ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಾಲಿಗ್ರಾಮ ಎಂದರೇನು? ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದ ಈ ದೈವಿಕ ಶಿಲೆಯನ್ನು ಪೂಜಿಸುವುದರಿಂದ ಏನು ಫಲ?

ಸಾಲಿಗ್ರಾಮ ಎಂದರೇನು? ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದ ಈ ದೈವಿಕ ಶಿಲೆಯನ್ನು ಪೂಜಿಸುವುದರಿಂದ ಏನು ಫಲ?

ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದ ಸಾಲಿಗ್ರಾಮ ಶಿಲೆಯನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ನಕಾರಾತ್ಮಕ ಶಕ್ತಿಗಳು ತೊಲಗಿ ಸಕಾರಾತ್ಮಕತೆ ತುಂಬುತ್ತದೆ. ಇದನ್ನು ಸ್ಪರ್ಶಿಸಿ ಪೂಜಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಸಾಲಿಗ್ರಾಮ ಎಂದರೇನು? ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದ ಈ ದೈವಿಕ ಶಿಲೆಯನ್ನು ಪೂಜಿಸುವುದರಿಂದ ಏನು ಫಲ?
ಸಾಲಿಗ್ರಾಮ ಎಂದರೇನು? ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದ ಈ ದೈವಿಕ ಶಿಲೆಯನ್ನು ಪೂಜಿಸುವುದರಿಂದ ಏನು ಫಲ?

ಹಿಂದೂಗಳ ಮನೆಯಲ್ಲಿ ದೇವರ ಫೋಟೋವನ್ನು ಇಟ್ಟು ಪೂಜಿಸುವುದು ಸಾಮಾನ್ಯ. ಈ ದೇವರ ಫೋಟೋಗಳೊಂದಿಗೆ ಕೆಲವೊಂದು ವಿಶಿಷ್ಟವಾದ ವಸ್ತುಗಳನ್ನು ಕೂಡಾ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಲಾಗುವುದು. ಅಂಥ ವಸ್ತುಗಳಲ್ಲಿ ಸಾಲಿಗ್ರಾಮ ಕೂಡಾ ಒಂದು. ಹಿಂದೂ ಸಾಂಪ್ರದಾಯಿಕ ಕುಟುಂಬಗಳಲ್ಲಿ ಸಾಲಿಗ್ರಾಮವನ್ನು ಪೂಜಿಸಲಾಗುತ್ತದೆ. ಸಾಲಿಗ್ರಾಮವು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ.

ದೈವಿಕ ಶಕ್ತಿ ಹೊಂದಿರುವ ಶಿಲೆ

ಸಾಲಿಗ್ರಾಮವು ಎಲ್ಲಿ ಬೇಕೆಂದರಲ್ಲಿ ದೊರೆಯುವುದಿಲ್ಲ. ಹಿಮಾಲಯದಲ್ಲಿ ಹರಿಯುವ ಕೆಲವೊಂದು ನದಿಗಳ ತೀರದಲ್ಲಿ ಮಾತ್ರ ಅವು ಕಂಡುಬರುತ್ತವೆ. ಅದರಲ್ಲಿ ಹಲವು ವಿಧಗಳಿವೆ. ನೇಪಾಳದ ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮಗಳು ಅತ್ಯಂತ ಪವಿತ್ರವಾಗಿವೆ. ಇದು ನೋಡಲು ಬಹಳ ಮೃದುವಾದ, ನುಣುಪಾದ ಕಪ್ಪು ಕಲ್ಲಿನಂತೆ ಕಂಡುಬರುತ್ತದೆ. ಇದಕ್ಕೆ ಬಹಳ ದೈವಿಕ ಶಕ್ತಿ ಇದೆ. ಆದ್ದರಿಂದ ಇದನ್ನು ದೇವರ ಮನೆಯಲ್ಲಿಟ್ಟು ಪೂಜಿಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಆಗಮಿಸುತ್ತದೆ.

ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ. ಏನೇ ವಾಸ್ತು ದೋಷಗಳಿದ್ದರೂ ಎಲ್ಲವೂ ನಿವಾರಣೆ ಆಗುತ್ತದೆ ಎಂದು ನಂಬಲಾಗಿದೆ. ಆದರೆ ಸಾಲಿಗ್ರಾಮವನ್ನು ಮನೆಗೆ ತಂದು ಪೂಜೆ ಮಾಡಲು ಒಂದು ನಿರ್ದಿಷ್ಟ ಕ್ರಮ ಇದೆ. ಹೇಗೆ ಬೇಕೆಂದರೆ ಅದನ್ನು ಪೂಜಿಸಲು, ಇಡಲು ಸಾಧ್ಯವಿಲ್ಲ. ಅದನ್ನು ಪೂಜಿಸಲು ನಿರ್ದಿಷ್ಟ ಪೂಜಾ ವಿಧಿ ವಿಧಾನಗಳನ್ನು ಅನುಸರಿಸಬೇಕು. ಇಲ್ಲವಾದಲ್ಲಿ ಒಳಿತಿಗಿಂತ ಕೆಡುಕೇ ಹೆಚ್ಚಾಗುತ್ತದೆ.

25 ವಿಧದ ಸಾಲಿಗ್ರಾಮಗಳಿವೆ

ಸಾಲಿಗ್ರಾಮಗಳನ್ನು ಬಣ್ಣ, ಚಕ್ರಗಳು ಮತ್ತು ಗಾತ್ರದಿಂದ ನಿರ್ಧರಿಸಲಾಗುತ್ತದೆ. ಸಾಲಿಗ್ರಾಮಗಳಲ್ಲಿ ಸುಮಾರು 25 ವಿಧಗಳಿವೆ. ಎರಡು ಚಕ್ರಗಳಿದ್ದರೆ ಲಕ್ಷ್ಮೀನಾರಾಯಣ, ಮೂರು ಚಕ್ರಗಳಿದ್ದರೆ - ಅಚ್ಯುತ, ನಾಲ್ಕು ಚಕ್ರಗಳನ್ನು - ಜನಾರ್ಧು, ಐದು ಚಕ್ರಗಳು - ವಾಸುದೇವ, ಆರು ಚಕ್ರಗಳು - ಪ್ರದ್ಯುಮ್ನ, ಏಳು ಚಕ್ರಗಳು - ಪರಸ್ಪರ ಕ್ರಿಯೆ , ಎಂಟು ಚಕ್ರಗಳು - ಪುರುಷೋತ್ತಮ , ಒಂಬತ್ತು ಚಕ್ರಗಳು - ನವವ್ಯೂಹ, ಹತ್ತು ಚಕ್ರಗಳು - ದಶಾವತಾರ, ಹನ್ನೊಂದು ಚಕ್ರಗಳು - ಅನಿರುದ್ಧ, ಹನ್ನೆರಡು ಚಕ್ರಗಳ ಸಾಲಿಗ್ರಾಮವನ್ನು- ದ್ವಾದಶಾತ್ಮ ಹನ್ನೆರಡು ಚಕ್ರಗಳಿಗಿಂತ ಹೆಚ್ಚು ಇದ್ದರೆ ಅದನ್ನು ಅನಂತಮೂರ್ತಿ ಎಂದು ಕರೆಯಲಾಗುತ್ತದೆ.

ಸ್ಕಂದ ಪುರಾಣ, ಬ್ರಹ್ಮ ಪುರಾಣ, ವರಾಹ ಪುರಾಣ, ಗರುಡ ಪುರಾಣ ಮುಂತಾದ ಅನೇಕ ಪುರಾಣಗಳಲ್ಲಿ ಸಾಲಿಗ್ರಾಮಗಳ ಉಲ್ಲೇಖವಿದೆ. ಸಾಲಿಗ್ರಾಮವನ್ನು ಪೂಜಿಸುವ ಪದ್ಧತಿ ಇದ್ದವರು ಮಾತ್ರ ಅದನ್ನು ಕೊಂಡು ಪೂಜಿಸಬೇಕು. ಪ್ರತಿದಿನ ನೇವೇದ್ಯವಿಟ್ಟು ಪೂಜೆ ಮಾಡಬೇಕು. ಸಾಲಿಗ್ರಾಮವನ್ನು ನೋಡುವುದು, ಸ್ಪರ್ಶಿಸುವುದು ಮತ್ತು ಪೂಜಿಸುವುದು ಅಂತ್ಯವಿಲ್ಲದ ಪುಣ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಸೂಕ್ತ ವಿಧಿ ವಿಧಾನದ ಮೂಲಕ ಸಾಲಿಗ್ರಾಮವನ್ನು ಪೂಜಿಸುವ ಭಕ್ತರು ಮರಣಾ ನಂತರ ಮೋಕ್ಷ ಪಡೆಯುತ್ತಾರೆ. ಸಾಲಿಗ್ರಾಮವನ್ನು ದರ್ಶನ ಮಾಡಿ ನಮಸ್ಕರಿಸಿದರೆ ಸಕಲ ಪಾಪಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಹಿಂದೂಗಳಲ್ಲಿ ಮನೆ ಮಾಡಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.