ಆರೋಗ್ಯ ಭವಿಷ್ಯ 2025: ಮೇಷ ರಾಶಿಯವರು ಒತ್ತಡದಿಂದ ದೂರವಿರಬೇಕು, ಮಿಥುನ ರಾಶಿಯವರಿಗೆ ಉದರ ಸಂಬಂಧಿ ಸಮಸ್ಯೆ ಕಾಡುವ ಸಾಧ್ಯತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆರೋಗ್ಯ ಭವಿಷ್ಯ 2025: ಮೇಷ ರಾಶಿಯವರು ಒತ್ತಡದಿಂದ ದೂರವಿರಬೇಕು, ಮಿಥುನ ರಾಶಿಯವರಿಗೆ ಉದರ ಸಂಬಂಧಿ ಸಮಸ್ಯೆ ಕಾಡುವ ಸಾಧ್ಯತೆ

ಆರೋಗ್ಯ ಭವಿಷ್ಯ 2025: ಮೇಷ ರಾಶಿಯವರು ಒತ್ತಡದಿಂದ ದೂರವಿರಬೇಕು, ಮಿಥುನ ರಾಶಿಯವರಿಗೆ ಉದರ ಸಂಬಂಧಿ ಸಮಸ್ಯೆ ಕಾಡುವ ಸಾಧ್ಯತೆ

Health Horoscope 2025: ಜ್ಯೋತಿಷ್ಯದಲ್ಲಿ ನೀರು, ಗಾಳಿ, ಬೆಂಕಿ, ಭೂಮಿಗೆ ಸಂಬಂಧಿಸಿದ ಗ್ರಹಗಳು ಒಂದೊಂದು ರೀತಿಯ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. 2025ರಲ್ಲಿ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಮೇಷ , ವೃಷಭ, ಮಿಥುನ ರಾಶಿಯವರ ಆರೋಗ್ಯ ಭವಿಷ್ಯ ಇಲ್ಲಿದೆ.

ಮೇಷ , ವೃಷಭ, ಮಿಥುನ ರಾಶಿಯವರ ಆರೋಗ್ಯ ಭವಿಷ್ಯ 2025
ಮೇಷ , ವೃಷಭ, ಮಿಥುನ ರಾಶಿಯವರ ಆರೋಗ್ಯ ಭವಿಷ್ಯ 2025 (PC: Canva)

ಆರೋಗ್ಯ ಭವಿಷ್ಯ 2025: ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಆಗ್ಗಾಗ್ಗೆ ಕೇಳುತ್ತೇವೆ. ಅದು ದೈಹಿಕ, ಮಾನಸಿಕ ಆರೋಗ್ಯ ಯಾವುದೇ ಆಗಿರಲಿ ನಮ್ಮ ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಎಲ್ಲವೂ ಚೆನ್ನಾಗಿದ್ದಂತೆ. ಆರೋಗ್ಯ ಚೆನ್ನಾಗಿರಬೇಕೆಂದು ವ್ಯಾಯಾಮ, ಉತ್ತಮ ಆಹಾರಗಳನ್ನು ಸೇವಿಸಲು ಗಮನ ಕೊಡುತ್ತೇವೆ. ಆದರೆ ಕೆಲವೊಮ್ಮೆ ಎಷ್ಟೇ ಎಚ್ಚರವಾಗಿದ್ದರೂ ನಮ್ಮನ್ನು ಅನಾರೋಗ್ಯ ಕಾಡುತ್ತದೆ. ಇದಕ್ಕೆ ಗ್ರಹಗತಿಗಳೂ ಕಾರಣವಾಗಿರುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಗ್ನಿ ಅಂಶಕ್ಕೆ ಸೇರಿದ ಗ್ರಹಗಳು ಶಾಖ, ಗಾಯ, ಜೀರ್ಣಕ್ರಿಯೆ ಮತ್ತು ರಕ್ತಕ್ಕೆ ಸಂಬಂಧಿಸಿದ ರೋಗಗಳು ಇತ್ಯಾದಿಗಳಿಗೆ ಕಾರಣವಾದರೆ, ವಾಯು ಅಂಶಕ್ಕೆ ಸೇರಿದ ಗ್ರಹಗಳು ಗಾಳಿಗೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತದೆ. ಭೂಮಿಯ ಅಂಶಗಳಿಗೆ ಸಂಬಂಧಿಸಿದ ಗ್ರಹಗಳು ನೋವನ್ನುಂಟುಮಾಡುವ ಕಾಯಿಲೆಗಳು ಹಾಗೂ ಜಲಕ್ಕೆ ಸಂಬಂಧಿಸಿದ ಗ್ರಹಗಳಿಂದ ಕೆಮ್ಮು, ಶೀತ ಇತ್ಯಾದಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹೊಸ ವರ್ಷ ಬರುತ್ತಿದೆ. ಮುಂದಿನ ವರ್ಷ ದ್ವಾದಶ ರಾಶಿಗಳ ಆರೋಗ್ಯ ಹೇಗಿರಲಿದೆ ನೋಡೋಣ.

ಮೇಷ , ವೃಷಭ, ಮಿಥುನ ರಾಶಿಯವರ ಆರೋಗ್ಯ ಭವಿಷ್ಯ 2025

 

ಮೇಷ ರಾಶಿ

ವರ್ಷದ ಆರಂಭದಿಂದ ಮಾರ್ಚ್ 2025 ರವರೆಗೆ, ಶನಿ ಗ್ರಹವು ಲಾಭದ ಮನೆಯಲ್ಲಿ ಸ್ಥಾನ ಪಡೆದಿರುತ್ತದೆ, ಇದು ಅನುಕೂಲಕರ ರಾಶಿಚಕ್ರ ಚಿಹ್ನೆಯಾಗಿದೆ. ಶನಿಯ 3ನೇ ಅಂಶವು ಜಾತಕದ ಮೊದಲ ಮನೆಯ ಮೇಲೆ ಇರುತ್ತದೆ. ಈ ಪರಿಸ್ಥಿತಿಯಲ್ಲಿ, ಮೇಷ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕಿದೆ. ಈ ವರ್ಷ ಮೇಷ ರಾಶಿಯವರು ಆರೋಗ್ಯದ ವಿಚಾರದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಶನಿಯು ನಿಮ್ಮ 12ನೇ ಮನೆಗೆ ಸಾಗಿದಾಗ, ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಸಾಧ್ಯವಾದಷ್ಟು ಒತ್ತಡ ಇಲ್ಲದೆ ಕೆಲಸ ಮಾಡಿದರೆ ಒಳ್ಳೆಯದು. ಜೊತೆಗೆ ಉತ್ತಮ ನಿದ್ರೆ ಮಾಡಿ, ಸಾಧ್ಯವಾದಷ್ಟು ವಿಶ್ರಾಂತಿ ಪಡೆದರೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ವೃಷಭ ರಾಶಿ

2025 ರಲ್ಲಿ ವರ್ಷದ ಆರಂಭದಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ನಂತರ ಶನಿಯು ಲಾಭದ ಮನೆಗೆ ಸಾಗುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈಗಾಗಲೇ ಹೃದಯ ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ಈ ರಾಶಿಯವರು ಬಹಳ ಜಾಗರೂಕರಾಗಿರಬೇಕು. ಮೇ ನಂತರ ಕೇತುವಿನ ಪ್ರಭಾವವು 4ನೇ ಮನೆಯಲ್ಲಿ ಗೋಚರಿಸುತ್ತದೆ. ಈ ಅವಧಿಯಲ್ಲಿ ಸಣ್ಣ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಆದರೆ ಯಾವುದೇ ಗಂಭೀರ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ. ವೃಷಭ ರಾಶಿಯವರು ಈ ವರ್ಷ ಆದಷ್ಟು ಯೋಗಾಭ್ಯಾಸ ಮಾಡುವುದು, ಶುದ್ಧ ಆಹಾರ ಸೇವಿಸುವುದರ ಕಡೆ ಗಮನ ಹರಿಸಬೇಕು. ಜೊತೆಗೆ ವಿಶ್ರಾಂತಿ ಪಡೆಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ.

ಮಿಥುನ ರಾಶಿ

ಈ ವರ್ಷ ಗುರು ಸಂಕ್ರಮಣದ ಕಾರಣ ಅನಾರೋಗ್ಯ ಸಂಭವಿಸುವ ಸಾಧ್ಯತೆ ಇದೆ. ಗುರು ಸಂಕ್ರಮಣದ ಅವಧಿಯಲ್ಲಿ ಹೊಟ್ಟೆ ಮತ್ತು ಜನನಾಂಗಗಳಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಮೇ ತಿಂಗಳ ನಂತರ ಆರೋಗ್ಯ ಸಮಸ್ಯೆಗಳು ದೂರವಾದರೂ ನಂತರ ಸುಧಾರಿಸುತ್ತದೆ. ಆದರೆ ಯೋಗ, ಧ್ಯಾನ ಮತ್ತು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಂಡರೆ

ಈ ವರ್ಷವಿಡೀ ನೀವು ಆರೋಗ್ಯವಾಗಿರುವಿರಿ. ಆರೋಗ್ಯದ ಬಗ್ಗೆ ನೀವು ಎಚ್ಚರಿಕೆ ತೆಗೆದುಕೊಳ್ಳದಿದ್ದಲ್ಲಿ ಎದೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಇದನ್ನು ಹೊರತುಪಡಿಸಿ ಯಾವುದೇ ಗಂಭೀರ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.