ಕನ್ನಡ ಸುದ್ದಿ  /  Astrology  /  Holi 2024 Holika Dahan Ash Benefits Uses Of Ash Produced In Holika Dahan Holi Fire Astrology Mgb

Holi 2024: ಹೋಳಿ ದಹನದ ಭಸ್ಮದಿಂದ ಹೀಗೆ ಮಾಡಿದರೆ ನಿಮ್ಮ ಆರ್ಥಿಕ ಸಂಕಷ್ಟ, ಅನಾರೋಗ್ಯ ದೂರ

Holika Dahan Ash Benefits: ಹೋಳಿ ದಹನದ ಭಸ್ಮ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಭಸ್ಮವನ್ನು ಮನೆಗೆ ತರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕಟ್ಟಿಗೆ, ಹಸುವಿನ ಸಗಣಿ ಬಳಸಿ ಸುಡುವ ಬೆಂಕಿಯಿಂದಾಗುವ ಈ ಬೂದಿಯ ಉಪಯೋಗಗಳು ಇಲ್ಲಿವೆ.

ಹೋಳಿ ದಹನ (ಸಂಗ್ರಹ ಚಿತ್ರ)
ಹೋಳಿ ದಹನ (ಸಂಗ್ರಹ ಚಿತ್ರ)

ಹೋಳಿ ಹಬ್ಬದ ಹಿಂದಿನ ರಾತ್ರಿ ಹೋಳಿ ದಹನ ಅಥವಾ ಹೋಳಿಕಾ ದಹನ ಆಚರಿಸಲಾಗುತ್ತದೆ. ಕೆಟ್ಟದ್ದೆಲ್ಲಾ ಕಳೆದು ಒಳ್ಳೆಯದಾಗಲಿ ಎಂಬ ಆಶಯದಿಂದ ಮರದ ಒಣಗಿದ ರೆಂಬೆ-ಕೊಂಬೆ ಮತ್ತು ಹಸುವಿನ ಸಗಣಿ ಬಳಸಿ ಬೆಂಕಿ ಉರಿಸಲಾಗುತ್ತದೆ. ಹಿಂದಿನ ದ್ವೇಷಗಳನ್ನು ದಹಿಸುವ ಮತ್ತು ವಿಜಯದೊಂದಿಗೆ ಹೊಸ ಆರಂಭವನ್ನು ಇದು ಸೂಚಿಸುತ್ತದೆ. ಉತ್ತರ ಭಾರತದಲ್ಲಿ ಹೋಳಿಕಾ ಎಂಬ ರಾಕ್ಷಸಿಯನ್ನು ಸುಡುವುದರ ಸಂಕೇತವಾಗಿ ಇದನ್ನು ಆಚರಿಸದರೆ ದಕ್ಷಿಣ ಭಾರತದಲ್ಲಿ ಕಾಮದೇವನನ್ನು ಸುಡುವುದರ ಸಂಕೇತವಾಗಿ ಆಚರಿಸಲಾಗುತ್ತದೆ. ಅನೇಕರಿಗೆ ಗೊತ್ತಿಲ್ಲದ ಮತ್ತೊಂದು ವಿಚಾರವಿದೆ. ಅದೇನೆಂದರೆ ಹೋಳಿ ದಹನದ ಭಸ್ಮದಿಂದ ಆರ್ಥಿಕ ಸಮಸ್ಯೆಗಳು ದೂರಾಗುತ್ತದೆ ಎಂದು ನಂಬಲಾಗಿದೆ. ಈ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಹೋಳಿ ದಹನದ ಬೆಂಕಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಕೆಲವರು ಬಿಸಿ ಕೆಂಡದ ಮೇಲೆ ನಡೆಯುತ್ತಾರೆ. ಇದರಿಂದ ಜೀವನದಲ್ಲಿನ ಭಯ, ಕಷ್ಟಗಳು ಮತ್ತು ದುಃಖಗಳನ್ನು ಓಡಿಸಬಹುದೆಂದು ನಂಬಲಾಗಿದೆ. ಇದರ ಜೊತೆ ಹೋಳಿ ದಹನದ ಭಸ್ಮ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಭಸ್ಮವನ್ನು ಮನೆಗೆ ತರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕಟ್ಟಿಗೆ, ಹಸುವಿನ ಸಗಣಿ ಬಳಸಿ ಸುಡುವ ಬೆಂಕಿಯಿಂದಾಗುವ ಈ ಬೂದಿಯ ಉಪಯೋಗಗಳು ಈ ಕೆಳಕಂಡಂತಿವೆ.

1) ಈ ಭಸ್ಮವನ್ನು ಬಳಸಿ ಸ್ನಾನ ಮಾಡುವುದರಿಂದ ಅಥವಾ ಭಸ್ಮವನ್ನು ಮನೆಗೆ ಸಿಂಪಡಿಸುವುದರಿಂದ ಬ್ಯಾಕ್ಟೀರಿಯಾಗಳು ಸಾಯುವುದು ಮಾತ್ರವಲ್ಲ ಜೀವನದಲ್ಲಿನ ತೊಂದರೆಗಳು ದೂರಾಗುತ್ತದೆ ಎಂದು ಪರಿಗಣಿಸಲಾಗಿದೆ.

2) ಈ ಭಸ್ಮವನ್ನು ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಜಾತಕದಲ್ಲಿ ರಾಹು ಮತ್ತು ಕೇತುಗಳಿಂದ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ಕೆಲವು ಜ್ಯೋತಿಷಿಗಳು ಹೇಳುತ್ತಾರೆ.

3) ಈ ಬೂದಿ ಶಕ್ತಿಶಾಲಿ ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಅನಾರೋಗ್ಯ ಪೀಡಿತರು ಈ ಭಸ್ಮವನ್ನು ಒಂದು ತಿಂಗಳ ಕಾಲ ತಿಲಕವನ್ನಾಗಿ ಇಟ್ಟುಕೊಂಡರೆ ಅವರ ಆರೋಗ್ಯ ಸುಧಾರಿಸುತ್ತದೆ ಎಂದು ನಂಬಲಾಗಿದೆ.

4) ಈ ಭಸ್ಮವನ್ನು ಕೆಂಪು ಬಟ್ಟೆಯಲ್ಲಿ ನಾಣ್ಯದೊಂದಿಗೆ ಕಟ್ಟಿ ಹಣವನ್ನು ಇಡುವ ಸುರಕ್ಷಿತ ಲಾಕರ್‌ನಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆಗಳು ದೂರಾಗಿ ಹೊಸ ಆದಾಯದ ಮೂಲಗಳಿಗೆ ಬಾಗಿಲು ತೆರೆಯುತ್ತದೆ ಎಂದು ನಂಬಲಾಗಿದೆ.

5) ಈ ಭಸ್ಮವನ್ನು ಮನೆಯ ಮೂಲೆಯಲ್ಲಿಟ್ಟರೆ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಇದು ಸಂಘರ್ಷ ಪೀಡಿತ ಕುಟುಂಬಗಳಲ್ಲಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕುಟುಂಬ ಸದಸ್ಯರ ನಡುವೆ ಪ್ರೀತಿ ಮತ್ತು ಸಾಮರಸ್ಯವನ್ನು ಹರಡಲು ಸಹಕಾರಿಯಾಗಿದೆ ನಂಬಲಾಗಿದೆ.

6) ಅಲ್ಲದೇ ಈ ಭಸ್ಮವನ್ನು ಮನೆಯ ಮೂಲೆಯಲ್ಲಿಟ್ಟರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಅಥವಾ ದುಷ್ಟಶಕ್ತಿಗಳು ಇದ್ದರೆ ಅದನ್ನು ತೊಲಗಿಸುತ್ತದೆ ಎಂದು ನಂಬಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.