ಮನೆಯ ಯಾವ ಸ್ಥಳದಲ್ಲಿ ಹಲ್ಲಿಗಳನ್ನು ನೋಡಿದರೆ ಏನು ಸಂಕೇತ? ಕಪ್ಪು ಹಲ್ಲಿಯನ್ನು ನೋಡುವುದು ಏನನ್ನು ಸೂಚಿಸುತ್ತದೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯ ಯಾವ ಸ್ಥಳದಲ್ಲಿ ಹಲ್ಲಿಗಳನ್ನು ನೋಡಿದರೆ ಏನು ಸಂಕೇತ? ಕಪ್ಪು ಹಲ್ಲಿಯನ್ನು ನೋಡುವುದು ಏನನ್ನು ಸೂಚಿಸುತ್ತದೆ?

ಮನೆಯ ಯಾವ ಸ್ಥಳದಲ್ಲಿ ಹಲ್ಲಿಗಳನ್ನು ನೋಡಿದರೆ ಏನು ಸಂಕೇತ? ಕಪ್ಪು ಹಲ್ಲಿಯನ್ನು ನೋಡುವುದು ಏನನ್ನು ಸೂಚಿಸುತ್ತದೆ?

ಮನೆಯಲ್ಲಿ ಹಲ್ಲಿಗಳನ್ನು ನೋಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಈ ಹಲ್ಲಿಗಳು ಶುಭ, ಅಶುಭ ಸಂಕೇತಗಳನ್ನು ನಮಗೆ ನೀಡುತ್ತದೆ. ಮನೆಯಲ್ಲಿ ಕಪ್ಪು ಹಲ್ಲಿಯನ್ನು ನೋಡಿದರೆ ಏನು ಅರ್ಥ? ಜೋಡಿ ಹಲ್ಲಿಗಳನ್ನು ಕಂಡರೆ ಯಾವುದರ ಸಂಕೇತ? ಇಲ್ಲಿದೆ ಮಾಹಿತಿ.

ಮನೆಯ ಯಾವ ಸ್ಥಳದಲ್ಲಿ ಹಲ್ಲಿಗಳನ್ನು ನೋಡಿದರೆ ಏನು ಸಂಕೇತ? ಕಪ್ಪು ಹಲ್ಲಿಯನ್ನು ನೋಡುವುದು ಏನನ್ನು ಸೂಚಿಸುತ್ತದೆ?
ಮನೆಯ ಯಾವ ಸ್ಥಳದಲ್ಲಿ ಹಲ್ಲಿಗಳನ್ನು ನೋಡಿದರೆ ಏನು ಸಂಕೇತ? ಕಪ್ಪು ಹಲ್ಲಿಯನ್ನು ನೋಡುವುದು ಏನನ್ನು ಸೂಚಿಸುತ್ತದೆ?

ಬಹುತೇಕ ಎಲ್ಲರ ಮನೆಯಲ್ಲಿ ಹಲ್ಲಿಗಳು ಕಾಣಸಿಗುತ್ತವೆ. ಕೆಲವರು ಆ ಹಲ್ಲಿಗಳನ್ನು ನೋಡಿ ಸುಮ್ಮನಾದರೆ, ಇನ್ನೂ ಕೆಲವರು ಅದನ್ನು ಓಡಿಸುತ್ತಾರೆ, ಅದು ಮೈ ಮೇಲೆ ಬಿದ್ದರೆ ಅಶುಭ ಎಂದು ಭಯಪಡುತ್ತಾರೆ. ಇವೆಲ್ಲದಕ್ಕೂ ಮುನ್ನ ನೀವು ಈ ಹಲ್ಲಿಗಳ ಬಗ್ಗೆ ಕೆಲವೊಂದು ವಿಚಾರಗಳನ್ನು ಗಮನದಲ್ಲಿಡಬೇಕು.

ಜ್ಯೋತಿಷ್ಯದ ಪ್ರಕಾರ ಮನೆಯಲ್ಲಿ ಹಲ್ಲಿಗಳ ವಾಸವು ಶುಭ, ಅಶುಭ ಸಂಕೇತಗಳನ್ನು ಸೂಚಿಸುತ್ತದೆ. ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುವುದು, ಅಥವಾ ಕೆಲವು ಸ್ಥಳಗಳಲ್ಲಿ ಅದು ಕಾಣಿಸಿಕೊಳ್ಳುವುದು ಹಾಗೇ ನಿಮ್ಮ ಮೇಲೆ ಹಲ್ಲಿ ಬೀಳುವುದು ನಿಮಗೆ ಏನನ್ನೋ ಸೂಚಿಸುತ್ತದೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ಮನೆಯಲ್ಲಿ ಹಲ್ಲಿಯನ್ನು ನೋಡುವುದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಮನೆಗೆ ಸಂಪತ್ತು ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಕೆಲವೊಂದು ದೇಶಗಳಲ್ಲಿ, ಹಲ್ಲಿಗಳು ದುಷ್ಟ ಶಕ್ತಿಗಳನ್ನು ದೂರವಿಡುವ ಮತ್ತು ಅದೃಷ್ಟವನ್ನು ತರುವ ಶಕ್ತಿಯನ್ನು ಹೊಂದಿವೆ ಎಂದು ನಂಬಲಾಗಿದೆ.

ಕಪ್ಪು ಹಲ್ಲಿಯನ್ನು ನೋಡಿದರೆ ಏನು ಅರ್ಥ

ಮನೆಯಲ್ಲಿ ಕಪ್ಪು ಹಲ್ಲಿಯನ್ನು ನೋಡುವುದು ಶುಭ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ವಿಶೇಷವಾಗಿ ಮನೆಯ ದೇವರ ಕೋಣೆಯ ಬಳಿ ಕಪ್ಪು ಹಲ್ಲಿಯನ್ನು ನೋಡುವುದು ಅಶುಭ ಸಂಕೇತವಾಗಿದೆ. ಮನೆಯಲ್ಲಿ ಹಣಕಾಸಿನ ನಷ್ಟ ಅಥವಾ ಇನ್ನಾವುದೇ ಸಮಸ್ಯೆ ಕಾಡಬಹುದು ಎಂಬುದರ ಸಂಕೇತವಾಗಿದೆ. ವಾಸ್ತವವಾಗಿ, ಹಲ್ಲಿಯನ್ನು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದರೆ ಕಪ್ಪು ಹಲ್ಲಿಯನ್ನು ಲಕ್ಷ್ಮಿ ದೇವಿಯನ್ನು ಪ್ರತಿನಿಧಿಸುವುದಿಲ್ಲ. ಆದ್ದರಿಂದ, ಪೂಜಾ ಮನೆಯ ಬಳಿ ಕಪ್ಪು ಹಲ್ಲಿಯನ್ನು ನೋಡುವುದು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ.

ಮನೆಯ ಪ್ರವೇಶದ್ವಾರದಲ್ಲಿ ಹಲ್ಲಿಯನ್ನು ನೋಡುವುದು

ಮನೆಯ ಪ್ರವೇಶ ದ್ವಾರದಲ್ಲಿ ಹಲ್ಲಿಗಳನ್ನು ನೋಡುವುದು ಒಳ್ಳೆಯ ಸಂಕೇತ. ಹಲ್ಲಿಯು ಮುಖ್ಯ ಬಾಗಿಲಿನಿಂದ ಮನೆಯೊಳಗೆ ಪ್ರವೇಶಿಸುವುದನ್ನು ನೀವು ನೋಡುತ್ತೀರಿ ಎಂದಾದರೆ ಶೀಘ್ರದಲ್ಲೇ ನಿಮ್ಮ ಮನೆಗೆ ಹಣದ ಮಳೆ ಹರಿಯಲಿದೆ ಎಂದು ಅರ್ಥಮಾಡಿಕೊಳ್ಳಿ.

ಮನೆಯಲ್ಲಿ ಎರಡು ಹಲ್ಲಿಗಳನ್ನು ಒಟ್ಟಿಗೆ ನೋಡುವುದು

ಎರಡು ಹಲ್ಲಿಗಳನ್ನು ಒಟ್ಟಿಗೆ ನೋಡುವುದರಲ್ಲಿ ಯಾವುದೇ ಶುಭ ಅಥವಾ ಅಶುಭ ಸಂಕೇತವಿಲ್ಲ. ಆದರೆ ಪರಸ್ಪರ ಜಗಳವಾಡುತ್ತಿರುವ ಎರಡು ಹಲ್ಲಿಗಳನ್ನು ನೀವು ನೋಡಿದರೆ, ಅದು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಲ್ಲಿಗಳ ಜಗಳವು ಮನೆಯಲ್ಲಿ ರೋಗಗಳ ಆಗಮನದ ಸಂಕೇತವಾಗಿದೆ. ಇದರರ್ಥ ಕುಟುಂಬದ ಕೆಲವು ಸದಸ್ಯರು ಅನಾರೋಗ್ಯಕ್ಕೆ ಒಳಗಾಗಬಹುದು.

ದೇವರ ಕೋಣೆ ಬಳಿ ಹಲ್ಲಿ ಕಾಣುವುದು

ದೇವರ ಕೋಣೆಯಲ್ಲಿ ಹಲ್ಲಿಯನ್ನು ನೋಡುವುದು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಸಮೃದ್ಧಿಯನ್ನು ಹೆಚ್ಚಿಸುವ ಸಂಕೇತವಾಗಿದೆ. ಮುಂದಿನ ದಿನಗಳಲ್ಲಿ ನೀವು ದೊಡ್ಡ ಆರ್ಥಿಕ ಲಾಭವನ್ನು ಗಳಿಸಬಹುದು ಎಂದು ಇದು ಸೂಚಿಸುತ್ತದೆ. ಶುಕ್ರವಾರದಂದು ನೀವು ದೇವರಕೋಣೆ ಬಳಿ ಹಲ್ಲಿಯನ್ನು ನೋಡಿದರೆ, ಅದು ಲಕ್ಷ್ಮಿ ದೇವಿಯ ಆಶೀರ್ವಾದ ಎಂದು ಅರ್ಥ.

ನೆಲದ ಮೇಲೆ ಹಲ್ಲಿ ಬೀಳುವುದು

ಹಲ್ಲಿಯು ಪದೇ ಪದೆ ನೆಲದ ಮೇಲೆ ಬೀಳುವುದು ಒಳ್ಳೆಯದಲ್ಲ. ಇದಲ್ಲದೆ, ಹಲ್ಲಿಯು ಪುರುಷ ಅಥವಾ ಮಹಿಳೆಯ ದೇಹದ ಮೇಲೆ ಬೀಳುವುದರಿಂದ ಅನೇಕ ಶುಭ ಮತ್ತು ಅಶುಭ ಚಿಹ್ನೆಗಳನ್ನು ಸೂಚಿಸುತ್ತದೆ. ಹಲ್ಲಿಯು ನೆಲದ ಮೇಲೆ ಹರಿದಾಡುವುದು ಒಳ್ಳೆಯದು, ಆದರೆ ಹಲ್ಲಿಗೆ ತೊಂದರೆಯಾಗದಂತೆ ಎಚ್ಚರವಹಿಸಿ. ಹಲ್ಲಿಯನ್ನು ಕೊಲ್ಲುವ ತಪ್ಪನ್ನು ಮಾಡಬೇಡಿ. ಹಲ್ಲಿಯನ್ನು ಕೊಲ್ಲುವುದು ನಿಮಗೆ ಶುಭವಲ್ಲ ಎಂಬುದು ನೆನಪಿನಲ್ಲಿರಲಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.