Planets Transit: 2025ರ ಜನವರಿಯಲ್ಲಿ 4 ಬಲಿಷ್ಠ ಗ್ರಹಗಳ ಸಂಕ್ರಮಣ; ಹೊಸ ವರ್ಷದ ಮೊದಲ ತಿಂಗಳಲ್ಲಿ ಈ ರಾಶಿಯವರಿಗೆ ಹರಿದು ಬರುತ್ತೆ ಹಣ
ಗ್ರಹಗಳ ಸಂಕ್ರಮಣ 2025: ಶಕ್ತಿಯುತ ಗ್ರಹಗಳ ಸಂಕ್ರಮಣದ ಪರಿಣಾಮವಾಗಿ 2025ರ ಜನವರಿಯಲ್ಲಿ ಕೆಲವು ರಾಶಿಯವರು ಉತ್ತಮ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಆದರೆ, ಗ್ರಹಗಳ ಬದಲಾವಣೆಯು ಕೆಲವೇ ಕೆಲವು ರಾಶಿಯವರಿಗೆ ನಿರೀಕ್ಷೆ ಮೀರಿದ ಲಾಭಗಳನ್ನು ತಂದಿವೆ. ಈ ಅದೃಷ್ಟದ ರಾಶಿಯವರಲ್ಲಿ ನೀವು ಇದ್ದೀರಾ ನೋಡಿ.
ಗ್ರಹಗಳ ಸಂಕ್ರಮಣ 2025: ಹೊಸ ವರ್ಷಕ್ಕೆ ಇನ್ನು 3 ದಿನಗಳು ಬಾಕಿ ಉಳಿದಿದೆ. ಹೊಸ ವರ್ಷದ ಜನವರಿ ತಿಂಗಳು ಬಹಳ ಒಳ್ಳೆಯ ಸಮಯ. ಏಕೆಂದರೆ ಶಕ್ತಿಯುತ ಗ್ರಹಗಳ ಸಂಕ್ರಮಣ ಇದೇ ತಿಂಗಳಲ್ಲಿ ನಡೆಯುತ್ತವೆ. ಇದರ ಪರಿಣಾಮವಾಗಿ ಸಾಕಷ್ಟು ಮಂದಿ ಉತ್ತಮ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಗ್ರಹಗಳ ಸ್ಥಾನ ಬದಲಾವಣೆಯು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಜನವರಿ 2025 ರಲ್ಲಿ 4 ಗ್ರಹಗಳು ತಮ್ಮ ರಾಶಿಯ ಸ್ಥಾನವನ್ನು ಬದಲಾಯಿಸುತ್ತಿವೆ. ಪ್ರತಿಯೊಂದು ಗ್ರಹವು ಯಾವ ರಾಶಿಯಿಂದ ಯಾವ ರಾಶಿಗೆ ಸಂಚರಿಸುತ್ತವೆ. ಮತ್ತು ಸ್ಥಾನ ಬದಲಾವಣೆಯ ದಿನಾಂಕವನ್ನು ಇಲ್ಲಿ ನೀಡಲಾಗಿದೆ.
2025ರ ಜನವರಿಯಲ್ಲಿ ಬುಧಸಂಕ್ರಮಣ
2025 ರ ಜನವರಿ ಬುಧನ ಸಂಕ್ರಮಣದೊಂದಿಗೆ ಪ್ರಾರಂಭವಾಗುತ್ತದೆ. 2025ರ ಜನವರಿ 4 ರಂದು ಬುಧ ವೃಶ್ಚಿಕ ರಾಶಿಯನ್ನು ಬಿಟ್ಟು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಈ ರಾಶಿಯಲ್ಲಿ 20 ದಿನಗಳ ಕಾಲ ಇರುತ್ತಾನೆ. ಜನವರಿ 24ರಂದು ಬುಧ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ.
ಬಹಳ ವಿಶೇಷ ಸೂರ್ಯ ಸಂಕ್ರಮಣ
ಸೂರ್ಯನ ಚಲನೆಯೂ ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಜನವರಿ 14 ರಂದು ಮಕರ ಸಂಕ್ರಾಂತಿಯ ದಿನದಂದು, ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಆಗಮಿಸುತ್ತಾನೆ. ಇದರೊಂದಿಗೆ ಯಾಗರಾಜ್‌ನಲ್ಲಿ ಮಹಾಕುಂಭ ಪ್ರಾರಂಭವಾಗುತ್ತದೆ ಮತ್ತು ಎಲ್ಲಾ ಶುಭ ಚಟುವಟಿಕೆಗಳು ಆ ದಿನದಿಂದ ಪ್ರಾರಂಭವಾಗುತ್ತವೆ.
ಜನವರಿಯಲ್ಲಿ ಮಂಗಳ ಸಂಕ್ರಮಣ
ಮಂಗಳ ಸಂಕ್ರಮಣ ಜನವರಿಯಲ್ಲಿ ನಡೆಯಲಿದೆ. ಮಂಗಳನು ಮಿಥುನ ರಾಶಿಯನ್ನು ಪ್ರವೇಶಿಸಿ ಅಲ್ಲಿ ಆಶೀರ್ವಾದ ನೀಡುತ್ತಾನೆ. ಜನವರಿ 21 ರಂದು ಮಂಗಳನು ಮಿಥುನ ರಾಶಿಗೆ ಆಗಮಿಸುತ್ತಿದ್ದಂತೆ ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತಾನೆ.
ಜನವರಿಯಲ್ಲಿ 4ನೇ ಸಂಚಾರವೇ ಶುಕ್ರನ ಸಂಕ್ರಮಣ
ಶುಕ್ರ ಸಂಕ್ರಮಣವು ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತಾನೆ. 2025ರ ಜನವರಿ ಅನೇಕ ರಾಶಿಗಳಲ್ಲಿ ಬದಲಾವಣೆ ಇರುತ್ತದೆ. ಶುಕ್ರನು ಸಂಪತ್ತು ಮತ್ತು ಸಮೃದ್ಧಿಯ ಅಧಿಪತಿ. ಜನವರಿ 28 ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚರಿಸುತ್ತಾನೆ.
ಗ್ರಹಗಳ ಬದಲಾವಣೆಯು ಯಾವ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ?
ಮೇಷ ರಾಶಿ: ಈ ರಾಶಿಯವರಿಗೆ 2025ರ ಮೊದಲ ತಿಂಗಳು ತುಂಬಾ ಒಳ್ಳೆಯದು. ನಿಮ್ಮ ಕೆಲಸದ ಪರಿಸ್ಥಿತಿಗಳು ಸುಧಾರಿಸುತ್ತವೆ. ಉನ್ನತ ಅಧಿಕಾರಿಗಳು ನಿಮಗೆ ದೊಡ್ಡ ಜವಾಬ್ದಾರಿಯನ್ನು ವಹಿಸುತ್ತಾರೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರುತ್ತವೆ. ಸಂತೋಷ ಇರುತ್ತದೆ. ಆರ್ಥಿಕ ಲಾಭಗಳು ಇರುತ್ತವೆ.
ತುಲಾ ರಾಶಿ: 2025 ಜನವರಿಯಲ್ಲಿ ತುಲಾ ರಾಶಿಯವರು ಸಹ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುತ್ತಿರುವವರು ಯಶಸ್ಸನ್ನು ಪಡೆಯುತ್ತಾರೆ. ಸ್ವಂತ ವ್ಯವಹಾರವನ್ನು ಮಾಡಲು ಈ ಸಮಯವು ಸೂಕ್ತವಾಗಿದೆ. ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುತ್ತೀರಿ. ಆರ್ಥಿಕ ಲಾಭಗಳಿವೆ. ನಿರೀಕ್ಷೆಗೂ ಮೀರಿದ ಹಣದ ಹರಿವು ಇರುತ್ತೆ.
ಕುಂಭ ರಾಶಿ: ಈ ಗ್ರಹಗಳ ಬದಲಾವಣೆಯಿಂದಾಗಿ ಕುಂಭ ರಾಶಿಯವರು ಪ್ರಯೋಜನಗಳನ್ನು ಪಡೆಯುತ್ತಾರೆ. ಹೊಸ ವರ್ಷದ ಮೊದಲ ತಿಂಗಳು ಈ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿರುತ್ತೀರಿ ಮತ್ತು ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ. ಹಿಂದೆಂದಿಗಿಂತಲೂ ಖುಷಿಯ ಕ್ಷಣಗಳನ್ನು ಕಾಣುವಿರಿ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)