ಭಾರತದ ಮೊದಲ ಭಕ್ತಿ ಪ್ರಧಾನ ಒಟಿಟಿ ಪ್ಲಾಟ್‌ಫಾರ್ಮ್‌ ಹರಿ ಓಂ ಲೋಕಾರ್ಪಣೆ; ಚಂದಾದಾರಿಕೆ ಪಡೆಯಲು ವರ್ಷಕ್ಕೆ 36 ರೂ. ಮಾತ್ರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಾರತದ ಮೊದಲ ಭಕ್ತಿ ಪ್ರಧಾನ ಒಟಿಟಿ ಪ್ಲಾಟ್‌ಫಾರ್ಮ್‌ ಹರಿ ಓಂ ಲೋಕಾರ್ಪಣೆ; ಚಂದಾದಾರಿಕೆ ಪಡೆಯಲು ವರ್ಷಕ್ಕೆ 36 ರೂ. ಮಾತ್ರ

ಭಾರತದ ಮೊದಲ ಭಕ್ತಿ ಪ್ರಧಾನ ಒಟಿಟಿ ಪ್ಲಾಟ್‌ಫಾರ್ಮ್‌ ಹರಿ ಓಂ ಲೋಕಾರ್ಪಣೆ; ಚಂದಾದಾರಿಕೆ ಪಡೆಯಲು ವರ್ಷಕ್ಕೆ 36 ರೂ. ಮಾತ್ರ

ಇಷ್ಟು ದಿನಗಲ ಕಾಲ ಅಡಲ್ಟ್‌ ಕಂಟೆಂಟ್‌ಗಳನ್ನು ಪ್ರಸಾರ ಮಾಡುತ್ತಿದ್ದ ಉಲ್ಲು ಒಟಿಟಿ ಪ್ಲಾಟ್‌ಫಾರ್ಮ್‌ ಮಾಲೀಕ ವಿಭು ಅಗರ್‌ವಾಲ್‌, ಈಗ ಹರಿ ಓಂ ಎಂದ ಭಕ್ತಿ ಪ್ರಧಾನ ಒಟಿಟಿ ಪ್ಲಾಟ್‌ಫಾರ್ಮ್‌ ಪರಿಚಯಿಸಿದ್ದಾರೆ. ಆಸಕ್ತರು ವರ್ಷಕ್ಕೆ 36 ರೂ. ಪಾವತಿಸಿ ಚಂದಾದಾರಿಕೆ ಪಡೆಯಬಹುದು.

ಭಾರತದ ಮೊದಲ ಭಕ್ತಿ ಪ್ರಧಾನ ಒಟಿಟಿ ಪ್ಲಾಟ್‌ಫಾರ್ಮ್‌ ಹರಿ ಓಂ ಲೋಕಾರ್ಪಣೆ; ಚಂದಾದಾರಿಕೆ ಪಡೆಯಲು ವರ್ಷಕ್ಕೆ 36 ರೂ. ಮಾತ್ರ
ಭಾರತದ ಮೊದಲ ಭಕ್ತಿ ಪ್ರಧಾನ ಒಟಿಟಿ ಪ್ಲಾಟ್‌ಫಾರ್ಮ್‌ ಹರಿ ಓಂ ಲೋಕಾರ್ಪಣೆ; ಚಂದಾದಾರಿಕೆ ಪಡೆಯಲು ವರ್ಷಕ್ಕೆ 36 ರೂ. ಮಾತ್ರ

ಕೋವಿಡ್‌ ಸಮಸ್ಯೆ ನಂತರ ಭಾರತದಲ್ಲಿ ಒಟಿಟಿ ಬಳಕೆದಾರರ ಸಂಖ್ಯೆ ಬಹಳ ಹೆಚ್ಚಾಗಿದೆ. ಈಗಂತೂ ಹೊರಗೆ ಹೋಗಿ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಜನರನ್ನು ಮತ್ತೆ ಥಿಯೇಟರ್‌ನತ್ತ ಕರೆ ತರಲು ಥಿಯೇಟರ್‌, ಮಲ್ಟಿಪ್ಲೆಕ್ಸ್‌ ಮಾಲೀಕರು ಪ್ರಯತ್ನ ಮಾಡುತ್ತಿದ್ದರೆ, ಮತ್ತೊಂದೆಡೆ ಒಟಿಟಿ ಮೂಲಕವೇ ಜನರಿಗೆ ಬೇಕಾದ ಕಂಟೆಂಟ್‌ ಒದಗಿಸಲು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಜ್ಜಾಗಿವೆ.

ವರ್ಷಕ್ಕೆ 36 ರೂ. ಮಾತ್ರ

ಈ ನಿಟ್ಟಿನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಭಕ್ತಿ ಪ್ರಧಾನ ಒಟಿಟಿ ಪ್ಲಾಟ್‌ಫಾರ್ಮ್‌ ಆರಂಭವಾಗಿದೆ. ಜೂನ್‌ 27(ಗುರುವಾರ) ಹರಿ ಓಂ ಎಂಬ ಭಕ್ತಿ ಪ್ರಧಾನ ಒಟಿಟಿ ವೇದಿಕೆ ಲಾಂಚ್‌ ಆಗಿದೆ. ಇದುವರೆಗೂ ಉಲ್ಲು ಪ್ಲಾಟ್‌ಫಾರ್ಮ್‌ ಅಡಿ ಅಡಲ್ಟ್‌ ಕಂಟೆಂಟ್‌ ಒದಗಿಸುತ್ತಿದ್ದ ವಿಭು ಅಗರ್ವಾಲ್, ಈಗ ಆಧ್ಯಾತ್ಮ, ಧಾರ್ಮಿಕತೆಯಲ್ಲಿ ಆಸಕ್ತಿ ಇರುವವರಿಗಾಗಿ ಹರಿ ಓಂ ಎಂಬ ಭಕ್ತಿ ಪ್ರಧಾನ ಒಟಿಟಿ ಪ್ಲಾಟ್‌ಫಾರ್ಮ್‌ ಆರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಹರಿ ಓಂ ಬಗ್ಗೆ ಮಾಹಿತಿ ನೀಡಿದ್ದ ವಿಭು ಅಗರ್ವಾಲ್‌ ಗುರುವಾರ ಹೊಸ ಒಟಿಟಿ ಚಾನೆಲ್‌ ಲೋಕಾರ್ಪಣೆ ಮಾಡಿದ್ದಾರೆ. ಜನರು 36 ರೂ. ನೀಡಿ ಚಂದಾದಾರಿಕೆ ಪಡೆಯಬಹುದು. ಇದರಲ್ಲಿ ವಿಶೇಷ ಎಂದರೆ ಈ ಹಣ ತಿಂಗಳಿಗೆ ಅಲ್ಲ, ವರ್ಷಕ್ಕೆ. ಹೌದು , ಒಮ್ಮೆ ನೀವು 36 ರೂ. ನೀಡಿ ಸಬ್ಸ್‌ಕ್ರಿಪ್ಷನ್‌ ಪಡೆದರೆ ಒಂದು ವರ್ಷದವರೆಗೂ ಯಾವ ಹಣ ಪಾವತಿ ಮಾಡಬೇಕಿಲ್ಲ.

20ಕ್ಕೂ ಹೆಚ್ಚು ಕಂಟೆಂಟ್‌ಗಳ ಪ್ರಸಾರ

ಈ ಪ್ಲಾಟ್‌ಫಾರ್ಮ್‌ನಲ್ಲಿ ಭಾರತದ ಸಂಸ್ಕೃತಿ ಸಂಪ್ರದಾಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು, ಭಕ್ತಿ ಪ್ರಧಾನ ಸಿನಿಮಾಗಳು, ಧಾರಾವಾಹಿಗಳು ಪ್ರಸಾರವಾಗಲಿದೆ. ತಿರುಪತಿ ಬಾಲಾಜಿ, ಛಾಯಾ ಗ್ರಹ ರಾಹು ಕೇತು, ಮಾ ಲಕ್ಷ್ಮೀ, ಮಾತಾ ಸರಸ್ವತಿ, ಜೈ ಜಗನ್ನಾಥ್‌ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಪೌರಾಣಿಕ ಧಾರಾವಾಹಿಗಳು ಪ್ರಸಾರ ಆರಂಭಿಸಿವೆ. ದೊಡ್ಡ ಬಜೆಟ್‌ನಲ್ಲಿ ಈ ಧಾರಾವಾಹಿಗಳನ್ನು ನಿರ್ಮಿಸಲಾಗುತ್ತಿದೆ. ಕೃಷ್ಣನಾಗಿ ಶರದ್‌ ಮಲ್ಹೋತ್ರಾ, ಸರಸ್ವತಿಯಾಗಿ ರಿತಿ ಪಾಂಡೆ, ಲಕ್ಷ್ಮೀ ಆಗಿ ಯುಕ್ತಿ ಕಪೂರ್‌, ರಾಹು ಕೇತು ಆಗಿ ಮೃಣಾಲ್‌ ಜೈನ್‌, ವಿಷ್ಣುವಾಗಿ ವಿಶಾಲ್‌ ಕರ್ವಾಲ್‌ ಪಾತ್ರ ನಿರ್ವಹಿಸುತ್ತಿದ್ದಾರೆ.

ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಕಂಟೆಂಟ್‌ಗಳು

ಮಕ್ಕಳು, ಯುವ ಜನತೆ, ಹಿರಿಯರೆಲ್ಲಾ ಇಷ್ಟ ಪಡುವ, ಎಲ್ಲರೂ ಒಟ್ಟಾಗಿ ಕುಳಿತು ನೋಡಬಹುದಾದ ಕಂಟೆಂಟ್‌ಗಳನ್ನು ಈ ವೇದಿಕೆಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದರ ಜೊತೆಗೆ ಆಡಿಯೋ , ವಿಡಿಯೋ ಫಾರ್ಮಾಟ್‌ನಲ್ಲಿ ಭಜನೆಗಳು, ಅನಿಮೇಷನ್‌ ಕಂಟೆಂಟ್‌ಗಳು, ಪ್ರಸಿದ್ಧ ದೇವಸ್ಥಾನಗಳ ಬಗ್ಗೆ ಮಾಹಿತಿ ಸೇರಿದಂತೆ ಇನ್ನೂ ಅನೇಕ ವಿಚಾರಗಳನ್ನು ಪ್ರಸಾರ ಮಾಡಲು ಕಂಟೆಂಟ್‌ ಸಿದ್ಧಪಡಿಸಲಾಗಿದೆ. ಆಸಕ್ತರು ವರ್ಷಕ್ಕೆ 36 ರೂ ನೀಡಿ ಸಬ್ಸ್‌ಕ್ರಿಪ್ಷನ್‌ ಪಡೆಯಬಹುದು. ಹರಿ ಓಂ ಅಪ್ಲಿಕೇಶನ್ ಪ್ಲೇ ಸ್ಟೋರ್, ಆಪ್ ಸ್ಟೋರ್, ಗೂಗಲ್ ಟಿವಿ, ಸ್ಯಾಮ್‌ಸಂಗ್‌ ಟಿವಿ, ಆಪಲ್ ಟಿವಿ, ಎಲ್‌ಜಿ ಟಿವಿ ಮತ್ತು ಫೈರ್ ಟಿವಿಯಲ್ಲಿ ಲಭ್ಯವಿದೆ.

 

 

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.