ಆರೋಗ್ಯ ಭವಿಷ್ಯ 2025: ಕಟಕ ರಾಶಿಯವರಿಗೆ ಬಾಯಿಗೆ ಸಂಬಂಧಿಸಿದ ಅನಾರೋಗ್ಯ, ಸಿಂಹ ರಾಶಿಯವರಿಗೆ ಅಜೀರ್ಣದ ಸಮಸ್ಯೆ ಕಾಡಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆರೋಗ್ಯ ಭವಿಷ್ಯ 2025: ಕಟಕ ರಾಶಿಯವರಿಗೆ ಬಾಯಿಗೆ ಸಂಬಂಧಿಸಿದ ಅನಾರೋಗ್ಯ, ಸಿಂಹ ರಾಶಿಯವರಿಗೆ ಅಜೀರ್ಣದ ಸಮಸ್ಯೆ ಕಾಡಲಿದೆ

ಆರೋಗ್ಯ ಭವಿಷ್ಯ 2025: ಕಟಕ ರಾಶಿಯವರಿಗೆ ಬಾಯಿಗೆ ಸಂಬಂಧಿಸಿದ ಅನಾರೋಗ್ಯ, ಸಿಂಹ ರಾಶಿಯವರಿಗೆ ಅಜೀರ್ಣದ ಸಮಸ್ಯೆ ಕಾಡಲಿದೆ

Health Horoscope 2025: ಜ್ಯೋತಿಷ್ಯದಲ್ಲಿ ನೀರು, ಗಾಳಿ, ಬೆಂಕಿ, ಭೂಮಿಗೆ ಸಂಬಂಧಿಸಿದ ಗ್ರಹಗಳು ಒಂದೊಂದು ರೀತಿಯ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. 2025ರಲ್ಲಿ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಕಟಕ, ಸಿಂಹ, ಕನ್ಯಾ ರಾಶಿಯವರ ಆರೋಗ್ಯ ಭವಿಷ್ಯ ಇಲ್ಲಿದೆ.

ಕಟಕ, ಸಿಂಹ, ಕನ್ಯಾ ರಾಶಿಯವರ ಆರೋಗ್ಯ ಭವಿಷ್ಯ 2025
ಕಟಕ, ಸಿಂಹ, ಕನ್ಯಾ ರಾಶಿಯವರ ಆರೋಗ್ಯ ಭವಿಷ್ಯ 2025 (PC: Canva)

ಆರೋಗ್ಯ ಭವಿಷ್ಯ 2025: ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಆಗ್ಗಾಗ್ಗೆ ಕೇಳುತ್ತೇವೆ. ಅದು ದೈಹಿಕ, ಮಾನಸಿಕ ಆರೋಗ್ಯ ಯಾವುದೇ ಆಗಿರಲಿ ನಮ್ಮ ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಎಲ್ಲವೂ ಚೆನ್ನಾಗಿದ್ದಂತೆ. ಆರೋಗ್ಯ ಚೆನ್ನಾಗಿರಬೇಕೆಂದು ವ್ಯಾಯಾಮ, ಉತ್ತಮ ಆಹಾರಗಳನ್ನು ಸೇವಿಸಲು ಗಮನ ಕೊಡುತ್ತೇವೆ. ಆದರೆ ಕೆಲವೊಮ್ಮೆ ಎಷ್ಟೇ ಎಚ್ಚರವಾಗಿದ್ದರೂ ನಮ್ಮನ್ನು ಅನಾರೋಗ್ಯ ಕಾಡುತ್ತದೆ. ಇದಕ್ಕೆ ಗ್ರಹಗತಿಗಳೂ ಕಾರಣವಾಗಿರುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಗ್ನಿ ಅಂಶಕ್ಕೆ ಸೇರಿದ ಗ್ರಹಗಳು ಶಾಖ, ಗಾಯ, ಜೀರ್ಣಕ್ರಿಯೆ ಮತ್ತು ರಕ್ತಕ್ಕೆ ಸಂಬಂಧಿಸಿದ ರೋಗಗಳು ಇತ್ಯಾದಿಗಳಿಗೆ ಕಾರಣವಾದರೆ,

ವಾಯು ಅಂಶಕ್ಕೆ ಸೇರಿದ ಗ್ರಹಗಳು ಗಾಳಿಗೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತದೆ. ಭೂಮಿಯ ಅಂಶಗಳಿಗೆ ಸಂಬಂಧಿಸಿದ ಗ್ರಹಗಳು ನೋವನ್ನುಂಟುಮಾಡುವ ಕಾಯಿಲೆಗಳು ಹಾಗೂ ಜಲಕ್ಕೆ ಸಂಬಂಧಿಸಿದ ಗ್ರಹಗಳಿಂದ ಕೆಮ್ಮು, ಶೀತ ಇತ್ಯಾದಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹೊಸ ವರ್ಷ ಬರುತ್ತಿದೆ. ಮುಂದಿನ ವರ್ಷ ದ್ವಾದಶ ರಾಶಿಗಳ ಆರೋಗ್ಯ ಹೇಗಿರಲಿದೆ ನೋಡೋಣ.

ಕಟಕ, ಸಿಂಹ, ಕನ್ಯಾ ರಾಶಿಯವರ ಆರೋಗ್ಯ ಭವಿಷ್ಯ 2025

 

ಕಟಕ ರಾಶಿ

ಮಾರ್ಚ್‌ವರೆಗೆ ಶನಿಯು ಎಂಟನೇ ಮನೆಯಲ್ಲಿ ಸಾಗುವುದರಿಂದ ನಿಮಗೆ ಅನಾರೋಗ್ಯ ಕಾಡುವ ಸಾಧ್ಯತೆಗಳಿವೆ. ವಿಶೇಷವಾಗಿ ಸೊಂಟ, ಜನನಾಂಗ ಅಥವಾ ಬಾಯಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ಅದರ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕಾಗುತ್ತದೆ. ಮಾರ್ಚ್ ನಂತರ, ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ. ಮೇ ತಿಂಗಳಲ್ಲಿ ಗುರು ಗ್ರಹವು ನಿಮ್ಮ ಕುಂಡಲಿಯ 12ನೇ ಮನೆಯಲ್ಲಿ ಸಂಚಾರ ಮಾಡಲಿದ್ದು, ಈ ಕಾರಣದಿಂದ ನಿಮ್ಮ ಹೊಟ್ಟೆ ಮತ್ತು ಸೊಂಟಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆರೋಗ್ಯ ಸುಧಾರಿಸಬೇಕಿದ್ದರೆ ತಪ್ಪದೆ ಚಿಕಿತ್ಸೆ ಪಡೆಯಿರಿ, ಆಹಾರ ಪದ್ಧತಿಯತ್ತ ಗಮನ ಹರಿಸಿ.

ಸಿಂಹ ರಾಶಿ

2025 ವರ್ಷವು ಸಿಂಹ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿಲ್ಲ. ಆದ್ದರಿಂದ ಈ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ನಿಮಗೆ ಸೋಮಾರಿತನ ಹೆಚ್ಚಾಗಲಿದೆ. ಕೀಲು ನೋವು ನಿಮ್ಮನ್ನು ಕಾಡಬಹುದು. ಮಾರ್ಚ್ ತಿಂಗಳಿನಿಂದ, ಶನಿಯ ಪ್ರಭಾವ ಕ್ರಮೇಣ ಮೊದಲ ಮನೆಯಿಂದ ದೂರವಾಗಲು ಪ್ರಾರಂಭಿಸುತ್ತದೆ. ಮತ್ತೆ ಶನಿಯು 8ನೇ ಮನೆಗೆ ಸಾಗುವುದರಿಂದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಶನಿ ಸಂಕ್ರಮಣದ ಅವಧಿಯಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಜಾಗೃತರಾಗಿರಬೇಕು. ಮೇ ನಂತರ, ರಾಹು ಕೇತುಗಳ ಪ್ರಭಾವವು ನಿಮ್ಮ ಮೊದಲ ಮನೆಯ ಮೇಲೆ ಇರುತ್ತದೆ. ಈ ಅವಧಿಯಲ್ಲಿ ನೀವು ಉದರ ಸಂಬಂಧಿ ಸಮಸ್ಯೆ, ತಲೆನೋವು ಇತ್ಯಾದಿಗಳನ್ನು ಎದುರಿಸಬೇಕಾಗಬಹುದು. ಗ್ಯಾಸ್‌, ಅಜೀರ್ಣದ ಸಮಸ್ಯೆಗಳೂ ಕೂಡಾ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಮೇ ತಿಂಗಳ ನಂತರ ಎಲ್ಲವೂ ಕಡಿಮೆ ಆಗುತ್ತದೆ.

ಕನ್ಯಾ ರಾಶಿ

2025 ರಲ್ಲಿ ಕನ್ಯಾ ರಾಶಿಯವರಿಗೆ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ದುರ್ಬಲವಾಗಿರುತ್ತದೆ. ಜನವರಿಯಿಂದ ಮೇ ವರೆಗೆ, ರಾಹು ಕೇತುಗಳ ಪ್ರಭಾವ ನಿಮ್ಮ ಮೊದಲ ಮನೆಯ ಮೇಲೆ ಇರುತ್ತದೆ, ಇದು ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿರುವುದಿಲ್ಲ. ಮೇ 2025 ರ ನಂತರ, ಈ ಪರಿಣಾಮ ಕೊನೆಗೊಳ್ಳುತ್ತದೆ ಶನಿಯು ಮಾರ್ಚ್ ನಂತರ ಏಳನೇ ಮನೆಯಲ್ಲಿ ಸಾಗುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿಯೂ ಸಹ ನೀವು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಂತರದ ದಿನಗಳಲ್ಲಿ ನೀವು ಹಿಂದಿನಿಂದ ಎದುರಿಸುತ್ತಿದ್ದ ಆರೋಗ್ಯ ಸಮಸ್ಯೆಗಳು ದೂರಾಗುತ್ತದೆ. ಆದರೆ ನೀವು ಯಾವುದೇ ಹೊಸ ಸಮಸ್ಯೆಗಳನ್ನು ಎದುರಿಸಬಾರದು ಎಂದಾದರೆ ಆರೋಗ್ಯದ ಕಡೆ ನಿಗಾ ವಹಿಸಿ. ಯೋಗ, ವ್ಯಾಯಾಮಗಳನ್ನು ಮಾಡಿ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಕೂಡಾ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.