ಇಂದು ಗಂಗಾ ದಸರಾ: ಹಣಕಾಸು, ಇನ್ನಿತರ ಸಮಸ್ಯೆಗಳಿಂದ ಮುಕ್ತಿ ಹೊಂದಿ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಲು ಈ ಪರಿಹಾರಗಳನ್ನು ಮಾಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಂದು ಗಂಗಾ ದಸರಾ: ಹಣಕಾಸು, ಇನ್ನಿತರ ಸಮಸ್ಯೆಗಳಿಂದ ಮುಕ್ತಿ ಹೊಂದಿ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಲು ಈ ಪರಿಹಾರಗಳನ್ನು ಮಾಡಿ

ಇಂದು ಗಂಗಾ ದಸರಾ: ಹಣಕಾಸು, ಇನ್ನಿತರ ಸಮಸ್ಯೆಗಳಿಂದ ಮುಕ್ತಿ ಹೊಂದಿ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಲು ಈ ಪರಿಹಾರಗಳನ್ನು ಮಾಡಿ

Ganga Dasara 2024: ದೇಶಾದ್ಯಂತ ಇಂದು ಗಂಗಾ ದಸರಾ ಆಚರಿಸಲಾಗುತ್ತಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಹಬ್ಬದಂದು ಗಂಗಾ ನದಿಯಲ್ಲಿ ಸ್ನಾನ ಮಾಡುವ ಭಕ್ತರು ಪಾಪ ಕಳೆಯುವಂತೆ ತಮ್ಮ ಜೀವನದ ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರಾರ್ಥಿಸುತ್ತಾರೆ. ಈ ದಿನ ಕೆಲವೊಂದು ಪರಿಹಾರಗಳನ್ನು ಕೈಗೊಂಡರೆ ಬಹುತೇಕ ಸಮಸ್ಯೆಗಳು ದೂರಾಗುತ್ತದೆ.

ಇಂದು ಗಂಗಾ ದಸರಾ: ಹಣಕಾಸು, ಇನ್ನಿತರ ಸಮಸ್ಯೆಗಳಿಂದ ಮುಕ್ತಿ ಹೊಂದಿ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಲು ಈ ಪರಿಹಾರಗಳನ್ನು ಮಾಡಿ
ಇಂದು ಗಂಗಾ ದಸರಾ: ಹಣಕಾಸು, ಇನ್ನಿತರ ಸಮಸ್ಯೆಗಳಿಂದ ಮುಕ್ತಿ ಹೊಂದಿ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಲು ಈ ಪರಿಹಾರಗಳನ್ನು ಮಾಡಿ (PC: Unsplash)

ಗಂಗಾ ದಸರಾ 2024: ಸನಾತನ ಧರ್ಮದಲ್ಲಿ ಗಂಗಾ ದಸರಾಗೆ ಬಹಳ ಪ್ರಾಮುಖ್ಯತೆ ಇದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಗಂಗಾ ದಸರಾವನ್ನು ಪ್ರತಿ ವರ್ಷ ಜ್ಯೇಷ್ಠ ಮಾಸದ ಶುಕ್ಲಪಕ್ಷದ 10ನೇ ದಿನದಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗಂಗಾ ದೇವಿಯು ಈ ದಿನ ಭೂಮಿಗೆ ಬಂದಳು ಎಂದು ನಂಬಲಾಗಿದೆ. ಅದಕ್ಕಾಗಿಯೇ ಗಂಗಾ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.

ಈ ಬಾರಿ ಜೂನ್‌ 16, ಇಂದು ಗಂಗಾ ದಸರಾವನ್ನು ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಗಂಗಾ ತೀರಕ್ಕೆ ತೆರಳುವ ಜನರು ಗಂಗೆಗೆ ಪೂಜೆ ಮಾಡಿ, ಗಂಗೆಯಲ್ಲಿ ಸ್ನಾನ ಮಾಡಿ ಪ್ರಾರ್ಥನೆ ಮಾಡುತ್ತಾರೆ. ಸಮೀಪದಲ್ಲಿ ಗಂಗಾ ನದಿ ಇಲ್ಲದಿರುವವರು ಹರಿಯವ ಯಾವುದೇ ನದಿಯಲ್ಲಾದರೂ ಸ್ನಾನ ಮಾಡಿದರೆ ಗಂಗೆಯಲ್ಲಿ ಮಿಂದಷ್ಟೇ ಪುಣ್ಯ ದೊರೆಯಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗಂಗಾ ದಸರಾ ವಿಶೇಷ ದಿನದಂದು ತುಳಸಿಗೆ ಸಂಬಂಧಿಸಿದ ಕೆಲವು ವಿಶೇಷ ಪರಿಹಾರಗಳನ್ನು ಕೈಗೊಂಡರೆ ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡಾ ದೂರವಾಗುತ್ತದೆ ಎಂಬ ನಂಬಿಕೆ ಇದೆ.

ಪರಿಹಾರಗಳು

  • ಗಂಗಾ ದಸರಾ ದಿನ ತುಳಸಿ ಎಲೆಗಳನ್ನು ಗಂಗಾಜಲದಿಂದ ತೊಳೆಯಬೇಕು. ಅದರ ನಂತರ ಅವುಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನೀವು ಹಣ ಇಡುವ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ದಾರಿದ್ರ್ಯ ದೂರವಾಗುತ್ತದೆ. ಮನೆಗೆ ಬರುವ ಲಕ್ಷ್ಮೀ ಇಲ್ಲೇ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.
  • ಗಂಗಾ ದಸರಾ ದಿನದಂದು ತುಳಸಿಗೆ ನೀರನ್ನು ಅರ್ಪಿಸಿ ಮತ್ತು ಶ್ರೀ ತುಳಸಿ ಸ್ತೋತ್ರವನ್ನು ಪಠಿಸಬೇಕು. ತುಳಸಿಯನ್ನು ಪೂಜಿಸುವ ಮನೆ ಸದಾ ಸಮೃದ್ಧಿಯಿಂದ ಇರುತ್ತದೆ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ತಾಯಿ ತುಳಸಿ ಹಾಗೂ ಗಂಗಾ ಮಾತೆ ಪ್ರಸನ್ನಳಾಗುತ್ತಾಳೆ.
  • ಗಂಗಾ ದಸರಾ ದಿನ ಒಂದು ತೆಂಗಿನಕಾಯಿ ಹಾಗೂ ನೀವು ಇರುವಷ್ಟು ಎತ್ತರದ ಕಪ್ಪು ದಾರವನ್ನು ತೆಗೆದುಕೊಳ್ಳಿ. ನಂತರ ತೆಂಗಿನಕಾಯಿಗೆ ಕಪ್ಪು ದಾರವನ್ನು ಸುತ್ತಿ ಶಿವಲಿಂಗದ ಮುಂದೆ ಇಡಬೇಕು. ನಿಮ್ಮ ಜೀವನದ ಸಮಸ್ಯೆಗಳನ್ನು ದೇವರ ಬಳಿ ಹೇಳಿಕೊಂಡು ಆ ತೆಂಗಿನಕಾಯನ್ನು ನೀರಿನಲ್ಲಿ ಬಿಡಬೇಕು. ಹೀಗೆ ಮಾಡಿದರೆ ಸಾಲ ಸೇರಿದಂತೆ ಇನ್ನಿತರ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ನಮ್ಮ ಜೀವನದಲ್ಲಿ ಉಗುರುಗಳ ಪಾತ್ರ; ಈ ರೀತಿಯ ಉಗುರು ಇದ್ದವರಿಗೆ ಆರೋಗ್ಯ ಸಮಸ್ಯೆ ಹೆಚ್ಚು

  • ನೀವು ಕೆಲಸ ಹುಡುಕುತ್ತಿದ್ದಲ್ಲಿ, ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪದೇ ಪದೆ ನಷ್ಟವನ್ನು ಅನುಭವಿಸುತ್ತಿದ್ದರೆ ಅಥವಾ ಜೀವನದ ಪ್ರಮುಖ ವಿಚಾರಗಳಲ್ಲಿ ನೀವು ವೈಫಲ್ಯ ಎದುರಿಸುತ್ತಿದ್ದಲ್ಲಿ ಈ ವಿಶೇಷ ಪರಿಹಾರವನ್ನು ಪ್ರಯತ್ನಿಸಿ. ಗಂಗಾ ದಸರಾ ದಿನದಂದು ಒಂದು ಮಣ್ಣಿನ ಮಡಿಕೆ ತೆಗೆದುಕೊಳ್ಳಬೇಕು. ಅದರೊಳಗೆ ಸ್ವಲ್ಪ ಸಕ್ಕರೆ ಹಾಗೂ ಕೆಲವು ಹನಿ ಗಂಗಾಜಲವನ್ನು ಸೇರಿಸಿ. ನಂತರ ಪಾತ್ರೆಯಲ್ಲಿ ನೀರು ತುಂಬಿಸಿ ಅಗತ್ಯವಿರುವವರಿಗೆ ದಾನ ಮಾಡಬೇಕು. ಬಯಸಿದಲ್ಲಿ, ಈ ಮಡಕೆಯನ್ನು ದೇವಾಲಯಕ್ಕೆ ದಾನ ಮಾಡಬಹುದು
  • ಶಿವನು ತನ್ನ ತಲೆಯ ಮೇಲೆ ಇರಿಸಿಕೊಂಡಿರುವ ಗಂಗಾ ಮಾತೆಗೆ ವಿಶೇಷ ಸ್ಥಾನವಿದೆ. ಆದ್ದರಿಂದ ಗಂಗಾ ದಸರಾದಂದು ಶಿವನನ್ನು ಪೂಜಿಸುವುದರಿಂದ ವಿಶೇಷ ಅನುಗ್ರಹವನ್ನು ಪಡೆಯಬಹುದು. ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಗಂಗಾಜಲದಿಂದ ಅಭಿಷೇಕ ಮಾಡಿ. ಅಭಿಷೇಕ ಮಾಡಿದ ನೀರನ್ನು ಸ್ವಲ್ಪ ಮನೆಗೆ ತರಬೇಕು. ಆ ನೀರನ್ನು ಮನೆಯಲ್ಲೆಲ್ಲಾ ಚಿಮುಕಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಅಂಶಗಳು ತೊಲಗುತ್ತವೆ.
  • ಗಂಗಾ ದಸರಾದ ದಿನ ಗಂಗಾಜಲವನ್ನು ಹಿತ್ತಾಳೆಯ ಪಾತ್ರೆಯಲ್ಲಿ ಹಾಕಿ ತುಳಸಿ ಎಲೆಗಳನ್ನು ಹಾಕಿ. ಈ ನೀರನ್ನು ಮನೆಯ ಪ್ರವೇಶ ದ್ವಾರದಲ್ಲಿ ಚಿಮುಕಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿನ ನೆಗೆಟಿವ್ ಎನರ್ಜಿ ನಾಶವಾಗಿ ಪಾಸಿಟಿವ್ ಎನರ್ಜಿ ತುಂಬುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.