Garuda Purana: ಈ ಜನ್ಮದಲ್ಲಿ ಮಾಡಿದ ಪಾಪ, ಕರ್ಮಗಳ ಪ್ರಕಾರ ಮುಂದಿನ ಜನ್ಮದಲ್ಲಿ ನೀವು ಏನಾಗಿ ಹುಟ್ಟಲಿದ್ದೀರಿ? ಗರುಣ ಪುರಾಣ ಹೇಳೋದೇನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Garuda Purana: ಈ ಜನ್ಮದಲ್ಲಿ ಮಾಡಿದ ಪಾಪ, ಕರ್ಮಗಳ ಪ್ರಕಾರ ಮುಂದಿನ ಜನ್ಮದಲ್ಲಿ ನೀವು ಏನಾಗಿ ಹುಟ್ಟಲಿದ್ದೀರಿ? ಗರುಣ ಪುರಾಣ ಹೇಳೋದೇನು?

Garuda Purana: ಈ ಜನ್ಮದಲ್ಲಿ ಮಾಡಿದ ಪಾಪ, ಕರ್ಮಗಳ ಪ್ರಕಾರ ಮುಂದಿನ ಜನ್ಮದಲ್ಲಿ ನೀವು ಏನಾಗಿ ಹುಟ್ಟಲಿದ್ದೀರಿ? ಗರುಣ ಪುರಾಣ ಹೇಳೋದೇನು?

Garuda Purana: ಜೀವನದಲ್ಲಿ ಪ್ರತಿಯೊಬ್ಬರಿಗೂ ಹುಟ್ಟು ಸಾವು ಇದ್ದೇ ಇರುತ್ತದೆ. ಸತ್ತ ನಂತರ ಪಾಪ, ಕರ್ಮಗಳಿಗೆ ಅನುಸಾರವಾಗಿ ಮುಂದಿನ ಜನ್ಮದಲ್ಲಿ ಪ್ರಾಣಿ, ಪಕ್ಷಿಗಳಾಗಿ, ಮನುಷ್ಯರಾಗಿ ಜನ್ಮ ತಾಳುತ್ತಾರೆ ಎಂದು ಗರುಣ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಗರುಡ ಪುರಾಣ
ಗರುಡ ಪುರಾಣ (PC: freepik)

Garuda Purana: ಗರುಡ ಪುರಾಣದ ಪ್ರಕಾರ ಸತ್ತ ಪ್ರತಿಯೊಬ್ಬ ಮನುಷ್ಯನೂ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾರೆ. ಅದರಂತೆ ಭೂಮಿಯಲ್ಲಿ ಆತ ಮಾಡಿದ ಪಾಪ, ಕರ್ಮಗಳಿಗೆ ಅನುಸಾರವಾಗಿ ಶಿಕ್ಷೆ ದೊರೆಯುತ್ತದೆ. ಹಾಗೇ ಪಾಪ ಕರ್ಮಗಳಿಗೆ ಅನುಸಾರವಾಗಿ ಸ್ವರ್ಗ/ನರಕ ಪ್ರಾಪ್ತಿಯಾಗುತ್ತದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗರುಡ ಪುರಾಣದಲ್ಲಿ ಕೆಲವೊಂದು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.

ಮನುಷ್ಯನ ಒಳಗಿರುವ ಆತ್ಮ ಅಮರ ಎಂದು ಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಒಬ್ಬ ವ್ಯಕ್ತಿಯು ತನ್ನ ಬಟ್ಟೆಗಳನ್ನು ಬದಲಾಯಿಸುವಂತೆ, ಆತ್ಮವು ದೇಹವನ್ನು ಬದಲಾಯಿಸುತ್ತದೆ. ನಾವು ಈ ಜನ್ಮದಲ್ಲಿ ಮಾಡಿದ ಪಾಪ-ಪುಣ್ಯಗಳ ಆಧಾರದ ಮೇಲೆ ಮುಂದಿನ ಜನ್ಮದಲ್ಲಿ ಯಾವುದಾದರೊಂದು ರೂಪದಲ್ಲಿ ಹುಟ್ಟಬಹುದು ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ನೀವು ಮಾಡಿದ ಪಾಪ ಕರ್ಮಗಳಿಗೆ ಅನುಸಾರವಾಗಿ ಮುಂದಿನ ಜನ್ಮದಲ್ಲಿ ನೀವು ಏನಾಗಿ ಹುಟ್ಟಲಿದ್ದೀರಿ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

  • ಹೆಣ್ಣಿನ ಮೇಲೆ ದೌರ್ಜನ್ಯ ಮಾಡುವವರು, ಶೋಷಣೆ ಮಾಡುವರು ಮುಂದಿನ ಜನ್ಮದಲ್ಲಿ ಭಯಂಕರ ರೋಗಗಳಿಗೆ ತುತ್ತಾಗುತ್ತಾರೆ. ಮತ್ತೊಂದೆಡೆ ವಿವಾಹೇತರ ಸಂಬಂಧಗಳನ್ನು ಹೊಂದಿರುವವರು ಮುಂದಿನ ಜನ್ಮದಲ್ಲಿ ನಪುಂಸಕರಾಗಿ ಹುಟ್ಟುತ್ತಾರೆ. ಪತ್ನಿಯರೊಂದಿಗೆ ಅನುಚಿತವಾಗಿ ವರ್ತಿಸುವವರಿಗೆ ಕುಷ್ಠರೋಗ ಬರುತ್ತದೆ.
  • ಈಗಂತೂ ಕಲಿಯುಗದಲ್ಲಿ ಎಲ್ಲೆಡೆ ಮೋಸಗಾರರೇ ತುಂಬಿದ್ದಾರೆ. ಅಲ್ಲೋ ಇಲ್ಲೋ ಪುಣ್ಯಾತ್ಮರು ಸತ್ಕಾರ್ಯಗಳನ್ನು ಮಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಮೋಸ, ವಂಚನೆ ತಾಂಡವವಾಡುತ್ತಿದೆ. ಹೀಗೆ ಇನ್ನೊಬ್ಬರಿಗೆ ಮೋಸ ಮಾಡಿಕೊಂಡು ಬದುಕುವವರು ಮುಂದಿನ ಜನ್ಮದಲ್ಲಿ ಗೂಬೆಗಳಾಗಿ ಹುಟ್ಟುತ್ತಾರೆ ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಸುಳ್ಳು ಸಾಕ್ಷಿ ಹೇಳುವವರು ಮತ್ತೊಂದು ಜನ್ಮದಲ್ಲಿ ಅಂಧರಾಗಿ ಹುಟ್ಟುತ್ತಾರೆ.
  • ಗರುಡ ಪುರಾಣದ ಪ್ರಕಾರ, ಪ್ರಾಣಿಗಳನ್ನು ಹಿಂಸಿಸುವವರು ಅಥವಾ ಅವುಗಳನ್ನು ಬೇಟೆಯಾಡಿ ಹಿಂಸಿಸಿ ತಮ್ಮ ಕುಟುಂಬವನ್ನು ಬೆಳೆಸುವ ಜನರು ತಮ್ಮ ಮುಂದಿನ ಜನ್ಮದಲ್ಲಿ ಮೇಕೆಗಳಾಗಿ ಹುಟ್ಟುತ್ತಾರೆ.
  • ಯಾವ ಗಂಡಸರು ಹೆಣ್ಣಿನ ರೀತಿ ನಡೆದುಕೊಳ್ಳುವರೋ, ಅವರ ಅಭ್ಯಾಸಗಳನ್ನು ತಮ್ಮ ಅಭ್ಯಾಸವನ್ನಾಗಿ ಬದಲಿಸಿಕೊಳ್ಳುವರೋ ಅಂತಹ ಗಂಡಸರು ಮುಂದಿನ ಜನ್ಮದಲ್ಲಿ ಹೆಣ್ಣಿನ ರೂಪ ತಾಳುತ್ತಾರೆ.
  • ಗರುಡ ಪುರಾಣದ ಪ್ರಕಾರ, ತಂದೆ-ತಾಯಿ ಅಥವಾ ಒಡಹುಟ್ಟಿದವರಿಗೆ ಕಿರುಕುಳ ನೀಡುವವರು ಮುಂದಿನ ಜನ್ಮ ಪಡೆಯುವುದಿಲ್ಲ. ಅವರು ಗರ್ಭದಲ್ಲಿ ಸಾಯುತ್ತಾರೆ. ಅವನು ಎಂದಿಗೂ ಭೂಮಿಗೆ ಬರುವುದಿಲ್ಲ.
  • ಗುರುಗಳನ್ನು ನಿಂದಿಸಿದರೆ ದೇವರನ್ನು ಅವಮಾನಿಸಿದಂತೆ ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಆದ್ದರಿಂದ ಗುರುಗಳನ್ನು ನಿಂದಿಸುವವರು ನೇರವಾಗಿ ನರಕಕ್ಕೆ ಹೋಗುತ್ತಾರೆ ಜೊತೆಗೆ ಗುರುವಿನೊಡನೆ ಅನುಚಿತವಾಗಿ ವರ್ತಿಸುವ ಶಿಷ್ಯರು ಮುಂದಿನ ಜನ್ಮದಲ್ಲಿ ನೀರಿಲ್ಲದ ಕಾಡಿನಲ್ಲಿ ಹುಟ್ಟುತ್ತಾರೆ.
  • ಮರಣದ ಸಮಯದಲ್ಲಿ ದೇವರನ್ನು ಸ್ಮರಿಸುವವರೆಲ್ಲರೂ ಮುಕ್ತಿ ಹೊಂದುತ್ತಾರೆ. ಆದ್ದರಿಂದಲೇ ಮರಣದ ಸಮಯದಲ್ಲಿ ರಾಮನಾಮವನ್ನು ಜಪಿಸಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
  • ಸ್ತ್ರೀಯರನ್ನು ಕೊಲ್ಲುವ, ಗರ್ಭಪಾತ ಮಾಡುವ ಅಥವಾ ಗೋವನ್ನು ಕೊಲ್ಲುವ ಮೂರ್ಖರು ನರಕಯಾತನೆಗಳನ್ನು ಅನುಭವಿಸುತ್ತಾರೆ. ಮತ್ತು ಮುಂದಿನ ಜನ್ಮದಲ್ಲಿ ದುಷ್ಟರ ಹೊಟ್ಟೆಯಲ್ಲಿ ಹುಟ್ಟುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.