ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಧಾರ್ಮಿಕ ಆಚರಣೆಗಳ ಪ್ರಕಾರ ನದಿಗಳಲ್ಲಿ ಪುಣ್ಯಸ್ನಾನ ಮಾಡಲು ಸೂಕ್ತ ಸಮಯ ಯಾವುದು? ರಾತ್ರಿ ಸಮಯದಲ್ಲಿ ಏಕೆ ನದಿಗೆ ಇಳಿಯಬಾರದು?

ಧಾರ್ಮಿಕ ಆಚರಣೆಗಳ ಪ್ರಕಾರ ನದಿಗಳಲ್ಲಿ ಪುಣ್ಯಸ್ನಾನ ಮಾಡಲು ಸೂಕ್ತ ಸಮಯ ಯಾವುದು? ರಾತ್ರಿ ಸಮಯದಲ್ಲಿ ಏಕೆ ನದಿಗೆ ಇಳಿಯಬಾರದು?

Hindu Religion: ದೇವಸ್ಥಾನಗಳಿಗೆ ಹೋದಾಗ ಪುಷ್ಕರಣಿ ಅಥವಾ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ವಾಡಿಕೆ. ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆದು ಮನಸ್ಸು ಶುದ್ಧಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕ ಆಚರಣೆಗಳ ಪ್ರಕಾರ ನದಿಗಳಲ್ಲಿ ಪುಣ್ಯಸ್ನಾನ ಮಾಡಲು ಸೂಕ್ತ ಸಮಯ ಯಾವುದು? ರಾತ್ರಿ ಸಮಯದಲ್ಲಿ ಏಕೆ ನದಿ ಮಾಡಬಾರದು? ಇಲ್ಲಿದೆ ಮಾಹಿತಿ.

ಧಾರ್ಮಿಕ ಆಚರಣೆಗಳ ಪ್ರಕಾರ ನದಿಗಳಲ್ಲಿ ಪುಣ್ಯಸ್ನಾನ ಮಾಡಲು ಸೂಕ್ತ ಸಮಯ ಯಾವುದು? ರಾತ್ರಿ ಸಮಯದಲ್ಲಿ ಏಕೆ ನದಿ ಮಾಡಬಾರದು?
ಧಾರ್ಮಿಕ ಆಚರಣೆಗಳ ಪ್ರಕಾರ ನದಿಗಳಲ್ಲಿ ಪುಣ್ಯಸ್ನಾನ ಮಾಡಲು ಸೂಕ್ತ ಸಮಯ ಯಾವುದು? ರಾತ್ರಿ ಸಮಯದಲ್ಲಿ ಏಕೆ ನದಿ ಮಾಡಬಾರದು? (PC: Pixabay)

ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ಪಾಪ ಕಳೆಯುತ್ತದೆ ಎಂಬುದು ಹಿಂದೂಗಳ ನಂಬಿಕೆ. ಅಮವಾಸ್ಯೆ, ಹುಣ್ಣಿಮೆ, ಕುಂಭ ಮೇಳ ಸೇರಿದಂತೆ ಪ್ರಮುಖ ಹಬ್ಬಗಳ ಸಮಯದಲ್ಲಿ, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮೂಲಕ ಸೂರ್ಯನಿಗೆ ಅರ್ಘ್ಯ ಅರ್ಪಿಸಲಾಗುತ್ತದೆ. ಗಂಗಾ, ಯಮುನಾ ಸರಸ್ವತಿಯಂಥ ಪುಣ್ಯ ನದಿಗಳಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬ ಕಾರಣಕ್ಕೆ ಪ್ರತಿದಿನ ಲಕ್ಷಾಂತರ ಮಂದಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ.

ಭಕ್ತರ ಪಾಲಿಗೆ ನದಿಗಳು ಜಲ ಮೂಲಗಳಷ್ಟೇ ಅಲ್ಲ ದೇವರ ಸ್ವರೂಪವೂ ಹೌದು. ಅದಕ್ಕಾಗಿಯೇ ನದಿಗಳಿಗೆ ಹೆಚ್ಚಿನ ಗೌರವ ನೀಡಲಾಗುತ್ತದೆ. ಶತಮಾನಗಳಿಂದ, ಈ ಪವಿತ್ರ ನದಿಗಳಲ್ಲಿ ಪವಿತ್ರ ಸ್ನಾನ ಮಾಡಲು ಜನರು ದೂರದ ಸ್ಥಳಗಳಿಂದ ಬಂದಿದ್ದಾರೆ. ಪವಿತ್ರ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಮನಸ್ಸನ್ನು ಶುದ್ಧಗೊಳಿಸುತ್ತದೆ, ಪಾಪಗಳನ್ನು ತೊಳೆದುಕೊಳ್ಳುತ್ತದೆ ಮತ್ತು ಕೆಟ್ಟ ಆಲೋಚನೆಗಳನ್ನು ತೊಡೆದುಹಾಕುತ್ತದೆ ಎಂದು ನಂಬಲಾಗಿದೆ.

ಗಂಗೆಯಲ್ಲಿ ಸ್ನಾನ ಮಾಡುವುದು ಅತ್ಯಂತ ಪವಿತ್ರ

ಹರಿದ್ವಾರ, ಋಷಿಕೇಶ ಅಥವಾ ಇತರ ಸ್ಥಳಗಳಲ್ಲಿ ಹರಿಯುವ ಗಂಗಾ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಲಾಗುತ್ತದೆ. ಇದನ್ನು ನದಿಯಾಗಿ ಮಾತ್ರವಲ್ಲದೆ ಗಂಗಾ ಮಾತೆ ಎಂದೂ ಪೂಜಿಸಲಾಗುತ್ತದೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಆತ್ಮ ಶುದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಇದು ಮೋಕ್ಷಕ್ಕೆ ಕಾರಣವಾಗುತ್ತದೆ ಎಂದು ಹಿಂದೂಗಳು ನಂಬುತ್ತಾರೆ. ಮಕರ ಸಂಕ್ರಾಂತಿ, ಕುಂಭ ಮೇಳ, ಗಂಗಾ ದಸರಾದಂತಹ ಆಚರಣೆಗಳಲ್ಲಿ ಭಕ್ತರು ಯಾವಾಗಲೂ ದೂರ ದೂರುಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನದಿಯಲ್ಲಿ ಸ್ನಾನ ಮಾಡುತ್ತಾರೆ.

ಸೂರ್ಯಾಸ್ತದ ನಂತರ ಏಕೆ ಸ್ನಾನ ಮಾಡಬಾರದು?

ಪುಣ್ಯಸ್ನಾನ ಮಾಡಲು ಒಂದು ನಿರ್ದಿಷ್ಟ ಸಮಯವಿರುತ್ತದೆ. ಯಾವಾಗ ಬೇಕಾದರೆ ಆಗ ನದಿಯಲ್ಲಿ ಸ್ನಾನ ಮಾಡಿದರೆ ಅದರ ಫಲ ದೊರೆಯುವುದಿಲ್ಲ. ಕೆಲವರು ಸೂರ್ಯಾಸ್ತದ ನಂತರ ರಾತ್ರಿ ವೇಳೆ ನದಿಯಲ್ಲಿ ಸ್ನಾನ ಮಾಡಲು ಬಯಸುತ್ತಾರೆ. ಈ ಸಮಯದಲ್ಲಿ ಉಷಾಂಶ ಕಡಿಮೆ ಇರುತ್ತದೆ ಹಾಗೂ ಜನಸಂದಣಿಯೂ ಹೆಚ್ಚಾಗಿ ಇರುವುದಿಲ್ಲ ಎಂದು ಹೀಗೆ ಮಾಡುತ್ತಾರೆ. ಆದರೆ ಸೂರ್ಯಾಸ್ತದ ನಂತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ . ದಂತಕಥೆಗಳ ಪ್ರಕಾರ, ರಾತ್ರಿ ಸಮಯದಲ್ಲಿ ಯಕ್ಷರು ಪವಿತ್ರ ನದಿಗಳ ಬಳಿ ಸ್ನಾನ ಮಾಡಿ ಕುಳಿತುಕೊಳ್ಳುವ ಸಮಯ. ಯಕ್ಷರು ದುಷ್ಟ ಶಕ್ತಿಗಳಲ್ಲ, ಆದರೆ ನೀರು, ಕಾಡುಗಳು, ಮರಗಳು ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕೃತಿ ಶಕ್ತಿಗಳು. ಯಕ್ಷರು, ರಾತ್ರಿಯಲ್ಲಿ ಸಕ್ರಿಯವಾಗಿರುತ್ತಾರೆ. ಈ ಸಮಯದಲ್ಲಿ ಅವರ ಪ್ರದೇಶಗಳನ್ನು ಪ್ರವೇಶಿಸುವುದು ಅಗೌರವವೆಂದು ಪರಿಗಣಿಸಲಾಗಿದೆ.

ಸರಿಯಾದ ಸಮಯ ಯಾವುದು?

ಸಾಂಪ್ರದಾಯಿಕವಾಗಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡಲು ಬೆಳಗ್ಗೆ ಅಥವಾ ಬ್ರಹ್ಮ ಮುಹೂರ್ತ ಸೂಕ್ತ ಸಮಯವಾಗಿದೆ. ಈ ಸಮಯದಲ್ಲಿ ಸ್ನಾನ ಮಾಡುವುದು ಬಹಳ ಮಂಗಳಕರವಾಗಿದೆ. ಈ ಸಮಯದಲ್ಲಿ ಆಧ್ಯಾತ್ಮಿಕ ಶಕ್ತಿಯು ಉತ್ತುಂಗದಲ್ಲಿರುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ಕೂಡಾ ಇದೇ ರೀತಿ ಉಲ್ಲೇಖಿಸಲಾಗಿದೆ. ಈ ಸಮಯದಲ್ಲಿ ನದಿಯಲ್ಲಿ ಸ್ನಾನ ಮಾಡುವವರ ಮನಸ್ಸಿನಲ್ಲಿ ಧಾರ್ಮಿಕ ಚಿಂತನೆಗಳು ಉಂಟಾಗುವಂತೆ ಮಾಡುತ್ತದೆ. ಆದರೆ ಜನಸಂದಣಿ ಹೆಚ್ಚಾಗಿರುತ್ತದೆ ಎಂದು ಮಧ್ಯರಾತ್ರಿ ಆಗಲೀ ಸಂಜೆ ಸಮಯದಲ್ಲಾಗಲೀ ಸ್ನಾನ ಮಾಡಬಾರದು. ಆ ಸಮಯದಲ್ಲಿ ದುಷ್ಟಶಕ್ತಿಗಳು ಅಧಿಕವಾಗಿರುತ್ತದೆ. ಆದ್ದರಿಂದ ಮುಂಜಾನೆ ನದಿಯಲ್ಲಿ ಸ್ನಾನ ಮಾಡುವುದು ಸೂಕ್ತ ಸಮಯವಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.