ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಷ್ಟಾರ್ಥ ಸಿದ್ಧಿ, ಜಾತಕದಲ್ಲಿ ಶನಿ ದೋಷ ನಿವಾರಣೆಗೆ ಮಾಡುವ ವ್ರತವಿದು; ಏಳು ಶನಿವಾರದ ವ್ರತಾಚರಣೆಯ ವಿಧಿ ವಿಧಾನಗಳು ಹೀಗಿವೆ

ಇಷ್ಟಾರ್ಥ ಸಿದ್ಧಿ, ಜಾತಕದಲ್ಲಿ ಶನಿ ದೋಷ ನಿವಾರಣೆಗೆ ಮಾಡುವ ವ್ರತವಿದು; ಏಳು ಶನಿವಾರದ ವ್ರತಾಚರಣೆಯ ವಿಧಿ ವಿಧಾನಗಳು ಹೀಗಿವೆ

7 ಶನಿವಾರ ವ್ರತವನ್ನು ಮಾಡಿದರೆ ಇಷ್ಟಾರ್ಥ ಸಿದ್ದಿ ಹಾಗೂ ಜಾತಕದಲ್ಲಿ ಶನಿ ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ. 7 ಶನಿವಾರದ ವ್ರತವನ್ನು ಯಾರು ಆಚರಿಸಬೇಕು? ವ್ರತಾಚರಣೆಯ ನಿಯಮಗಳೇನು? ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ವಿವರಿಸಿದ್ದಾರೆ.

ಇಷ್ಟಾರ್ಥ ಸಿದ್ಧಿ, ಜಾತಕದಲ್ಲಿ ಶನಿ ದೋಷ ನಿವಾರಣೆ ವ್ರತ; ಏಳು ಶನಿವಾರದ ವ್ರತಾಚರಣೆಯ ವಿಧಿ ವಿಧಾನಗಳು
ಇಷ್ಟಾರ್ಥ ಸಿದ್ಧಿ, ಜಾತಕದಲ್ಲಿ ಶನಿ ದೋಷ ನಿವಾರಣೆ ವ್ರತ; ಏಳು ಶನಿವಾರದ ವ್ರತಾಚರಣೆಯ ವಿಧಿ ವಿಧಾನಗಳು

ಹಿಂದೂ ಧರ್ಮದಲ್ಲಿ ಶನಿವಾರದ ವ್ರತಾಚರಣೆಗೆ ಬಹಳ ಮಹತ್ವವಿದೆ. ಈ ದಿನ ಶ್ರೀನಿವಾಸ ಮತ್ತು ಶನಿ ದೇವರನ್ನು ಪೂಜಿಸಲಾಗುತ್ತದೆ. ಹಾಗೇ ಶನಿವಾರದ ವ್ರತವನ್ನು ಮಾಡುವುದರಿಂದ ಮನಸ್ಸಿನ ಇಚ್ಚೆಗಳೆಲ್ಲವೂ ಈಡೇರುತ್ತದೆ ಎಂಬ ನಂಬಿಕೆಯಿದೆ. 7 ಶನಿವಾರ ವ್ರತ ಆಚರಿಸಿದರೆ ಜಾತಕದಲ್ಲಿರುವ ಶನಿ ದೋಷ ಕೂಡಾ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಏಳು ಶನಿವಾರ ವ್ರತವನ್ನು ಯಾರ ಮಾಡಬಹುದು? ಶನಿವಾರದ ವ್ರತದಲ್ಲಿ ಪಾಲಿಸಬೇಕಾದ ನಿಯಮಗಳೇನು? ಎಂದು ಖ್ಯಾತಿ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ವಿವರಿಸಿದ್ದಾರೆ.

7 ಶನಿವಾರ ಉಪವಾಸ ವ್ರತವನ್ನು ಯಾರು ಮಾಡಬೇಕು?

ಏಳು ಶನಿವಾರ ಉಪವಾಸ ವ್ರತವನ್ನು ವೃಶ್ಚಿಕದಲ್ಲಿ ಶನಿ, ಅರ್ಧಾಷ್ಟಮ ಶನಿ, ಮಹರ್ದಶದಲ್ಲಿ ಶನಿ, ಜಾತಕದಲ್ಲಿ ಶನಿ ಅಂತರದಶಾ, ಶನಿ ವಿದಶಾ, ಮೇಷ, ಕಟಕ, ಸಿಂಹ, ಕನ್ಯಾ, ವೃಶ್ಚಿಕ, ಧನು, ಕುಂಭ, ಮೀನ ರಾಶಿಯ ಲಗ್ನದಲ್ಲಿ ಶನಿ ಇರುವವರು ಏಳು ಶನಿವಾರ ಉಪವಾಸ ವ್ರತವನ್ನು ಮಾಡುವುದು ತುಂಬಾ ಒಳ್ಳೆಯದು. ಅಷ್ಟೇ ಅಲ್ಲದೇ ಪುಷ್ಯ, ಅನುರಾಧ, ಉತ್ತರಾಭದ್ರ ನಕ್ಷತದವರು ಸಹ ಈ ವ್ರತವನ್ನು ಆಚರಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ನೀವು 7 ಶನಿವಾರಗಳ ವ್ರತವನ್ನು ಮಾಡಲು ಬಯಸಿದರೆ ಶನಿವಾರದಿಂದಲೇ ವ್ರತವನ್ನು ಪ್ರಾರಂಭಿಸಬೇಕು. ಶನಿವಾರ ಏಕಾದಶಿ, ತ್ರಯೋದಶಿ ಅಥವಾ ಹುಣ್ಣಿಮೆ ಇದ್ದರೆ ಒಳ್ಳೆಯದು. ಮಾಸ ಶಿವರಾತ್ರಿ, ಶನಿವಾರದಂದು ಪುಷ್ಯ, ಅನುರಾಧ, ಉತ್ತರಾಭದ್ರ ಮತ್ತು ಶ್ರವಣ ನಕ್ಷತ್ರಗಳಿದ್ದರೆ ವೃತವನ್ನು ಪ್ರಾರಂಭಿಸಲು ಒಳ್ಳೆಯ ದಿನವಾಗಿರುತ್ತದೆ. ಅದರ ಜೊತೆಗೆ ಶನಿವಾರ ಅಮಾವಾಸ್ಯೆ ತಿಥಿ ಇದ್ದರೆ ಆ ದಿನವೂ ವ್ರತವನ್ನು ಪ್ರಾರಂಭಿಸುವುದು ಉತ್ತಮ.

7 ಶನಿವಾರದ ಉಪವಾಸ ವ್ರತ ನಿಯಮಗಳು

ಯಾವುದೇ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಉಪವಾಸ ಮಾಡಬಹುದು. ಶನಿವಾರ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಬೇಕು. 7 ಶನಿವಾರದಂದು ತುಳಸಿ ಮಾಲೆಯನ್ನು ಧರಿಸಬೇಕು. ಮಧ್ಯಾಹ್ನ ಊಟ ಮಾಡಬಾರದು ಮತ್ತು ಹಗಲಿನಲ್ಲಿ ಮಲಗಬಾರದು. ಶನಿವಾರ ಹಣೆಗೆ ತಿಲಕವನ್ನು ಧರಿಸಬೇಕು. 7 ರಿಂದ ಮುಂಜಾನೆ ಪೂಜೆಯನ್ನು ಪ್ರಾರಂಭಿಸಬೇಕು. ಹಾಗೆಯೇ ಸಂಜೆಯ ಪೂಜೆಯನ್ನು 7 ಗಂಟೆಗೆ ಪ್ರಾರಂಭಿಸಬೇಕು.

ಆ ದಿನ ಬೆಳಗಿನ ಪೂಜೆಗೆ ಕಪ್ಪು ಬಟ್ಟೆ ಧರಿಸಿಬೇಕು. ಸಂಜೆಯ ಪೂಜೆಗೆ ಹಳದಿ ಬಟ್ಟೆಯನ್ನು ಧರಿಸಬೇಕು. ಬೆಳಗಿನ ಪೂಜೆಗಾಗಿ, ಭಗವಂತನಿಗೆ ಎಳ್ಳು ಮತ್ತು ಬೆಲ್ಲ ಸೇರಿಸಿ ತಯಾರಿಸಿದ ಏಳು ಉಂಡೆಗಳನ್ನು ಅರ್ಪಿಸಬೇಕು. ಬೆಳಗ್ಗೆ ಅಥವಾ ಮಧ್ಯಾಹ್ನ ಊಟ ಮಾಡಬಾರದು. ಸಂಜೆಯ ಉಪವಾಸಕ್ಕೆ ಕಡಲೆಹಿಟ್ಟಿನಿಂದ ತಯಾರಿಸಿದ ಏಳು ಉಂಡೆಗಳನ್ನು ದೇವರಿಗೆ ನೈವೇದ್ಯ ಮಾಡಬೇಕು. ಪುರುಷರು ಯಾವುದೇ ಅಡೆತಡೆಗಳಿಲ್ಲದೆ 7 ಶನಿವಾರಗಳನ್ನು ಆಚರಿಸಬೇಕು. ಮಹಿಳೆಯರಿಗೆ ಯಾವುದೇ ವಾರ ಅಡ್ಡಿ ಆದಲ್ಲಿ ಮುಂದಿನ ವಾರ ಮತ್ತೆ ವ್ರತ ಆರಂಭಿಸಬಹುದು. ಸಂಜೆ ವ್ರತ ಮುಗಿದ ತಕ್ಷಣ ಅತಿಥಿಯನ್ನು ಕರೆದು ಊಟ ಬಡಿಸಬೇಕು. ಬಾಳೆ ಎಲೆಯಲ್ಲಿ ಆಹಾರ ಬಡಿಸಿದರೆ ಉತ್ತಮ. ಮೊದಲು ಅತಿಥಿಗೆ ದೇವರ ತೀರ್ಥ ಮತ್ತು ಪ್ರಸಾದವನ್ನು ನೀಡಬೇಕು. ನಂತರ ತಾವು ಊಟ ಮಾಡಬೇಕು. 7 ಶನಿವಾರ ಇದೇ ರೀತಿ ವ್ರತ ಆಚರಿಸಿ ಏಳು ಮಹಿಳೆಯರಿಗೆ ಏಳು ವ್ರತ ಪುಸ್ತಕಗಳನ್ನು ಕಾಣಿಕೆಯಾಗಿ ಅರ್ಪಿಸಬೇಕು. ಅರಿಶಿನ, ಕುಂಕುಮ ಮತ್ತು ದಕ್ಷಿಣೆಯೊಂದಿಗೆ ತಾಂಬೂಲ ನೀಡಬೇಕು.

ಬೆಳಗಿನ ಆಚರಣೆ

1) ಸ್ನಾನ

2) ಬೆಳಗ್ಗೆ: ಕಪ್ಪು ಬಟ್ಟೆ, ತಿಲಕ ಮತ್ತು ತುಳಸಿ ಮಾಲೆ.

3) ಪೂಜೆಯನ್ನು ಬೆಳಿಗ್ಗೆ 6 ಗಂಟೆಗೆ ಮೊದಲು ಮತ್ತು ಸಂಜೆ 7 ಕ್ಕೆ ಮೊದಲು ಮಾಡಬೇಕು.

4) ನೈವೇದ್ಯಕ್ಕಾಗಿ ಎಳ್ಳಿನ ಉಂಡೆ ತಯಾರಿಸಬೇಕು.

‌5) ಮಧ್ಯಾಹ್ನದ ಊಟ ಬೇಡ.

6) ಕಪ್ಪು ದ್ರಾಕ್ಷಿ 1 1/4 ಕೆ.ಜಿ

7) 7 ಹಣತೆಯಲ್ಲಿ 7 ಬತ್ತಿಗಳನ್ನು ಹೊಂದಿರುವ 7 ದೀಪಗಳನ್ನು ಮಾಡಬೇಕು.

8) ಎಳ್ಳೆಣ್ಣೆಯಿಂದ ದೀಪ ಹಚ್ಚಬೇಕು.

9) ಸಂಜೆ ಅತಿಥಿಯನ್ನು ಊಟಕ್ಕೆ ಆಹ್ವಾನಿಸಬೇಕು. ಬೆಳಗ್ಗೆ ಅಗತ್ಯವಿಲ್ಲ.

10) ವೆಂಕಟೇಶ್ವರ ಸುಪ್ರಭಾತಂ, ಶ್ರೀನಿವಾಸ ದಂಡಕ, ಗೋವಿಂದ ನಾಮಗಳು, ವೆಂಕಟೇಶ್ವರ ಸ್ತೋತ್ರ, ವೆಂಕಟೇಶ್ವರ ಅಷ್ಟೋತ್ತರ ಶತನಾಮ ಸ್ತೋತ್ರ, ಶನಿಧ್ಯ ಶ್ಲೋಕ, ಶನಿ ಸ್ತೋತ್ರ, ಶನಿ ಸಪ್ತನಾಮಾವಳಿ ಪಠಿಸಬೇಕು.

11) 7 ಅಗರಬತ್ತಿಗಳನ್ನು ಹಚ್ಚಬೇಕು

12) ಬೆಳಗಿನ ಪೂಜೆಯ ನೈವೇದ್ಯಕ್ಕೆ ತೆಂಗಿನಕಾಯಿ ಬಳಸಬೇಕು.

13) ಬೇಯಿಸಿದ ಆಹಾರವನ್ನು ಸ್ವೀಕರಿಸಬಾರದು ಎಂದು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಅವರು ಬೆಳಗಿನ ಆಚರಣೆಯ ಬಗ್ಗೆ ತಿಳಿಸಿದ್ದಾರೆ.

ಸಂಜೆ ಆಚರಣೆ

1) ಸ್ನಾನ

2) ಹಳದಿ ಬಟ್ಟೆ, ತಿಲಕ ಮತ್ತು ತುಳಸಿ ಮಾಲೆ ಧರಿಸಬೇಕು.

3) ಸಂಜೆಯ ಪೂಜೆಯನ್ನು 7 ಗಂಟೆಗೆ ಮಾಡಬೇಕು.

4) ಕಡ್ಲೆ ಹಿಟ್ಟು ಮತ್ತು ಸಕ್ಕರೆಯ ಏಳು ಉಂಡೆಗಳನ್ನು ತಯಾರಿಸಬೇಕು.

5) 7 ಬಾಳೆಹಣ್ಣುಗಳನ್ನು ದೇವರಿಗೆ ಅರ್ಪಿಸಬೇಕು

6) ಎರಡು ಹಣತೆಯಲ್ಲಿ 7 ಕಪ್ಪು ಬತ್ತಿಗಳೊಂದಿಗೆ ದೀಪಾರಾಧನೆ ಮಾಡಬೇಕು.

7) ಎಳ್ಳೆಣ್ಣೆಯಿಂದ ದೀಪ ಹಚ್ಚಬೇಕು.

8) ವೆಂಕಟೇಶ್ವರ ಸ್ವಾಮಿ ಅಷ್ಟೋತ್ತರ, ಶ್ರೀ ಲಕ್ಷ್ಮೀ ಪದ್ಮಾವತಿ ಅಷ್ಟೋತ್ತರ, ಮಂಗಳ ಆರತಿ, ವ್ರತಕಥೆಯನ್ನು ಪಠಿಸಬೇಕು.

9) ಸಾಂಬ್ರಾಣಿ ಧೂಪದ 7 ಅಗರಬತ್ತಿಗಳನ್ನು ಬೆಳಗಿಸಬೇಕು.

10) ನೈವೇದ್ಯ ಇಡಬೇಕು

11) ಸಂಜೆಯ ಪೂಜೆಗೆ ಅಕ್ಷತೆ, ಹಳದಿ ಹೂವುಗಳನ್ನು ಬಳಸಬೇಕು.

12) ಪೂಜೆ ನಂತರ ಭೋಜನಕ್ಕಾಗಿ ಅತಿಥಿಯನ್ನು ಆಹ್ವಾನಿಸಬೇಕು.

13) ಅತಿಥಿಗಳಿಗೆ ಪ್ರಸಾದ, ಭೋಜನ ಬಡಿಸಿದ ಬಳಿಕ ತಾವು ಊಟ ಮಾಡಬೇಕು.

7 ಶನಿವಾರ ವ್ರತ ಮಾಡ ಬಯಸುವವರು ಸೂಕ್ತ ಜ್ಯೋಷಿತಿಗಳ ಬಳಿ ಮಾಹಿತಿ ಪಡೆದು ನಂತರ ಆಚರಿಸಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.