ಮೇಷ ಸೇರಿದಂತೆ ಹನುಮಂತನ ಮೆಚ್ಚಿನ ರಾಶಿಗಳಿವು; ಏನೇ ಕಷ್ಟವಿದ್ದರೂ ಕ್ಷಣ ಮಾತ್ರದಲ್ಲಿ ಪರಿಹರಿಸುತ್ತಾನೆ ವಾಯುಪುತ್ರ
Lord Hanumanu: ಭಕ್ತರು ಪ್ರತಿ ಮಂಗಳವಾರ, ಶನಿವಾರ ಹನುಮಂತನನ್ನು ಪೂಜಿಸುತ್ತಾರೆ. ಆಂಜನೇಯನನ್ನು ಪೂಜಿಸಿದರೆ ಶನಿ ಪ್ರಭಾವ ಸೇರಿದಂತೆ ಎಷ್ಟೋ ಕಷ್ಟಗಳು ನಿವಾರಣೆಯಾಗುತ್ತದೆ. ಅದರಲ್ಲೂ ಕೆಲವೊಂದು ರಾಶಿಗಳ ಮೇಲೆ ಹನುಮಂತನ ವಿಶೇಷ ಆಶೀರ್ವಾದ ಇದ್ದು ಕ್ಷಣ ಮಾತ್ರದಲ್ಲಿ ಅವರ ಕಷ್ಟಗಳನ್ನು ಪರಿಹರಿಸುತ್ತಾನೆ.
ಹಿಂದೂ ಧರ್ಮದ ಪ್ರಕಾರ, ವಾರದ ಏಳು ದಿನಗಳಲ್ಲಿ ಪ್ರತಿ ದಿನವೂ ಬೇರೆ ಬೇರೆ ದೇವರಿಗೆ ಸಮರ್ಪಿತವಾಗಿದೆ. ಇಂದು ಮಂಗಳವಾರ, ಕೆಲವರು ಹನುಮಂತನನ್ನು ಮಂಗಳವಾರ ಪೂಜಿಸಿದರೆ, ಕೆಲವೆಡೆ ಶನಿವಾರ ಆರಾಧಿಸುತ್ತಾರೆ. ಈ ಎರಡೂ ದಿನಗಳಲ್ಲಿ ಯಾವ ದಿನವಾದರೂ ನೀವು ಹನುಮಂತನನ್ನು ಪೂಜಿಸುವುದರಿಂದ ಶುಭಫಲ ನೀಡುತ್ತಾನೆ.
ಇಂದು ಬಜರಂಗ ಬಲಿಯನ್ನು ಪೂಜಿಸುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಹನುಮಂತನನ್ನು ಮೆಚ್ಚಿಸಲು, ಭಕ್ತರು ಈ ದಿನ ಕೆಲವು ವಿಶೇಷ ಪ್ರಾರ್ಥನೆ ಮಾಡುತ್ತಾರೆ. ಉಪವಾಸ ಆಚರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರದವರಿಗೆ ಹನುಮಂತ ವಿಶೇಷ ಆಶೀರ್ವಾದ ನೀಡುತ್ತಾನೆ. ಆ ರಾಶಿಗಳು ಯಾವುವು ನೋಡೋಣ.
ಮೇಷ ರಾಶಿ
ಹನುಮಂತ ಮೆಚ್ಚಿನ ರಾಶಿಗಳಲ್ಲಿ ಮೇಷ ಮೊದಲನೆಯದ್ದು. ಈ ರಾಶಿಯವರಿಗೆ ಬಜರಂಗಬಲಿಯ ವಿಶೇಷ ಆಶೀರ್ವಾದವಿದೆ. ಇವರಲ್ಲಿ ಇಚ್ಛಾಶಕ್ತಿ ಹೆಚ್ಚಿರುತ್ತದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ. ಏನೇ ಕಷ್ಟ ಬಂದರೂ ಈ ರಾಶಿಯವರಿಗೆ ಹೆಚ್ಚು ದಿನಗಳು ಇರುವುದಿಲ್ಲ. ಮಂಗಳವಾರ ಆಂಜನೇಯನನ್ನು ಪೂಜಿಸುವುದರಿಂದ ಸಕಲ ಸಂಕಷ್ಟಗಳು ದೂರವಾಗುವುದಲ್ಲದೆ ಆರ್ಥಿಕ ಸಮಸ್ಯೆಗಳು ಕೂಡಾ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.
ಸಿಂಹ ರಾಶಿ
ಹನುಮಂತನ ಎರಡನೇ ನೆಚ್ಚಿನ ಚಿಹ್ನೆ ಸಿಂಹ ರಾಶಿ. ಅವರಿಗೆ ಹನುಮಂತನ ವಿಶೇಷ ಕೃಪೆ ಈ ರಾಶಿಯವರ ಮೇಲೆ ಸದಾ ಇದೆ. ಯಾವಾಗಲೂ ಈ ರಾಶಿಯವರನ್ನು ರಕ್ಷಿಸುತ್ತಾನೆ. ಆದ್ದರಿಂದ ಈ ರಾಶಿಯವರು ಯಾವುದೇ ಕೆಲಸ ಆರಂಭಿಸಿದರೂ ಯಶಸ್ವಿಯಾಗುತ್ತಾರೆ. ಇವರಿಗೂ ಎಂದಿಗೂ ಹಣದ ಸಮಸ್ಯೆ ಕಾಡುವುದಿಲ್ಲ. ಮಂಗಳವಾರ ಮತ್ತು ಶನಿವಾರದಂದು ಹನುಮಂತನನ್ನು ಪೂಜಿಸುವುದರಿಂದ ಸಿಂಹ ರಾಶಿಯವರಿಗೆ ಆರ್ಥಿಕ ಸಮಸ್ಯೆಗಳು ಹೆಚ್ಚು ಕಾಲ ಉಳಿಯುವುದಿಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಆಂಜನೇಯನ ವಿಶೇಷ ಕೃಪೆ ಇರುತ್ತದೆ. ಆದ್ದರಿಂದ ಅವರು ತೊಂದರೆಯಿಂದ ದೂರವಿರುತ್ತಾರೆ. ಈ ರಾಶಿಯವರಿಗೆ ಬಲವಾದ ಆರ್ಥಿಕ ಬೆಂಬಲ ಇರುತ್ತದೆ. ಹನುಮಂತನ ಕೃಪೆಯಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಸದಾ ಪ್ರಗತಿ ಕಾಣಲಿದ್ದಾರೆ. ಮಂಗಳವಾರದಂದು ಭಜರಂಗಬಲಿಯನ್ನು ಪೂಜಿಸುವುದರಿಂದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಎಂದೂ ಹಣದ ಕೊರತೆ ಕಾಡುವುದಿಲ್ಲ. ಅವರು ನಿಸ್ವಾರ್ಥವಾಗಿದ್ದರೆ ಹನುಮಂತನು ಖಂಡಿತವಾಗಿಯೂ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.
ಕುಂಭ ರಾಶಿ
ಶನಿಯ ಸ್ವಂತ ರಾಶಿಯಾದ ಕುಂಭ ರಾಶಿ ಕೂಡಾ ಹನುಮಂತನ ನೆಚ್ಚಿನ ರಾಶಿ. ಅದಕ್ಕಾಗಿಯೇ ಅವರಿಗೆ ಆಂಜನೇಯನ ಆಶೀರ್ವಾದ ಸದಾ ಇರುತ್ತದೆ. ಹನುಮಂತನ ಕೃಪೆಯಿಂದ ನೀವು ಎಲ್ಲದರಲ್ಲೂ ಯಶಸ್ವಿಯಾಗುತ್ತೀರಿ. ಆರ್ಥಿಕ ಪ್ರಗತಿ ಇರುತ್ತದೆ. ಈ ರಾಶಿಯವರ ಯಾವುದೇ ಕೆಲಸದಲ್ಲಿ ಯಾವುದೇ ಅಡೆತಡೆಗಳೂ ಇರುವುದಿಲ್ಲ. ಆಂಜನೇಯನ ಕೃಪೆಯಿಂದ ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ಮಂಗಳವಾರ ಹನುಮಾನ್ ಚಾಲೀಸಾ ಪಠಿಸುವುದರಿಂದ ಕುಂಭ ರಾಶಿಯವರಿಗೆ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಪರಿಹಾರಗಳು
ಮೇ 28 ರಂದು ದೊಡ್ಡ ಮಂಗಳವಾರ ಅಥವಾ ಬೃಹನ್ಮಂಗಳ ಎಂಬ ಆಚರಣೆ ಇದೆ. ಇಂದು ಸಂಜೆ ಭಕ್ತರು ಹನುಮನ ಪ್ರಾರ್ಥನೆ ಮಾಡುವುದರಿಂದ ಇನ್ನಷ್ಟು ವಿಶೇಷ ಫಲಗಳನ್ನು ಪಡೆಯಬಹುದು. ಶನಿಯ ದುಷ್ಪರಿಣಾಮದಿಂದ ಬಳಲುತ್ತಿರುವವರು ಹನುಮಂತನನ್ನು ಆರಾಧಿಸಿ ಶನಿದೃಷ್ಟಿಯಿಂದ ಮುಕ್ತಿ ಹೊಂದುತ್ತಾರೆ. ಈ ದಿನ 7 ಅಥವಾ 11 ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಎಲ್ಲಾ ದೋಷಗಳಿಂದ ಎಲ್ಲಾ ಕಷ್ಟಗಳಿಂದ ವಿಮುಕ್ತಿ ಹೊಂದಬಹುದು.
ಮಂಗಳವಾರದಂದು ಹನುಮಂತನಿಗೆ ಬಾಳೆಹಣ್ಣು , ಕಡ್ಲೆ ಹಿಟ್ಟು ಅಥವಾ ಬೂಂದಿ ಲಡ್ಡು ಅರ್ಪಿಸುವುದು ಮಂಗಳಕರ. ಪೂಜೆಯ ಸಮಯದಲ್ಲಿ ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ತುಂಬಾ ಮಂಗಳಕರವಾಗಿದೆ. ಹನುಮಂತನ ನೆಚ್ಚಿನ ಬಣ್ಣ ಕೆಂಪು ಎಂದು ಪರಿಗಣಿಸಲಾಗಿದೆ. ಆದ್ದರಿಂದ ಹನುಮನಿಗೆ ಕೆಂಪು ಗುಲಾಬಿ ಹೂಗಳನ್ನು ಮತ್ತು ಮಾಲೆಗಳನ್ನು ಅರ್ಪಿಸಬೇಕು. ಮಲ್ಲಿಗೆ ಎಣ್ಣೆಗೆ ಕುಂಕುಮವನ್ನು ಬೆರೆಸಿ ದೇವರಿಗೆ ಅರ್ಪಿಸಿದರೆ ಹನುಮಂತನ ಅನುಗ್ರಹ ದೊರೆಯುತ್ತದೆ. ಹಾಗೆಯೇ ಓಂ ಹನು ಹನು ಹನುಮತೇ ನಮಃ ಎಂಬ ಮಂತ್ರವನ್ನು ಜಪಿಸಿದರೆ ಒಳ್ಳೆಯದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.