ಬ್ರಹ್ಮ ವಿವಾಹ, ದೈವಿಕ ವಿವಾಹ: ಮದುವೆಯಲ್ಲಿ ಇದೆ ಎಂಟು ವಿಧಗಳು; ಇವುಗಳನ್ನು ಯಾವುದು ಶ್ರೇಷ್ಠ, ಯಾವುದು ಭಯಾನಕ?-hindu culture different types of marriage including brahma vivaha daivika vivaha arsha vivaha rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬ್ರಹ್ಮ ವಿವಾಹ, ದೈವಿಕ ವಿವಾಹ: ಮದುವೆಯಲ್ಲಿ ಇದೆ ಎಂಟು ವಿಧಗಳು; ಇವುಗಳನ್ನು ಯಾವುದು ಶ್ರೇಷ್ಠ, ಯಾವುದು ಭಯಾನಕ?

ಬ್ರಹ್ಮ ವಿವಾಹ, ದೈವಿಕ ವಿವಾಹ: ಮದುವೆಯಲ್ಲಿ ಇದೆ ಎಂಟು ವಿಧಗಳು; ಇವುಗಳನ್ನು ಯಾವುದು ಶ್ರೇಷ್ಠ, ಯಾವುದು ಭಯಾನಕ?

ಒಂದೊಂದು ಧರ್ಮದಲ್ಲಿ ಒಂದೊಂದು ಸಂಪ್ರದಾಯವಿರುತ್ತದೆ. ಮದುವೆ, ಹಬ್ಬದ ವಿಚಾರಗಳಲ್ಲೂ ಪ್ರತ್ಯೇಕ ಶಾಸ್ತ್ರವಿರುತ್ತದೆ. ಆದರೆ ಮದುವೆಗಳಲ್ಲಿ ಕೂಡಾ ಸಾಕಷ್ಟು ವಿಧಗಳಿವೆ. ದೈವಿಕ ಮದುವೆ, ಬ್ರಹ್ಮ ಮದುವೆ, ಅಸುರ ಮದುವೆ ಸೇರಿ ಒಟ್ಟು 8 ವಿಧಗಳಿವೆ.

ಬ್ರಹ್ಮ ವಿವಾಹ, ದೈವ ವಿವಾಹ: ಮದುವೆಯಲ್ಲಿ ಇದೆ ಎಂಟು ವಿಧಗಳು; ಇವುಗಳನ್ನು ಯಾವುದು ಶ್ರೇಷ್ಠ, ಯಾವುದು ಭಯಾನಕ?
ಬ್ರಹ್ಮ ವಿವಾಹ, ದೈವ ವಿವಾಹ: ಮದುವೆಯಲ್ಲಿ ಇದೆ ಎಂಟು ವಿಧಗಳು; ಇವುಗಳನ್ನು ಯಾವುದು ಶ್ರೇಷ್ಠ, ಯಾವುದು ಭಯಾನಕ?

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಮುಖ್ಯ ಹಂತ. ಹಿಂದೂ ಧರ್ಮದಲ್ಲಿ ಮದುವೆಗೆ ಬಹಳ ಮಹತ್ವವಿದೆ. ವಿಭಿನ್ನ ಸಂಪ್ರದಾಯಗಳನ್ನು ಅನುಸರಿಸಿ ಈ ಪವಿತ್ರ ಬಂಧದಿಂದ ದಂಪತಿಗಳು ಒಂದಾಗುತ್ತಾರೆ. ಪ್ರತಿಯೊಂದು ಧರ್ಮವು ತನ್ನದೇ ಆದ ವಿವಾಹ ಸಂಪ್ರದಾಯಗಳನ್ನು ಹೊಂದಿದೆ.

ಸನಾತನ ಧರ್ಮದ ಪ್ರಕಾರ ಎಂಟು ವಿಧದ ವಿವಾಹಗಳಿವೆ. ಆ ಮದುವೆಗಳು ಯಾವುವು ನೋಡೋಣ.

ಬ್ರಹ್ಮ ವಿವಾಹ

ಇದು ಅತ್ಯಂತ ಆದರ್ಶ ಮತ್ತು ಗೌರವಾನ್ವಿತ ವಿವಾಹವೆಂದು ಪರಿಗಣಿಸಲಾಗಿದೆ. ಇದು ಹಿರಿಯರು ಏರ್ಪಡಿಸಿದ ಮದುವೆ. ಈ ವಿವಾಹವನ್ನು ವಧು ಮತ್ತು ವರನ ಕುಟುಂಬದ ಒಪ್ಪಿಗೆಯೊಂದಿಗೆ ನಡೆಸಲಾಗುತ್ತದೆ . ಈ ರೀತಿಯ ಮದುವೆಯಲ್ಲಿ ವಧು ಅಥವಾ ವರನಿಗೆ ಬದಲಾಗಿ ಹಣ ಅಥವಾ ಅದ್ದೂರಿ ಉಡುಗೊರೆಗಳ ವಿನಿಮಯವಿರುವುದಿಲ್ಲ. ಆದ್ದರಿಂದಲೇ ಇದನ್ನು ಸನಾತನ ಧರ್ಮದಲ್ಲಿ ಅತ್ಯುನ್ನತ ವಿವಾಹವೆಂದು ಪರಿಗಣಿಸಲಾಗಿದೆ. ಇಲ್ಲಿ ಒಂದನ್ನೂ ಬಿಡದಂತೆ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಲಾಗುತ್ತದೆ.

ದೈವಿಕ ವಿವಾಹ

ಇದು ದೇವರ ವಿಧಿಗೆ ಸಂಬಂಧಿಸಿದ ಮದುವೆ. ವಧುವಿನ ತಂದೆಯು ನಡೆಸುವ ಯಜ್ಞವನ್ನು ನಿರ್ವಹಿಸುವುದಕ್ಕಾಗಿ ತನ್ನ ಮಗಳನ್ನು ಪುರೋಹಿತರಿಗೆ ದಕ್ಷಿಣೆಯಾಗಿ ನೀಡುವ ಮದುವೆ ಇದು. ತಿರುಪತಿ ದೇವಸ್ಥಾನದಲ್ಲಿ ಹೆಚ್ಚಾಗಿ ದೈವಿಕ ಮದುವೆಗಳು ನಡೆಯುತ್ತವೆ.

ಆರ್ಷ ವಿವಾಹ

ಆರ್ಷಾ ಮದುವೆಯಲ್ಲಿ, ವಧುವಿನ ಪೋಷಕರು ವರನ ತಂದೆಗೆ ಹಸು ಮತ್ತು ಎರಡು ಹೋರಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಅಥವಾ ಅಷ್ಟೇ ಬೆಲೆ ಬಾಳುವ ವಸ್ತುಗಳನ್ನು ನೀಡುತ್ತಾರೆ.

ಗಂಧರ್ವ ವಿವಾಹ

ಗಂಧರ್ವ ವಿವಾಹವನ್ನು ಪ್ರೇಮ ವಿವಾಹಕ್ಕೂ ಹೋಲಿಸಲಾಗುತ್ತದೆ. ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕ ಆಯ್ಕೆಯಿಂದ ದಂಪತಿಗಳು ಮದುವೆಯಾಗುತ್ತಾರೆ. ಈ ಮದುವೆಯ ಅವರ ಪರಸ್ಪರ ಪ್ರೀತಿ ಮತ್ತು ಒಪ್ಪಿಗೆಯ ಆಧಾರದ ಮೇಲೆ ನಡೆಸಲಾಗುತ್ತದೆ. ಇಲ್ಲಿ ಪೋಷಕರ ಒಪ್ಪಿಗೆಯನ್ನು ಪರಿಗಣಿಸುವುದಿಲ್ಲ.

ಪ್ರಜಾಪತ್ಯ ವಿವಾಹ

ಈ ರೀತಿಯ ವಿವಾಹದಲ್ಲಿ ಕೂಡಾ ಎಲ್ಲಾ ರೀತಿಯ ಶಾಸ್ತ್ರ, ಸಂಪ್ರದಾಯಗಳನ್ನು ಮಾಡಲಾಗುತ್ತದೆ, ಇದು ಬ್ರಹ್ಮ ವಿವಾಹವನ್ನು ಹೋಲುತ್ತದೆ. ನನ್ನ ಮಗಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಿ, ನಿಮ್ಮ ಪ್ರತಿ ಧಾರ್ಮಿಕ, ಲೌಖಿಕ ಕಾರ್ಯಗಳಲ್ಲಿ ಜೊತೆಯಾಗಿ ತೊಡಗಿಸಿಕೊಳ್ಳುವಂತೆ ವಧುವಿನ ತಂದೆ, ವರನ ಬಳಿ ಕೇಳಿಕೊಳ್ಳುತ್ತಾರೆ.

ಅಸುರ ವಿವಾಹ

ಅಸುರ ವಿವಾಹವು ಅತ್ಯಂತ ವಿಮರ್ಶಾತ್ಮಕವಾಗಿದೆ. ಈ ಮದುವೆಯಲ್ಲಿ ವಧು ಅಥವಾ ವರನು ತಮ್ಮ ಸಂಗಾತಿಯನ್ನು ಪಡೆಯಲು ದೊಡ್ಡ ಮೊತ್ತದ ಹಣವನ್ನು ಪಾವತಿಸುತ್ತಾರೆ. ಹಣ ಕೊಟ್ಟು ವಧು ಅಥವಾ ವರನನ್ನು ಖರೀದಿಸಿ ಮದುವೆ ಮಾಡುತ್ತಾರೆ. ಈ ರೀತಿಯ ಮದುವೆಗಳು ಸ್ವೀಕಾರಾರ್ಹವಲ್ಲ.

ರಾಕ್ಷಸ ವಿವಾಹ

ವಧು ಅಥವಾ ವರನ ಅಪಹರಣ ಮಾಡಿ ಬಲವಂತವಾಗಿ ಮಾಡಿಕೊಳ್ಳುವ ವಿವಾಹವನ್ನು ರಾಕ್ಷಸ ಮದುವೆ ಎನ್ನುತ್ತಾರೆ. ಅವರ ಕುಟುಂಬ ಮತ್ತು ಸಂಬಂಧಿಕರ ಮೇಲೆ ಹಿಂಸಾತ್ಮಕ ದಾಳಿ ಮಾಡಿ ಒಪ್ಪಿಗೆ ಪಡೆಯದೆ ಮಾಡಿಕೊಳ್ಳುವ ಮದುವೆ ಆಗಿದೆ.

ಪೈಶಾಚಿಕ ವಿವಾಹ

ಇದನ್ನು ಮದುವೆಗಳಲ್ಲಿ ಅತಿ ಕ್ರೂರ ಕೆಟ್ಟ ರೂಪವೆಂದು ಪರಿಗಣಿಸಲಾಗಿದೆ. ವಧು ಅಥವಾ ವರನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಒಪ್ಪಿಗೆಯಿಲ್ಲೆ ಮಾಡಿಕೊಳ್ಳುವ ವಿವಾಹವಾಗಿದೆ. ವಧು ಅಥವಾ ವರನನ್ನು ವಂಚನೆಯಿಂದ ಮದುವೆಯಾಗಲಾಗುತ್ತದೆ. ಈ ರೀತಿಯ ಮದುವೆಯು ಬಹಳಷ್ಟು ಟೀಕೆಗಳನ್ನು ಹೊಂದಿದೆ.

ಇವುಗಳಲ್ಲದೆ ಅಂತರ್ಜಾತಿ ವಿವಾಹಗಳು ಮತ್ತು ಸ್ವಯಂವರವೂ ಇವೆ. ಸೀತಾದೇವಿಯೊಂದಿಗೆ ಶ್ರೀರಾಮನ ವಿವಾಹವು ಸ್ವಯಂವರದಲ್ಲಿ ನಡೆಯಿತು. ಅಂತರ್ಜಾತಿ ವಿವಾಹವು ವಿವಿಧ ಜಾತಿಗಳಿಗೆ ಸೇರಿದ ವಧು-ವರರ ನಡುವಿನ ವಿವಾಹವಾಗಿದೆ. ಕೆಲವರು ಇದನ್ನು ಒಪ್ಪಿದರೆ, ಕೆಲವರು ಖಂಡಿಸುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.