ಹೆಬ್ಬೆರಳಿನಲ್ಲಿ ಹುಣ್ಣಿಮೆಯ ಚಂದ್ರನ ಆಕಾರದ ಚೆಹ್ನೆ ಇದ್ದವರಿಗೆ ಏನೆಲ್ಲಾ ಅದೃಷ್ಟವಿದೆ; ಜೀವನದ ರಹಸ್ಯ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹೆಬ್ಬೆರಳಿನಲ್ಲಿ ಹುಣ್ಣಿಮೆಯ ಚಂದ್ರನ ಆಕಾರದ ಚೆಹ್ನೆ ಇದ್ದವರಿಗೆ ಏನೆಲ್ಲಾ ಅದೃಷ್ಟವಿದೆ; ಜೀವನದ ರಹಸ್ಯ ತಿಳಿಯಿರಿ

ಹೆಬ್ಬೆರಳಿನಲ್ಲಿ ಹುಣ್ಣಿಮೆಯ ಚಂದ್ರನ ಆಕಾರದ ಚೆಹ್ನೆ ಇದ್ದವರಿಗೆ ಏನೆಲ್ಲಾ ಅದೃಷ್ಟವಿದೆ; ಜೀವನದ ರಹಸ್ಯ ತಿಳಿಯಿರಿ

ಹಸ್ತಸಾಮುದ್ರಿಕದ ಪ್ರಕಾರ ಅಂಗೈಯಲ್ಲಿನ ರೇಖೆಗಳು ಮತ್ತು ಬೆರಳುಗಳಲ್ಲಿನ ಗೆರೆಗಳಿಂದಲೂ ಭವಿಷ್ಯವನ್ನು ತಿಳಿಯಬಹುದು. ಹೆಬ್ಬೆರಳಿನಲ್ಲಿ ಹುಣ್ಣಿಮೆಯ ಚಂದ್ರನ ಆಕಾರದ ಚೆಹ್ನೆ ಇದ್ದವರಿಗೆ ಏನೆಲ್ಲಾ ಅದೃಷ್ಟವಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಹೆಬ್ಬೆರಳಿನಲ್ಲಿ ಹುಣ್ಣಿಮೆಯ ಚಂದ್ರನ ಆಕಾರದ ಚೆಹ್ನೆ ಇದ್ದವರಿಗೆ ಏನೆಲ್ಲಾ ಅದೃಷ್ಟವಿದೆ ಎಂಬುದನ್ನು ತಿಳಿಯಿರಿ
ಹೆಬ್ಬೆರಳಿನಲ್ಲಿ ಹುಣ್ಣಿಮೆಯ ಚಂದ್ರನ ಆಕಾರದ ಚೆಹ್ನೆ ಇದ್ದವರಿಗೆ ಏನೆಲ್ಲಾ ಅದೃಷ್ಟವಿದೆ ಎಂಬುದನ್ನು ತಿಳಿಯಿರಿ

ಅಂಗೈಯಲ್ಲಿನ ರೇಖೆಗಳನ್ನು ಆಧರಿಸಿ ಮನುಷ್ಯನ ಜೀವನದಲ್ಲಿನ ಲಾಭಗಳು, ಸವಾಲುಗಳನ್ನು ತಿಳಿಯಬಹುದು. ಆತನಿಗೆ ಅದೃಷ್ಟ ಇದೆಯಾ, ಇಲ್ಲವೇ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೇ ಎಂಬುದನ್ನು ಕೂಡ ಹಸ್ತ ಸಾಮುದ್ರಿಕದಲ್ಲಿ ವಿವರಿಸಲಾಗುತ್ತದೆ. ಕೆಲವರ ಹೆಬ್ಬೆರಳಿನಲ್ಲಿ ಹುಣ್ಣಿಮೆಯ ಚಂದ್ರನ ಆಕಾರದಲ್ಲಿ ವೃತ್ತಾಕಾರ ಚಿಹ್ನೆ ಇರುತ್ತದೆ. ಇದು ಗಾಢವಾಗಿರಲಿ ಅಥವಾ ಸೂಕ್ಷ್ಮವಾಗಿರಲಿ ದೊರೆಯುವ ಫಲಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗಾಢವಾಗಿದ್ದಲ್ಲಿ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆದರೆ ಖಚಿತ ಯಶಸ್ಸು ದೊರೆಯುತ್ತದೆ. ಹಠದ ಸ್ವಭಾವ ಇರುತ್ತದೆ. ಚಿಹ್ನೆಯು ಕಣ್ಣಿಗೆ ಸುಲಭವಾಗಿ ಕಾಣದೆ ಹೋದಲ್ಲಿ ದೊರೆಯುವ ಫಲಿತಾಂಶಗಳು ಅನುಕೂಲಕಾರಿಯಾಗುತ್ತವೆ. ಆದರೆ ಮನದಲ್ಲಿ ನಂಬಿಕೆ ಇರುವುದಿಲ್ಲ.

ಮನದಲ್ಲಿನ ಆಸೆ ಆಕಾಂಕ್ಷೆಗಳು ಕೈಗೂಡಲು ಕೆಲಸ ಕಾರ್ಯದಲ್ಲಿ ತೊಡಗುವಿರಿ. ಇವರ ಕಾರ್ಯನಿರ್ವಹಣೆಯನ್ನು ಎಲ್ಲರೂ ಮೆಚ್ಚುತ್ತಾರೆ. ಎಲ್ಲರ ಜೊತೆ ತಮ್ಮ ಮನದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ ಕೆಲವರಿಗೆ ಮನದಲ್ಲಿ ಆತಂಕದ ಭಾವನೆ ಇರುತ್ತದೆ. ಈ ಕಾರಣದಿಂದಾಗಿ ಕೆಲಸ ಕಾರ್ಯಗಳ ವಿಚಾರಗಳನ್ನು ರಹಸ್ಯವಾಗಿ ಇಡಲು ಪ್ರಯತ್ನಿಸುತ್ತಾರೆ. ವೃತ್ತಿ ಜೀವನದಲ್ಲಿ ತಮ್ಮ ಪಾಲಿನ ಜವಾಬ್ದಾರಿನ್ನು ಪೂರ್ಣಗಳಿಸುತ್ತಾರೆ. ಸಂತಸದ ಜೀವನ ನಿಮ್ಮದಾಗುತ್ತದೆ. ದುಡುಕದೆ ಕಷ್ಟವೆನಿಸಿದರು ಕೌಟುಂಬಿಕ ಜೀವನ ಮತ್ತು ಉದ್ಯೋಗದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಸಮತೋಲನವನ್ನು ಕಾಯ್ದುಕೊಳ್ಳಲು ಯಶಸ್ವಿಯಾಗುವಿರಿ. ಇವರ ಬುದ್ಧಿ ಶಕ್ತಿಯೇ ಜೀವನದ ಆಧಾರವಾಗುತ್ತದೆ.

ಸಮಯಕ್ಕೆ ಸರಿಯಾಗಿ ಹಣವನ್ನು ವಾಪಸ್ ನೀಡುತ್ತಾರೆ

ನಿಗದಿತ ಅವಧಿಯಲ್ಲಿ ತೆಗೆದುಕೊಳ್ಳುವ ಹಣವನ್ನು ಮರುಪಾವತಿ ಮಾಡಬಲ್ಲರು. ಇಂತಹ ಮನಸ್ಥಿತಿಯಿಂದ ಬೇರೆಯವರು ಇವರನ್ನು ನಂಬುತ್ತಾರೆ. ಶಾಂತವಾಗಿ ಕಂಡರು ಕೋಪಗೊಂಡಾಗ ಅತಿ ಉಗ್ರವಾಗಿ ವರ್ತಿಸುತ್ತಾರೆ. ಆದಾಯದಲ್ಲಿ ಸ್ಥಿರತೆ ಇರದೆ ಹೋದರೂ, ಜೀವನ ಸಾಗಿಸಲು ಯಾವುದೇ ತೊಂದರೆ ಎದುರಾಗದು. ತಮ್ಮ ಕೆಲಸ ಕಾರ್ಯಗಳಿಗೆ ಬೇರೆಯವರನ್ನು ಪೂರ್ಣವಾಗಿ ಅವಲಂಭಿಸುವುದಿಲ್ಲ. ಕೆಲವೊಮ್ಮೆ ಅನ್ಯರ ಸ್ಫೂರ್ತಿ ಇವರ ಜೀವನದ ಮಟ್ಟವನ್ನು ಸುಧಾರಿಸುತ್ತದೆ. ಮನವು ಶಾಂತಿಯುತ ವಾತಾವರಣವನ್ನು ಬಯಸಿದರೂ ನಿಮ್ಮ ದುಡುಕಿನ ಮಾತುಕತೆ ದೊಡ್ಡ ಮಟ್ಟದ ವಿವಾದವನ್ನೇ ಉಂಟುಮಾಡುತ್ತದೆ.

ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ನಿಮಗೆ ಒಪ್ಪಿಗೆ ಇಲ್ಲದೆ ಹೋದರೂ ಕುಟುಂಬದ ಪೂರ್ಣ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮಕ್ಕಳ ಮೇಲಿನ ಜವಾಬ್ದಾರಿಯು ಹೆಚ್ಚುತ್ತದೆ. ಮಾನಸಿಕ ಒತ್ತಡ ಇರುತ್ತದೆ, ಆದರೂ ಕಾಯದಕ್ಷತೆ ನಿಮ್ಮನ್ನು ಕಾಪಾಡುತ್ತದೆ. ಆಧುನಿಕತೆಯನ್ನು ತಮ್ಮ ನಿತ್ಯ ಜೀವನಕ್ಕೆ ಅಳವಡಿಸಿಕೊಳ್ಳುತ್ತಾರೆ. ಹೊಗಳಿಕೆಗೆ ಮಾರುಹೋಗದೆ ಸ್ವಂತ ನಿರ್ಣಯಗಳಿಗೆ ಬದ್ಧರಾಗುವಿರಿ. ಸಂಪ್ರದಾಯದ ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಇರುತ್ತದೆ. ಸತತ ಪ್ರಯತ್ನದಿಂದ ವಿದೇಶ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ. ಒಂದೇ ಮಾದರಿಯ ಉದ್ಯೋಗ ಇಷ್ಟ ಆಗುವುದಿಲ್ಲ. ವಿದೇಶದ ಸಹಯೋಗದಲ್ಲಿ ವ್ಯಾಪಾರೋದ್ದೇಶ ಯೋಜನೆ ರೂಪಿಸುವಿರಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸ ಕಾರ್ಯಗಳು ಎದುರಾಗುತ್ತವೆ. ಸೋಲನ್ನು ಒಪ್ಪುವ ಗುಣ ಇರುವುದಿಲ್ಲ. ಆತ್ಮೀಯರ ನೆರವಿನಿಂದ ನಿಮ್ಮ ಕೆಲಸ ಸಾಧಿಸಲು ಸಾಧ್ಯವಾಗುತ್ತದೆ. ಮನದ ಶಾಂತಿಗಾಗಿ ಬಿಡುವಿನ ವೇಳೆಯಲ್ಲಿ ಕುಟುಂಬದ ಸದಸ್ಯರ ಜೊತೆಗೂಡಿ ತೀರ್ಥಯಾತ್ರೆಗೆ ತೆರಳುವಿರಿ. ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಹಣವನ್ನು ವಿನಿಯೋಗಿಸುವಿರಿ.

ದಾಂಪತ್ಯ ಜೀವನದಲ್ಲಿ ಉತ್ತಮ ಹೊಂದಾಣಿಕೆ ಇರುತ್ತೆ

ಅವಿವಾಹಿತರು ವಿವಾಹದ ಬಗ್ಗೆ ಹೆಚ್ಚಿನ ಆಸಕ್ತಿ ಅಥವಾ ಆಸೆ ಇರುವುದಿಲ್ಲ. ಆದರೆ ಇವರನ್ನು ಮೆಚ್ಚುವ ವ್ಯಕ್ತಿ ದೊರೆತರೆ ತಿರಸ್ಕರಿಸುವುದಿಲ್ಲ. ಸಂಬಂಧಿಕರು ಅಥವಾ ಪರಿಚಯಸ್ತರ ಜೊತೆಯಲ್ಲಿ ವಿವಾಹವಾಗುತ್ತದೆ. ಅತಿಥಿ ಮತ್ತು ಕುಟುಂಬದ ಸದಸ್ಯರ ನಡುವೆ ಉತ್ತಮ ಬಾಂಧವ್ಯ ನೆಲಸುತ್ತದೆ. ಎಂದೋ ದೊರೆಯುವ ಹಣದ ನಿರೀಕ್ಷೆಯಿಂದ ಖರ್ಚು ವೆಚ್ಚಗಳನ್ನು ನಿಯಂತ್ರಿಸುವುದಿಲ್ಲ. ಸಂಬಂಧಿಕರ ಜೊತೆಯಲ್ಲಿ ಭೂಮಿಗೆ ಸಂಬಂಧಿಸಿದಂತೆ ವಾದ ವಿವಾದಗಳು ತಲೆದೋರುತ್ತದೆ. ಅನಾರೋಗ್ಯದಿಂದ ತೊಂದರೆ ಎದುರಾದರೂ ಆತ್ಮವಿಶ್ವಾಸದಿಂದ ಪಾರಾಗುವಿರಿ. ವಿದ್ಯಾರ್ಥಿಗಳ ಕಲಿಕೆಯ ವಿಚಾರದಲ್ಲಿ ಚೇತರಿಕೆ ಲಭಿಸುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ಮಾತನಾಡುವ ಕಾರಣ ಸಮಸ್ಯೆಗಳಿಲ್ಲದ ಜೀವನ ನಡೆಸುವಿರಿ. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ನಿಮ್ಮ ಹಾಸ್ಯದ ಸ್ವಾಭಾವ ಎಲ್ಲರ ಮನಗೆಲ್ಲುತ್ತದೆ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಹಸ್ತಸಾಮುದ್ರಿಕ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.