ಹಿಂದೂ ಕ್ಯಾಲೆಂಡರ್‌ 3ನೇ ತಿಂಗಳು ಜ್ಯೇಷ್ಠ ಮಾಸ ಯಾವಾಗ ಆರಂಭ; ಪ್ರಾಮುಖ್ಯತೆ ಏನು, ಹನುಮಂತನನ್ನು ಪೂಜಿಸುವುದು ಏಕೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಿಂದೂ ಕ್ಯಾಲೆಂಡರ್‌ 3ನೇ ತಿಂಗಳು ಜ್ಯೇಷ್ಠ ಮಾಸ ಯಾವಾಗ ಆರಂಭ; ಪ್ರಾಮುಖ್ಯತೆ ಏನು, ಹನುಮಂತನನ್ನು ಪೂಜಿಸುವುದು ಏಕೆ?

ಹಿಂದೂ ಕ್ಯಾಲೆಂಡರ್‌ 3ನೇ ತಿಂಗಳು ಜ್ಯೇಷ್ಠ ಮಾಸ ಯಾವಾಗ ಆರಂಭ; ಪ್ರಾಮುಖ್ಯತೆ ಏನು, ಹನುಮಂತನನ್ನು ಪೂಜಿಸುವುದು ಏಕೆ?

Jyeshtha Masam 2024: ಹಿಂದೂ ಕ್ಯಾಲೆಂಡರ್‌ನ 3ನೇ ತಿಂಗಳಾದ ಜ್ಯೇಷ್ಠ ಮಾಸವು ಮೇ 24 ರಿಂದ ಆರಂಭವಾಗಿ ಜೂನ್‌ 23 ರಂದು ಕೊನೆಗೊಳ್ಳುತ್ತದೆ. ಈ ತಿಂಗಳಲ್ಲಿ ಹನುಮಂತ, ಸೂರ್ಯ, ವರುಣನನ್ನು ಪೂಜಿಸಿದರೆ ಶುಭ ಫಲ ದೊರೆಯುತ್ತದೆ. ಹಾಗೂ ನೀರನ್ನು ದಾನ ಮಾಡುವುದರಿಂದ ಕೂಡಾ ಒಳ್ಳೆಯದು ಎಂದು ನಂಬಲಾಗಿದೆ.

ಹಿಂದೂ ಕ್ಯಾಲೆಂಡರ್‌ 3ನೇ ತಿಂಗಳು ಜ್ಯೇಷ್ಠ ಮಾಸ ಯಾವಾಗ ಆರಂಭ; ಪ್ರಾಮುಖ್ಯತೆ ಏನು, ಯಾವ ದೇವರನ್ನು ಪೂಜಿಸಬೇಕು?
ಹಿಂದೂ ಕ್ಯಾಲೆಂಡರ್‌ 3ನೇ ತಿಂಗಳು ಜ್ಯೇಷ್ಠ ಮಾಸ ಯಾವಾಗ ಆರಂಭ; ಪ್ರಾಮುಖ್ಯತೆ ಏನು, ಯಾವ ದೇವರನ್ನು ಪೂಜಿಸಬೇಕು? (PC: Canva)

ಹಿಂದೂ ಕ್ಯಾಲೆಂಡರ್ ಪ್ರಕಾರ, ವೈಶಾಖ ಮಾಸವು ಹುಣ್ಣಿಮೆ ತಿಥಿಯೊಂದಿಗೆ ಕೊನೆಗೊಳ್ಳುತ್ತದೆ ಮತ್ತು ಇದರ ನಂತರ ಹಿಂದೂ ಕ್ಯಾಲೆಂಡರ್‌ನ ಮೂರನೇ ಮಾಸ, ಅಂದರೆ ಜ್ಯೇಷ್ಠ ತಿಂಗಳು ಪ್ರಾರಂಭವಾಗುತ್ತದೆ. ಈ ತಿಂಗಳಲ್ಲಿ ಸೂರ್ಯನ ಶಾಖದಿಂದ ನದಿಗಳು ಮತ್ತು ಕೊಳಗಳು ಒಣಗುತ್ತವೆ. ಈ ಕಾರಣದಿಂದ ಜ್ಯೇಷ್ಠ ಮಾಸದಲ್ಲಿ ನೀರಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಜ್ಯೇಷ್ಠ ಮಾಸದಲ್ಲಿ ಹನುಮಂತ, ಸೂರ್ಯ ದೇವ ಮತ್ತು ವರುಣ ದೇವನನ್ನು ಪೂಜಿಸುವ ಸಂಪ್ರದಾಯವಿದೆ. ಜ್ಯೇಷ್ಠ ಮಾಸ ಯಾವಾಗ ಪ್ರಾರಂಭವಾಗುತ್ತದೆ, ಈ ಮಾಸದ ಧಾರ್ಮಿಕ ಮಹತ್ವ ಏನು ತಿಳಿಯೋಣ. ಪಂಚಾಂಗದ ಪ್ರಕಾರ, ಈ ವರ್ಷ ಜ್ಯೇಷ್ಠ ಮಾಸವು ಮೇ 24 ರಿಂದ ಆರಂಭವಾಗುತ್ತದೆ. ಜೂನ್‌ 23 ರಂದು ಕೊನೆಗೊಳ್ಳುತ್ತದೆ. ಈ ಮಾಸದಲ್ಲಿ ನೀರನ್ನು ದಾನ ಮಾಡುವುದರಿಂದ ಎಲ್ಲಾ ರೀತಿಯ ಪಾಪಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಏನೇ ಕಷ್ಟಗಳಿದ್ದರೂ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.

ಜ್ಯೇಷ್ಠ ಮಾಸದ ಮಹತ್ವ

ಹನುಮಂತನು ಭಗವಾನ್ ಶ್ರೀರಾಮನನ್ನು ಭೇಟಿಯಾಗಿದ್ದು ಇದೇ ಜ್ಯೇಷ್ಠ ಮಾಸದಲ್ಲಿ ಎಂಬ ಧಾರ್ಮಿಕ ನಂಬಿಕೆಯಿದೆ. ಆದ್ದರಿಂದ, ಈ ತಿಂಗಳಲ್ಲಿ ಬರುವ ಮಂಗಳವಾರದಂದು ಉಪವಾಸ ಮಾಡಿ ಹನುಮನನ್ನು ಪೂಜಿಸುವುದರಿಂದ ವ್ಯಕ್ತಿಯು ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ ಮತ್ತು ಎಲ್ಲಾ ರೀತಿಯ ತೊಂದರೆಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಜೀವನದಲ್ಲಿ ಯಾವುದೇ ರೀತಿಯ ಭಯಗಳಿಲ್ಲದೆ ಬದುಕುತ್ತಾನೆ ಎಂದು ನಂಬಲಾಗಿದೆ.

ಜ್ಯೇಷ್ಠ ಮಾಸದಲ್ಲಿ ಈ ಕೆಲಸಗಳನ್ನು ಮಾಡಿ

ಜ್ಯೇಷ್ಠ ಮಾಸದಲ್ಲಿ ವಿಪರೀತ ಶಾಖದ ಕಾರಣ, ನೀರಿನ ಬಳಕೆ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಮಾಸದಲ್ಲಿ ನೀರನ್ನು ಸಂರಕ್ಷಿಸಬೇಕು. ಈ ಮಾಸದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ನೀರನ್ನು ದಾನ ಮಾಡುವುದರಿಂದ ಆ ವ್ಯಕ್ತಿಗಳು ಪೂರ್ವಜರಿಂದ ಆಶೀರ್ವಾದವನ್ನು ಪಡೆಯುತ್ತಾನೆ ಮತ್ತು ದೇವತೆಗಳಿಂದ ಆಶೀರ್ವಾದ ಹೊಂದುತ್ತಾರೆ. ಜ್ಯೇಷ್ಠ ಮಾಸದಲ್ಲಿ ಪ್ರಾಣಿ, ಪಕ್ಷಿಗಳಿಗೆ ಕೂಡಾ ಆಹಾರ, ನೀರಿನ ವ್ಯವಸ್ಥೆ ಮಾಡಬೇಕು. ಇದರಿಂದ ಪುಣ್ಯ ಲಭಿಸುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.