ತಂದೆ-ಮಗನಾದರೂ ಸೂರ್ಯ, ಶನಿಯ ನಡುವೆ ವೈರತ್ವ ಉಂಟಾಗಲು ಕಾರಣವೇನು? ಗ್ರಹಗಳಲ್ಲೇ ಶನಿಯು ಶಕ್ತಿಶಾಲಿ ಆಗಿದ್ದು ಹೇಗೆ?-hindu mythology why surya shani became enemies although they are father son how shanideva became powerful ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತಂದೆ-ಮಗನಾದರೂ ಸೂರ್ಯ, ಶನಿಯ ನಡುವೆ ವೈರತ್ವ ಉಂಟಾಗಲು ಕಾರಣವೇನು? ಗ್ರಹಗಳಲ್ಲೇ ಶನಿಯು ಶಕ್ತಿಶಾಲಿ ಆಗಿದ್ದು ಹೇಗೆ?

ತಂದೆ-ಮಗನಾದರೂ ಸೂರ್ಯ, ಶನಿಯ ನಡುವೆ ವೈರತ್ವ ಉಂಟಾಗಲು ಕಾರಣವೇನು? ಗ್ರಹಗಳಲ್ಲೇ ಶನಿಯು ಶಕ್ತಿಶಾಲಿ ಆಗಿದ್ದು ಹೇಗೆ?

ಪುರಾಣಗಳ ಪ್ರಕಾರ ಶನಿಯು ಸೂರ್ಯ-ಛಾಯಾದೇವಿಯ ಮಗ. ಸ್ವತ: ತಂದೆ ಮಗ ಆಗಿದ್ದರೂ ಶನಿದೇವ ಹಾಗೂ ಸೂರ್ಯ ಇಬ್ಬರ ನಡುವೆ ಶತ್ರುತ್ವ ಇದೆ. ತಂದೆಯ ಮೇಲೆಯೇ ಶನಿಯು ವಕ್ರದೃಷ್ಟಿ ಬೀರುತ್ತಾನೆ. ಇಬ್ಬರಿಗೂ ವೈರತ್ವ ಉಂಟಾಗಲು ಕಾರಣವೇನು? ಶನಿಯು ಇತರ ಗ್ರಹಗಳಿಗಿಂತ ಶಕ್ತಿಶಾಲಿ ಆಗಿದ್ದು ಹೇಗೆ? ಇಲ್ಲಿದೆ ಮಾಹಿತಿ.

ತಂದೆ-ಮಗನಾದರೂ ಸೂರ್ಯ, ಶನಿಯ ನಡುವೆ ವೈರತ್ವ ಉಂಟಾಗಲು ಕಾರಣವೇನು? ಗ್ರಹಗಳಲ್ಲೇ ಶನಿಯು ಶಕ್ತಿಶಾಲಿ ಆಗಿದ್ದು ಹೇಗೆ?
ತಂದೆ-ಮಗನಾದರೂ ಸೂರ್ಯ, ಶನಿಯ ನಡುವೆ ವೈರತ್ವ ಉಂಟಾಗಲು ಕಾರಣವೇನು? ಗ್ರಹಗಳಲ್ಲೇ ಶನಿಯು ಶಕ್ತಿಶಾಲಿ ಆಗಿದ್ದು ಹೇಗೆ?

ಗ್ರಹಗಳು ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರಿಗೂ ಸಮಸ್ಯೆಯನ್ನುಂಟು ಮಾಡುತ್ತವೆ. ಅಷ್ಟೇ ಶುಭಫಲಗಳನ್ನು ನೀಡುತ್ತವೆ. ಪ್ರತಿಯೊಂದು ಗ್ರಹಗಳು ಕೂಡಾ ತನ್ನದೇ ವೈಶಿಷ್ಟ್ಯವನ್ನೊಂದಿದೆ. ಸೌರ ಮಂಡಲದಲ್ಲಿ ಸೂರ್ಯನ ಸುತ್ತಲೂ ಇತರ ಗ್ರಹಗಳು ಸುತ್ತುತ್ತಿವೆ. ಅದರಲ್ಲಿ ಶನಿಯೂ ಒಂದು. ಗ್ರಹಗಳಲ್ಲಿ ಶನಿಯನ್ನು ಅತಿ ನಿಧಾನವಾಗಿ ಚಲಿಸುವ ಗ್ರಹ ಎಂದೇ ಹೆಸರಾಗಿದೆ.

ಶನಿಗೂ-ಸೂರ್ಯನಿಗೂ ವೈರತ್ವ

ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಬರಲು ಎರಡೂವರೆ ವರ್ಷಗಳು ಬೇಕಾಗುತ್ತದೆ. ಈ ಸಮಯದಲ್ಲಿ ಶನಿಯು ಯಾವ ರಾಶಿಯಲ್ಲಿ ಇದ್ದಾನೆ ಅವರಿಗೆ ಸಾಡೇಸಾತಿ ನಡೆಯುತ್ತಿದೆ ಎಂದೇ ಅರ್ಥ. ಶನಿಯನ್ನು ಕರ್ಮಕಾರಕ ಎಂದೇ ಕರೆಯಲಾಗುತ್ತದೆ. ಒಳ್ಳೆಯದು ಮಾಡಿದವರಿಗೆ ಒಳ್ಳೆಯದು, ಮತ್ತೊಬ್ಬರಿಗೆ ಸಮಸ್ಯೆ ತಂದೊಡ್ಡುವವರಿಗೆ ಶಿಕ್ಷೆ ನೀಡುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ ಶನಿ ಎಂದರೆ ಬಹಳಷ್ಟು ಜನರು ಭಯ ಪಡುತ್ತಾರೆ. ಶನಿ ದೃಷ್ಟಿ ನಮ್ಮ ಮೇಲೆ ಬೀಳಬಾರದು ಎಂದು ಪ್ರಾರ್ಥಿಸುತ್ತಾರೆ. 

ಹಾಗೇ ಸೂರ್ಯನು ಜಾತಕದಲ್ಲಿದ್ದರೆ ಅದು ಆ ವ್ಯಕ್ತಿಗೆ ಬಹಳ ಒಳ್ಳೆಯದು ಎಂಬ ಮಾತನ್ನೂ ಕೇಳಿದ್ದೇವೆ. ಶನಿಯು ಸೂರ್ಯನ ಮಗ. ಆದರೆ ಇವರೆಡನ್ನು ಶತ್ರು ಗ್ರಹಗಳು ಎಂದು ಕರೆಯಲಾಗುತ್ತದೆ. ತಂದೆ ಮಗ ಆಗಿದ್ದರೂ ಸೂರ್ಯ-ಶನಿಗೆ ವೈರತ್ವ ಏಕೆ? ಶನಿಯು ಸ್ವತ: ತಂದೆಯನ್ನು ಶಪಿಸಿದ್ದು ಏಕೆ? ಇಲ್ಲಿದೆ ಮಾಹಿತಿ.

ಶನಿಯು ತಂದೆ ಸೂರ್ಯನ ವೈರತ್ವ ಕಟ್ಟಿಕೊಂಡಿದ್ದರ ಹಿಂದೆ ಒಂದು ಕಥೆ ಇದೆ. ಶನಿದೇವನು ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಜನಿಸಿದನು. ಆದ್ದರಿಂದ ಆ ದಿನವನ್ನು ಶನಿ ಜಯಂತಿ ಎಂದು ಆಚರಿಸಲಾಗುತ್ತದೆ. ಶನಿ ಜನನದ ಬಗ್ಗೆ ಸ್ಕಂದ ಪುರಾಣಗಳಲ್ಲಿ ತಿಳಿಸಲಾಗದೆ. ಶನಿಯ ತಂದೆ ಸೂರ್ಯದೇವ, ತಾಯಿ ಛಾಯಾದೇವಿ. ಈಕೆಗೆ ಸನ್ವರ್ಣ ಎಂಬ ಹೆಸರೂ ಇದೆ. ಛಾಯಾಗೂ ಮುನ್ನ ದಕ್ಷ ರಾಜನ ಪುತ್ರಿ ಸಂಧ್ಯಾ, ಸೂರ್ಯನು ಮದುವೆಯಾಗುತ್ತಾಳೆ. ಇವರಿಗೆ ವೈವಸ್ವತ ಮನು, ಯಮರಾಜ ಹಾಗೂ ಯಮುನಾ ಎಂಬ ಮಕ್ಕಳಾಗುತ್ತಾರೆ. ಆದರೆ ಸಂಧ್ಯಾ ಸೂರ್ಯನ ಪ್ರಕಾಶದಿಂದ ಹಿಂಸೆಗೆ ಒಳಗಾಗುತ್ತಾಳೆ. ಸೂರ್ಯದೇವನಿಂದ ದೂರ ಇರುವ ಉದ್ದೇಶದಿಂದ ಅವನಿಗೂ ತಿಳಿಯದಂತೆ ತನ್ನದೇ ನೆರಳನ್ನು ಸೃಷ್ಟಿಸಿ, ಅದಕ್ಕೆ ಛಾಯಾ ಎಂದು ಹೆಸರು ನೀಡಿ ಅವಳಿಗೆ ಮಕ್ಕಳು, ಪತಿಯ ಜವಾಬ್ದಾರಿ ನೀಡಿ ತಪಸ್ಸು ಮಾಡಲು ಹೋಗುತ್ತಾಳೆ.

ಸೂರ್ಯ-ಛಾಯಾದೇವಿಗೆ ಜನಿಸಿದ ಮಗ ಶನಿದೇವ

ಈ ರಹಸ್ಯವನ್ನು ಛಾಯಾ ತನ್ನಲ್ಲೇ ಮುಚ್ಚಿಡುತ್ತಾಳೆ. ಕೆಲ ದಿನಗಳ ನಂತರ ಛಾಯಾ ಸವರ್ಣಿ ಮನು, ಭದ್ರ ಎಂಬ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಛಾಯಾದೇವಿಯು ಶಿವನ ಪರಮ ಭಕ್ತೆ. ಶನಿಯು ಗರ್ಭದಲ್ಲಿದ್ದಾಗ ಛಾಯಾದೇವಿ ಶಿವನಿಗೆ ಪೂಜೆ ಮಾಡುತ್ತಾಳೆ. ಉಪವಾಸ, ದಣಿವು, ಬಿಸಿಲಿನ ಕಾರಣ ಛಾಯಾ ಗರ್ಭದಲ್ಲಿದ್ದ ಶನಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಶನಿಯು ಹುಟ್ಟುವಾಗ ಕಪ್ಪಾಗಿ ಹುಟ್ಟುತ್ತಾನೆ. ಶನಿಯನ್ನು ನೋಡಿದ ಸೂರ್ಯದೇವ , ಅವನನ್ನು ತನ್ನ ಮಗನೆಂದು ಒಪ್ಪಿಕೊಳ್ಳುವುದಿಲ್ಲ. ತನ್ನ ತಾಯಿ ಛಾಯಾದೇವಿಯನ್ನು ಅವಮಾನಿಸಿದ್ದಕ್ಕೆ, ತನ್ನನ್ನು ಮಗ ಎಂದು ಒಪ್ಪದೆ ಇದ್ದಿದ್ದಕ್ಕೆ ತಂದೆ ಸೂರ್ಯನ ಮೇಲೆ ಕೋಪಗೊಳ್ಳುವ ಶನಿಯು ತಂದೆಯ ಮೇಲೆ ತನ್ನ ದೃಷ್ಟಿ ಹರಿಸುತ್ತಾನೆ. ಇದರಿಂದ ಸೂರ್ಯನು ಕಪ್ಪು ಬಣ್ಣಕ್ಕೆ ತಿರುಗುತ್ತಾನೆ. ತನ್ನ ಪರಿಸ್ಥಿತಿ ಕಂಡು ಭಯಗೊಂಡ ಸೂರ್ಯನು ಶಿವನ ಮೊರೆ ಹೋಗುತ್ತಾನೆ. ಶಿವನ ಅನುಗ್ರಹದಿಂದ ಸೂರ್ಯನು ಮೊದಲಿನ ರೂಪವನ್ನು ಪಡೆದರೂ ಮತ್ತೆ ಮಗನ ಪ್ರೀತಿಯನ್ನು ಪಡೆಯಲಾಗುವುದಿಲ್ಲ. ಅಂದಿನಿಂದ ಶನಿ ಹಾಗೂ ಸೂರ್ಯನಿಗೂ ವೈರತ್ವ ಎಂಬ ಕಥೆ ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಇದಾದ ನಂತರ ಶನಿಯು, ಶಿವನನ್ನು ಕುರಿತು ತಪ್ಪಸ್ಸು ಮಾಡಿ ಒಲಿಸಿಕೊಳ್ಳುತ್ತಾನೆ. ತನ್ನ ತಂದೆ ಸೂರ್ಯನಿಗಿಂತಲೂ ನನ್ನನ್ನು ಶಕ್ತಿಶಾಲಿಯನ್ನಾಗಿ ಮಾಡು ಎಂದು ವರ ಕೇಳುತ್ತಾನೆ. ಶನಿಯ ಭಕ್ತಿಗೆ ಮೆಚ್ಚಿ ಶಿವನು, 9 ಗ್ರಹಗಳಲ್ಲಿ ಶನಿಗೆ ಅತ್ಯಂತ ಶಕ್ತಿಶಾಲಿ ಗ್ರಹ ಆಗಿ ಉಳಿಯುವಂತೆ ವರ ನೀಡುತ್ತಾನೆ. ಇದೇ ಕಾರಣಕ್ಕೆ ಶನಿಗೆ ಬಡವರನ್ನು ಶ್ರೀಮಂತನ್ನಾಗಿಯೂ, ಹಣವಂತನನ್ನು ಬಡವನನ್ನಾಗಿಯೂ ಮಾಡುವ ಶಕ್ತಿ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

 

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.