ಹೆಬ್ಬೆರಳಿನಲ್ಲಿ ಸುರುಳಿಯಾಕಾರ ಇದ್ದರೆ ನೀವು ತುಂಬಾ ಅದೃಷ್ಟವಂತರು; ಸೋಲು ಗೆಲುವು ದೊಡ್ಡ ವಿಚಾರವೇ ಅಲ್ಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹೆಬ್ಬೆರಳಿನಲ್ಲಿ ಸುರುಳಿಯಾಕಾರ ಇದ್ದರೆ ನೀವು ತುಂಬಾ ಅದೃಷ್ಟವಂತರು; ಸೋಲು ಗೆಲುವು ದೊಡ್ಡ ವಿಚಾರವೇ ಅಲ್ಲ

ಹೆಬ್ಬೆರಳಿನಲ್ಲಿ ಸುರುಳಿಯಾಕಾರ ಇದ್ದರೆ ನೀವು ತುಂಬಾ ಅದೃಷ್ಟವಂತರು; ಸೋಲು ಗೆಲುವು ದೊಡ್ಡ ವಿಚಾರವೇ ಅಲ್ಲ

ಹಸ್ತ ಸಾಮುದ್ರಿಕದ ಪ್ರಕಾರ ನಮ್ಮ ಅಂಗೈ ಮತ್ತು ಬೆರಳುಗಳಲ್ಲಿನ ಗೆರೆಗಳು ಜೀವನದ ರಹಸ್ಯಗಳನ್ನು ತಿಳಿಸಿಕೊಡುತ್ತವೆ. ಹೆಬ್ಬೆರಳಿನಲ್ಲಿ ಸುರುಳಿಯಾಕಾರ ಇದ್ದರೆ ನೀವು ತುಂಬಾ ಅದೃಷ್ಟವಂತರು. ಅದು ಹೇಗೆ ಅನ್ನೋದನ್ನು ಇಲ್ಲಿ ವಿವರಿಸಲಾಗಿದೆ.

ಹೆಬ್ಬೆರಳಿನಲ್ಲಿ ಸುರುಳಿಯಾಕಾರ ಇದ್ದರೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿಯಿರಿ
ಹೆಬ್ಬೆರಳಿನಲ್ಲಿ ಸುರುಳಿಯಾಕಾರ ಇದ್ದರೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿಯಿರಿ

ಕೆಲವರ ಹೆಬ್ಬೆರಳಲ್ಲಿ ಸುರುಳಿಯಾಕಾರವು ಕಂಡುಬರುತ್ತದೆ. ಹೆಬ್ಬೆರಳಿನ ಮೊದಲ ಭಾಗವನ್ನು ಇದು ಹೆಚ್ಚು ಆಕ್ರಮಿಸಿರುತ್ತದೆ. ಇದಕ್ಕೆ ಹೊಂದಿಕೊಂಡಂತೆ ಒಂದು ಅಥವಾ ಎರಡು ಸಣ್ಣದಾದ ಸುರುಳಿಯ ಆಕಾರಗಳು ಅದರ ಅಕ್ಕ ಪಕ್ಕದಲ್ಲಿ ಇರುತ್ತದೆ. ಚಿಕ್ಕ ಸುರುಳಿಗಳು ಹೆಬ್ಬೆರಳಿನ ಮೊದಲ ಭಾಗದ ಬುಡದವರೆಗೂ ಜಾರಿದಂತೆ ಕಂಡುಬರುತ್ತದೆ. ಇವುಗಳು ಬರಿಗಣ್ಣಿಗೆ ಕಾಣುವಂತೆ ಇದ್ದಲ್ಲಿ ಇವರು ಆರಂಭಿಸುವ ಕೆಲಸಗಳನ್ನು ಶತಾಯುಗತಾಯ ಪ್ರಯತ್ನಿಸಿ ಪೂರ್ಣಗೊಳಿಸುತ್ತಾರೆ. ಆದರೆ ಈ ಚಿಹ್ನೆಗಳು ಬರಿಗಣ್ಣಿಗೆ ಕಾಣದಂತೆ ಇದ್ದಲ್ಲಿ ಇವರ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಪೂರ್ಣಗೊಳ್ಳುತ್ತವೆ. ಬೇಸರದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ.

ಇವರು ಸ್ಥಿರವಾದ ಮನಸ್ಸಿನಿಂದ ಯಾವುದೆ ಕೆಲಸದಲ್ಲಿ ನಿರತರಾಗುವುದಿಲ್ಲ. ಉತ್ತಮ ವಿದ್ಯೆ ಮತ್ತು ಬುದ್ದಿ ಇರುತ್ತದೆ. ಆದರೆ ಅದನ್ನು ಸೂಕ್ತವಾದ ಹಾದಿಯಲ್ಲಿ ಬಳಸಿಕೊಳ್ಳುವುದಿಲ್ಲ. ಸೋಲು ಗೆಲುವು ಇವರಿಗೆ ದೊಡ್ಡ ವಿಚಾರವಾಗುವುದಿಲ್ಲ. ಇವರ ಜೀವನಕ್ಕೆ ಇವರಲ್ಲಿನ ವಿದ್ಯೆ ಮತ್ತು ಬುದ್ದಿಯೇ ಊರುಗೋಲಾಗುತ್ತದೆ. ಹಲವು ಬಾರಿ ಸೋಲಿನ ಅಂಚನ್ನು ತಲುಪಿದರೂ ಧೈರ್ಯಗೆಡದೆ ಉತ್ತಮ ಅವಕಾಶಕ್ಕಾಗಿ ಕಾಯುತ್ತಾರೆ. ಬೆರಳು ತೋರಿದಲ್ಲಿ ಹಸ್ತ ನುಂಗುವ ಗುಣವನ್ನು ಹೊಂದಿರುತ್ತಾರೆ.

ಮಾತಿನಲ್ಲಿ ಇವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗದು. ಸಮಯಕ್ಕೆ ಸರಿಯಾಗಿ ವರ್ತಿಸುವುದು ಇವರ ಹೆಗ್ಗಳಿಕೆ. ಮಾತಿನಲ್ಲಿ ಎಲ್ಲರ ಮನಸ್ಸನ್ನು ಗೆಲ್ಲಬಲ್ಲರು. ಇವರ ಯಾವುದೇ ತೀರ್ಮಾನಗಳು ಬೇರೆಯವರಿಗೆ ತೊಂದರೆ ಉಂಟುಮಾಡುವುದಿಲ್ಲ. ಹಣಕಾಸಿನ ವಿಚಾರದಲ್ಲಿ ತೊಂದರೆ ಇರುವುದಿಲ್ಲ. ಆದರೆ ಹೆಚ್ಚಿನ ಹಣ ದೊರೆತಾಗ ಹಣ ಉಳಿಸುವ ಬದಲು ಹೆಚ್ಚು ಖರ್ಚು ಮಾಡುತ್ತಾರೆ. ಇವರಲ್ಲಿ ಒಂದು ಅಪರೂಪದ ಗುಣವಿರುತ್ತದೆ. ಕಡಿಮೆ ಆದಾಯವಿರುವ ವೇಳೆ ಹಣವನ್ನು ಉಳಿಸುತ್ತಾರೆ. ಇವರು ಜೊತೆಯಲ್ಲಿ ಇರುವವರ ಜೊತೆಯಲ್ಲಿ ಹೊಂದಿಕೊಂಡು ಬಾಳುತ್ತಾರೆ. ಒಮ್ಮೆ ಇವರ ಮನಸ್ಸನ್ನು ಗೆದ್ದರೆ ಯಾವುದೇ ತ್ಯಾಗಕ್ಕೂ ಸಿದ್ದರಾಗುತ್ತಾರೆ.

ತಮ್ಮ ಕೆಲಸ ಕಾರ್ಯಗಳು ಪೂರ್ಣವಾಗುವವರೆಗು ತಮ್ಮ ಪ್ರಯತ್ನಗಳನ್ನು ನಿಲ್ಲಿಸುವುದಿಲ್ಲ. ಇವರ ಮಾತಿಗೆ ಮನ್ನಣೆ ದೊರೆಯದೆ ಹೋದಲ್ಲಿ ಮುಂಗೋಪದಿಂದ ವರ್ತಿಸುತ್ತಾರೆ. ಕುಂಟುಬದ ಗೌರವ ಪ್ರತಿಷ್ಠೆಯನ್ನು ಕಾಪಾಡುವುದು ಇವರ ಮುಖ್ಯ ಧ್ಯೇಯವಾಗಿರುತ್ತದೆ. ಗುರುಹಿರಿಯರನ್ನು ಗೌರವದಿಂದ ಕಾಣುತ್ತಾರೆ. ಕುಲಧರ್ಮವನ್ನು ಕಾಯುವಲ್ಲಿ ಮೊದಲಿಗರು. ವಿರೋಧಿಗಳನ್ನೂ ಪ್ರೀತಿಸುವ ಮತ್ತು ಗೌರವಿಸುವ ಗುಣ ಇರುತ್ತದೆ. ಇದರಿಂದಾಗಿ ಕೇವಲ ಬಂಧು ಬಳಗದವರಲ್ಲದೆ ಸ್ನೇಹಿತರ ವರ್ಗದಲ್ಲಿಯೂ ನಾಯಕರಾಗಿ ಬಾಳುತ್ತಾರೆ.

ಸ್ವಂತ ಮನೆ ಕಟ್ಟುವ ಅಥವಾ ಕೊಳ್ಳುವ ಯೋಜನೆಯಲ್ಲಿ ಸಫಲರಾಗುತ್ತಾರೆ. ಇವರ ಮದ್ಯಸ್ಥಿಕೆಯಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಆಡುವ ವಯಸ್ಸಿನಲ್ಲಿಯೇ ವಿದ್ಯಾರ್ಜನೆಯಲ್ಲಿ ವಿಶೇಷ ಆಸಕ್ತಿ ತೋರುತ್ತಾರೆ. ಅನೇಕ ವಿದ್ಯೆಗಳ ಅರಿವು ಇವರಿಗಿರುತ್ತದೆ. ಜೀವನೋಪಾಯಕ್ಕಾಗಿ ಎರಡು ರೀತಿಯ ಉದ್ಯೋಗದಲ್ಲಿ ನಿರತರಾಗುತ್ತಾರೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಮಧ್ಯ ವಯಸ್ಸಿನಲ್ಲಿಯೇ ಕೈಕಾಲುಗಳಲ್ಲಿ ನೋವು ಆರಂಭವಾಗುತ್ತದೆ. ರಕ್ತಕ್ಕೆ ಸಂಬಂಧಿಸಿದ ತೊಂದರೆ ಕೆಲವರನ್ನು ಕಾಡುತ್ತದೆ. ಇವರು ಸುಮಾರು 60 ವರ್ಷವಾಗುವವರೆಗೂ ಆರೋಗ್ಯವಂತರಾಗಿ ಇರುತ್ತಾರೆ. ಕಷ್ಟ ನಷ್ಟಗಳ ವೇಳೆಯಲ್ಲಿಯೂ ಚಿಂತೆ ಮಾಡುವುದಿಲ್ಲ. ಇವರ ಆತ್ಮಸ್ಥೈರ್ಯವು ಇವರನ್ನು ಕಾಪಾಡುತ್ತದೆ.

ಇವರಿಗೆ ಒಳ್ಳೆಯ ಬಾಳಸಂಗಾತಿಯು ದೊರೆಯುತ್ತಾರೆ. ದಾಂಪತ್ಯ ಜೀವನವು ಸುಖ ಶಾಂತಿಯಿಂದ ಕೂಡಿರುತ್ತದೆ. ವಿವಾಹದ ನಂತರ ಇವರ ಜೀವನದಲ್ಲಿ ಉತ್ತಮ ಬದಲಾವಣೆಗಳು ದೊರೆಯುತ್ತವೆ. ಬಾಳ ಸಂಗಾತಿಯ ಮಾತಿಗೆ ಮನ್ನಣೆ ನೀಡಬೇಕಾಗುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಪುರುಷರಿಗಿಂತಲೂ ಸ್ತ್ರೀಯರಿಗೆ ತಮ್ಮ ನಿರೀಕ್ಷೆಗಳು ಕೈಗೂಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ತಾಯಿಯವರ ಹೆಸರಿನಲ್ಲಿ ಉದ್ಯಮ ಇದ್ದಲ್ಲಿ ಅನಿರೀಕ್ಷಿತ ಆದಾಯ ಇರುತ್ತದೆ. ಕುಟುಂಬದ ಹಿರಿಯರ ಆರೋಗ್ಯಕ್ಕಾಗಿ ಹೆಚ್ಚಿನ ಹಣವು ವೆಚ್ಚವಾಗುತ್ತದೆ. ಮನೆತನದ ಆಸ್ತಿಯಲ್ಲಿ ಇವರಿಗೆ ನ್ಯಾಯಯುತ ಪಾಲು ದೊರೆಯುವ ಸಾಧ್ಯತೆ ಕಡಿಮೆ ಇರುತ್ತದೆ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಹಸ್ತಸಾಮುದ್ರಿಕವನ್ನು ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.