ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇದೇ ವರ್ಷ ಮದುವೆ ಆಗಬೇಕು ಅಂದ್ಕೊಂಡಿದ್ದೀರಾ, ಶುಭ ಮುಹೂರ್ತಗಳು ಹೀಗಿವೆ ನೋಡಿ; ಇನ್ನು 4 ತಿಂಗಳು ಒಳ್ಳೆ ದಿನಗಳೇ ಇಲ್ಲ

ಇದೇ ವರ್ಷ ಮದುವೆ ಆಗಬೇಕು ಅಂದ್ಕೊಂಡಿದ್ದೀರಾ, ಶುಭ ಮುಹೂರ್ತಗಳು ಹೀಗಿವೆ ನೋಡಿ; ಇನ್ನು 4 ತಿಂಗಳು ಒಳ್ಳೆ ದಿನಗಳೇ ಇಲ್ಲ

Hindu Religion: ಗುರು ಹಾಗೂ ಶುಕ್ರರು ಅಸ್ತಮಿಸಿದ್ದ ಕಾರಣ ಕಳೆದ 2 ತಿಂಗಳಿಂದ ಯಾವುದೇ ಮುಹೂರ್ತ ಇರಲಿಲ್ಲ. ಇದೀಗ ಗುರು , ಶುಕ್ರರು ಮತ್ತೆ ಉದಯಿಸಿದ್ದಾರೆ. ಈಗ ಮತ್ತೆ ಮದುವೆ ಮುಹೂರ್ತಗಳು ಇವೆ. ಆದರೆ ಇನ್ನ ಕೆಲವು ದಿನಗಳ ನಂತರ ಚಾತುರ್ಮಾಸ ಆರಂಭವಾಗುವುದರಿಂದ ಮುಂಂದಿನ 4 ತಿಂಗಳು ಮತ್ತೆ ಯಾವ ಮುಹೂರ್ತಗಳೂ ಇರುವುದಿಲ್ಲ.

ಇದೇ ವರ್ಷ ಮದುವೆ ಆಗಬೇಕು ಅಂದ್ಕೊಂಡಿದ್ದೀರಾ, ಶುಭ ಮುಹೂರ್ತಗಳು ಹೀಗಿವೆ ನೋಡಿ; ಇನ್ನು 4 ತಿಂಗಳು ಒಳ್ಳೆ ದಿನಗಳೇ ಇಲ್ಲ
ಇದೇ ವರ್ಷ ಮದುವೆ ಆಗಬೇಕು ಅಂದ್ಕೊಂಡಿದ್ದೀರಾ, ಶುಭ ಮುಹೂರ್ತಗಳು ಹೀಗಿವೆ ನೋಡಿ; ಇನ್ನು 4 ತಿಂಗಳು ಒಳ್ಳೆ ದಿನಗಳೇ ಇಲ್ಲ

ಮದುವೆಯಂಥ ಶುಭ ಕಾರ್ಯಕ್ರಮಗಳಿಗೆ ಗುರು ಮತ್ತು ಶುಕ್ರರು ಶುಭ ಸ್ಥಾನದಲ್ಲಿ ಇರಲೇಬೇಕೆಂದು ಜ್ಯೋತಿಷಿಗಳು ಹೇಳುತ್ತಾರೆ. ಇವೆರಡೂ ಮಂಗಳಕರವಾದಾಗ ಮಾತ್ರ ಮದುವೆಗೆ ಮುಹೂರ್ತಗಳು ಇರುತ್ತವೆ. ಎರಡು ತಿಂಗಳ ಹಿಂದೆ ಅಸ್ತಂಗತರಾಗಿದ್ದ ಗುರು ಮತ್ತು ಶುಕ್ರ ಈಗ ಮತ್ತೆ ಉದಯಿಸಿದ್ದಾರೆ. ಈಗ ಮತ್ತೆ ಮದುವೆಗೆ ಒಳ್ಳೆ ಮುಹೂರ್ತ ಕೂಡಿ ಬಂದಿದೆ.

ಗುರು ಮತ್ತು ಶುಕ್ರ ಅಸ್ತಂಗತರಾಗಿರುವುದರಿಂದ ಶುಭ ಕಾರ್ಯಗಳಿಗೆ ದೀರ್ಘ ವಿರಾಮವಿತ್ತು. ಈಗ ಶುಕ್ರ ಉದಯವಾಗಿದೆ. ಗುರು ಏಪ್ರಿಲ್‌ನಲ್ಲಿ ಅಸ್ತಂಗತನಾಗಿದ್ದನು. ಗುರು ಮತ್ತು ಶುಕ್ರನ ಉದಯದೊಂದಿಗೆ, ಮದುವೆ ಮತ್ತು ಗೃಹ ಪ್ರವೇಶದಂತಹ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಎರಡು ತಿಂಗಳಿಂದ ಶುಭ ಕಾರ್ಯಗಳು ಸ್ಥಗಿತಗೊಂಡಿತ್ತು. ಶುಭ ಶುಕ್ರವು ಏಪ್ರಿಲ್ 26 ರಂದು ಅಸ್ತಂಗತ ಹಂತ ತಲುಪಿತ್ತು. ಶುಕ್ರ ಅಸ್ತಮಿಸಿದ ಕೆಲವೇ ದಿನಗಳಲ್ಲಿ ಗುರು ಗ್ರಹವೂ ಅಸ್ತಂಗತ ಹಂತಕ್ಕೆ ಹೋಯ್ತು. ಸುಮಾರು 24 ವರ್ಷಗಳ ನಂತರ ಈ ಎರಡು ಗ್ರಹಗಳು ಒಂದೇ ಸಮಯದಲ್ಲಿ ಅಸ್ತಂಗತ ಹಂತಕ್ಕೆ ತೆರಳಿದ್ದವು.

ಜುಲೈ ತಿಂಗಳಿನಲ್ಲಿ ಮುಹೂರ್ತಗಳು

ಜೂನ್ 2 ರಂದು ಗುರು ಉದಯಿಸಿದರೆ ಜೂನ್ 28 ರಂದು ಶುಕ್ರನೂ ಉದಯಿಸಿದ್ದಾನೆ. ಪ್ರಸ್ತುತ ಐದು ದಿನಗಳವರೆಗೆ ಪಂಚಕ ಇದೆ. ಇದಾದ ಬಳಿಕ ಜುಲೈ 2ರಿಂದ ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಮುಹೂರ್ತಗಳು ಇವೆ. ಕಾಶಿ ವಿಶ್ವ ಪಂಚಾಂಗದ ಪ್ರಕಾರ ಜುಲೈ 2 ರಿಂದ ಜುಲೈ 15 ರವರೆಗೆ ಮದುವೆಗೆ ಮಂಗಳಕರ ಮುಹೂರ್ತಗಳಿವೆ. ದೇವಶಯನಿ ಏಕಾದಶಿ ಜುಲೈ 17 ರಂದು ಬರುತ್ತದೆ. 

ಈ ಏಕಾದಶಿಯಿಂದ ಚಾತುರ್ಮಾಸ ಆರಂಭವಾಗಲಿದೆ. ಭಗವಾನ್ ವಿಷ್ಣುವು ಯೋಗ ನಿದ್ರೆಗೆ ಹೋಗುವ ಸಮಯವನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ . ನಂತರ ಮದುವೆಯಂತಹ ಶುಭ ಕಾರ್ಯಗಳ ಶುಭ ಮುಹೂರ್ತಕ್ಕೆ ನಾಲ್ಕು ತಿಂಗಳು ವಿರಾಮ ಇರಲಿದೆ. ಕರ್ನಾಟಕದಲ್ಲಿ ಜೂನ್‌ 23 ರಿಂದ 1 ತಿಂಗಳ ಕಾಲ ಆಷಾಢ ಮಾಸ ಆರಂಭವಾಗುವುದರಿಂದ ಈ ಸಮಯದಲ್ಲಿ ಮದುವೆ ಸಮಾರಂಭಗಳು ನಡೆಯುವುದಿಲ್ಲ. ಆದರೆ ಕೆಲವೆಡೆ ಆಷಾಢ ಮಾಸದ ಆಚರಣೆ ಇರುವುದಿಲ್ಲ.

ಚಾತುರ್ಮಾಸ

ಚಾತುರ್ಮಾಸ ಸಮಯದಲ್ಲಿ ಭಗವಾನ್ ವಿಷ್ಣುವು ನಿದ್ರೆಗೆ ಜಾರುತ್ತಾನೆ. ಆದ್ದರಿಂದ ಮತ್ತೆ 4 ತಿಂಗಳ ಕಾಲ ಶುಭ ಕಾರ್ಯಗಳು ನಡೆಯುವುದಿಲ್ಲ. ನವೆಂಬರ್ 12 ರಂದು ದೇವುತ್ಥನಿ ಏಕಾದಶಿಯಿಂದ ಮದುವೆಯ ಶುಭ ಸಮಯಗಳು ಮತ್ತೆ ಪ್ರಾರಂಭವಾಗುತ್ತವೆ. ಅಂದಿನಿಂದ ಡಿಸೆಂಬರ್ 14ರವರೆಗೆ ಇದು ಮುಂದುವರಿಯಲಿದೆ. ಜುಲೈ ತಿಂಗಳಿನಲ್ಲಿ 2, 3 , 4 , 10 , 11 , 12 , 14 ಮತ್ತು 15ನೇ ತಾರೀಖು ವಿವಾಹಕ್ಕೆ ಶುಭಕಾಲವೆಂದು ಪಂಡಿತರು ಹೇಳುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.