ಆರೋಗ್ಯ ಭವಿಷ್ಯ ಜು.27: ಈ ರಾಶಿಯ ಮಹಿಳೆಯರು ಇಂದು ದ್ವಿಚಕ್ರ ವಾಹನ ಸವಾರಿ ತಪ್ಪಿಸಬೇಕು, ಯಕೃತ್ತಿನ ಸಮಸ್ಯೆ ಇರುವವರು ವೈದ್ಯರನ್ನು ಭೇಟಿ ಮಾಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆರೋಗ್ಯ ಭವಿಷ್ಯ ಜು.27: ಈ ರಾಶಿಯ ಮಹಿಳೆಯರು ಇಂದು ದ್ವಿಚಕ್ರ ವಾಹನ ಸವಾರಿ ತಪ್ಪಿಸಬೇಕು, ಯಕೃತ್ತಿನ ಸಮಸ್ಯೆ ಇರುವವರು ವೈದ್ಯರನ್ನು ಭೇಟಿ ಮಾಡಿ

ಆರೋಗ್ಯ ಭವಿಷ್ಯ ಜು.27: ಈ ರಾಶಿಯ ಮಹಿಳೆಯರು ಇಂದು ದ್ವಿಚಕ್ರ ವಾಹನ ಸವಾರಿ ತಪ್ಪಿಸಬೇಕು, ಯಕೃತ್ತಿನ ಸಮಸ್ಯೆ ಇರುವವರು ವೈದ್ಯರನ್ನು ಭೇಟಿ ಮಾಡಿ

ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಜು. 27: ಹನ್ನೆರಡು ರಾಶಿಗಳ ಆರೋಗ್ಯ ಭವಿಷ್ಯ ಪ್ರಕಾರ, ಇಂದು ವೃಶ್ಚಿಕ ರಾಶಿಗೆ ಸೇರಿದ ಮಹಿಳೆಯರು ದ್ವಿಚಕ್ರ ವಾಹನ ಸವಾರಿ ಮಾಡುವುದನ್ನು ತಪ್ಪಿಸಿ. ಮಿಥುನ ರಾಶಿಗೆ ಸೇರಿದ ಮಕ್ಕಳಿಗೆ ವೈರಲ್‌ ಜ್ವರ ಕಾಡಬಹುದು. ಉಳಿದ ರಾಶಿಗಳ ಇಂದಿನ ಆರೋಗ್ಯ ಭವಿಷ್ಯ ಹೇಗಿದೆ ನೋಡಿ.

ಆರೋಗ್ಯ ಭವಿಷ್ಯ: ಈ ರಾಶಿಯ ಮಹಿಳೆಯರು ಇಂದು ದ್ವಿಚಕ್ರ ವಾಹನ ಸವಾರಿ ತಪ್ಪಿಸಿ, ಯಕೃತ್ತಿನ ಸಮಸ್ಯೆ ಇರುವವರು ವೈದ್ಯರನ್ನು ಭೇಟಿ ಮಾಡಿ
ಆರೋಗ್ಯ ಭವಿಷ್ಯ: ಈ ರಾಶಿಯ ಮಹಿಳೆಯರು ಇಂದು ದ್ವಿಚಕ್ರ ವಾಹನ ಸವಾರಿ ತಪ್ಪಿಸಿ, ಯಕೃತ್ತಿನ ಸಮಸ್ಯೆ ಇರುವವರು ವೈದ್ಯರನ್ನು ಭೇಟಿ ಮಾಡಿ (PC: Canva)

ಪಂಚಾಂಗ, ರಾಶಿ ಭವಿಷ್ಯಗಳನ್ನು ನೋಡದೆ ದಿನಚರಿ ಆರಂಭಿಸುವವರು ಕಡಿಮೆ. ಹೀಗೆ ಓದುವವರ ಗಮನ ಮೊದಲು ದಿನ ಹೇಗಿರಬಹುದು ಎಂಬುದರ ಕಡೆಗೆ ಹೋಗುತ್ತದೆ. ಅಲ್ಲಿ ಆರೋಗ್ಯ, ಕೆಲಸ, ಹಣಕಾಸು ಇತ್ಯಾದಿ ವಿಚಾರಗಳ ವಿವರಗಳ ಕಡೆಗೆ ಸಹಜವಾಗಿ ಕಣ್ಣು ಹಾಯಿಸುತ್ತಾರೆ. ಅಂತಹ ಕುತೂಹಲ ತಣಿಸುವುದಕ್ಕಾಗಿ ರಾಶಿಗಳ ಗ್ರಹಗತಿಗಳಿಗೆ ಅನುಗುಣವಾಗಿ 12 ರಾಶಿಗಳ ಆರೋಗ್ಯ ಜಾತಕವನ್ನು ಇಲ್ಲಿ ನೀಡಲಾಗಿದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಮೇಷ ರಾಶಿ

ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಮಧುಮೇಹ ಅಥವಾ ಹೃದಯ ಸಂಬಂಧಿ ಸಮಸ್ಯೆ ಇರುವವರು ತಪ್ಪದೆ ವೈದ್ಯರನ್ನು ಭೇಟಿ ಮಾಡಿ. ಈ ರಾಶಿಯ ಮಹಿಳೆಯರು ಚರ್ಮದ ಅಲರ್ಜಿ, ಬಾಯಿಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಬಹುದು. ಮಕ್ಕಳು ಆಟವಾಟುವಾಗ ಬಿದ್ದು ಪೆಟ್ಟು ಮಾಡಿಕೊಳ್ಳಬಹುದು, ಅವರ ಬಗ್ಗೆ ಎಚ್ಚರಿಕೆ ವಹಿಸಿ. ಈ ರಾಶಿಯವರಿಗೆ ಅಪಘಾತದ ಮನ್ಸೂಚನೆ ಇರುವುದರಿಂದ ವಾಹನ ಚಲಾಯಿಸುವಾಗ ಮುನ್ನೆಚರಿಕೆ ವಹಿಸಿ.

ವೃಷಭ ರಾಶಿ

ಹೃದಯಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆ ಉಂಟಾಗಬಹುದು. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ ಜಾಗರೂಕರಾಗಿರಬೇಕು. ವಯಸ್ಸಾದವರು ಮೆಟ್ಟಿಲನ್ನು ಬಳಸುವಾಗ, ಬಸ್ ಇತರ ವಾಹನಗಳನ್ನು ಹತ್ತುವಾಗ, ಇಳಿಯುವಾಗ ಬಹಳ ಜಾಗರೂಕರಾಗಿರಬೇಕು. ಬೆಳಗಿನ ಉಪಹಾರವನ್ನು ಬಿಡಬೇಡಿ, ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯಿರಿ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇಂದು ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ. ಆದರೂ ಮೆಟ್ಟಿಲನ್ನು ಹತ್ತುವಾಗ, ಇಳಿಯುವಾಗ ಜಾಗ್ರತೆ. ಕೆಲವು ಮಹಿಳೆಯರು ಸ್ತ್ರೀರೋಗ ಸಮಸ್ಯೆಗಳಿಂದ ಬಳಲಬಹುದು. ಮಕ್ಕಳಿಗೆ ವೈರಲ್ ಜ್ವರ, ಗಂಟಲು ನೋವು ಅಥವಾ ಮೊಣಕೈ ನೋವು ಕಾಡುತ್ತದೆ. ಇಂದು ಬಹುತೇಕರ ಹಳೆಯ ಆರೋಗ್ಯ ಸಮಸ್ಯೆ ಬಗೆಹರಿಯಲಿದೆ.

ಕರ್ಕಾಟಕ ರಾಶಿ

ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ತಂಬಾಕು ಮತ್ತು ಆಲ್ಕೋಹಾಲ್ ಎರಡನ್ನೂ ತಪ್ಪಿಸಿ ಪೌಷ್ಟಿಕ ಆಹಾರ ಸೇವನೆ ನಿಮ್ಮ ಆದ್ಯತೆಯಾಗಿರಲಿ. ಒತ್ತಡದಿಂದ ಮುಕ್ತಿ ಪಡೆಯಲು ನೀವು ಕಚೇರಿ ಮತ್ತು ವೈಯಕ್ತಿಕ ಜೀವನ ಎರಡನ್ನೂ ಬ್ಯಾಲೆನ್ಸ್‌ ಮಾಡಬೇಕು. ಸಣ್ಣ ಜ್ವರ ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳು ನಿಮಗೆ ತೊಂದರೆ ಉಂಟು ಮಾಡಬಹುದು. ಆದರೆ ನೀವು ಶೀಘ್ರದಲ್ಲೇ ಗುಣಮುಖರಾಗಲಿದ್ದೀರಿ. ಹೈಡ್ರೇಟ್ ಆಗಿರಲು ಸಾಕಷ್ಟು ನೀರು ಕುಡಿಯಿರಿ.

ಸಿಂಹ ರಾಶಿ

ಆರೋಗ್ಯವಾಗಿರಲು ಧ್ಯಾನ, ಜಾಗಿಂಗ್, ನಿದ್ರೆ, ಆರೋಗ್ಯಕರ ಆಹಾರ ಸೇರಿದಂತೆ ಇನ್ನಿತರ ಪ್ರಮುಖ ವಿಚಾರಗಳಿಗೆ ಪ್ರಾಮುಖ್ಯತೆ ಕೊಡಿ. ಇಂದು ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ. ಆದರೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಕೆಲಸದ ಹೊರೆಯಿಂದಾಗಿ ನೀವು ಒತ್ತಡ ಅನುಭವಿಸಬಹುದು. ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿ.

ಕನ್ಯಾ ರಾಶಿ

ಈ ದಿನ ನೀವು ಉತ್ತಮ ಆರೋಗ್ಯ ಹೊಂದಿರುತ್ತೀರಿ. ದಿನವಿಡೀ ಲವಲವಿಕೆಯಿಂದ ಇರುವಿರಿ. ಮಾನಸಿಕವಾಗಿ ನೀವು ಆರೋಗ್ಯವಾಗಿದ್ದರೆ ದೈಹಿಕ ಆರೋಗ್ಯವೂ ನಿಮ್ಮ ಕೈ ಹಿಡಿಯಲಿದೆ. ನೀವು ಇನ್ನಷ್ಟು ಫಿಟ್‌ ಆಗಿರಲು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.

ತುಲಾ ರಾಶಿ

ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ. ಮಹಿಳೆಯರು ಅಡುಗೆ ಮನೆಯಲ್ಲಿ ತರಕಾರಿಗಳನ್ನು ಕತ್ತರಿಸುವಾಗ ಜಾಗರೂಕರಾಗಿರಬೇಕು, ಸದಾ ಒಳ್ಳೆಯದನ್ನೇ ಯೋಚಿಸಿ, ಇದು ನಿಮ್ಮ ಸೋಮಾರಿತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇಂದು ಯಾವುದೇ ಅಪಾಯಕಾರಿ ಆಟ ಅಥವಾ ಇನ್ನಿತರ ಚಟುವಟಿಕೆಗಳನ್ನು ತಪ್ಪಿಸಿ. ನಾರಿನ ಅಂಶ ಇರುವ ಆಹಾರವನ್ನು ಹೆಚ್ಚು ಸೇವಿಸಿ.

ವೃಶ್ಚಿಕ ರಾಶಿ

ಬಹಳ ದಿನಗಳಿಂದ ಕಾಡುತ್ತಿರುವ ಕಾಯಿಲೆಗಳಿಂದ ನೀವು ಗುಣಮುಖರಾಗಬಹುದು. ವಯಸ್ಸಾದವರಿಗೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ, ಪೋಷಕಾಂಶಗಳಿಂದ ಕೂಡಿದ ಆಹಾರಕ್ಕೆ ಆದ್ಯತೆ ನೀಡಿ. ಮಕ್ಕಳು ಆಟವಾಡುವಾಗ ಮೂಗಿಗೆ ಏಟು ಮಾಡಿಕೊಳ್ಳಬಹುದು. ಪ್ರತಿದಿನ ತಪ್ಪದೆ ವ್ಯಾಯಾಮ ಮಾಡಿ. ಮಹಿಳೆಯರು ದ್ವಿಚಕ್ರ ವಾಹನ ಸವಾರಿ ಮಾಡುವುದನ್ನು ತಪ್ಪಿಸಬೇಕು.

ಧನು ರಾಶಿ

ಯಾವುದೇ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ. ಆದರೆ ಉಸಿರಾಟದ ಸಮಸ್ಯೆ ಇರುವವರು ಧೂಳಿರುವ ಪ್ರದೇಶಗಳಿಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು. ಪ್ರತಿದಿನ ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ನಿಮ್ಮ ಆಹಾರ ಕ್ರಮದಲ್ಲಿ ಹಣ್ಣು, ತರಕಾರಿಗೆ ಹೆಚ್ಚಿನ ಆದ್ಯತೆ ನೀಡಿ. ಕರಿದ ಆಹಾರ ಪದಾರ್ಥಗಳು, ಸಿಹಿ ಹಾಗೂ ಹೊರಗಿನ ಆಹಾರ ಸೇವಿಸುವುದನ್ನು ತಪ್ಪಿಸಿ. ಸಮಯಕ್ಕೆ ಸರಿಯಾಗಿ ಊಟ ಮಾಡಿ.

ಮಕರ ರಾಶಿ

ಈ ದಿನ ಮಕರ ರಾಶಿಯವರಿಗೆ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳು ಇರದಿದ್ದರೂ. ಆದಾಗ್ಯೂ ವೈರಲ್ ಜ್ವರ, ಗಂಟಲು ನೋವು, ಕೀಲು ನೋವು, ಕೆಮ್ಮು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಕೆಲವು ಮಹಿಳೆಯರಿಗೆ ಪಿಸಿಓಡಿಯಂಥ ಸಮಸ್ಯೆ ಕಾಡಬಹುದು. ಮಕ್ಕಳಿಗೆ ಚರ್ಮದ ಅಲರ್ಜಿ ಕಾಡಬಹುದು. ಭಾರವಾದ ವಸ್ತುಗಳನ್ನು ಎತ್ತಬೇಡಿ. ಜಂಕ್ ಫುಡ್‌ನಿಂದ ದೂರವಿರಿ. ಸರಿಯಾದ ಆಹಾರ ಕ್ರಮ ಕಾಪಾಡಿಕೊಳ್ಳಿ.

ಕುಂಭ ರಾಶಿ

ಇಂದು ನಿಮ್ಮ ಆರೋಗ್ಯದ ಮೇಲೆ ಗಮನ ಇರಲಿ, ಕೆಮ್ಮು, ಶೀತದಿಂದ ನೀವು ಬಳಲಬಹುದು. ತಕ್ಷಣವೇ ವೈದ್ಯರನ್ನು ಭೇಟಿ ಮಾಡದಿದ್ದಲ್ಲಿ ಈ ಸಮಸ್ಯೆ ದೀರ್ಘಕಾಲ ನಿಮ್ಮನ್ನು ಕಾಡಬಹುದು. ಜಂಕ್ ಫುಡ್ ಮತ್ತು ಐಸ್ ಕ್ರೀಮ್ ಸೇವಿಸುವುದನ್ನು ತಪ್ಪಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿದರೆ ಆರೋಗ್ಯ ಸುಧಾರಿಸುತ್ತದೆ.

ಮೀನ ರಾಶಿ

ಶ್ವಾಸಕೋಶ ಮತ್ತು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿರುವವರು ಬಹಳ ಜಾಗರೂಕರಾಗಿರಬೇಕು. ಅಗತ್ಯವಿದ್ದಾಗ ತಪ್ಪದೆ ವೈದ್ಯರನ್ನು ಭೇಟಿ ಮಾಡಿ. ಅಧಿಕ ರಕ್ತದೊತ್ತಡ-ಸಮಸ್ಯೆ ಇರುವವರು ಎಚ್ಚರವಾಗಿರಿ. ಅನಾರೋಗ್ಯಕರ ಆಹಾರ ಪದ್ಧತಿಯನ್ನು ತಪ್ಪಿಸಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ. ಜಿಮ್‌ಗೆ ಹೋಗಲು ಬಯಸದಿದ್ದರೆ ನೃತ್ಯ ಅಥವಾ ಯೋಗ ತರಗತಿಗೆ ಸೇರಿ. ಒತ್ತಡದಿಂದ ಹೊರ ಬರಲು ಧ್ಯಾನ, ಯೋಗ ಮಾಡಿ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು,ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ. 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.