ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶಿವನ 3ನೇ ಕಣ್ಣು ಸೃಷ್ಟಿಯಾಗಿದ್ದು ಹೇಗೆ? ದೇವಿ ಪಾರ್ವತಿ ಮಾಡಿದ ಆ ತಮಾಷೆಯಿಂದಾಗಿ ಬ್ರಹ್ಮಾಂಡಕ್ಕೆ ಎದುರಾದ ಸಂಕಷ್ಟವೇನು?

ಶಿವನ 3ನೇ ಕಣ್ಣು ಸೃಷ್ಟಿಯಾಗಿದ್ದು ಹೇಗೆ? ದೇವಿ ಪಾರ್ವತಿ ಮಾಡಿದ ಆ ತಮಾಷೆಯಿಂದಾಗಿ ಬ್ರಹ್ಮಾಂಡಕ್ಕೆ ಎದುರಾದ ಸಂಕಷ್ಟವೇನು?

ಸನಾತನ ಧರ್ಮದಲ್ಲಿ ಶಿವನ ಪೂಜೆಯನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಅವನನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ. ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರವಾಗುತ್ತದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನು ತ್ರಿನೇತ್ರನಾದದ್ದು ಹೇಗೆ? ಅದರ ಹಿಂದಿರುವ ಸ್ವಾರಸ್ಯಕರ ಕಥೆ ಹೀಗಿದೆ. (ಬರಹ: ಅರ್ಚನಾ ವಿ ಭಟ್‌)

ಶಿವನ 3ನೇ ಕಣ್ಣು ಸೃಷ್ಟಿಯಾಗಿದ್ದು ಹೇಗೆ? ದೇವಿ ಪಾರ್ವತಿ ಮಾಡಿದ ಆ ತಮಾಷೆಯಿಂದಾಗಿ ಬ್ರಹ್ಮಾಂಡಕ್ಕೆ ಎದುರಾದ ಸಂಕಷ್ಟವೇನು?
ಶಿವನ 3ನೇ ಕಣ್ಣು ಸೃಷ್ಟಿಯಾಗಿದ್ದು ಹೇಗೆ? ದೇವಿ ಪಾರ್ವತಿ ಮಾಡಿದ ಆ ತಮಾಷೆಯಿಂದಾಗಿ ಬ್ರಹ್ಮಾಂಡಕ್ಕೆ ಎದುರಾದ ಸಂಕಷ್ಟವೇನು?

ಹಿಂದೂ ಧರ್ಮದಲ್ಲಿ ದೇವರ ಆರಾಧನೆಗೆ ಬಹಳ ಮಹತ್ವವಿದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನ ಪೂಜೆಗೆ ವಿಶೇಷ ಮಹತ್ವ ನೀಡಲಾಗಿದೆ. ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಮತ್ತು ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

ಶಿವನನ್ನು ಶಂಕರ, ಮಹಾದೇವ, ತ್ರಿನೇತ್ರ, ಭೋಲೇನಾಥ, ನೀಲಕಂಠ, ಗಂಗಾಧರ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಶಿವನ ಪ್ರತಿ ಹೆಸರಿನ ಹಿಂದೆ ಪುರಾಣದ ಕಥೆಯಿದೆ. ಶಿವನು ವಿಷವನ್ನು ಕುಡಿದು ನೀಲಕಂಠನಾದನು, ಗಂಗೆಯನ್ನು ಜಟೆಯಲ್ಲಿರಿಸಿಕೊಂಡಿರುವುದರಿಂದ ಗಂಗಾಧರನಾದನು ಎಂದೆಲ್ಲಾ ಕಥೆಗಳನ್ನು ಕೇಳಿದ್ದೇವೆ. ಆದರೆ ಶಿವನಿಗೆ ಮೂರು ಕಣ್ಣುಗಳು ಅಂದರೆ ತ್ರಿನೇತ್ರ ಹೇಗೆ ಬಂದವು? ಇದೊಂದು ಸ್ವಾರಸ್ಯಕರ ಕಥೆ. ಇದು ಮಾತೆ ಪಾರ್ವತಿಗೆ ಸಂಬಂಧಿಸಿದೆ. ಹಾಗಾದರೆ ಆ ಕಥೆಯೇನು? ಶಿವ ತ್ರೀನೇತ್ರನಾಗಿದ್ದು ಹೇಗೆ? ಇಲ್ಲಿದೆ ಓದಿ.

ಈಶ್ವರ ತ್ರಿನೇತ್ರನಾಗಿದ್ದು ಹೇಗೆ?

ಒಮ್ಮೆ ಶಿವ ಮತ್ತು ಪಾರ್ವತಿ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಪಾರ್ವತಿ ದೇವಿಯು ತಮಾಷೆಗಾಗಿ ಶಿವನ ಕಣ್ಣನ್ನು ಮುಚ್ಚಿದಳು. ಜಗತ್ಪಾಲಕನಾದ ಶಿವನ ಕಣ್ಣನ್ನು ಮುಚ್ಚಿದ್ದರಿಂದ ಇಡೀ ವಿಶ್ವವೇ ಅಂಧಕಾರದಲ್ಲಿ ಮುಳುಗಿತು. ಆದಿ ಶಕ್ತಿಯು ಮಾಡಿದ ಈ ತಮಾಷೆಯ ಪರಿಣಾಮವನ್ನು ಇಡೀ ಬ್ರಹ್ಮಾಂಡವೇ ಎದುರಿಸಬೇಕಾಯಿತು. ಆ ಸಮಯದಲ್ಲಿ ಎಲ್ಲಾ ಜೀವಿಗಳು ಭಯಗೊಂಡವು. ವಿಶ್ವದಲ್ಲಿ ಕೋಲಾಹಲ ಉಂಟಾಯಿತು. ಪ್ರಪಂಚದ ವಿನಾಶವನ್ನು ನಿಲ್ಲಿಸಲು ಶಿವನ ಎರಡು ಕಣ್ಣುಗಳ ಮಧ್ಯೆ ಬೆಳಕಿನ ಕಿರಣವೊಂದು ಕಾಣಿಸಿಕೊಂಡಿತು. ಇದರಿಂದಾಗಿ ವಿಶ್ವದಾದ್ಯಂತ ಮತ್ತೆ ಎಲ್ಲಡೆ ಬೆಳಕು ಮೂಡಿತು. ಸೃಷ್ಠಿಯ ಕಾರ್ಯಗಳು ಮತ್ತೆ ಪ್ರಾರಂಭವಾಯಿತು. ಅಂದಿನಿಂದ ಶಿವನು ತ್ರಿನೇತ್ರನಾದನು. ಶಿವನು ಕೋಪಗೊಂಡಾಗಲೂ ಅವನ ಮೂರನೇ ಕಣ್ಣು ತೆರೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಜಗತ್ತನ್ನು ರಕ್ಷಿಸುವ ಶಿವ

ಮಹಾದೇವನ ಮೂರನೇ ಕಣ್ಣಿಗೆ ಸಂಬಂಧಿಸಿದಂತೆ ಅದು ಭೂತ, ವರ್ತಮಾನ ಮತ್ತು ಭವಿಷ್ಯವನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಅದನ್ನು ಸ್ವರ್ಗಲೋಕ, ಪಾತಾಳಲೋಕಗಳಿಗೂ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಶಿವನ ಮೂರು ಕಣ್ಣುಗಳು ಜಗತ್ತನ್ನು ರಕ್ಷಿಸುವ ಕಾರ್ಯ ಮಾಡುತ್ತವೆ ಎಂದು ನಂಬಲಾಗಿದೆ. ಆ ದಿವ್ಯ ಕಣ್ಣುಗಳು ಮುಚ್ಚಲ್ಪಟ್ಟರೆ ಸೃಷ್ಠಿಯಲ್ಲಿ ವಿನಾಶದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶಿವನು ತನ್ನ ಮೂರನೇ ಕಣ್ಣನ್ನು ತೆರೆದಾಗ ಹೊಸ ಯುಗ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ ಭಟ್‌