ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆಷಾಢ ಮಾಸದಲ್ಲಿ ಆಚರಿಸುವ ವ್ರತಗಳ ಪಟ್ಟಿ ಇಲ್ಲಿದೆ; ಈ ವ್ರತಗಳನ್ನು ಆಚರಿಸುವುದರಿಂದ ಏನು ಫಲ? ಇಲ್ಲಿದೆ ಮಾಹಿತಿ

ಆಷಾಢ ಮಾಸದಲ್ಲಿ ಆಚರಿಸುವ ವ್ರತಗಳ ಪಟ್ಟಿ ಇಲ್ಲಿದೆ; ಈ ವ್ರತಗಳನ್ನು ಆಚರಿಸುವುದರಿಂದ ಏನು ಫಲ? ಇಲ್ಲಿದೆ ಮಾಹಿತಿ

Ashadha Month 2024: ಆಷಾಢದಲ್ಲಿ ಕೆಲವು ಪ್ರಮುಖ ವ್ರತಗಳನ್ನು ಆಚರಿಸಲಾಗುತ್ತದೆ. ಶೂನ್ಯ ಮಾಸ ಆಷಾಢದಲ್ಲಿ ನಿಶ್ಚಿತಾರ್ಥ, ಮದುವೆ, ಗೃಹಪ್ರವೇಶದಂಥ ಶುಭ ಕಾರ್ಯಗಳನ್ನು ಮಾಡದಿದ್ದರೂ ದೇವರ ಆರಾಧನೆ ಮಹತ್ವ ನೀಡಲಾಗಿದೆ. ಆಷಾಢದಲ್ಲಿ ಆಚರಿಸುವ ಪ್ರಮುಖ ವ್ರತಗಳ ಪಟ್ಟಿ ಹೀಗಿದೆ. (ಬರಹ: ಅರ್ಚನಾ ವಿ ಭಟ್‌)

ಆಷಾಢ ಮಾಸದಲ್ಲಿ ಆಚರಿಸುವ ವ್ರತಗಳ ಪಟ್ಟಿ ಇಲ್ಲಿದೆ; ಈ ವ್ರತಗಳನ್ನು ಆಚರಿಸುವುದರಿಂದ ಏನು ಫಲ? ಇಲ್ಲಿದೆ ಮಾಹಿತಿ
ಆಷಾಢ ಮಾಸದಲ್ಲಿ ಆಚರಿಸುವ ವ್ರತಗಳ ಪಟ್ಟಿ ಇಲ್ಲಿದೆ; ಈ ವ್ರತಗಳನ್ನು ಆಚರಿಸುವುದರಿಂದ ಏನು ಫಲ? ಇಲ್ಲಿದೆ ಮಾಹಿತಿ

ಹಿಂದೂ ಕ್ಯಾಲೆಂಡರ್‌ ಆಧರಿಸಿ ಭಾರತದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಹಿಂದೂಗಳಿಗೆ ಹೊಸ ವರ್ಷ ಪ್ರಾರಂಭವಾಗುವುದು ಯುಗಾದಿಗೆ. ಅಂದರೆ ವರ್ಷದ ಮೊದಲ ತಿಂಗಳು ಚೈತ್ರ ಮಾಸದ ಮೊದಲ ದಿನವಾದ ಪಾಡ್ಯ ತಿಥಿಯಿಂದ ಪ್ರಾರಂಭವಾಗುತ್ತದೆ. ಪಂಚಾಂಗದ ಪ್ರಕಾರ ಆಷಾಢವು ನಾಲ್ಕನೇ ತಿಂಗಳಾಗಿದೆ. ಈ ವರ್ಷ ಆಷಾಢ ಮಾಸವು ಜೂನ್‌ 23 ರಿಂದ ಪ್ರಾರಂಭವಾಗಿದೆ. ಜುಲೈ 21 ರವರೆಗೆ ಇರುತ್ತದೆ.

ಆಷಾಢ ಮಾಸ ಬಹಳ ವಿಶೇಷವಾದ ತಿಂಗಳಾಗಿದೆ. ಇದನ್ನು ಮುಂಗಾರಿನ ಆರಂಭ ಎನ್ನುತ್ತಾರೆ. ಭಗವಾನ್‌ ವಿಷ್ಣುವಿನ ಆರಾಧಕರಿಗೆ ಆಷಾಢವು ಬಹಳ ಮಹತ್ವದ್ದಾಗಿದೆ. ಈ ಸಮಯದಲ್ಲಿ ಮಹಾವಿಷ್ಣುವು ಯೋಗ ನಿದ್ರೆಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಭಕ್ತರು ವ್ರತ, ಉಪವಾಸ, ಕ್ಷೇತ್ರ ದರ್ಶನ ಮಾಡುತ್ತಾರೆ. ಆಷಾಢ ಮಾಸದಿಂದ ಚಾತುರ್ಮಾಸ ಕೂಡಾ ಪ್ರಾರಂಭವಾಗುತ್ತದೆ. ಮದುವೆ, ಉಪನಯನ ಮುಂತಾದ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಹಾಗಾಗಿ ಇದನ್ನು ಶೂನ್ಯ ಮಾಸವೆಂದೂ ಕರೆಯಲಾಗುತ್ತದೆ. ಆದರೆ ಆಷಾಢದಲ್ಲಿ ಕೆಲವು ಪ್ರಮುಖ ವ್ರತಗಳನ್ನು ಆಚರಿಸಲಾಗುತ್ತದೆ. ಹೀಗೆ ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆಯಿದೆ. ಆಷಾಢ ಮಾಸದಲ್ಲಿ ಆಚರಿಸುವ ಪ್ರಮುಖ ವ್ರತಗಳ ಪಟ್ಟಿ ಇಲ್ಲಿದೆ.

ಆಷಾಢ ಮಾಸದಲ್ಲಿ ಆಚರಿಸುವ ವ್ರತಗಳು

ಜೂನ್‌ 25, 2024 – ಸಂಕಷ್ಟ ಚತುರ್ಥಿ

ಜೂನ್‌ 28, 2024 – ಕಾಲಾಷ್ಟಮಿ

ಜುಲೈ 2, 2024 – ಯೋಗಿನಿ ಏಕಾದಶಿ

ಜುಲೈ 3, 2024 – ರೋಹಿನಿ ವ್ರತ, ಪ್ರದೋಷ ವ್ರತ

ಜುಲೈ 4, 2024 – ಮಾಸಿಕ ಶಿವರಾತ್ರಿ

ಜುಲೈ 5, 2024 – ಅಮವಾಸ್ಯೆ

ಜುಲೈ 6, 2024 – ಆಷಾಢ ಗುಪ್ತ ನವರಾತ್ರಿ

ಜುಲೈ 7, 2024 – ಜಗನ್ನಾಥ ಪುರಿ ರಥ ಯಾತ್ರಾ

ಜುಲೈ 9, 2024 – ಚತುರ್ಥಿ ವ್ರತ

ಜುಲೈ 11, 2024 – ಕುಮಾರ ಷಷ್ಠಿ

ಜುಲೈ 14, 2024 – ದುರ್ಗಾಷ್ಟಮಿ ವ್ರತ

ಜುಲೈ 16, 2024 – ಕರ್ಕ ಸಂಕ್ರಾಂತಿ

ಜುಲೈ 17, 2024 – ಶಯನ ಏಕಾದಶಿ

ಜುಲೈ 19, 2024 – ಜಯ ಪಾರ್ವತಿ ವ್ರತ, ಪ್ರದೋಶ ವ್ರತ

ಜುಲೈ 21, 2024 – ಗುರು ಪೂರ್ಣಿಮೆ, ಶ್ರೀ ಸತ್ಯನಾರಾಯಣ ವ್ರತ, ವ್ಯಾಸ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಪೂರ್ಣಿಮಾ ವ್ರತ, ಪೂರ್ಣಿಮಾ

ಆಷಾಢ ಮಾಸದಲ್ಲಿ ಅನುಸರಿಸಬೇಕಾದ ನಿಯಮಗಳು

* ಆಷಾಢ ಮಾಸದಲ್ಲಿ ಸೀತಾ ಫಲ ಮತ್ತು ಕಲ್ಲಂಗಡಿಯಂತಹ ನೀರಿನಂಶ ಹೆಚ್ಚಿರುವ ಹಣ್ಣುಗಳನ್ನು ತಿನ್ನಿ.

* ಜಿಡ್ಡು ಮತ್ತು ಎಣ್ಣೆಯುಕ್ತ ಆಹಾರದಿಂದ ದೂರವಿರಿ.

* ವಿಷ್ಣು ಸಹಸ್ರನಾಮ ಪಠಿಸಿ. ಇದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

* ಆಷಾಢ ಮಾಸದ ಏಕಾದಶಿ, ಅಮವಾಸ್ಯೆ ಮತ್ತು ಹುಣ್ಣಿಮೆಯಲ್ಲಿ ಅಗತ್ಯವಿರುವವರಿಗೆ ದಾನ ಮಾಡಬಹುದು. ಅವುಗಳಲ್ಲಿ ಪಾದರಕ್ಷೆ, ನೆಲ್ಲಿಕಾಯಿ, ಮಾವಿನಹಣ್ಣು, ಕಲ್ಲಂಗಡಿ ಹಣ್ಣು, ಸಿಹಿತಿಂಡಿ ಮತ್ತು ಮುಂತಾದ ಉಡುಗೊರೆಗಳನ್ನು ನೀಡಬಹುದು. ಹೀಗೆ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರ ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ ಭಟ್‌