ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Lord Shiva: ಶಿವನ ಪೂಜೆ ಮಾಡಲು ಉತ್ತಮ ಸಮಯ ಯಾವುದು? ಶಂಕರನ ಕೃಪೆಗಾಗಿ ಏನು ಮಾಡಬೇಕು?

Lord Shiva: ಶಿವನ ಪೂಜೆ ಮಾಡಲು ಉತ್ತಮ ಸಮಯ ಯಾವುದು? ಶಂಕರನ ಕೃಪೆಗಾಗಿ ಏನು ಮಾಡಬೇಕು?

Lord shiva: ಶಿವನ ಪೂಜೆ ಯಾವ ಸಮಯದಲ್ಲಿ ಮಾಡಬೇಕು? ಕಾರ್ತಿಕ ಮಾಸ, ಶ್ರಾವಣ ಮಾಸ, ಆರ್ದ್ರಾ ನಕ್ಷತ್ರ ಯುಕ್ತ ಮಾರ್ಗಶಿರ, ಮಹಾ ಶಿವರಾತ್ರಿ ಇವುಗಳಲ್ಲಿ ಯಾವುದು ಉತ್ತಮ? ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ವಿವರವಾಗಿ ತಿಳಿಸಿದ್ದಾರೆ.

ಶಿವನ ಪೂಜೆ ಮಾಡಲು ಉತ್ತಮ ಸಮಯ ಯಾವುದು? ಶಂಕರನ ಕೃಪೆಗಾಗಿ ಏನು ಮಾಡಬೇಕು?
ಶಿವನ ಪೂಜೆ ಮಾಡಲು ಉತ್ತಮ ಸಮಯ ಯಾವುದು? ಶಂಕರನ ಕೃಪೆಗಾಗಿ ಏನು ಮಾಡಬೇಕು?

ವೇದಗಳು ಸನಾತನ ಧರ್ಮದ ಮೂಲಗಳಾಗಿವೆ. ಎಲ್ಲಾ ವೇದ ಮಂತ್ರಗಳೂ ಸಹ ಶಿವನ ಆರಾಧನೆಯನ್ನು ಸೂಚಿಸುತ್ತವೆ. ಶಿವನನ್ನು ಇದೇ ಸಮಯದಲ್ಲಿ ಆರಾಧಿಸಬೇಕು ಎನ್ನುವ ನಿಯಮವಿಲ್ಲ. ಶಿವನ ಪೂಜೆಯನ್ನು ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ತಡರಾತ್ರಿ ಯಾವುದೇ ಸಮಯದಲ್ಲಿ ಬೇಕಾದರೂ ಭಕ್ತಿಯಿಂದ ಪೂಜಿಸಬಹುದು ಎಂದು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳುತ್ತಾರೆ.

ಶಿವನ ಆರಾಧನೆಗೆ ಉತ್ತಮ ಸಮಯ

ಪ್ರತಿದಿನ ಶಿವನ ಆರಾಧನೆ ಮಾಡುವುದು ಉತ್ತಮ. ಪ್ರದೋಷ ಕಾಲ ಅಂದರೆ ಸಂಜೆಯ ಸಮಯ ಮತ್ತು ಬೆಳಗಿನ ಶಿವಾರಾಧನೆ ಬಹಳ ಮಹತ್ವದ್ದಾಗಿದೆ. ಇದು ಸಾಧ್ಯವಾಗದಿದ್ದಲ್ಲಿ ಪ್ರತಿ ಸೋಮವಾರವಾದರೂ ಶಿವನ ಪೂಜೆ ಮಾಡುವುದು ಉತ್ತಮ. ಅದು ಸಾಧ್ಯವಾಗದಿದ್ದರೆ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ದಿನ ಮತ್ತು ಮಾಸ ಶಿವರಾತ್ರಿಯ ದಿನ ಶಿವನ ಆರಾಧನೆ ಮಾಡುವುದು ಉತ್ತಮ. ಇದನ್ನು ಮಾಡಲು ಸಾಧ್ಯವಾಗದವರು ಶ್ರಾವಣ ಮತ್ತು ಕಾರ್ತಿಕ ಮಾಸಗಳಲ್ಲಿ ಶಿವನ ಆರಾಧನೆ ಮಾಡುವುದು ಅತ್ಯಂತ ಶ್ರೇಯಸ್ಕರ ಎಂದು ಚಿಲಕಮರ್ತಿಯವರು ಹೇಳುತ್ತಾರೆ. 

ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ದಿನ ಮತ್ತು ಮಹಾ ಶಿವರಾತ್ರಿಯ ದಿನ ಶಿವನ ಪೂಜೆ ಮಾಡುವುದು ಬಹಳ ಉತ್ತಮ. ಕಾರಣಾಂತರಗಳಿಂದ ಮಹಾಶಿವರಾತ್ರಿಯ ದಿನದಂದು ಶಿವನ ಪೂಜೆಯನ್ನು ಮಾಡಲು ಸಾಧ್ಯವಾಗದವರು ಮಾರ್ಗಶಿರ ಮಾಸದ ಆರ್ದ್ರಾ ನಕ್ಷತ್ರದ ದಿನದಂದು ಶಿವನ ಆರಾಧನೆ ಮಾಡುವುದು ಉತ್ತಮವಾಗಿದೆ ಎಂದು ಚಿಲಕಮರ್ತಿಯವರು ಹೇಳುತ್ತಾರೆ.

ಆರ್ದ್ರಾ ನಕ್ಷತ್ರದಂದು ಮಾಡುವ ಪೂಜೆ ಬಹಳ ಶ್ರೇಷ್ಠ

ನಿತ್ಯವೂ ಶಿವನ ಆರಾಧನೆ ಮಾಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುವವರಿಗೆ ಮಹಾಶಿವರಾತ್ರಿಯ ದಿನ ಅಥವಾ ಮಾರ್ಗಶಿರ ಮಾಸದ ಆರ್ದ್ರಾ ನಕ್ಷತ್ರದಂದು ಶಿವನ ಪೂಜೆ ಮಾಡುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆ. ಈ ವಿಶೇಷ ದಿನಗಳಲ್ಲಿ ಶಿವನಿಗೆ ಅಭಿಷೇಕ, ದರ್ಶನ, ಪೂಜೆ ಮಾಡುವುದರಿಂದ ವರ್ಷವಿಡೀ ಶಿವನನ್ನು ಪೂಜಿಸಿದ ಫಲ ದೊರೆಯುತ್ತದೆ. ಆರ್ದ್ರಾ, ಶಿವನ ಅಚ್ಚುಮೆಚ್ಚಿನ ನಕ್ಷತ್ರವಾಗಿದೆ. 

ಮಾರ್ಗಶಿರಾ ಮಾಸದ ಆರ್ದ್ರಾ ನಕ್ಷತ್ರದಲ್ಲಿ ನಡೆಯುವ ಶಿವನ ಪೂಜೆಯನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಶಿವನನ್ನು ಪೂಜಿಸುವಾಗ ಭಕ್ತಿಯಿಂದ ಅಭಿಷೇಕ ಮಾಡುವುದು ಉತ್ತಮ. ಶಿವಾಭಿಷೇಕ ಅಥವಾ ರುದ್ರಾಭಿಷೇಕವನ್ನು ಶಿವ ದೇವಾಲಯಗಳು, ದೇವಾಲಯಗಳು, ಗೋಶಾಲೆಗಳು ಅಥವಾ ಮನೆಗಳಲ್ಲಿ ನಡೆಸುವುದರಿಂದ ಪರಶಿವನ ಕೃಪೆಗೆ ಪಾತ್ರರಾಗಬಹುದಾಗಿದೆ.

ಪರಮೇಶ್ವರನಿಗೆ ಪಂಚಾಮೃತದಲ್ಲಿ ಅಭಿಷೇಕ ಮಾಡಿ, ರುದ್ರನಾಮಕ ಚಮಕ ಸ್ತುತಿಸಿ ಮತ್ತು ಬಿಲ್ವಪತ್ರೆ ಸಮರ್ಪಿಸಿ ಪೂಜಿಸುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆ ಎಂದು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ತಿಳಿಸಿದ್ದಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ‌ ವಿ ಭಟ್

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.