ಕನ್ನಡ ಸುದ್ದಿ  /  Astrology  /  Guru Pushya Nakshatra Yogam On February 22 2024 Significance Guru Pushya Yoga Special Yoga In Astrology Mgb

ಗುರು ಪುಷ್ಯ ನಕ್ಷತ್ರ ಯೋಗ: ಇಂದು ಮಾಡುವ ಯಾವುದೇ ಕಾರ್ಯದಲ್ಲಿ ಯಶಸ್ಸು ನಿಮ್ಮದು; ಈ ವಿಶೇಷ ಯೋಗದ ಮಹತ್ವ ತಿಳಿಯಿರಿ

Guru Pushya Nakshatra Yogam: ಗುರು ಪುಷ್ಯ ನಕ್ಷತ್ರವು ತುಂಬಾ ಶುಭಕರವಾಗಿದೆ. ಇದು ಎಲ್ಲರಿಗೂ ಪ್ರಯೋಜನಕಾರಿ. ಪುಷ್ಯ ನಕ್ಷತ್ರವು ಗುರುವಾರದಂದು ಬಂದರೆ ಯಾವುದೇ ಕಾರ್ಯಕ್ಕೆ ಗುರು ಗ್ರಹದ ಆಶೀರ್ವಾದ ಸಿಗುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು, ಶುಭ ಕಾರ್ಯಗಳನ್ನು ಕೈಗೊಳ್ಳಬಹುದು. ಆದರೆ ವಿವಾಹ ಶುಭ ಕಾರ್ಯಗಳಿಗೆ ಇದು ಅನ್ವಯಿಸುವುದಿಲ್ಲ

ಗುರು ಪುಷ್ಯ ನಕ್ಷತ್ರ ಯೋಗ (ಪ್ರಾತಿನಿಧಿಕ ಚಿತ್ರ)
ಗುರು ಪುಷ್ಯ ನಕ್ಷತ್ರ ಯೋಗ (ಪ್ರಾತಿನಿಧಿಕ ಚಿತ್ರ)

ಪುಷ್ಯ ನಕ್ಷತ್ರವನ್ನು 27 ನಕ್ಷತ್ರಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಗುರು ಗ್ರಹಕ್ಕೆ ಮೀಸಲಾದ ಗುರುವಾರದ ದಿನ ಪುಷ್ಯ ನಕ್ಷತ್ರ ಇದ್ದರೆ ಇದರಿಂದ ಗುರು ಪುಷ್ಯ ಯೋಗ ಅಥವಾ ಗುರು ಪುಷ್ಯ ನಕ್ಷತ್ರ ಯೋಗ ರೂಪುಗೊಳ್ಳುತ್ತದೆ. ಗುರು ಪುಷ್ಯ ನಕ್ಷತ್ರ ಯೋಗವನ್ನು ಅತ್ಯಂತ ಮಂಗಳಕರ ಎಂದು ಭಾವಿಸಲಾಗಿದೆ. ಈ ದಿನ ಮನಸ್ಸಿನಲ್ಲಿ ಬೇಡಿಕೊಂಡಿದ್ದೆಲ್ಲಾ ಈಡೇರುತ್ತದೆ ಎಂದು ನಂಬಲಾಗಿದೆ. ಇಂದು (ಫೆ 22, ಗುರುವಾರ) ಪುಷ್ಯ ನಕ್ಷತ್ರ ಯೋಗ ರೂಪುಗೊಂಡಿದೆ.

ಗುರು ಪುಷ್ಯ ನಕ್ಷತ್ರ ತಿಥಿ

ಪ್ರಾರಂಭ ಸಮಯ: ಫೆಬ್ರವರಿ 22, ಬೆಳಗ್ಗೆ 5:00

ಮುಕ್ತಾಯ ಸಮಯ: ಫೆಬ್ರವರಿ 22 ಸಂಜೆ 4: 44

ಗುರು ಪುಷ್ಯ ನಕ್ಷತ್ರದ ಮಹತ್ವ

ಗುರು ಪುಷ್ಯ ನಕ್ಷತ್ರವು ತುಂಬಾ ಶುಭಕರವಾಗಿದೆ. ಇದು ಎಲ್ಲರಿಗೂ ಪ್ರಯೋಜನಕಾರಿ. ಈ ನಕ್ಷತ್ರವು ಗುರುವಾರದಂದು ಬಂದರೆ ಯಾವುದೇ ಕಾರ್ಯಕ್ಕೆ ಗುರು ಗ್ರಹದ ಆಶೀರ್ವಾದ ಸಿಗುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಸಮಯ. ಪೂಜಾ ಕಾರ್ಯಕ್ರಮಗಳು, ಶುಭ ಕಾರ್ಯಗಳು, ಗೃಹ ಪ್ರವೇಶಗಳನ್ನು ಕೈಗೊಳ್ಳಬಹುದು. ಆದರೆ ವಿವಾಹ ಶುಭ ಕಾರ್ಯಗಳಿಗೆ ಇದು ಅನ್ವಯಿಸುವುದಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು. ಈ ಸಮಯದಲ್ಲಿ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದರಲ್ಲಿ ಸಂಪೂರ್ಣ ಯಶಸ್ಸು ದೊರೆಯುತ್ತದೆ. ಸರ್ವಾರ್ಥ ಸಿದ್ಧಿ ಯೋಗ ಮತ್ತು ಅಮೃತ ಯೋಗವೂ ಇಂದು ರೂಪುಗೊಳ್ಳುತ್ತಿದೆ. ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ, ನಿಮಗೆ ಶನಿಯೊಂದಿಗೆ ಗುರುವಿನ ಆಶೀರ್ವಾದ ಸಿಗುತ್ತದೆ.

ಗುರುವನ್ನು ಜ್ಞಾನ, ಸಂಪತ್ತು, ಅದೃಷ್ಟ ಮತ್ತು ಆಧ್ಯಾತ್ಮಿಕತೆಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಗುರುವಿನ ಕೃಪೆ ಇದ್ದರೆ ಸಮೃದ್ಧಿ, ಸಂಪತ್ತು, ಆಧ್ಯಾತ್ಮಿಕ ಪ್ರಗತಿ ಇರುತ್ತದೆ. ಗುರುವಾರ ಪುಷ್ಯ ನಕ್ಷತ್ರದೊಂದಿಗೆ ಗುರುವಿನ ಸಂಯೋಗವು ಯಶಸ್ಸು, ಸಂಪತ್ತು, ಜ್ಞಾನ ಮತ್ತು ಹಣವನ್ನು ತರುತ್ತದೆ.

ಗುರು ಪುಷ್ಯ ನಕ್ಷತ್ರ ಯೋಗದ ದಿನ ಮಾಡಬೇಕಾದ ಕೆಲಸಗಳೇನು?

- ಇಂದು ದಾನ ಮಾಡುವುದು ತುಂಬಾ ಒಳ್ಳೆಯದು. ಹಸಿದವರಿಗೆ ಅನ್ನ, ಬಟ್ಟೆ ದಾನ ಮಾಡಿ.

- ಗುರುಗಳ ಪಾದ ಮುಟ್ಟಿ ಆಶೀರ್ವಾದ ಪಡೆಯಬೇಕು.

- ವಿಷ್ಣು ದೇವಾಲಯಕ್ಕೆ ಭೇಟಿ ನೀಡಿ. ಭಕ್ತಿಯಿಂದ ದೇವರನ್ನು ಆರಾಧಿಸಬೇಕು.

- ಚಿನ್ನ, ಬೆಳ್ಳಿ, ಭೂಮಿ, ಕಟ್ಟಡಗಳು, ವಾಹನಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಬಹುದು.

- ಬಾಳೆಗಿಡಕ್ಕೆ ಶೇಂಗಾ, ಬೆಲ್ಲ, ಬಾಳೆಹಣ್ಣುಗಳನ್ನು ಅರ್ಪಿಸಿ ಪೂಜೆ ಮಾಡಬೇಕು.

- ನೀವು ನೀಲಮಣಿಯನ್ನು ಧರಿಸಲು ಬಯಸಿದರೆ ಇಂದು ಅತ್ಯಂತ ಮಂಗಳಕರವಾಗಿದೆ. ಈ ರತ್ನವನ್ನು ಸಂಪ್ರದಾಯದಂತೆ ಪೂಜಿಸಿ ಗುರು ಪುಷ್ಯ ನಕ್ಷತ್ರದ ಅವಧಿಯಲ್ಲಿ ಧರಿಸಬೇಕು.

- "ಓಂ ನಮೋ ಭಗವತೇ ವಾಸುದೇವಾಯ ನಮಃ" ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು.

- ಭಗವಾನ್ ಗುರುವಿನ ಆಶೀರ್ವಾದ ಪಡೆಯಲು "ಓಂ ಬೂಂ ಬೃಹಸ್ಪತಿಯೇ ನಮಃ" ಎಂಬ ಮಂತ್ರವನ್ನು 108 ಬಾರಿ ಪಠಿಸಿ.

ಫೆಬ್ರವರಿಯಲ್ಲಿ 2ನೇ ಬಾರಿ ಗುರು ಪುಷ್ಯ ನಕ್ಷತ್ರ

ಗುರು ಪುಷ್ಯ ನಕ್ಷತ್ರ ಯೋಗವು ಫೆಬ್ರವರಿ ತಿಂಗಳಲ್ಲಿ ಎರಡನೇ ಬಾರಿಗೆ ಬಂದಿದೆ. ಈ ಮೊದಲು ಫೆಬ್ರವರಿ 10 ರಂದು ರೂಪುಗೊಂಡಿತ್ತು. ಇದೀಗ ಫೆಬ್ರವರಿ 22 ರಂದು ಗುರು ಪುಷ್ಯ ನಕ್ಷತ್ರ ಯೋಗ ಇರುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)