳ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ. ವ್ಯಕ್ತಿಯ ಸ್ವಭಾವವನ್ನು ಸಹ ಹೇಳಬಹುದು. ಗ್ರಹಗಳು ಮತ್ತು ರಾಶಿಯ ಸ್ಥಾನ ವ್ಯಕ್ತಿಯ ಅದೃಷ್ಟ, ಭವಿಷ್ಯ, ಹವ್ಯಾಸ ಹಾಗೂ ಆಹಾರ ಮುಂತಾದ ವಿಷಯಗಳ ಬಗ್ಗೆ ಹೇಳುತ್ತವೆ. ಕೆಲವರು ಆಹಾರವನ್ನು ಹಿತಮಿತವಾಗಿ ತಿನ್ನುತ್ತಾರೆ. ಇನ್ನು ಕೆಲವರು ಬಾಯಿಗೆ ಬಿಡುವು ನೀಡದೆ ತಿನ್ನುತ್ತಿರುತ್ತಾರೆ. ಆಹಾರವೆಂದರೆ ಎಲ್ಲಿಲ್ಲದ ಪ್ರೀತಿಯಿರುತ್ತದೆ. ಹಾಗಾದರೆ ಯಾರು ಆಹಾರವನ್ನು ಹೆಚ್ಚು ಪ್ರೀತಿಸುತ್ತಾರೆ ಮತ್ತು ಏಕೆ ಎಂಬುದಕ್ಕೆ ಇಲ್ಲಿ ಕಾರಣವನ್ನು ನೀಡಲಾಗಿದೆ.

ಆಹಾರವನ್ನು ಹೆಚ್ಚು ಪ್ರೀತಿಸುವ ರಾಶಿಯವರು

ಗುರು, ಮಂಗಳ ಮತ್ತು ಶನಿ ಗ್ರಹಗಳೊಂದಿಗೆ ಸಂಬಂಧ ಹೊಂದಿದವರು ಆಹಾರವನ್ನು ಹೆಚ್ಚು ಪ್ರೀತಿಸುತ್ತಾರೆ. ಈ ಗ್ರಹಗೊಳೊಂದಿಗೆ ಸಂಬಂಧ ಹೊಂದಿದ್ದರೆ ಹೆಚ್ಚು ತಿನ್ನುವುದು ಮತ್ತು ಪಾನೀಯಗಳನ್ನು ಕುಡಿಯಲು ಇಷ್ಟಪಡುತ್ತಾರೆ. ಇದಲ್ಲದೇ ಕೆಲವು ರಾಶಿಗೆ ಸೇರಿದವರು ಕೂಡಾ ಆಹಾರವನ್ನು ಖುಷಿಯಿಂದ ಸೇವಿಸುತ್ತಾರೆ.

ಈ ಗ್ರಹಗಳು ಬಲವಾಗಿದ್ದರೆ ಈ ರೀತಿಯ ಆಹಾರ ಇಷ್ಟಪಡುತ್ತಾರೆ

1) ಜಾತಕದಲ್ಲಿ ಗುರು ಬಲವಾಗಿದ್ದವರು ಸಿಹಿ ತಿನ್ನಲು ಇಷ್ಟಪಡುತ್ತಾರೆ

2) ಮಂಗಳನು ಬಲವಾಗಿದ್ದರೆ ಕೆಲವು ವಿಶೇಷ ಆಹಾರವನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. ಇವರಿಗೆ ತಿನ್ನುವುದು ಮತ್ತು ಕುಡಿಯುವುದೆಂದರೆ ಬಲು ಇಷ್ಟ

3) ಶನಿಯು ಉತ್ತಮ ಸ್ಥಿತಿಯಲ್ಲಿದ್ದರೆ ಕೆಲವು ರಾಶಿಯವರು ಹೊಸ ಹೊಸ ಆಹಾರಗಳನ್ನು ತಿನ್ನಲು ಇಷ್ಟಪಡುತ್ತಾರೆ.

ಯಾವ ರಾಶಿಯವರಿಗೆ ಎಂತಹ ಆಹಾರ ಇಷ್ಟ

ಮೇಷ ರಾಶಿ: ಮೇಷ ರಾಶಿಯವರು ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಇವರು ಕೂಡ ಹೊಸ ಹೊಸ ಭಕ್ಷ್ಯಗಳನ್ನು ತಿನ್ನಲು ಇಷ್ಟಪಡುತ್ತಾರೆ. ಹೆಚ್ಚು ಮಸಾಲೆಯುಕ್ತ ಆಹಾರ ಮತ್ತು ಹುಳಿ ಆಹಾರವನ್ನು ಹೆಚ್ಚು ತಿನ್ನಲು ಇಷ್ಟಪಡುತ್ತಾರೆ.

ಸಿಂಹ ರಾಶಿ: ಸಿಂಹ ರಾಶಿಯವರು ಸಿಹಿ ತಿನ್ನಲು ತುಂಬಾ ಇಷ್ಟಪಡುತ್ತಾರೆ. ಸಿಹಿ ತಿಂಡಿಗಳೆಂದರೆ ಇವರಿಗೆ ಪಂಚಪ್ರಾಣ. ಸಿಂಹ ರಾಶಿಗೆ ಸೇರಿದವರು ಮನೆಯಲ್ಲಿನ ಸಿಹಿ ತಿಂಡಿಗಳನ್ನು ಹೆಚ್ಚು ಇಷ್ಟಪಡುತ್ತಾರೆ.

ಮೀನ ರಾಶಿ: ಈ ರಾಶಿಯ ಜನರು ತಿನ್ನುವುದು ಮತ್ತು ಕುಡಿಯಲು ತುಂಬಾ ಇಷ್ಟಪಡುತ್ತಾರೆ. ಇವರಿಗೆ ಅಡುಗೆ ಮಾಡುವುದೆಂದರೂ ಅಷ್ಟೇ ಇಷ್ಟ. ಅಡುಗೆ ಮಾಡುವುದು ಮತ್ತು ತಿನ್ನುವುದು ಎರಡನ್ನೂ ಇಷ್ಟಪಡುತ್ತಾರೆ. ಮೀನ ರಾಶಿಯವರು ವಿವಿಧ ಬಗೆಯ ಆಹಾರಗಳನ್ನು ತಿನ್ನಲು ಇಷ್ಟಪಡುತ್ತಾರೆ. (ಬರಹ: ಅರ್ಚನಾ ವಿ. ಭಟ್‌)

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.