ಹೆಬ್ಬೆರಳಿನಲ್ಲಿ ಗಡುಸಾದ ರೇಖೆಗಳು ಇರುವವರಿಗೆ ಏನೆಲ್ಲಾ ಲಾಭಗಳಿವೆ; ಹಣಕಾಸಿನ ವಿಚಾರದಲ್ಲಿ ಅದೃಷ್ಟ ಇರುತ್ತಾ
ಅಂಗೈಯಲ್ಲಿನ ರೇಖೆಗಳು, ಬೆರಳುಗಳಲ್ಲಿನ ಗೆರೆಗಳಿಂದ ನಮ್ಮ ಜೀವನದ ಬಗ್ಗೆ ತಿಳಿಯಬಹುದು ಎಂದು ಹಸ್ತಸಾಮುದ್ರಿಕ ಹೇಳುತ್ತದೆ. ಹೆಬ್ಬೆರಳಿನಲ್ಲಿ ಗಡುಸಾದ ರೇಖೆಗಳು ಇರುವವರಿಗೆ ಏನೆಲ್ಲಾ ಲಾಭಗಳಿವೆ ಎಂಬುದರ ಬಗ್ಗೆ ತಿಳಿಯಿರಿ.

ಕೆಲವರ ಹೆಬ್ಬೆರಳನ್ನು ಸ್ಪರ್ಶಿಸಿದಲ್ಲಿ ಗಡುಸಾಗಿರುತ್ತದೆ. ಇವರ ಹೆಬ್ಬರಳ ರೇಖೆಗಳು ಅಸ್ತವ್ಯಸ್ತವಾಗಿರುತ್ತವೆ. ಇವರ ಹೆಬ್ಬರಳಿನಲ್ಲಿ ಇರುವ ಚಿಹ್ನೆಗಳು ಸಹ ಸರಿಯಾಗಿ ಕಾಣುವುದಿಲ್ಲ. ಇಂತಹ ಜನರ ಜೀವನದಲ್ಲಿ ಸದಾಕಾಲ ಬದಲಾವಣೆಗಳು ಉಂಟಾಗುತ್ತವೆ. ಒಂದೇ ರೀತಿಯ ಜೀವನವನ್ನು ಇಷ್ಟಪಡುವುದಿಲ್ಲ. ಇವರ ಆರೋಗ್ಯದಲ್ಲಿ ಏರಿಳಿತಗಳು ಇರುತ್ತವೆ. ಹಣಕಾಸಿನ ವಿಚಾರದಲ್ಲಿ ಲಾಭಕರ ಬದಲಾವಣೆಗಳು ಇರುತ್ತವೆ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ. ಒಲ್ಲದ ಮನಸ್ಸಿನಿಂದ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಪದೇ ಪದೆ ಉದ್ಯೋಗವನ್ನು ಬದಲಾಯಿಸುತ್ತಾರೆ. ನಿತ್ಯಜೀವನದಲ್ಲಿ ಹಾಸ್ಯಪೂರಿತ ಪ್ರಸಂಗಗಳು ಎದುರಾಗುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಇರಲಿವೆ. ಉತ್ತಮ ಆದಾಯ ಇದ್ದರೂ ಹಣ ಉಳಿಕೆ ಸಾಧ್ಯವಾಗುವುದಿಲ್ಲ. ಆತ್ಮವಿಶ್ವಾಸದಿಂದ ಕುಟುಂಬದ ಸಮಸ್ಯೆಗಳನ್ನು ಬಗೆಹರಿಸುತ್ತಾರೆ.
ನಿಶ್ಚಿತ ಯಶಸ್ಸು ದೊರೆಯುವುದಕ್ಕೆ ಇದೇ ಕಾರಣ
ಕುಟುಂಬದ ಹಿತಾಶಕ್ತಿಗಳನ್ನು ಕಾಪಾಡಲು ಯಾವುದೇ ತ್ಯಾಗವನ್ನು ಮಾಡಬಲ್ಲರು. ಸ್ವಂತ ವಿಚಾರಗಳಿಗೆ ಹೆಚ್ಚಿನ ಗಮನ ನೀಡುವುದಿಲ್ಲ. ದುಡುಕಿನ ಗುಣ ಇರುವುದಿಲ್ಲ. ಅದರೆ ಆತುರದಿಂದ ಸಂದಿಗ್ಧತೆಗೆ ಒಳಗಾಗುವಿರಿ. ಯಾವುದೇ ಕೆಲಸವನ್ನು ಯೋಜನಾಪೂರ್ವಕವಾಗಿ ಆರಂಭಿಸುವ ಕಾರಣ ನಿಶ್ಚಿತ ಯಶಸ್ಸು ದೊರೆಯುತ್ತದೆ. ಆಧುನಿಕ ವ್ಯಾಪಾರ ವ್ಯವಹಾರಗಳಲ್ಲಿ ಹಣವನ್ನು ವಿನಿಯೋಗಿಸುವಲ್ಲಿ ಆಸಕ್ತಿ ಇರುತ್ತದೆ. ಕೌಟುಂಬಿಕ ವಿಚಾರದಲ್ಲಿ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುವುದಿಲ್ಲ. ದಾಂಪತ್ಯ ಜೀವನದಲ್ಲಿ ಮನಸ್ತಾಪಗಳು ಉಂಟಾದರೂ ದೀರ್ಘಕಾಲ ಉಳಿಯುವುದಿಲ್ಲ. ಗುರು ಹಿರಿಯರ ಮಾರ್ಗದರ್ಶನದಂತೆ ಜೀವನ ನಡೆಸುವ ಇಚ್ಛೆ ಇರುತ್ತದೆ. ಪತಿಯೊಬ್ಬರನ್ನೂ ಸಮಾನ ಭಾವನೆಯಿಂದ ಕಾಣುವುದು ಇವರ ಹೆಗ್ಗಳಿಕೆ. ಬಿಡುವಿನ ವೇಳೆಯಲ್ಲಿ ದೂರದ ಸ್ಥಳಕ್ಕೆ ಪ್ರಯಾಣ ಬೆಳೆಸುವುದು ಇವರ ಹವ್ಯಾಸವಾಗುತ್ತದೆ.
ಸಂಬಂಧ ಅಥವಾ ಪರಿಚಯ ಇರುವ ವ್ಯಕ್ತಿಗಳ ಜೊತೆ ವಿವಾಹವಾದರೆ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ತಾಳ್ಮೆ ಮತ್ತು ತಿಳುವಳಿಕೆಯಿಂದ ಮಕ್ಕಳ ಜೀವನವನ್ನು ರೂಪಿಸುತ್ತಾರೆ. ಉದ್ಯೋಗದಲ್ಲಿನ ಸಮಸ್ಯೆಗಳು ಇವರ ಮಧ್ಯಸ್ಥಿಕೆಯಿಂದ ಬಗೆಹರಿಯುತ್ತದೆ. ಸ್ವಯಂ ಅಪರಾಧದಿಂದ ಆರೋಗ್ಯದಲ್ಲಿ ತೊಂದರೆಗಳು ಕಂಡುಬರುತ್ತವೆ. ಸಣ್ಣ ಪುಟ್ಟ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಯಾವ ವಿಚಾರವನ್ನಾಗಲಿ ಯಾವುದೇ ವ್ಯಕ್ತಿಯನ್ನಾಗಲಿ ತಿರಸ್ಕಾರದ ಭಾನೆಯಿಂದ ನೋಡುವುದಿಲ್ಲ. ಇವರ ಒಳ್ಳೆಯ ನಡತೆಯನ್ನು ಮೆಚ್ಚಿ ಆತ್ಮೀಯರು ಸಹಾಯ ಮಾಡುತ್ತಾರೆ. ಉಪಯೋಗವೆನುಸುವ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡುವಿರಿ. ಸಾಮಾನ್ಯವಾಗಿ ಇವರ ಜೀವನದಲ್ಲಿ ಶುಭ ಕಾರ್ಯಕ್ರಮಗಳು ಅಕಸ್ಮಿಕವಾಗಿ ನೆರವೇರುವುದು.
ಸಮಾಜದ ಗೌರವಾನ್ವಿತ ಸ್ಥಾನವನ್ನು ಕಾಯ್ದುಕೊಳ್ಳುವಿರಿ. ಸಮಾಜ ಸೇವೆಯ ಬಗ್ಗೆ ಆಸಕ್ತಿ ಮೂಡುತ್ತದೆ. ದೊರೆಯುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುತ್ತಾರೆ. ಸಂಗಾತಿಯ ಸಹಕಾರದಿಂದ ಆದಾಯದಲ್ಲಿ ಸ್ಥಿರತೆ ಇರುತ್ತದೆ. ವಿದೇಶ ಪ್ರಯಾಣದ ಅವಕಾಶವು ದೊರೆಯುತ್ತದೆ. ಕುಟುಂಬದ ಹಿರಿಯರ ಅನಾರೋಗ್ಯದ ಕಾರಣ ಮನಸ್ಸಿನಲ್ಲಿ ಆತಂಕ ನೆಲೆಸಿರುತ್ತದೆ. ಕೆಲವೊಮ್ಮೆ ದುಡುಕುತನದಿಂದ ಮಾತ್ರ ತೊಂದರೆಗಳನ್ನು ಎದುರಿಸುತ್ತಾರೆ. ವದಂತಿಗಳನ್ನು ನಂಬಿದರೆ ದಾಂಪತ್ಯದಲ್ಲಿ ಬಿರುಕು ಉಂಟಾಗುತ್ತದೆ. ಪರಸ್ಪರ ವಿಚಾರ ವಿನಿಮಯದಿಂದ ವಿವಾದಗಳಿಂದ ದೂರ ಉಳಿಯುವಿರಿ. ವಿವಾಹ ನಂತರ ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ಕಾಣಬಹುದು.
ಉತ್ತಮ ಆದಾಯ ಇರುವ ವೇಳೆ ಖರ್ಚು ವೆಚ್ಚಗಳು ಹೆಚ್ಚುತ್ತವೆ. ಅಪಾಯಕಾರಿ ಸನ್ನಿವೇಶದಲ್ಲಿ ಬುದ್ದಿವಂತಿಕೆಯಿಂದ ಪಾರಾಗುವಿರಿ. ಆದರೆ ನಿಮಗೆ ಧೈರ್ಯ ತುಂಬುವ ಕೆಲಸ ಕುಟುಂಬದ ಸದಸ್ಯರಿಂದ ನಡೆಯುತ್ತದೆ. ಯೋಗ ಪ್ರಾಣಾಯಾಮದಂತಹ ಅಭ್ಯಾಸಗಳನ್ನು ಪಾಲಿಸುವಿರಿ. ಸ್ವಂತ ಉದ್ದಿಮೆ ಇದ್ದಲ್ಲಿ ಕಾರ್ಮಿಕರಿಗೆ ಉತ್ತಮ ಸಹಕಾರ ನೀಡುವಿರಿ. ಕೃಷಿ ಕಾರ್ಯದಲ್ಲಿ ಆಸಕ್ತಿ ಮೂಡುತ್ತದೆ. ಶತಾಯಗತಾಯ ಪ್ರಯತ್ನಪಟ್ಟು ಸ್ವಂತ ಮನೆಯನ್ನು ಕಟ್ಟುವಿರಿ ಅಥವಾ ಕೊಳ್ಳುವಿರಿ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಗೌರವ ಭಾವನೆಯಿಂದ ಕಾಣುವುದು ಇವರ ವಿಶೇಷತೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಹಸ್ತಸಾಮುದ್ರಿಕ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ