Ganesha Chaturthi: ಈ ರಾಶಿಯವರ ಮೇಲೆ ವಿನಾಯಕನಿಗೆ ಬಲು ಪ್ರೀತಿ; ಸೋಲು ಇರಲ್ಲ, ಸಮೃದ್ಧಿ ಹೆಚ್ಚಿರುತ್ತೆ-ganesha chaturthi horoscope vinayaka favorite 3 zodiac signs no failure more prosperity in life rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ganesha Chaturthi: ಈ ರಾಶಿಯವರ ಮೇಲೆ ವಿನಾಯಕನಿಗೆ ಬಲು ಪ್ರೀತಿ; ಸೋಲು ಇರಲ್ಲ, ಸಮೃದ್ಧಿ ಹೆಚ್ಚಿರುತ್ತೆ

Ganesha Chaturthi: ಈ ರಾಶಿಯವರ ಮೇಲೆ ವಿನಾಯಕನಿಗೆ ಬಲು ಪ್ರೀತಿ; ಸೋಲು ಇರಲ್ಲ, ಸಮೃದ್ಧಿ ಹೆಚ್ಚಿರುತ್ತೆ

ಎಲ್ಲಾ ದೇವರುಗಳು ನಿರ್ದಿಷ್ಟ ರಾಶಿಚಕ್ರದ ಚಿಹ್ನೆಗಳನ್ನು ವಿಶೇಷವಾಗಿ ಇಷ್ಟಪಡುತ್ತಾರೆ. ಅಲ್ಲದೆ, ಗಣೇಶನಿಗೆ 3 ರಾಶಿಗಳಿವೆ, ಇವರೆಂದರೆ ಮಹಾನ್ ಪ್ರೀತಿ. ಈ ರಾಶಿಯವರಿಗೆ ಯಾವುದೇ ಕೆಲಸದಲ್ಲಿ ಅಡೆತಡೆ ಇರಲ್ಲ. ಗಣೇಶನ ಕೃಪೆಯಿಂದ ತಮ್ಮ ಕಾರ್ಯವನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸುತ್ತಾರೆ. ಆ 3 ರಾಶಿಯವರ ಯಾರು ಅನ್ನೋದನ್ನ ನೋಡೋಣ.

ಗಣೇಶ ಇಷ್ಟ ಪಡುವ 3 ರಾಶಿಯವರಿಗೆ ಇರುವ ಶುಭಫಲಗಳ ಮಾಹಿತಿ ಇಲ್ಲಿದೆ.
ಗಣೇಶ ಇಷ್ಟ ಪಡುವ 3 ರಾಶಿಯವರಿಗೆ ಇರುವ ಶುಭಫಲಗಳ ಮಾಹಿತಿ ಇಲ್ಲಿದೆ.

ಇಡೀ ದೇಶದ ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿರುವ ಗಣೇಶ ಉತ್ಸವ ಬಂದೇ ಬಿಡ್ತು. ಹಿಂದೂ ಕ್ಯಾಲೆಂಡರ್ ಪ್ರಕಾರ ಭಾದ್ರಪದ ಮಾಸದ ಶುಕ್ಲಪಕ್ಷದ ನಾಲ್ಕನೇ ದಿನದಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಎಲ್ಲಾ ದೇವರುಗಳಲ್ಲಿ ಮೊದಲು ಪೂಜಿಸಲ್ಪಡುವವನು ಗಣೇಶ. ಇಂತಹ ವಿಘ್ನೇಶ್ವರನನ್ನು ಪೂಜಿಸುವುದರಿಂದ ಕಷ್ಟಗಳು ನಿವಾರಣೆಯಾಗಿ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. 2024 ರ ಸೆಪ್ಟೆಂಬರ್ 7 (ಶನಿವಾರ) ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗಣೇಶನಿಗೆ ಇಷ್ಟವಾದ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.

ಗಣೇಶನ ಕೃಪೆಯಿಂದ ಕೆಲವರ ಭವಿಷ್ಯದ ಪ್ರಕಾರ, ಜೀವನ ಸುಖಮಯವಾಗಿರುತ್ತದೆ. 12 ರಾಶಿಯವರ ಪೈಕಿ ಕೆಲವು ಚಿಹ್ನೆಗಳು ಗಣೇಶನ ವಿಶೇಷ ಅನುಗ್ರಹವನ್ನು ಹೊಂದಿವೆ. ಇವರ ಮನಸ್ಸಿನ ಅಡೆತಡೆಗಳನ್ನು ಸುಲಭವಾಗಿ ತೆಗೆದುಹಾಕಲಾಗುತ್ತದೆ. ಎಲ್ಲದರಲ್ಲೂ ಯಶಸ್ವಿಯಾಗುತ್ತಾರೆ. ಗಣಪತಿಯ ಆಶೀರ್ವಾದದಿಂದ ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಗಣಪತಿಯ ಅನುಗ್ರಹದಿಂದ ಈ ಮೂರು ರಾಶಿಯವರು ಕಷ್ಟದ ಸಂದರ್ಭಗಳಲ್ಲೂ ಸುಲಭವಾಗಿ ಮೇಲುಗೈ ಸಾಧಿಸುತ್ತಾರೆ. ಅವರು ಯಾವ ರಾಶಿಯಲ್ಲಿದ್ದಾರೆ ಎಂಬುದನ್ನು ನೋಡಿ.

ಮೇಷ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯವರಿಗೆ ಗಣೇಶನ ಹೇರಳವಾದ ಆಶೀರ್ವಾದವಿದೆ. ಇವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಮಾಡುವ ಪ್ರತಿ ಕೆಲಸವೂ ಪರಿಣಾಮಕಾರಿಯಾಗಿರುತ್ತದೆ. ಗಣಪತಿಯ ವಿಶೇಷ ಕೃಪೆಯಿಂದ ಈ ರಾಶಿಯವರು ತಮ್ಮ ಕೆಲಸ ಕಾರ್ಯಗಳಲ್ಲಿ ಶೀಘ್ರವಾಗಿ ಯಶಸ್ವಿಯಾಗುತ್ತಾರೆ. ಮೇಷ ರಾಶಿಯ ಅಧಿಪತಿ ಮಂಗಳ. ಆದ್ದರಿಂದ, ಇವರು ಧೈರ್ಯಶಾಲಿ ಸಾಹಸಗಳಲ್ಲಿ ಉತ್ತಮರು. ತಮ್ಮ ಬುದ್ಧಿವಂತಿಕೆಯಿಂದ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಾರೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಗಣೇಶನ ಕರುಣಾಮಯ ನೋಟಗಳು ಶಾಶ್ವತವಾಗಿರುತ್ತದೆ. ಬಹಳ ಪ್ರತಿಭಾವಂತರಾಗಿರುತ್ತಾರೆ. ಈ ಚಿಹ್ನೆಯ ಜನರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ. ದಯೆ ಸ್ವಭಾವದವರಾಗಿರುತ್ತಾರೆ. ಏನನ್ನಾದರೂ ಮಾಡಬೇಕೆಂದು ಬಯಸಿದರೆ, ಅದನ್ನು ಮಾಡುವವರೆಗೆ ಬಿಡುವುದಿಲ್ಲ. ಈ ರಾಶಿಯವರು ಬುಧವಾರದಂದು ಗಣೇಶನನ್ನು ಪೂಜಿಸಿ ವಿಶೇಷ ಫಲಿತಾಂಶಗಳನ್ನು ಪಡೆಯುತ್ತಾರೆ. ಗಣೇಶನ ಕೃಪೆಯಿಂದ ಸಮಾಜದಲ್ಲಿ ಒಳ್ಳೆ ಹೆಸರು, ಕೀರ್ತಿ ಸಿಗುತ್ತದೆ. ಆದಾಯ ಹೆಚ್ಚಿರುತ್ತದೆ.

ಮಕರ ರಾಶಿ

ಮಕರ ರಾಶಿಯನ್ನು ಶನಿ ಆಳುತ್ತಾನೆ. ಈ ರಾಶಿಯವರಿಗೆ ಗಣೇಶನ ಕೃಪೆಯೂ ಇರುತ್ತದೆ. ಪ್ರಾಮಾಣಿಕರು ಮತ್ತು ನಂಬಿಕೆಗೆ ಅರ್ಹರಾಗಿರುತ್ತಾರೆ. ನೀವು ಬುದ್ಧಿವಂತರು ಎಂಬ ಖ್ಯಾತಿಯನ್ನು ಪಡೆದಿರುತ್ತೀರಿ. ಈ ರಾಶಿಯ ಜನರು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸುತ್ತಾರೆ. ಪ್ರತಿದಿನ ಗಣೇಶನ ಪೂಜೆ ಮಾಡುವುದು ಒಳ್ಳೆಯದು. ಕಷ್ಟಕಾಲದಲ್ಲಿ ಎದೆಗುಂದದೆ ಸಾಗುವುದು ಇವರ ವಿಶೇಷ ಗುಣ. ನಿಜವಾಗಿಯೂ ಸೋಲನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ. ಗಣಪತಿ ಸ್ತೋತ್ರಗಳನ್ನು ಪಠಿಸುವುದರಿಂದ ಹೆಚ್ಚಿನ ಶುಭ ಫಲಗಳು ದೊರೆಯುತ್ತವೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.