ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಾಲ ಭೈರವ ಯಾರು? ಕಾಲವನ್ನು ನಿರ್ಧರಿಸುವ ಆತನನ್ನು ಪೂಜಿಸುವುದರಿಂದ, ಕಾಲ ಭೈರವ ಅಷ್ಟಕ ಓದುವುದರಿಂದ ಏನು ಪ್ರಯೋಜನ?

ಕಾಲ ಭೈರವ ಯಾರು? ಕಾಲವನ್ನು ನಿರ್ಧರಿಸುವ ಆತನನ್ನು ಪೂಜಿಸುವುದರಿಂದ, ಕಾಲ ಭೈರವ ಅಷ್ಟಕ ಓದುವುದರಿಂದ ಏನು ಪ್ರಯೋಜನ?

Kala Bhairava: ಶಿವನ ಆಕ್ರಮಣಕಾರಿ ರೂಪವನ್ನು ಕಾಲ ಭೈರವ ಎಂದು ಕರೆಯುತ್ತಾರೆ. ಕಾಲ ಭೈರವನ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಕಾಲ ಭೈರವ ಯಾರು? ಕಾಲವನ್ನು ನಿರ್ಧರಿಸುವ ಆತನನ್ನು ಪೂಜಿಸುವುದರಿಂದ, ಕಾಲ ಭೈರವ ಅಷ್ಟಕ ಓದುವುದರಿಂದ ಏನು ಪ್ರಯೋಜನ? ಇಲ್ಲಿದೆ ಮಾಹಿತಿ.

 ಕಾಲವನ್ನು ನಿರ್ಧರಿಸುವ ಆತನನ್ನು ಪೂಜಿಸುವುದರಿಂದ, ಕಾಲ ಭೈರವ ಅಷ್ಟಕ ಓದುವುದರಿಂದ ಏನು ಪ್ರಯೋಜನ?
ಕಾಲವನ್ನು ನಿರ್ಧರಿಸುವ ಆತನನ್ನು ಪೂಜಿಸುವುದರಿಂದ, ಕಾಲ ಭೈರವ ಅಷ್ಟಕ ಓದುವುದರಿಂದ ಏನು ಪ್ರಯೋಜನ?

ಮನುಷ್ಯನ ಕಷ್ಟಗಳನ್ನು ದೂರ ಮಾಡುವಲ್ಲಿ ಅನೇಕ ಶಕ್ತಿಶಾಲಿ ಮಂತ್ರಗಳು ಸಹಾಯ ಮಾಡುತ್ತವೆ. ಅವುಗಳಲ್ಲಿ ಕಾಲ ಭೈರವ ಅಷ್ಟಕ ಕೂಡಾ ಒಂದು. ಆದರೆ ಬಹಳಷ್ಟು ಜನರಿಗೆ ಈ ಕಾಲಭೈರವ ಯಾರು? ಆತನನ್ನು ಪೂಜಿಸುವುದರಿಂದ ಏನು ಪ್ರಯೋಜನ ಎಂಬುದು ತಿಳಿದಿಲ್ಲ.

ಕಾಲ ಭೈರವ ಯಾರು?

ಕಾಲ ಭೈರವ, ಶಿವನ ಆಕ್ರಮಣಕಾರಿ ರೂಪವಾಗಿದೆ. ದುಷ್ಟರನ್ನು, ನಕಾರಾತ್ಮಕ ಶಕ್ತಿಯನ್ನು ನಿರ್ಮೂಲನೆ ಮಾಡಲು ಶಿವನು ಕಾಲ ಭೈರವನ ರೂಪ ತಾಳುತ್ತಾನೆ. ಶಿವ ಪುರಾಣದ ಪ್ರಕಾರ ಒಟ್ಟು 64 ಕಾಲ ಭೈರವರು ಇದ್ದು, ಎಲ್ಲರೂ ವಿಭಿನ್ನ ದಿಕ್ಕುಗಳನ್ನು ನಿಯಂತ್ರಿಸುತ್ತಿದ್ಧಾರೆ. ಅವರಲ್ಲಿ ಕಾಲ ಭೈರವನು ಪ್ರಮುಖನಾಗಿದ್ದು ಇತರರನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾನೆ ಎಂಬ ನಂಬಿಕೆ ಇದೆ. ಕಾಲ ಭೈರವನು ಭದ್ರಕಾಳಿಯಂತೆ ಕಪ್ಪು ಬಣ್ಣ ಹೊಂದಿದ್ದು, 3 ಕಣ್ಣುಗಳನ್ನು ಹೊಂದಿದ್ದಾನೆ, ಜೊತೆಗೆ ತಲೆಬುರುಡೆಯ ಹಾರವನ್ನು ಹಾಕಿಕೊಂಡು ಒಂದು ಕೈಯ್ಯಲ್ಲಿ ತ್ರಿಶೂಲ ಮತ್ತೊಂದು ಕೈಯ್ಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದಿರುವ ರೂಪವನ್ನು ಹೊಂದಿದ್ದಾನೆ. ಕಪ್ಪು ಶ್ವಾನವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ.

ಕಾಲ ಭೈರವ ಅಷ್ಟಕ ಪಠಿಸಿದರೆ ಏನು ಪ್ರಯೋಜನ?

ಕಾಲ ಭೈರವ ಅಷ್ಟಕವನ್ನು ಪಠಿಸಿದರೆ ಬಹಳ ಪ್ರಯೋಜನಗಳಿವೆ. ಶನಿ, ರಾಹು, ಕೇತು ದೋಷಗಳು ದೂರವಾಗುತ್ತದೆ. ನಿಮ್ಮ ಶತ್ರುಗಳು ಮಿತ್ರರಾಗಿ ಬದಲಾಗುತ್ತಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಮುಕ್ತಿ ಹೊಂದುತ್ತಾರೆ. ಹೆಸರೇ ಸೂಚಿಸುವಂತೆ ಕಾಲ ಭೈರವನು ಸಮಯವನ್ನು ಸೂಚಿಸುವವನು ಎಂದರ್ಥ. ಆದ್ದರಿಂದ ಕಾಲ ಭೈರವನ ಅಷ್ಟಕವನ್ನು ಪಠಿಸಿದವರಿಗೆ ಒಳ್ಳೆ ಸಮಯ ಬರುತ್ತದೆ ಎಂಬ ನಂಬಿಕೆ ಇದೆ. ಪ್ರತಿದಿನ ಸಾಧ್ಯವಾಗದಿದ್ದರೆ ಪ್ರತಿ ಸೋಮವಾರ ಕಾಲ ಭೈರವ ಅಷ್ಟಕಂ ಪಠಿಸಿದರೆ ಬಹಳ ಒಳ್ಳೆಯದು.

ಕಾಲ ಭೈರವ ಅಷ್ಟಕ

ದೇವ ರಾಜ ಸೇವ್ಯ ಮಾನ ಪಾವನಂಗರಿ ಪಂಕಜಂ

ವ್ಯಾಲ ಯಜ್ಞ ಸೂತ್ರ ಮಿಂದು ಶೇಖರಂ ಕೃಪಾಕರಮ್

ನಾರದಾದಿ ಯೋಗಿ ವೃಂದ ವಂದಿತ ದಿಗಂಬರಂ

ಕಾಶಿಕಾ ಪುರಾಧಿ ನಾಥ ಕಾಲಭೈರವ ಭಜೇ

ಭಾನು ಕೋಟಿ ಭಾಸ್ವರಂ, ಭವಾಬ್ದಿ ತಾರಕಂ ಪರಂ

ನೀಲಕಂಠ ಮೀಪ್ಸಿದಾತ ದಾಯಕಂ ತ್ರಿಲೋಚನಮ್

ಕಾಲಕಾಲ ಮಂಬು ಜಾಕ್ಷ ಮಾಕ್ಷ ಶೂಲ ಮಕ್ಷರಂ

ಕಾಶಿಕಾ ಪುರಾಧಿ ನಾದ ಕಾಲಭೈರಂ ಭಜೇ

ಶೂಲ ತಂಗ ಪಾಶ ದಂಡ ಪಾಣಿ ಮಾಧಿ ಕಾರಣಂ

ಶ್ಯಾಮ ಕಾಯ ಮಧಿ ದೇವ ಮಕ್ಷರಂ ನಿರಾಮಯಮ್

ಭೀಮ ವಿಕ್ರಮಂ ಪ್ರಭುಂ ವಿಚಿತ್ರ ತಾಂಡವ ಪ್ರಿಯಂ

ಕಾಶೀಕಾ ಪುರಾಧಿ ನಾದ ಕಾಲಭೈರವಂ ಭಜೇ

ಭಕ್ತಿ ಮುಕ್ತಿ ದಾಯಕಂ ಪ್ರಶಾಸ್ತ ಚಾರು ವಿಗ್ರಹಂ

ಭಕ್ತ ವತ್ಸಲಂ ಸ್ಥಿತಂ ಸಮಸ್ತ ಲೋಕ ವಿಗ್ರಹಂ

ವಿನಿಕ್ ಮಣನ್ಮ ಮನೋಜ್ಞ ಹೇಮ ಕಿಂಕಿಣಿ ಲಾಸ್ತ ಕಟೀಮ್

ಕಾಶೀಕಾ ಪುರಾಧಿ ನಾಧ ಕಾಲಭೈರವಂ ಭಜೇ

ಧರ್ಮ ಸೇತು ಪಾಲಕಂ ತ್ವಧರ್ಮ ಮಾರ್ಗ ನಾಶಕಂ

ಕರ್ಮ ಪಾಶ ಮೋಚಕಂ ಸುಶರ್ಮ ದಾಯಕಂ ವಿಭುಮ್

ಸ್ವರ್ಣ ವರ್ಣ ಶೇಷ ಪಾಶ ಶೋಭಿತಾಂಗ ಮಂಡಲಂ

ಕಾಶಿಕಾ ಪುರಾಧಿ ನಾಥ ಕಾಲಭೈರವಂ ಭಜೇ

ರತ್ನ ಪಾದುಕಾ ಪ್ರಬಾಭಿ ರಾಮ ಪಾದ ಯುಗಮುಕಂ

ನಿತ್ಯ ಮತ್ಮ ತೀಯ ಮಿಷ್ಟ ದೈವತಂ ನಿರಂಜನಮ್

ಮೃತ್ಯು ದರ್ಪ ನಾಶನಂ ಕರಾಳ ದಂಷ್ಟ್ರ ಮೋಕ್ಷಣಂ

ಕಾಶಿಕಾ ಪುರಾಧಿ ನಾಥ ಕಾಲಭೈರಂ ಭಜೇ

ಅಟ್ಟಹಾಸ ಬಿನ್ನ ಪದ್ಮ ಜಾಣಂಡ ಕೋಶ ಸಂತತೀಮ್

ದೃಷ್ಟಿ ಪಾತ ನಷ್ಟ ಪಾಪ ಜಲ ಮಾಗ್ರ ಶಸನಮ್

ಅಷ್ಟಸಿದ್ಧಿ ದಾಯಕಂ ಕಪಾಲ ಮಾಲಿಕನ್ದರಂ

ಕಾಶಿಕಾ ಪುರಾಧಿ ನಾಥ ಕಾಲಭೈರವಂ ಭಜೇ

ಭೂತ ಸಂಗ ನಾಯಕಂ ವಿಶಾಲ ಕೀರ್ತಿ ದಾಯಕಂ

ಕಾಶಿ ವಾಸ ಲೋಕ ಪುಣ್ಯ ಪಾಪ ಶೋಧಕಂ ವಿಭುಮ್

ನೀತಿ ಮಾರ್ಗ ಕೋವಿಧಂ ಪುರಾತನಂ ಜಗತ್‌ಪತಿಂ

ಕಾಶಿಕಾ ಪುರಾಧಿ ನಾಥ ಕಾಲಭೈರವಂ ಭಜೇ

ಕಾಲಭೈರವಷ್ಟಕಂ ಪಾಠಂತಿ ಯೇ ಮನೋಹರಂ

ಜ್ಞಾನ ಮುಕ್ತಿ ಸಾಧನಂ ವಿಚಿತ್ರ ಪುಣ್ಯ ವರ್ಧನಮ್

ಶೋಕ ಮೋಹ ದೈನ್ಯ ಲೋಭ ಕೋಪ ತಾಪ ನಾಶನಂ

ತೇ ಪ್ರಯಾಂತಿ ಕಾಲಭೈರವಾಂಗಿರಿ ಸನ್ನಿಧಿಂ ಧ್ರುವಮ್

||ಶಂಕರಾಚಾರ್ಯ ವಿರಚಿತಂ ಕಾಲಭೈರವಾಷ್ಟಕಂ ಸಂಪೂರ್ಣಮ್||

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.