ಪಂಚಮುಖಿ ರುದ್ರಾಕ್ಷಿ ಎಂದರೇನು? ಶಿವನ ಸ್ವರೂಪವಾದ ರುದ್ರಾಕ್ಷಿಯನ್ನು ಧರಿಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪಂಚಮುಖಿ ರುದ್ರಾಕ್ಷಿ ಎಂದರೇನು? ಶಿವನ ಸ್ವರೂಪವಾದ ರುದ್ರಾಕ್ಷಿಯನ್ನು ಧರಿಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು?

ಪಂಚಮುಖಿ ರುದ್ರಾಕ್ಷಿ ಎಂದರೇನು? ಶಿವನ ಸ್ವರೂಪವಾದ ರುದ್ರಾಕ್ಷಿಯನ್ನು ಧರಿಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು?

ಶಿವನ ಸ್ವರೂಪವಾದ ರುದ್ರಾಕ್ಷಿಯನ್ನು ಧರಿಸುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಬಹಳ ಪ್ರಯೋಜನಗಳಿವೆ. ಆದರೆ ಯಾವ ರೀತಿಯ ರುದ್ರಾಕ್ಷಿಯನ್ನು ಧರಿಸಬೇಕು ಎಂಬುದನ್ನು ತಿಳಿಯುವುದು ಮುಖ್ಯ. ಪಂಚಮುಖಿ ರುದ್ರಾಕ್ಷಿ ಎಂದರೇನು? ಶಿವನ ಸ್ವರೂಪವಾದ ರುದ್ರಾಕ್ಷಿಯನ್ನು ಧರಿಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಪಂಚಮುಖಿ ರುದ್ರಾಕ್ಷಿ ಎಂದರೇನು? ಶಿವನ ಸ್ವರೂಪವಾದ ರುದ್ರಾಕ್ಷಿಯನ್ನು ಧರಿಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು? (ಸಾಂದರ್ಭಿಕ ಚಿತ್ರ)
ಪಂಚಮುಖಿ ರುದ್ರಾಕ್ಷಿ ಎಂದರೇನು? ಶಿವನ ಸ್ವರೂಪವಾದ ರುದ್ರಾಕ್ಷಿಯನ್ನು ಧರಿಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು? (ಸಾಂದರ್ಭಿಕ ಚಿತ್ರ) (PC: Unsplash)

ಪಂಚಮುಖಿ ರುದ್ರಾಕ್ಷಿ: ರುದ್ರಾಕ್ಷಿಯು ದೈವಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇದನ್ನು ಧರಿಸುವುದರಿಂದ ಶುಭ ಜರುತ್ತದೆ ಎಂದು ನಂಬಲಾಗಿದೆ. ರುದ್ರಾಕ್ಷಿ ಧರಿಸುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಬಹಳ ಪ್ರಯೋಜನಗಳಿವೆ. ಆದರೆ ಇದನ್ನು ಧರಿಸಲು ಕೂಡಾ ಸಾಕಷ್ಟು ನಿಯಮಗಳಿವೆ. ಅದನ್ನು ಅನುಸರಿಸಿದರೆ ಸಂಪೂರ್ಣ ಪ್ರಯೋಜನ ಪಡೆಯಬಹುದು.

ಪಂಚಮುಖಿ ರುದ್ರಾಕ್ಷಿ ಎಂದರೇನು?

ರುದ್ರಾಕ್ಷಿಯನ್ನು ಶಿವನ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ತಪಸ್ಸು ಮತ್ತು ಧ್ಯಾನ ಮಾಡುವಾಗ ರುದ್ರಾಕ್ಷ ಜಪಮಾಲೆ ಅತ್ಯಗತ್ಯ. ರುದ್ರಾಕ್ಷಿಗಳಲ್ಲಿ ಹಲವು ವಿಧಗಳಿವೆ. ಇಂದು ನಾವು ಪಂಚಮುಖಿ ರುದ್ರಾಕ್ಷಿ ಬಗ್ಗೆ ತಿಳಿಯೋಣ. ಪಂಚಮುಖಿ ರುದ್ರಾಕ್ಷಿಯು ಐದು ನೈಸರ್ಗಿಕ ಭಾಗಗಳು ಅಥವಾ ಮುಖಗಳನ್ನು ಹೊಂದಿರುವ ದೈವಿಕ ಮಣಿಯಾಗಿದೆ. ಇದು ಅತ್ಯಂತ ಸಾಮಾನ್ಯವಾದ, ವ್ಯಾಪಕವಾಗಿ ಲಭ್ಯವಿರುವ ರುದ್ರಾಕ್ಷಿ ವಿಧವಾಗಿದೆ.

ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳು

ಪಂಚಮುಖಿ ರುದ್ರಾಕ್ಷಿಯು ಆಧ್ಯಾತ್ಮಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದು ಧ್ಯಾನ ಅಭ್ಯಾಸಗಳಲ್ಲಿ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದನ್ನು ಧರಿಸುವವರನ್ನು ಆಂತರಿಕ ಮನಸ್ಸಿನೊಂದಿಗೆ ಸಂಪರ್ಕಿಸುತ್ತದೆ. ಆಧ್ಯಾತ್ಮಿಕ ಜ್ಞಾನವನ್ನು ಪಡೆಯುತ್ತಾರೆ. ಸ್ವಯಂ ಸಾಕ್ಷಾತ್ಕಾರವನ್ನು ಉತ್ತೇಜಿಸುತ್ತದೆ. ಈ ರುದ್ರಾಕ್ಷಿಗಳು ಅಡೆತಡೆಗಳ ನಾಶಕ ಕಾಲಾಗ್ನಿ ರುದ್ರನಂತೆ ಶಿವನ ರೂಪದೊಂದಿಗೆ ಸಂಬಂಧ ಹೊಂದಿವೆ . ಪಂಚಮುಖಿ ರುದ್ರಾಕ್ಷಿ ಧರಿಸುವವರಿಗೆ ಯಾವುದೇ ಕೆಲಸದಲ್ಲಿ ಅಡೆತಡೆಗಳು ಇರುವುದಿಲ್ಲ. ಏನೇ ಕಷ್ಟಗಳು ಬಂದರೂ ಮಂಜಿನಂತೆ ಕರಗುತ್ತದೆ ಎಂದು ನಂಬಲಾಗಿದೆ. ಪಂಚಮುಖಿ ರುದ್ರಾಕ್ಷಿ ಧರಿಸುವುದರಿಂದ ನೀವು ಒತ್ತಡದಿಂದ ಮುಕ್ತರಾಗುತ್ತೀರಿ. ಶಾಂತಿ ಇರುತ್ತದೆ. ಮಾನಸಿಕ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಂತರಿಕ ಶಾಂತಿಯನ್ನು ಉತ್ತೇಜಿಸುತ್ತದೆ. ಭಾವನಾತ್ಮಕ ಸಮತೋಲನವನ್ನು ಕಾಪಾಡುತ್ತದೆ. ಸವಾಲುಗಳನ್ನು ಎದುರಿಸುವ ಧೈರ್ಯವನ್ನು ನೀಡುತ್ತದೆ.

ಆರೋಗ್ಯ ಪ್ರಯೋಜನಗಳು

ಪುರಾತನ ಆಯುರ್ವೇದ ಗ್ರಂಥಗಳ ಪ್ರಕಾರ, ಪಂಚಮುಖಿ ರುದ್ರಾಕ್ಷಿಯನ್ನು ಧರಿಸುವುದು ದೇಹದ ಮೇಲೆ ಚಿಕಿತ್ಸಕ ಪರಿಣಾಮವನ್ನು ಬೀರುತ್ತದೆ ಎಂದು ನಂಬಲಾಗಿದೆ. ಇದು ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ . ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ನರ ಮಂಡಲ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಂಚಮುಖಿ ರುದ್ರಾಕ್ಷವು ಉತ್ತಮ ಏಕಾಗ್ರತೆಯನ್ನು ನೀಡುತ್ತದೆ. ಮಾನಸಿಕ ಆರೋಗ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಇದು ಮೂರನೇ ಕಣ್ಣು ಎಂಬ ಆಜ್ಞಾ ಚಕ್ರವನ್ನು ಪ್ರಚೋದಿಸುತ್ತದೆ. ಬುದ್ಧಿಶಕ್ತಿ ಮತ್ತು ಅಂತಃಪ್ರಜ್ಞೆಯನ್ನು ತೀಕ್ಷ್ಣಗೊಳಿಸುತ್ತದೆ.

ಪಂಚಮುಖಿ ರುದ್ರಾಕ್ಷಿಯನ್ನು ಧರಿಸುವ ನಿಯಮಗಳು

ಮೊದಲ ಬಾರಿಗೆ ಪಂಚಮುಖಿ ರುದ್ರಾಕ್ಷಿ ಧರಿಸುವವರು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು.

  • ಶಾಸ್ತ್ರದ ಪ್ರಕಾರ ಪೂಜೆ ಮಾಡಬೇಕು. ಪುರೋಹಿತರು ರುದ್ರಾಕ್ಷಿ ಮುಂದೆ ವೇದ ಮಂತ್ರಗಳನ್ನು ಪಠಿಸಿ ಧಾರ್ಮಿಕ ಆಚರಣೆಗಳೊಂದಿಗೆ ಶಕ್ತಿ ತುಂಬುತ್ತಾರೆ. ಈ ಪ್ರಕ್ರಿಯೆಯು ರುದ್ರಾಕ್ಷಿಯ ಬಲವನ್ನು ಹೆಚ್ಚಿಸುತ್ತದೆ. ಪಂಚಮುಖಿ ರುದ್ರಾಕ್ಷಿಯನ್ನು ದೇಹಕ್ಕೆ ತಾಗುವಂತೆ ಧರಿಸಬೇಕು. ಇದನ್ನು ಲಾಕೆಟ್ ಅಥವಾ ಬ್ರೇಸ್ಲೆಟ್ ಆಗಿ ಕೂಡಾ ಕಟ್ಟಬಹುದು. ಜಪಮಾಲೆಯಾಗಿಯೂ ಬಳಸಬಹುದು.
  • ರುದ್ರಾಕ್ಷಿ ಮಣಿಯನ್ನು ಅದರ ಶುದ್ಧತೆ ಮತ್ತು ಪರಿಣಾಮಕಾರಿತ್ವವನ್ನು ಕಾಪಾಡಿಕೊಳ್ಳಲು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಬೇಕು. ಧೂಳು ಕೂರದಂತೆ ನೋಡಿಕೊಳ್ಳಬೇಕು. ಮೃದುವಾದ ಬಟ್ಟೆಯಿಂದ ನಿಯಮಿತವಾಗಿ ಒರೆಸಿ. ಅತಿಯಾದ ತೇವಾಂಶಕ್ಕೆ ಕಠಿಣ ರಾಸಾಯನಿಕಗಳನ್ನು ಒಡ್ಡುವುದನ್ನು ತಪ್ಪಿಸಬೇಕು.
  • ಉತ್ತಮ ಪ್ರಯೋಜನಗಳನ್ನು ಪಡೆಯಲು ಪಂಚಮುಖಿ ರುದ್ರಾಕ್ಷಿಯನ್ನು ನಿಯಮಿತವಾಗಿ ಧರಿಸಬೇಕು. ವಿಶೇಷವಾಗಿ ಧ್ಯಾನ, ಪ್ರಾರ್ಥನೆಯ ಸಮಯದಲ್ಲಿ ಇದನ್ನು ಬಳಸುವುದು ಒಳ್ಳೆಯದು. ಹಾಗೆ ಮಾಡಿದರೆ ದೇವರ ಅನುಗ್ರಹ ಸಿಗುತ್ತದೆ.
  • ಪಂಚಮುಖಿ ರುದ್ರಾಕ್ಷಿಯನ್ನು ಫ್ಯಾಷನ್ ಆಗಿ ಧರಿಸಬಾರದು. ನಂಬಿಕೆ ಇದ್ದವರಷ್ಟೇ ನಿಯಮಗಳನ್ನು ಅನುಸರಿಸುವ ಮೂಲಕ ಪಂಚಮುಖಿ ರುದ್ರಾಕ್ಷಿಯನ್ನು ಧರಿಸಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.