ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಿಸ್ಕ್‌ ತೆಗೆದುಕೊಳ್ಳುವಲ್ಲಿ ಸದಾ ಮುಂದು, ಕುಟುಂಬಕ್ಕಿಂತ ವೃತ್ತಿ ಜೀವನಕ್ಕೆ ಪ್ರಾಮುಖ್ಯತೆ ಕೊಡುವ ರಾಶಿಗಳಿವು; ನೀವೂ ಹೀಗೇನಾ?

ರಿಸ್ಕ್‌ ತೆಗೆದುಕೊಳ್ಳುವಲ್ಲಿ ಸದಾ ಮುಂದು, ಕುಟುಂಬಕ್ಕಿಂತ ವೃತ್ತಿ ಜೀವನಕ್ಕೆ ಪ್ರಾಮುಖ್ಯತೆ ಕೊಡುವ ರಾಶಿಗಳಿವು; ನೀವೂ ಹೀಗೇನಾ?

ವೈಯಕ್ತಿಕ ಜೀವನ ಸುಖ, ಸಂತೋಷದಿಂದ ಕೂಡಿರಲು, ಹಣಕಾಸಿನ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಒಳ್ಳೆ ಉದ್ಯೋಗ ಅರಸುತ್ತೇವೆ. ಆದರೆ ಕೆಲವರು ವೈಯಕ್ತಿಕ ಜೀವನಕ್ಕಿಂತ ವೃತ್ತಿ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ವೃತ್ತಿ ಜೀವನ ವೈಯ್ತಕಿಕ ಜೀವನ ಎರಡನ್ನೂ ಸಮತೋಲನದಲ್ಲಿ ಇಡುವುದು ಬಹಳ ಮುಖ್ಯ.

ರಿಸ್ಕ್‌ ತೆಗೆದುಕೊಳ್ಳುವಲ್ಲಿ ಸದಾ ಮುಂದು, ಕುಟುಂಬಕ್ಕಿಂತ ವೃತ್ತಿ ಜೀವನಕ್ಕೆ ಪ್ರಾಮುಖ್ಯತೆ ಕೊಡುವ ರಾಶಿಗಳಿವು
ರಿಸ್ಕ್‌ ತೆಗೆದುಕೊಳ್ಳುವಲ್ಲಿ ಸದಾ ಮುಂದು, ಕುಟುಂಬಕ್ಕಿಂತ ವೃತ್ತಿ ಜೀವನಕ್ಕೆ ಪ್ರಾಮುಖ್ಯತೆ ಕೊಡುವ ರಾಶಿಗಳಿವು (PC: Pixabay)

ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್‌ ಮಾಡುವುದು ಬಹಳ ಕಷ್ಟದ ವಿಚಾರ. ವೈಯಕ್ತಿಕ ಜೀವನ ಚೆನ್ನಾಗಿರಬೇಕೆಂದರೆ ವೃತ್ತಿ ಜೀವನ ಕೂಡಾ ಬಹಳ ಚೆನ್ನಾಗಿರಬೇಕು. ಅಲ್ಲಿ ಯಶಸ್ಸು ಗಳಿಸಬೇಕು. ಇದೇ ಕಾರಣಕ್ಕೆ ಕೆಲವರು ಕುಟುಂಬಕ್ಕಿಂತ ವೃತ್ತಿಗೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಸ್ವಂತ ಕೆಲಸವನ್ನೂ ಬಿಟ್ಟು ಕಚೇರಿಯಲ್ಲಿ ಹೆಚ್ಚು ಸಮಯ ಕಾಲ ಕಳೆಯುತ್ತಾರೆ. ಆದ್ದರಿಂದಲೇ ಇವರನ್ನು ಕೆಲಸದ ರಾಕ್ಷಸರು ಎಂದು ಸಹೋದ್ಯೋಗಿಗಳು ಗೇಲಿ ಮಾಡುವುದೂ ಉಂಟು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಕುಟುಂಬಕ್ಕಿಂತ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ನೋಡೋಣ.

ಮೇಷ ರಾಶಿ

ಮೇಷ ರಾಶಿಯ ಜನರು ಉನ್ನತ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ . ಮಹತ್ವಾಕಾಂಕ್ಷೆಯಿದ್ದರೆ ಯಾವ ಕೆಲಸವಾದರೂ ಅದು ಈಡೇರುವವರೆಗೂ ನಿದ್ರೆ ಮಾಡುವುದಿಲ್ಲ. ಈ ರಾಶಿಯ ಜನರು ಯಾವಾಗಲೂ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಹೊಸ ಸವಾಲುಗಳನ್ನು ಎದುರುನೋಡುತ್ತಾರೆ. ಕೆಲಸದಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಗುರಿ ಸಾಧಿಸಲು ದಿಟ್ಟು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಇವರ ಈ ನಿಲುವಿನಿಂದ ಕೆಲವೊಮ್ಮೆ ಕುಟುಂಬದವರು ಸಮಸ್ಯೆಗೆ ಒಳಗಾಗುತ್ತಾರೆ. ಆದ್ದರಿಂದ ಮೇಷ ರಾಶಿಯವರು ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ನೀವೂ ಮೇಷ ರಾಶಿಯವರಾಗಿದ್ದರೆ ಕುಟುಂಬಕ್ಕೆ ಆದ್ಯತೆ ನೀಡಲು ಪ್ರಯತ್ನಿಸಬೇಕು. ಆಗ ಜೀವನ ಸುಖಮಯವಾಗಿರುತ್ತದೆ.

ಕನ್ಯಾ ರಾಶಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯ ಜನರು ಯಾವುದೇ ಕೆಲಸವನ್ನು ಮೊದಲು ಪ್ಲಾನ್‌ ಮಾಡಿ ಮಾಡುತ್ತಾರೆ. ಅದರ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಇವರ ಈ ಗುಣವೇ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ತಮಗೆ ವಹಿಸಿದ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಇವರಲ್ಲಿದೆ. ಎಷ್ಟೇ ಕಷ್ಟವಿದ್ದರೂ ಅದನ್ನು ಪೂರ್ಣಗೊಳಿಸಲು ತಮ್ಮ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳುತ್ತಾರೆ. ಕುಟುಂಬದ ಬಗ್ಗೆ ತುಂಬಾ ಪ್ರೀತಿ ಮತ್ತು ಕಾಳಜಿಯುಳ್ಳ ಈ ರಾಶಿಯವರು, ವೃತ್ತಿಯಿಂದಾಗಿ ಕುಟುಂಬದ ಕಡೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ. ಇದರಿಂದ ಕುಟುಂಬಸ್ಥರು ಇವರಿಂದ ದೂರವಾಗುವ ಸಾಧ್ಯತೆ ಇದೆ. ಆದ್ದರಿಂದ ಕನ್ಯಾ ರಾಶಿಯವರು ವೃತ್ತಿಯೊಂದಿಗೆ ವೈಯಕ್ತಿಕ ಜೀವನಕ್ಕೆ ಯಾವಾಗಲೂ ಆದ್ಯತೆ ನೀಡಬೇಕು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಬಹಳ ಭಾವುಕರು. ಒಮ್ಮೆ ಕೆಲಸದಲ್ಲಿನ ಗುರಿಯ ಬಗ್ಗೆ ಕೇಂದ್ರೀಕರಿಸಿದರೆ ಬೇರೆ ವಿಚಾರಕ್ಕೆ ಗಮನ ನೀಡುವುದಿಲ್ಲ. ಇವರ ಈ ಗುಣದಿಂದಲೇ ವೃತ್ತಿಯಲ್ಲಿ ಇವರಿಗೆ ಅಪಾರ ಗೌರವ ಇರುತ್ತದೆ. ಪುರಸ್ಕಾರಗಳನ್ನು ತಂದುಕೊಡುತ್ತದೆ. ಸಮರ್ಪಣೆ ಎಂಬುದು ಈ ರಾಶಿಯವರ ಪರಿಶ್ರಮಕ್ಕೆ ಮತ್ತೊಂದು ಹೆಸರು. ವೃತ್ತಿ ಜೀವನದಲ್ಲಿನ ಯಶಸ್ಸಿಗೆ ಕುಟುಂಬದ ಜೀವನಕ್ಕೆ ಇವರು ಗಮನ ನೀಡುವುದಿಲ್ಲ. ವೃತ್ತಿಗೆ ಆದ್ಯತೆ ನೀಡುವುದರಿಂದ ಕೌಟುಂಬಿಕ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ತಮ್ಮ ಪ್ರೀತಿಪಾತ್ರರೊಡನೆ ಘರ್ಷಣೆಗಳು ಉಂಟಾಗಬಹುದು. ಆದ್ದರಿಂದ ಇವರು ಕೆಲಸ ಮತ್ತು ಕುಟುಂಬ ಎರಡನ್ನೂ ಸಮನಾಗಿ ನಿಭಾಯಿಸಬೇಕು. ಕೆಲಸದ ಜತೆಗೆ ಕುಟುಂಬಕ್ಕೂ ಆದ್ಯತೆ ನೀಡಬೇಕು. ಆಗ ಮಾತ್ರ ಎರಡೂ ಜೀವನ ಸುಖಮಯವಾಗಿರುತ್ತದೆ.

ಮಕರ ರಾಶಿ

ಮಕರ ರಾಶಿಯವರು ಬಲವಾದ ಇಚ್ಛಾಶಕ್ತಿಯುಳ್ಳವರು. ಮಹತ್ವಾಕಾಂಕ್ಷೆಯನ್ನು ಸಾಧಿಸಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಯಾವುದೇ ಕಾರ್ಯವಾದರೂ ಒಮ್ಮೆ ಮನಸ್ಸು ಮಾಡಿದರೆ ಅದರಲ್ಲಿ ಯಶಸ್ವಿಯಾಗಲು ಶ್ರಮಿಸುತ್ತಾರೆ. ವೃತ್ತಿಪರ ಜೀವನದಲ್ಲಿ ಸದಾ ನಂಬರ್‌ ಒನ್‌ ಆಗಿರಲು ಪ್ರಯತ್ನಿಸುತ್ತಾರೆ. ಮಕರ ರಾಶಿಯವರಿಗೆ ಕೆಲಸವು ಕೇವಲ ಸಾಧನವಲ್ಲ . ಇದು ವೈಯಕ್ತಿಕ ಯಶಸ್ಸಿನ ಮಾರ್ಗವೆಂದು ಪರಿಗಣಿಸುತ್ತಾರೆ. ಈ ಜನರು ತುಂಬಾ ಶಿಸ್ತಿನವರು . ಅವರು ತಮ್ಮ ಗುರಿಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಉದ್ಯೋಗದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಲು ಅವರು ಹಗಲು ರಾತ್ರಿ ನಿದ್ರೆ ಮಾಡದೆ ಕೆಲಸ ಮಾಡುತ್ತಾರೆ. ಇದಕ್ಕಾಗಿ ಈ ರಾಶಿಯವರು ಕುಟುಂಬವನ್ನೂ ಮರೆಯುತ್ತಾರೆ. ಆದರೆ ಇದೇ ಕಾರಣಕ್ಕೆ ಕುಟುಂಬದಲ್ಲಿ ಇವರ ಸ್ಥಾನವು ಹಿಂದುಳಿದಿರುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.