ಹಲ್ಲುಗಳ ನಡುವೆ ಅಂತರ ಇದೆಯೆಂದು ಚಿಂತೆ ಬೇಡ; ಈ ವಿಚಾರ ತಿಳಿದರೆ ಖುಷಿಯ ಅಲೆಯಲ್ಲಿ ತೇಲೋದು ಗ್ಯಾರೆಂಟಿ!
ಹಲ್ಲುಗಳ ನಡುವೆ ಅಂತರ ಇದ್ದರೆ ಎಷ್ಟು ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ಅವುಗಳ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಷಯಗಳನ್ನು ನೀವಿಲ್ಲಿ ತಿಳಿಯಬಹುದು.

ಕೆಲವರಿಗೆ ಹಲ್ಲುಗಳ ನಡುವೆ ಅಂತರ ಇರುತ್ತದೆ. ಆದರೆ ಕೆಲವರು ಹಲ್ಲುಗಳನ್ನು ಕೂಡಿಸಲು ಟೂತ್ ಕ್ಲಿಪ್ ಹಾಕುತ್ತಾರೆ. ಹಲ್ಲುಗಳ ನಡುವಿನ ಅಂತರ ಕೆಲವರಿಗೆ ಇಷ್ಟವಾಗದೇ ಇರಬಹುದು. ವ್ಯಕ್ತಿಗಳ ಮುಂದೆ ಇರಿಸುಮುರಿಸಿಗೂ ಒಳಗಾಗುತ್ತಾರೆ. ಮುಜುಗರದ ಭಾವನೆಗೂ ಒಳಗಾಗುತ್ತಾರೆ. ಆದರೆ ಅಂತಹ ವ್ಯಕ್ತಿಗಳು ಈ ವಿಷಯ ತಿಳಿದರೆ, ನಿಜವಾಗಿಯೂ ನಿಮಗೆ ನಿಮ್ಮ ಮೇಲಿರುವ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.
ಹೌದು, ಈ ವಿಚಾರ ತಿಳಿದರೆ ಖಂಡಿತವಾಗಿಯೂ ಹಲ್ಲುಗಳ ನಡುವಿನ ಅಂತರ ಇರುವುದನ್ನು ಇಷ್ಟಪಡುತ್ತಾರೆ. ಹಲ್ಲುಗಳ ಮಧ್ಯೆ ಅಂತರ ಇರುವುದಕ್ಕೆ ಅನೇಕ ಕಾರಣಗಳಿವೆ. ಕೆಲವರಿಗಿದು ವಂಶಪಾರಂಪರಿಕವಾಗಿಯೂ ಬರುತ್ತದೆ. ಪೋಷಕರಿಂದ ಮಕ್ಕಳಿಗೆ ಹರಡುತ್ತದೆ. ಮತ್ತು ಸಣ್ಣ ಹಲ್ಲುಗಳು, ಹಲ್ಲುಗಳ ವಿಕಸನ ಮತ್ತು ದವಡೆಗೆ ಹೊಂದಿಕೊಳ್ಳಲು ಅಸಮರ್ಥತೆ ಅಂಶಗಳಿಂದಲೂ ಇದು ಕಾರಣವಾಗಬಹುದು. ಆದರೆ ಇವರು ತುಂಬಾ ಅದೃಷ್ಟವಂತರು!
ಹಲ್ಲುಗಳ ನಡುವೆ ಅಂತರವಿದ್ದರೆ ಎಷ್ಟು ಒಳ್ಳೆಯದೇ?
ಕೆಲವು ಜನರು ತಮ್ಮ ಹಲ್ಲುಗಳ ನಡುವೆ ಅಂತರ ಹೊಂದಲು ಇಷ್ಟಪಡುವುದಿಲ್ಲ. ಅಂತಹ ವ್ಯಕ್ತಿಗಳು ಬಹಿರಂಗವಾಗಿ ನಗುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಏನಾದರೂ ಅಡ್ಡವಿಟ್ಟುಕೊಂಡು ನಗಲು ಪ್ರಾರಂಭಿಸುತ್ತಾರೆ. ಆದರೆ ಹಲ್ಲುಗಳ ನಡುವೆ ಅಂತರವಿದ್ದರೆ, ಅವರು ತುಂಬಾ ಬುದ್ಧಿವಂತರು, ಅದೃಷ್ಟವಂತರು ಎಂದರ್ಥ. ಸಕಾರಾತ್ಮಕ ಯೋಚನೆ ಹೊಂದಿರುವ ವ್ಯಕ್ತಿಗಳು ಎಂದರ್ಥ. ಹಲ್ಲುಗಳ ನಡುವೆ ಅಂತರ ಇದ್ದರೆ, ಯಶಸ್ಸಿಗೆ ಮತ್ತೊಂದು ಹೆಸರೇ ಇವರಾಗಿರುತ್ತಾರೆ.
1. ಬುದ್ಧಿವಂತಿಕೆ ಹೆಚ್ಚು
ಯಾರ ಹಲ್ಲುಗಳ ನಡುವೆ ಇರುತ್ತದೋ ಅವರು ಹೆಚ್ಚಿನ ಬುದ್ಧಿವಂತಿಕೆ ಹೊಂದಿರುತ್ತಾರೆ. ಅಂತಹ ವ್ಯಕ್ತಿಗಳು ವ್ಯವಹಾರ, ಶಿಕ್ಷಣ, ಸೃಜನಶೀಲತೆ ಮತ್ತು ಕಲೆಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ. ತಾವು ಅಂದುಕೊಂಡ ಗುರಿಗಳನ್ನು ಯಶಸ್ವಿಯಾಗಿ ಸಾಗುತ್ತಾರೆ. ತಮ್ಮ ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತಾರೆ.
2. ಅದೃಷ್ಟವಂತರು
ಹಲ್ಲುಗಳ ನಡುವೆ ಅಂತರ ಹೊಂದಿರುವ ವ್ಯಕ್ತಿಗಳು ತುಂಬಾ ಅದೃಷ್ಟವಂತರು. ಅಲ್ಲದೆ, ಅಂತಹವರ ಜೀವನದಲ್ಲಿ ಸಕಾರಾತ್ಮಕ ಘಟನೆಗಳೇ ಹೆಚ್ಚು ಸಂಭವಿಸುತ್ತವೆ. ಅವರ ಕನಸುಗಳೂ ಪೂರೈಸಿಕೊಳ್ಳಲಿದ್ದಾರೆ. ವೈಯಕ್ತಿಕ, ವೃತ್ತಿಪರ ಜೀವನದಲ್ಲಿಯೂ ಯಾವುದೇ ವಿಚಾರದಲ್ಲಿ ಸ್ಪಷ್ಟತೆ ಹೊಂದಿರುತ್ತಾರೆ.
3. ಇತರರಿಗೆ ಸಹಾಯ ಮಾಡಿ
ಹಲ್ಲುಗಳ ನಡುವೆ ಅಂತರ ಇದ್ದರೆ, ಅಂತಹ ವ್ಯಕ್ತಿಗಳು ಯಾವಾಗಲೂ ಇತರರಿಗೆ ಸಹಾಯ ಮಾಡುವ ಗುಣ ಹೊಂದಿರುತ್ತಾರೆ. ಸಂಕಷ್ಟದಲ್ಲಿರುವವರ ಪರವಾಗಿ ನಿಲ್ಲುತ್ತಾರೆ. ಸಂತೋಷದಿಂದ ಸಹಾಯ ಮಾಡುತ್ತಾರೆ. ದಯೆ ತೋರುವ ಗುಣ ಹೊಂದಿರುತ್ತಾರೆ.
4. ಬೇಗನೇ ಯಶಸ್ಸು
ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಅವರಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಇವರು ಯಶಸ್ಸಿಗೆ ಸಮಾನಾರ್ಥಕವಾಗಿರುತ್ತಾರೆ. ಅಲ್ಲದೆ, ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸುವ ತನಕ ಅವರು ನಿದ್ರೆ ಮಾಡುವುದಿಲ್ಲ.
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).