ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶನಿ ದೇವರ ಕೃಪೆಗೆ ಪಾತ್ರರಾಗುವುದು ಹೇಗೆ? ಈ 5 ಸರಳ ಮಾರ್ಗಗಳನ್ನು ಪಾಲಿಸಿ, ಶನೈಶ್ಚರನ ವಕ್ರ ದೃಷ್ಠಿಯಿಂದ ಪಾರಾಗಿ

ಶನಿ ದೇವರ ಕೃಪೆಗೆ ಪಾತ್ರರಾಗುವುದು ಹೇಗೆ? ಈ 5 ಸರಳ ಮಾರ್ಗಗಳನ್ನು ಪಾಲಿಸಿ, ಶನೈಶ್ಚರನ ವಕ್ರ ದೃಷ್ಠಿಯಿಂದ ಪಾರಾಗಿ

Shani Deva Blessings: ಹಿಂದೂಗಳ ಧಾರ್ಮಿಕ ಆಚರಣೆಯ ಪ್ರಕಾರ ಶನಿವಾರ ಶನಿ ದೇವರಿಗೆ ಮೀಸಲಾದ ದಿನ. ದಾನ–ಧರ್ಮ ಮುಂತಾದ ಆಚರಣೆಗಳನ್ನು ಮಾಡಲಾಗುತ್ತದೆ. ಶನಿ ದೇವರನ್ನು ಒಲಿಸಿಕೊಳ್ಳಲು ಬೇರೆ ಮಾರ್ಗಗಳು ಕೂಡಾ ಇವೆ. ಶನಿ ದೇವರ ಕೃಪೆಗೆ ಪಾತ್ರರಾಗುವುದು ಹೇಗೆ? ಈ 5 ಸರಳ ಮಾರ್ಗಗಳನ್ನು ಪಾಲಿಸಿ, ಶನೈಶ್ಚರನ ವಕ್ರ ದೃಷ್ಠಿಯಿಂದ ಪಾರಾಗಿ.

ಶನಿ ದೇವರ ಕೃಪೆಗೆ ಪಾತ್ರರಾಗುವುದು ಹೇಗೆ? ಈ 5 ಸರಳ ಮಾರ್ಗಗಳನ್ನು ಪಾಲಿಸಿ, ಶನೈಶ್ಚರನ ವಕ್ರ ದೃಷ್ಠಿಯಿಂದ ಪಾರಾಗಿ
ಶನಿ ದೇವರ ಕೃಪೆಗೆ ಪಾತ್ರರಾಗುವುದು ಹೇಗೆ? ಈ 5 ಸರಳ ಮಾರ್ಗಗಳನ್ನು ಪಾಲಿಸಿ, ಶನೈಶ್ಚರನ ವಕ್ರ ದೃಷ್ಠಿಯಿಂದ ಪಾರಾಗಿ

ಹಿಂದೂಗಳು ಪ್ರತಿ ದಿನವನ್ನು ಒಂದೊಂದು ದೇವರುಗಳ ಪೂಜೆಗೆ ಮೀಸಲಿರಿಸಿದ್ದಾರೆ. ಸೋಮವಾರದಂದು ಈಶ್ವರನ ಪೂಜೆ, ಮಂಗಳವಾರದಂದು ದೇವಿ ಪೂಜೆ ಹೀಗೆ... ವಾರದ ಕೊನೆಯ ದಿನ ಶನಿವಾರ. ಆ ದಿನದಂದು ಶನಿ ದೇವರ ಪೂಜೆ ಮಾಡಲಾಗುತ್ತದೆ. ಶನಿವಾರವು ಧಾರ್ಮಿಕ ಆಚರಣೆಯ ಜೊತೆಗೆ ವಾರಾಂತ್ಯದ ವಿಶ್ರಾಂತಿಯ ದಿನವೂ ಹೌದು.

ಇಂಗ್ಲೀಷ್‌ನಲ್ಲಿ ಶನಿವಾರವನ್ನು ಸಾಟರ್ಡೇ ಎಂದು ಕರೆಯುತ್ತಾರೆ. ಇದು ಸ್ಯಾಟರ್ನ್‌ ಡೇ ಎಂದ್ ಅರ್ಥ ಕೊಡುತ್ತದೆ. ಅಂದರೆ ಶನಿ ಗ್ರಹವನ್ನು ನೆನಪಿಸುತ್ತದೆ. ಅದೇ ರೀತಿ ಸ್ಪ್ಯಾನಿಷ್‌ನಲ್ಲಿ ಸಬಾಡೊ, ಇಟಾಲಿಯನ್‌ ಭಾಷೆಯಲ್ಲಿ ಸಬಾಟೊ ಮತ್ತು ಫ್ರೆಂಚ್‌ನಲ್ಲಿ ಸ್ಯಾಮಿಡಿ ಮುಂತಾದ ಇತರೆ ಭಾಷೆಗಳಲ್ಲೂ ಶನಿ ಹೆಸರಿನ ಜೊತೆ ಜೋಡಿಸಿಕೊಂಡಿವೆ.

ಕರ್ಮಕಾರಕ ಶನಿ ದೇವ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವರು ಕರ್ಮ ಮತ್ತು ನ್ಯಾಯವನ್ನು ನೀಡುವ ದೇವರಾಗಿದ್ದಾನೆ. ಮನುಷ್ಯನ ಕರ್ಮ ಫಲಗಳಿಗನುಸಾರವಾಗಿ ಶುಭ, ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಶನಿಯು ಸೂರ್ಯನ ಮಗ. ವ್ಯಕ್ತಿಯ ಜೀವನದ ಆಗು–ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರ ನೀಡುತ್ತಾನೆ. ಹಾಗಾಗಿಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯ ದೃಷ್ಠಿಯು ಅತ್ಯಂತ ಭಯವನ್ನು ಹುಟ್ಟಿಸಿದೆ.

ಶನಿಯ ದೃಷ್ಠಿಗೆ ಬಿದ್ದರೆ ಜೀವನವು ಕಷ್ಟಮಯವಾಗುತ್ತದೆ ಎಂದು ಹೇಳಲಾಗುತ್ತದೆ. ಶನಿಯು 10 ಮತ್ತು 11 ನೇ ಮನೆಗಳ ಅಧಿಪತಿಯಾಗಿದ್ದಾನೆ. ಅದು ವ್ಯಕ್ತಿಯನ್ನು ವೃತ್ತಿ ಜೀವನದಲ್ಲಿ ಆಡಳಿತಗಾರನನ್ನಾಗಿ ಮಾಡುತ್ತದೆ. ಶನಿಯು 11ನೇ ಮನೆಯ ಅಧಿಪತಿಯಾಗಿದ್ದರೆ ವ್ಯಕ್ತಿಗೆ ಎಲ್ಲಾ ರೀತಿಯ ಆಸೆ, ಬಯಕೆಗಳು ಈಡೇರುತ್ತವೆ. ಶನಿಯು ಕರ್ಮ ಫಲಗಳಿಗನುಸಾರವಾಗಿ ನ್ಯಾಯವನ್ನು ನೀಡುವ ದೇವರಾಗಿದ್ದಾನೆ. ವ್ಯಕ್ತಿಯ ವರ್ತಮಾನ ಮತ್ತು ಭವಿಷ್ಯವು ಅವನ ಭೂತಕಾಲದ ಅಂದರೆ ಹಿಂದಿನ ಕರ್ಮಗಳಿಂದ ನಿರ್ಧರಿಸಲ್ಪಡುತ್ತದೆ. ಹಾಗಾಗಿ ಹಿನ್ನಡೆ, ತೊಂದರೆಗಳು ಸಂಭವಿಸುತ್ತದೆ.

ಶನಿಯು ತೊಂದರೆಗಳನ್ನು ನೀಡುವವನಾಗಿದ್ದರೂ, ನಿಮಗೆ ನಿಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶಗಳನ್ನು ನೀಡುತ್ತಾನೆ. ಶನಿಯ ದೃಷ್ಠಿ ಉತ್ತಮವಾಗಿದ್ದರೆ, ಅವನು ಶ್ರದ್ಧೆ, ಜವಾಬ್ದಾರಿ, ಉತ್ತಮ ಅವಕಾಶಗಳನ್ನು ನೀಡುತ್ತಾನೆ. ಆದರೆ ಶನಿಯ ಕೃಪೆಗೆ ಪಾತ್ರರಾಗುವುದು ಮುಖ್ಯವಾಗಿದೆ.

ಶನಿಯ ಕೃಪೆಗೆ ಪಾತ್ರರಾಗಲು ಈ 5 ಸರಳ ಮಾರ್ಗಗಳನ್ನು ಅನುಸರಿಸಿ

1) ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಿ

ಶನಿ ದೇವನ ಆಶೀರ್ವಾದ ಪಡೆದುಕೊಳ್ಳಲು ಶಿಸ್ತು, ಪ್ರಾಮಾಣಿಕತೆ, ನೈತಿಕತೆ ಮತ್ತು ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುವುದು ಅಗತ್ಯವಾಗಿದೆ. ಅಶಿಸ್ತನ್ನು ರೂಢಿಸಿಕೊಳ್ಳಬೇಡಿ. ಮಲಗುವ ಮತ್ತು ಏಳುವ ಸಮಯ ನಿಗದಿಪಡಿಸಿಕೊಳ್ಳಿ. ಸೂರ್ಯೋದಯಕ್ಕೆ ಮುಂಚಿತವಾಗಿ ಏಳಿ.

2) ಸೇವೆ ಮಾಡಿ

ಶನಿ ದೇವನನ್ನು ಸುಲಭವಾಗಿ ಒಲಿಸಿಕೊಳ್ಳಲು ಬಡವರ, ವೃದ್ಧರ ಸೇವೆ ಮಾಡಿ. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಕೈಲಾದಷ್ಟು ದಾನ ಧರ್ಮ ಮಾಡಿ. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಕೂಡಾ ಶನಿ ದೇವನನ್ನು ಒಲಿಸಿಕೊಳ್ಳಲು ಇರುವ ಮತ್ತೊಂದು ಮಾರ್ಗ.

3) ಶನಿ ಮಂತ್ರ ಪಠಿಸಿ

ಮಂತ್ರಗಳು ಸಂಖ್ಯಾಶಾಸ್ತ್ರದ ಪ್ರಬಲ ಕಂಪನಗಳಾಗಿವೆ. ಮಂತ್ರಗಳ ಉಚ್ಛಾರಣೆ ಮಾಡುವುದರಿಂದ ಶನಿ ದೇವನ ಕೃಪೆಗೆ ಪಾತ್ರರಾಗಬಹುದು.

ಧ್ವಜಿನಿ ಧಾಮಿನೀ ಚೈವ ಕಾ೦ಕಾಲೀ, ಕ೦ಠಕಿ ಕಲಹಿ ಚಥಾ ತುರ೦ಗಿ ಮಹಿಷಿ ಅಜಾ

ಶನೇರ್ನಾಮನಿ ಪತ್ನೀನಾಮೇತಾನಿ ಸಂಜಪನ್ ಪುಮಾನ್, ದುಃಖಾನಿ ನಾಶಯೇನ್ನಿತ್ಯಂ ಸೌಭಾಗ್ಯಮೇಧತೇ ಸುಖಮ್ ||

ಶನಿ ಮಂತ್ರವನ್ನು ಪ್ರತಿ ಶನಿವಾರ ಕನಿಷ್ಠ 33 ಬಾರಿ ಜಪಿಸಿ.

4) ಗಿಡ ಮೂಲಿಕೆಗಳ ಸ್ನಾನ ಮಾಡಿ

ಬೇವು, ಕಪ್ಪು ಎಳ್ಳು, ಎಳ್ಳೆಣ್ಣೆ, ತುಳಸಿ ಎಲೆ, ನಾಗರಮೋಠಾ ಪುಡಿ ಮತ್ತು ನೀಲಗಿರಿ ತೈಲದಿಂದ ಶನಿ ದೇವನನ್ನು ಪೂಜಿಸಲಾಗುತ್ತದೆ. ಈ ಗಿಡಮೂಲಿಕೆಗಳನ್ನು ಬಳಸಿ ಸ್ನಾನ ಮಾಡುವುದರಿಂದ ಭೌತಿಕ ದೇಹವನ್ನು ಸಹ ಶುದ್ಧೀಕರಿಸಬಹುದಾಗಿದೆ. ಹಾಗಾಗಿ ಇವುಗಳಿಂದ ಸ್ನಾನ ಮಾಡಿ ಶುಚಿಯಾದರೆ ಶನಿ ದೇವರ ಆಶೀರ್ವಾದಕ್ಕೆ ಪಾತ್ರರಾಗಬಹುದಾಗಿದೆ.

5) ಸಂಗೀತ ಧ್ಯಾನ ಮಾಡಿ

ಜನ್ಮ ದಿನಾಂಕ, ಹೆಸರು ಮತ್ತು ಜಾತಕದಲ್ಲಿ ಶನಿಯ ಸ್ಥಾನವನ್ನು ಆಧರಿಸಿ ಶನಿಯ ಆಶೀರ್ವಾದ ಪಡೆಯಲು ಉತ್ತಮ ಮಾರ್ಗಗಳಿವೆ. ಸಿಂಹ ರಾಶಿಯವರಿಗೆ ಶನಿಯ ಕೃಪೆಗೆ ಪಾತ್ರರಾಗಲು 183 ಹರ್ಟ್ಜ್‌ ಇರುವ ಸಂಗೀತ ಧ್ಯಾನವು ಉತ್ತಮವಾಗಿದೆ. ಸಂಗೀತ ಧ್ಯಾನವು ಮನಸ್ಸನ್ನು ಶಾಂತಗೊಳಿಸಿ ಉತ್ತಮ ಯೋಚನೆ ಬರುವಂತೆ ಮಾಡುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.