ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸ್ವಸ್ತಿಕ್‌ ಪದದ ಅರ್ಥವೇನು? ಮನೆ ಮುಂದೆ ಸ್ವಸ್ತಿಕ್ ಚಿಹ್ನೆ ಹೇಗೆ ಬರೆಯಬೇಕು, ಇದರಿಂದ ಏನು ಲಾಭ?

ಸ್ವಸ್ತಿಕ್‌ ಪದದ ಅರ್ಥವೇನು? ಮನೆ ಮುಂದೆ ಸ್ವಸ್ತಿಕ್ ಚಿಹ್ನೆ ಹೇಗೆ ಬರೆಯಬೇಕು, ಇದರಿಂದ ಏನು ಲಾಭ?

Hindu Culture: ಶುಭ ಸಮಾರಂಭಗಳಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಸ್ವಸ್ತಿಕ್‌ ಚಿಹ್ನೆಯನ್ನು ಬರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಸ್ವಸ್ತಿಕ್‌ ಚಿಹ್ನೆಗೆ ಬಹಳ ಮಹತ್ವವಿದೆ. ಈ ಚಿಹ್ನೆಯನ್ನು ಮನೆಯ ಮುಂದೆ ಬರೆಯುವುದರಿಂದ ಬಹಳಷ್ಟು ಪ್ರಯೋಜನಗಳಿವೆ.

ಸ್ವಸ್ತಿಕ್‌ ಪದದ ಅರ್ಥವೇನು? ಮನೆ ಮುಂದೆ ಸ್ವಸ್ತಿಕ್ ಚಿಹ್ನೆ ಹೇಗೆ ಬರೆಯಬೇಕು, ಇದರಿಂದ ಏನು ಲಾಭ?
ಸ್ವಸ್ತಿಕ್‌ ಪದದ ಅರ್ಥವೇನು? ಮನೆ ಮುಂದೆ ಸ್ವಸ್ತಿಕ್ ಚಿಹ್ನೆ ಹೇಗೆ ಬರೆಯಬೇಕು, ಇದರಿಂದ ಏನು ಲಾಭ?

ಹಿಂದೂ ಧರ್ಮದಲ್ಲಿ ಸ್ವಸ್ತಿಕ್‌ ಚಿಹ್ನೆಗೆ ಬಹಳ ಪ್ರಾಮುಖ್ಯತೆ ಇದೆ. ಯಜ್ಞ, ಯಾಗ, ಹವನ, ಹಬ್ಬ ಮೊದಲಾದ ಶುಭ ಸಂದರ್ಭಗಳಲ್ಲಿ ಸ್ವಸ್ತಿಕ್‌ ಚಿಹ್ನೆಯನ್ನು ಬರೆಯಲಾಗುತ್ತದೆ. ಈ ಚಿಹ್ನೆಯು ಕೇವಲ ಶುಭದ ಪ್ರತೀಕವಷ್ಟೇ ಅಲ್ಲ ಮನೆಯ ಮುಂದೆ ಇದನ್ನು ಬರೆಯುವುದರಿಂದ ಸಕಾರಾತ್ಮಕ ಶಕ್ತಿ ತುಂಬುತ್ತದೆ ಎಂಬ ನಂಬಿಕೆಯಿದೆ. ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದರಿಂದ ದೇವತೆಗಳೂ ಸಂತುಷ್ಟರಾಗುತ್ತಾರೆ. ಈ ಚಿಹ್ನೆಯನ್ನು ಬರೆಯುವುದರಿಂದ ಕೈಗೊಂಡಿರುವ ಕೆಲಸಗಳಲ್ಲಿ ಲಾಭವನ್ನು ತಂದುಕೊಡುತ್ತದೆ ಎಂಬ ನಂಬಿಕೆಯಿದೆ.

ಸ್ವಸ್ತಿಕ್‌ ಚಿಹ್ನೆಯನ್ನು ಮನೆ ಮುಂದೆ ಬರೆದರೆ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬಿರುತ್ತದೆ. ಅಲ್ಲದೇ ಸಂಕಲ್ಪ ಮಾಡಿಕೊಂಡ ಎಲ್ಲಾ ಶುಭ ಕಾರ್ಯಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಇಷ್ಟೊಂದು ಮಹತ್ವವಿರುವ ಸ್ವಸ್ತಿಕ್‌ ಚಿಹ್ನೆಯ ಅರ್ಥವೇನು? ಅದರಿಂದ ಸಿಗುವ ಲಾಭಗಳೇನು? ತಿಳಿಯಲು ಮುಂದೆ ಓದಿ.

ಸ್ವಸ್ತಿಕ್ ಚಿಹ್ನೆಯ ಅರ್ಥ

ಸ್ವಸ್ತಿಕ್ ಪದವು ಮೂರು ಪದಗಳ ಜೋಡಣೆಯಿಂದ ಆಗಿದೆ. 'ಸ' ಎಂದರೆ ಮಂಗಳಕರ, 'ಅಸ್' ಎಂದರೆ ಅಸ್ತಿತ್ವ ಮತ್ತು 'ಕ' ಎಂದರೆ ಮಾಡುವವನು. ಆದ್ದರಿಂದ ಈ ಪದದ ಸಂಪೂರ್ಣ ಅರ್ಥವು ಮಂಗಳವನ್ನುಂಟು ಮಾಡುವುದು ಎಂಬುದಾಗಿದೆ. ಗ್ರಂಥಗಳಲ್ಲಿ ಇದನ್ನು ಪ್ರಥಮ ಪೂಜ್ಯ ಗಣೇಶನ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಪೂಜೆಯಲ್ಲಿ ಮೊದಲು ಗಣೇಶನನ್ನು ಪೂಜಿಸುವಂತೆಯೇ, ಮಂಗಳಕರ ಕೆಲಸವನ್ನು ಪ್ರಾರಂಭಿಸುವ ಮೊದಲು ಸ್ವಸ್ತಿಕ್‌ ಚಿಹ್ನೆಯನ್ನು ಬರೆಯಲಾಗುತ್ತದೆ.

ಸ್ವಸ್ತಿಕ್‌ ಚಿಹ್ನೆ ಹೇಗೆ ಬರೆಯಬೇಕು?

ಜ್ಯೋತಿಷ್ಯ ಶಾಸ್ತ್ರದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರಲು ಅನೇಕ ಮಾರ್ಗಗಳನ್ನು ಸೂಚಿಸಲಾಗಿದೆ. ಅವುಗಳಲ್ಲಿ ಸ್ವಸ್ತಿಕ್‌ ಚಿಹ್ನೆಯನ್ನು ಬರೆಯುವುದು ಒಂದಾಗಿದೆ. ಮನೆಯಲ್ಲಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಿ, ಸುಖ–ಶಾಂತಿ ನೆಲೆಸುವಂತೆ ಮಾಡುತ್ತದೆ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಸ್ವಸ್ತಿಕ್‌ ಚಿಹ್ನೆಯನ್ನು ಹಳದಿ ಅಥವಾ ಕೇಸರಿ ಬಣ್ಣದಿಂದ ಬರೆಯಲಾಗುತ್ತದೆ. ಇದನ್ನು ಮನೆಯ ಮುಂದೆ, ದೇವರ ಮನೆಯಲ್ಲಿ, ಇತ್ಯಾದಿ ಸ್ಥಳಗಳಲ್ಲಿ ಬರೆಯುವುದರಿಂದ ಆರ್ಥಿಕವಾಗಿ ಲಾಭವಾಗುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ದೋಷಗಳನ್ನು ಹೋಗಲಾಡಿಸಲು ಪಂಚ ಧಾತುಗಳಿಂದ ಬರೆಯಲಾಗುತ್ತದೆ. ಶುಭ ಕಾರ್ಯಗಳಲ್ಲಿ ಹಳದಿ ಬಣ್ಣ ಅಥವಾ ಹಳದಿ ರಂಗೋಲಿ ಪುಡಿಯಿಂದ ಬರೆಯಲಾಗುತ್ತದೆ. ವ್ಯಾಪಾರದ ಪ್ರಗತಿಗಾಗಿ ಅರಿಶಿಣದ ಪುಡಿಯಿಂದ ಬರೆಯಲಾಗುತ್ತದೆ.

ಸ್ವಸ್ತಿಕ್‌ ಚಿಹ್ನೆ ಬರೆಯುವುದರಿಂದ ಲಾಭಗಳು

* ಸ್ವಸ್ತಿಕ್‌ ಚಿಹ್ನೆಯನ್ನು ತಿಜೋರಿ (ಹಣ ಇರಿಸುವ ಪಟ್ಟಿಗೆ) ಯ ಮೇಲೆ ಬರೆಯಲಾಗುತ್ತದೆ. ಇದರಿಂದ ಹಣದ ಕೊರತೆ ದೂರವಾಗುತ್ತದೆ ಮತ್ತು ತಿಜೋರಿ ಎಂದಿಗೂ ಖಾಲಿಯಾಗುವುದಿಲ್ಲ ಎಂದು ಹೇಳಲಾಗುತ್ತದೆ.

* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಳದಿ ಸ್ವಸ್ತಿಕ್‌ ಚಿಹ್ನೆಯನ್ನು ಮನೆಯಲ್ಲಿ ಬರೆಯುವುದರಿಂದ ಶುಭವನ್ನು ತರುತ್ತದೆ. ಮನೆಯ ಮುಂಬಾಗಿಲಲ್ಲಿ ಬರೆಯುವುದರಿಂದ ಶುಭ ಫಲ ಸಿಗುತ್ತದೆ. ಅದೇ ರೀತಿ ಮನೆಯ ದೇವರ ಕೋಣೆಯಲ್ಲಿ ಸ್ವಸ್ತಿಕ ಚಿಹ್ನೆಯಿರುವುದು ತುಂಬಾ ಮಂಗಳಕರವಾಗಿದೆ. ಇದು ಇಡೀ ಮನೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಇದ್ದರೆ ಅನೇಕ ರೀತಿಯ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಆದರೆ ಹಳದಿ ಬಣ್ಣದಲ್ಲಿ ಬರೆದ ಸ್ವಸ್ತಿಕ್‌ ಚಿಹ್ನೆಯು ಎಲ್ಲಾ ಸಂದರ್ಭದಲ್ಲಿಯೂ ಮಂಗಳಕರವಾಗಿದೆ.

* ಈ ಸ್ವಸ್ತಿಕ್‌ ಚಿಹ್ನೆಯನ್ನು ಮನೆಯಲ್ಲಿರುವುದು ಲಕ್ಷ್ಮಿ ದೇವಿಯ ಆಶೀರ್ವಾದವೂ ಸಿಗುತ್ತದೆ. ನಕಾರಾತ್ಮಕ ಪ್ರಭಾವಗಳನ್ನು ದೂರಮಾಡಿ ಮತ್ತು ಧನಾತ್ಮಕ ಶಕ್ತಿಯು ಮನೆಯೊಳಗೆ ಹರಿಯುವಂತೆ ಮಾಡುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.