ಹಾವು ಮನೆಯೊಳಗೆ ಬಂದರೆ ಶುಭ ಸೂಚಕವೇ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಬಣ್ಣದ ಹಾವು ಬಂದರೆ ಏನು ಅರ್ಥ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಾವು ಮನೆಯೊಳಗೆ ಬಂದರೆ ಶುಭ ಸೂಚಕವೇ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಬಣ್ಣದ ಹಾವು ಬಂದರೆ ಏನು ಅರ್ಥ?

ಹಾವು ಮನೆಯೊಳಗೆ ಬಂದರೆ ಶುಭ ಸೂಚಕವೇ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಬಣ್ಣದ ಹಾವು ಬಂದರೆ ಏನು ಅರ್ಥ?

ಎಷ್ಟೋ ಸಂದರ್ಭಗಳಲ್ಲಿ ಹಾವುಗಳು ಮನೆಯನ್ನು ಪ್ರವೇಶಿಸುತ್ತವೆ. ಹಾವು ಮನೆಯೊಳಗೆ ಬಂದರೆ ಎಲ್ಲರೂ ಗಾಬರಿ ಆಗುವುದು ಸಹಜ. ಹಾವು ಮನೆಯೊಳಗೆ ಬಂದರೆ ಶುಭ ಸೂಚಕವೇ, ಅಥವಾ ಸಮಸ್ಯೆಯೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಬಣ್ಣದ ಹಾವು ಬಂದರೆ ಏನು ಅರ್ಥ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ.

ಹಾವು ಮನೆಯೊಳಗೆ ಬಂದರೆ ಶುಭ ಸೂಚಕವೇ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಬಣ್ಣದ ಹಾವು ಬಂದರೆ ಏನು ಅರ್ಥ?
ಹಾವು ಮನೆಯೊಳಗೆ ಬಂದರೆ ಶುಭ ಸೂಚಕವೇ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಬಣ್ಣದ ಹಾವು ಬಂದರೆ ಏನು ಅರ್ಥ? (PC: Unsplash)

ಹಾವು, ಆ ಶಬ್ಧ ಕೇಳಿದೊಡನೆ ಒಮ್ಮೆ ಭಯ ಹುಟ್ಟಿಸುತ್ತದೆ. ಇನ್ನು ಎದುರಿಗೆ ಹಾವು ನೋಡಿದರೆ ಹೃದಯದ ಬಡಿತವೇ ನಿಂತು ಹೋದಂತೆ ಆಗುತ್ತದೆ. ಇದೆಲ್ಲಾ ಬಿಡಿ, ಒಂದು ವೇಳೆ ನಿಮ್ಮ ಮನೆಯೊಳಗೆ ಹಾವು ಬಂದರೆ ನಿಮಗೆ ಹೇಗಾಗಬೇಡ. ಕೆಲವೊಮ್ಮೆ ಎಷ್ಟೋ ಜನರ ಮನೆಯೊಳಗೆ ಹಾವು ಬಂದಿರುತ್ತದೆ. ಹಾಗೋ ಹೀಗೋ ಹಾವು ಹಿಡಿಯುವರನ್ನು ಕರೆದು ಹಾವನ್ನು ಹೊರಗೆ ಕಳಿಸುವ ಸಾಹಸ ಮಾಡಿದ ನಂತರವೂ ಕೆಲವು ದಿನಗಳವರೆಗೂ ಆ ಭಯ ಇದ್ದೇ ಇರುತ್ತದೆ.

ಜ್ಯೋತಿಷ್ಯಶಾಸ್ತ್ರ ಹೇಳುವುದೇನು?

ಆದರೆ ಹಾವು ಮನೆಯೊಳಗೆ ಬಂದರೆ ಅದನ್ನು ಕೆಲವರು ಶುಭವೆಂದೂ ಇನ್ನೂ ಕೆಲವರು ಸಮಸ್ಯೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಾವು ಮನೆಗೆ ಬಂದರೆ ಏನು ಅರ್ಥ? ಅದರಿಂದ ಏನಾದರೂ ಸಮಸ್ಯೆ ಇದೆಯೇ ನೋಡೋಣ. ಮನೆಯೊಳಗೆ ಹಾವು ಬರುವುದು ಶುಭ ಸೂಚಕ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಹಿಂದೂ ಸಂಪ್ರದಾಯದಲ್ಲಿ ಹಾವನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಆದಿಶೇಷ ಸರ್ಪಗಳ ರಾಜ, ಶಿವನು ಕೂಡಾ ಹಾವನ್ನು ತನ್ನ ಕತ್ತಿನಲ್ಲಿ ಸುತ್ತಿಕೊಂಡಿದ್ದಾನೆ, ಆದ್ದರಿಂದ ದೇವರ ಸ್ವರೂಪವಾಗಿರುವುದರಿಂದ ಮನೆಯೊಳಗೆ ಹಾವು ಬಂದರೆ ಅದು ಖಂಡಿತ ಏನೋ ಶುಭ ಮುನ್ಸೂಚನೆ ಎಂದು ನಂಬಲಾಗಿದೆ.

  • ಮನೆಯೊಳಗೆ ಒಂದು ವೇಳೆ ಕಪ್ಪು ಹಾವು ಬಂದರೆ ಅದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗೆ ಶಿವನ ಕೃಪೆ ದೊರೆಯಲಿದ್ದು ಕೆಲವೇ ದಿನಗಳಲ್ಲಿ ನಿಮ್ಮ ಜೀವನ ಬದಲಾಗಲಿದೆ, ನೀವು ಸಂತೋಷ ಜೀವನವನ್ನು ಗಳಿಸಲಿದ್ದೀರಿ ಎಂಬ ಅರ್ಥವನ್ನು ನೀಡುತ್ತದೆ.
  • ಹಾವಿನ ಮರಿ ಮನೆಯೊಳಗೆ ಬಂದರೆ ನೀವು ಕೆಲವು ದಿನಗಳಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳುತ್ತವೆ ಎಂದು ಅರ್ಥ.
  • ಹಾವು ಮನೆಯನ್ನು ಪ್ರವೇಶಿಸಿದರೆ ಲಕ್ಷ್ಮೀ ಆಶೀರ್ವಾದ ಕೂಡಾ ನಿಮ್ಮ ಮೇಲಿದೆ ಎಂದು ಅರ್ಥ. ಇದುವರೆಗೂ ನೀವು ಎದುರಿಸುತ್ತಿದ್ದ ನಿಮ್ಮ ಆರ್ಥಿಕ ಸಮಸ್ಯೆ ಕೊನೆಗೊಳ್ಳುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳುವುದು ಖಚಿತ.
  • ಒಂದು ವೇಳೆ ನಿಮ್ಮ ಮನೆಗೆ ಬಿಳಿ ಬಣ್ಣದ ಹಾವು ಪ್ರವೇಶಿಸಿದರೆ ಇದು ಇನ್ನಷ್ಟು ಮಂಗಳಕರ ಎನ್ನಲಾಗಿದೆ. ಇದು ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸುವಂತೆ ಮಾಡುತ್ತದೆ.

ಇದನ್ನೂ ಓದಿ: ಕೈಗೆ ಮೊಬೈಲ್‌ ಕೊಡಬೇಡಿ, ಕೈ ಮುಗಿಸಿ ಸಂಸ್ಕೃತಿ, ಸಂಪ್ರದಾಯ ಪರಿಚಯಿಸಿ; ನಿಮ್ಮ ಮಕ್ಕಳಿಗೆ ಹೇಳಿಕೊಡಬಹುದಾದ ಶ್ಲೋಕಗಳು ಇವು

  • ಇದ್ದಕ್ಕಿದ್ದಂತೆ ನಿಮ್ಮ ಮನೆಗೆ ಹಸಿರು ಹಾವು ಬಂದರೆ ಅದೂ ಕೂಡಾ ಶುಭವೇ. ಶೀಘ್ರದಲ್ಲೇ ನೀವು ಶುಭ ಸುದ್ದಿ ಕೇಳಲಿದ್ದೀರಿ, ನಿಮ್ಮ ಕಷ್ಟನಷ್ಟಗಳು ಕೊನೆಗೊಳ್ಳುತ್ತವೆ.
  • ಹಳದಿ ಬಣ್ಣದ ಹಾವು ಮನೆಗೆ ಬಂದರೆ ನೀವು ಅತಿ ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ಜೀವನದಲ್ಲಿ ಪ್ರಗತಿ ಹೊಂದಲಿದ್ದೀರಿ ಎಂದು ಅರ್ಥ.
  • ಇದಿಷ್ಟೇ ಅಲ್ಲ, ಮನೆಗೆ ಹಾವು ಬಂದರೆ ಪತಿ ಪತ್ನಿ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಜೀವನ ಸುಂದರವಾಗಿರುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಇದನ್ನೂ ಓದಿ:  ಶನಿ ಜಯಂತಿ, ಗಂಗಾ ದಸರಾ ಸೇರಿದಂತೆ ಜೂನ್‌ ತಿಂಗಳ ವಿಶೇಷ ದಿನಗಳ ಪಟ್ಟಿ; ಇದ್ರಲ್ಲಿ ನೀವು ಆಚರಿಸುವ ವ್ರತ ಯಾವುದು?

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.