ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಆಗಸ್ಟ್ 27: ‌ವೃಶ್ಚಿಕ ರಾಶಿಯ ಮಹಿಳೆಯರಿಗೆ ಮೈಗ್ರೇನ್ ಕಾಡಬಹುದು, ಧನು ರಾಶಿಯವರು ವಾಹನ ಚಲಾಯಿಸುವಾಗ ಎಚ್ಚರ-health horoscope today august 27 2024 predictions health fitness rashi bhavishya check zodiac signs rst ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಆಗಸ್ಟ್ 27: ‌ವೃಶ್ಚಿಕ ರಾಶಿಯ ಮಹಿಳೆಯರಿಗೆ ಮೈಗ್ರೇನ್ ಕಾಡಬಹುದು, ಧನು ರಾಶಿಯವರು ವಾಹನ ಚಲಾಯಿಸುವಾಗ ಎಚ್ಚರ

ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಆಗಸ್ಟ್ 27: ‌ವೃಶ್ಚಿಕ ರಾಶಿಯ ಮಹಿಳೆಯರಿಗೆ ಮೈಗ್ರೇನ್ ಕಾಡಬಹುದು, ಧನು ರಾಶಿಯವರು ವಾಹನ ಚಲಾಯಿಸುವಾಗ ಎಚ್ಚರ

ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಆಗಸ್ಟ್ 27: ಹನ್ನೆರಡು ರಾಶಿಗಳ ಆರೋಗ್ಯ ಭವಿಷ್ಯ ಪ್ರಕಾರ, ವೃಶ್ಚಿಕ ರಾಶಿಯ ಮಹಿಳೆಯರಿಗೆ ಮೈಗ್ರೇನ್ ಕಾಡಬಹುದು, ಧನು ರಾಶಿಯವರು ವಾಹನ ಚಲಾಯಿಸುವಾಗ ಎಚ್ಚರ. ಇನ್ನು 12 ರಾಶಿಗಳ ಆರೋಗ್ಯ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.

ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಆಗಸ್ಟ್ 27
ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಆಗಸ್ಟ್ 27

ಪಂಚಾಂಗ, ರಾಶಿ ಭವಿಷ್ಯಗಳನ್ನು ನೋಡದೆ ದಿನಚರಿ ಆರಂಭಿಸುವವರು ಕಡಿಮೆ. ಹೀಗೆ ಓದುವವರ ಗಮನ ಮೊದಲು ದಿನ ಹೇಗಿರಬಹುದು ಎಂಬುದರ ಕಡೆಗೆ ಹೋಗುತ್ತದೆ. ಅಲ್ಲಿ ಆರೋಗ್ಯ, ಕೆಲಸ, ಹಣಕಾಸು ಇತ್ಯಾದಿ ವಿಚಾರಗಳ ವಿವರಗಳ ಕಡೆಗೆ ಸಹಜವಾಗಿ ಕಣ್ಣು ಹಾಯಿಸುತ್ತಾರೆ. ಅಂತಹ ಕುತೂಹಲ ತಣಿಸುವುದಕ್ಕಾಗಿ ರಾಶಿಗಳ ಗ್ರಹಗತಿಗಳಿಗೆ ಅನುಗುಣವಾಗಿ 12 ರಾಶಿಗಳ ಆರೋಗ್ಯ ಜಾತಕವನ್ನು ಇಲ್ಲಿ ನೀಡಲಾಗಿದೆ.

ಮೇಷ ರಾಶಿ ಆರೋಗ್ಯ ಭವಿಷ್ಯ (Aries Health Horoscope)

ಇಂದು ತಲೆಯ ಮೇಲೆ ಭಾರವಾದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಿ. ಕಾಲು ಮತ್ತು ಕಣ್ಣಿಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳಿರಬಹದು. ವಯಸ್ಸಾದವರು ರೈಲು ಅಥವಾ ಬಸ್ ಹತ್ತುವಾಗ ಜಾಗರೂಕರಾಗಿರಬೇಕು. ರೋಗಗಳಿಂದ ಬಳಲುತ್ತಿರುವವರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಅಗತ್ಯವಿದ್ದರೆ ವೈದ್ಯರನ್ನು ಭೇಟಿ ಮಾಡಿ.

ವೃಷಭ ರಾಶಿ ಆರೋಗ್ಯ ಭವಿಷ್ಯ (Taurus Health Horoscope)

ಮಧುಮೇಹ ಹೊಂದಿರುವ ಮಹಿಳೆಯರು ಇಂದು ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ಗಮನ ನೀಡಬೇಕು. ಆಹಾರದ ಮೇಲೆ ನಿಯಂತ್ರಣ ಹೊಂದಿರುವುದು ಅತ್ಯಗತ್ಯ. ಮಕ್ಕಳು ವೈರಲ್ ಜ್ವರದಿಂದ ಬಳಲಬಹುದು. ಚರ್ಮದ ಅಲರ್ಜಿ ಉಂಟಾಗಬಹುದು. ಗರ್ಭಿಣಿ ಸ್ತ್ರೀಯರು ಹುಷಾರಾಗಿರಿ.

ಮಿಥುನ ರಾಶಿ ಆರೋಗ್ಯ ಭವಿಷ್ಯ (Gemini Health Horoscope)

ವ್ಯಾಯಾಮದೊಂದಿಗೆ ದಿನ ಪ್ರಾರಂಭಿಸಿ. ವಯಸ್ಸಾದವರು ಗಂಟಲು ನೋವಿನ ಸಮಸ್ಯೆ ಎದುರಿಸಬಹುದು. ಹೆಚ್ಚು ನೀರು ಕುಡಿಯಿರಿ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ.

ಕಟಕ ರಾಶಿ ಆರೋಗ್ಯ ಭವಿಷ್ಯ (Cancer Health Horoscope)

ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ. ಗುಡ್ಡಗಾಡು ಪ್ರದೇಶಗಳಿಗೆ ಪ್ರಯಾಣಿಸುವಾಗ ಜಾಗರೂಕರಾಗಿರಿ ಮತ್ತು ಯಾವಾಗಲೂ ನಿಮಗೆ ಬೇಕಾಗುವ ಮಾತ್ರೆಗಳನ್ನು ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ. ವ್ಯಾಯಾಮದಿಂದ ಮಾತ್ರ ಆರೋಗ್ಯ ಸುಧಾರಣೆ ಸಾಧ್ಯ ನೆನಪಿರಲಿ.

ಸಿಂಹ ರಾಶಿ ಆರೋಗ್ಯ ಭವಿಷ್ಯ (Leo Health Horoscope)

ಇಂದು ಆಲ್ಕೋಹಾಲ್ ಮತ್ತು ತಂಬಾಕು ಎರಡನ್ನೂ ಸೇವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಸಾಹಸ ಕ್ರೀಡೆಗಳನ್ನು ತಪ್ಪಿಸಿ, ವಿಶೇಷವಾಗಿ ದಿನದ ಎರಡನೇ ಭಾಗದಲ್ಲಿ ಅಪಾಯಕಾರಿಯಾದ ಮೌಂಟೇನ್ ಬೈಕಿಂಗ್‌ನಂತಹ ಸಾಹಸ ಬೇಡ. ನೀವು ಪ್ರಯಾಣಿಸುವಾಗ ಔಷಧಿಗಳನ್ನು ತೆಗೆದುಕೊಂಡು ಹೋಗಬೇಕು ಮತ್ತು ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಕೆಲವು ಮಹಿಳೆಯರು ಸ್ತ್ರೀರೋಗ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು.

ಕನ್ಯಾ ರಾಶಿ ಆರೋಗ್ಯ ಭವಿಷ್ಯ (Virgo Health Horoscope)

ಇಂದು ಹೃದ್ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಭಾರವಾದ ವಸ್ತುಗಳನ್ನು ಎತ್ತಬೇಡಿ. ಮಧುಮೇಹಿಗಳು ಅಗತ್ಯವಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ತುಲಾ ರಾಶಿ ಆರೋಗ್ಯ ಭವಿಷ್ಯ (Libra Health Horoscope)

ಕೆಲವರಿಗೆ ಕೀಲುನೋವಿನ ಸಮಸ್ಯೆ ಕಾಡಬಹುದು. ಹಿರಿಯರು ನಿದ್ರಾಹೀನತೆಯಿಂದ ಬಳಲಬಹುದು. ಮಹಿಳೆಯರು ಜಾಗರೂಕರಾಗಿರಬೇಕು. ಸಾಕಷ್ಟು ನೀರು ಕುಡಿಯಿರಿ ಮತ್ತು ನೀವು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದನ್ನು ರೂಢಿಸಿಕೊಳ್ಳಿ.

ವೃಶ್ಚಿಕ ರಾಶಿ ಆರೋಗ್ಯ ಭವಿಷ್ಯ (Scorpio Health Horoscope)

ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನೀವು ದೊಡ್ಡ ಕಾಯಿಲೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಕೆಲವು ಮಹಿಳೆಯರು ಮೈಗ್ರೇನ್‌ನಿಂದ ಬಳಲಬಹುದು ಮತ್ತು ಮಕ್ಕಳಿಗೆ ಗಂಟಲಿನ ಸೋಂಕು ಬಾಧಿಸಬಹುದು. ಕೊಬ್ಬು ಮತ್ತು ಎಣ್ಣೆ ಅಂಶ ಇರುವ ಆಹಾರವನ್ನು ಸೇವನೆ ತಪ್ಪಿಸಿ.

ಧನು ರಾಶಿ ಆರೋಗ್ಯ ಜಾತಕ (Sagittarius Health Horoscope)

ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವಿಶೇಷವಾಗಿ ದಿನದ ನಂತರದ ಭಾಗದಲ್ಲಿ ಸಣ್ಣ ಅಡಚಣೆಗಳು ಕಂಡುಬರುತ್ತವೆ. ಹಿರಿಯರ ಉಸಿರಾಟದ ಸಂಬಂಧಿತ ಸಮಸ್ಯೆಗಳಿಗೆ ವೈದ್ಯಕೀಯ ಆರೈಕೆಯ ಅಗತ್ಯವಿರಬಹುದು. ಮಧುಮೇಹ ಇರುವವರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ದ್ವಿಚಕ್ರ ವಾಹನ ಸವಾರರು ಸಂಜೆ ವೇಳೆ ಜಾಗರೂಕರಾಗಿರಬೇಕು.

ಮಕರ ರಾಶಿ ಆರೋಗ್ಯ ಭವಿಷ್ಯ (Capricorn Health Horoscope)

ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಯಕೃತ್ತು ಅಥವಾ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಇಂದು ತೊಂದರೆ ಎದುರಿಸಬಹುದು. ಯೋಗ ಅಥವಾ ಧ್ಯಾನವು ಮಾನಸಿಕವಾಗಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಕೆಲವು ಹಿರಿಯರು ಮೈಕೈ ನೋವು ಅಥವಾ ಕೀಲು ನೋವಿನ ಸಮಸ್ಯೆ ಎದುರಿಸಬಹುದು.

ಕುಂಭ ರಾಶಿ ಆರೋಗ್ಯ ಜಾತಕ (Aquarius Health Horoscope)

ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿರುವವರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಕೆಲವು ಮಕ್ಕಳು ವೈರಲ್ ಜ್ವರದಿಂದ ಬಳಲುವ ಸಾಧ್ಯತೆ ಇದೆ. ದಿನದ ದ್ವಿತೀಯಾರ್ಧದಲ್ಲಿ ನೀವು ಅಧಿಕ ರಕ್ತದೊತ್ತಡದಿಂದ ಬಳಲಬಹುದು.

ಮೀನ ರಾಶಿ ಆರೋಗ್ಯ ಭವಿಷ್ಯ (Pisces Health Horoscope)

ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನ. ಯಾವುದೇ ಪ್ರಮುಖ ವೈದ್ಯಕೀಯ ಸಮಸ್ಯೆ ಎದುರಾಗುವುದಿಲ್ಲ. ಆದಾಗ್ಯೂ, ಕೆಲವು ಮೀನಯವರು ಶೀತ ಕೆಮ್ಮು, ತಲೆನೋವು ಮತ್ತು ವೈರಲ್ ಸೋಂಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದುವ ಸಾಧ್ಯತೆ ಇದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸಿ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.