Chaturgrahi Yoga: 50 ವರ್ಷಗಳ ಬಳಿಕ ಚತುರ್ಗ್ರಾಹಿ ಯೋಗ; ಈ 3 ರಾಶಿಯವರು ಮುಟ್ಟಿದೆಲ್ಲಾ ಚಿನ್ನ, ಮನೆ ಬಾಗಿಲಿಗೆ ಅದೃಷ್ಟ ಲಕ್ಷ್ಮಿ
ಸುಮಾರು 50 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ಚತುರ್ಗ್ರಾಹಿ ಯೋಗ ಉಂಟಾಗುತ್ತಿದೆ. ಇದರ ಪರಿಣಾಮವಾಗಿ ಕೆಲವು ರಾಶಿಯವರಿಗೆ ಹೆಚ್ಚು ಲಾಭಗಳಿವೆ. ಅಂದುಕೊಂಡಿದ್ದ ಎಲ್ಲಾ ಕೆಲಸಗಳು ನೆರವೇರುತ್ತವೆ. ಯಾವುವು ಆ ರಾಶಿಗಳು ಅನ್ನೋದನ್ನ ತಿಳಿಯೋಣ.
Chaturgrahi Yoga: ಅನೇಕ ಗ್ರಹಗಳ ಸಂಚಾರ, ಚೈತ್ರ ನವರಾತ್ರಿ, ಸೂರ್ಯಗ್ರಹಣ, ಹೊಸ ವರ್ಷದ ಯುಗಾದಿ (Ugadi 2024) ಹಬ್ಬದಂತಹ ಪ್ರಮುಖ ದಿನಗಳೊಂದಿಗೆ ಏಪ್ರಿಲ್ ತಿಂಗಳು ಬಹಳ ವಿಶೇಷವಾಗಿದೆ. ಈ ಮಾಸದಲ್ಲಿ ಒಂದೇ ರಾಶಿಯಲ್ಲಿ ನಾಲ್ಕು ಗ್ರಹಗಳ ಸಂಯೋಗವಿದೆ. ಇದರ ಪರಿಣಾಮವಾಗಿ ಹಲವು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.
ಸೂರ್ಯ, ಬುಧ, ಶುಕ್ರ ಮತ್ತು ರಾಹುವಿನ ಸಂಯೋಗ ಮೀನ ರಾಶಿಯಲ್ಲಿ ನಡೆಯುತ್ತದೆ. ಇದರಿಂದ ಚತುರ್ಗ್ರಾಹಿ ಯೋಗ ಉಂಟಾಗುತ್ತದೆ. ಗ್ರಹಗಳ ಅಧಿಪತಿ ಬುಧನು ಏಪ್ರಿಲ್ 9 ರ ಯುಗಾದಿ ದಿನವೇ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹು, ಶುಕ್ರ ಮತ್ತು ಸೂರ್ಯ ಈಗಾಗಲೇ ಮೀನದಲ್ಲಿ ಸಂಚರಿಸುತ್ತಿದ್ದಾರೆ. ಮೀನ ರಾಶಿಯಲ್ಲಿ ಈ ನಾಲ್ಕು ಗ್ರಹಗಳ ಸಮಾಗಮದಿಂದ 50 ವರ್ಷಗಳ ನಂತರ ಚತುರ್ಗ್ರಾಹಿ ಯೋಗ ಉಂಟಾಗುತ್ತದೆ.
ಸೂರ್ಯ ಮತ್ತು ಬುಧನ ಸಂಯೋಗದಿಂದ ಬುಧಾದಿತ್ಯ ರಾಜಯೋಗ ಉಂಟಾಗಿದೆ. ಅಲ್ಲದೆ, ಶುಕ್ರ ಮತ್ತು ಬುಧ ಎರಡೂ ಸೇರಿ ಲಕ್ಷ್ಮೀನಾರಾಯಣ ಯೋಗವನ್ನು ರೂಪಿಸುತ್ತವೆ. ಹೀಗೆ ಮೂರು ರಾಜಯೋಗಗಳು ಮೀನರಾಶಿಯಲ್ಲಿ ಏಕಕಾಲದಲ್ಲಿ ರೂಪುಗೊಳ್ಳುತ್ತವೆ. ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ. ಜೊತೆಗೆ ಇವರ ಸಂಪತ್ತನ್ನು ಹೆಚ್ಚಿಸುತ್ತವೆ.
ಸೂರ್ಯದೇವರ ಕೃಪೆಯಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ ಮತ್ತು ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ವಿಯಾಗುತ್ತಾರೆ. ರಾಜಯೋಗದಿಂದ ಕೆಲವು ರಾಶಿಯವರು ಪ್ರಗತಿಯ ಹಾದಿಯಲ್ಲಿ ದೊಡ್ಡ ಫಲಿತಾಂಶವನ್ನೇ ಪಡೆಯಲಿದ್ದಾರೆ. ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ ಹಾಗೂ ಜೀವನದಲ್ಲಿ ಸಂತೋಷ ಇರುತ್ತದೆ. ಇದು ಮಾತ್ರವಲ್ಲದೆ, ಈ ಯೋಗವು ರೂಪುಗೊಳ್ಳುವ ಒಂದು ದಿನ ಮುಂಚಿನತವಾಗಿ ಏಪ್ರಿಲ್ 8ರ ಸೋಮವಾರ ಮೀನ ರಾಶಿಯಲ್ಲಿ ಸೂರ್ಯಗ್ರಹಣ ಇರುತ್ತದೆ. ಸುಮಾರು 54 ವರ್ಷಗಳ ನಂತರ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಮೀನರಾಶಿಯಲ್ಲಿ ರೂಪುಗೊಳ್ಳಲಿರುವ ಚತುರ್ಗ್ರಾಹಿ ಯೋಗದಿಂದ ಯಾವ ರಾಶಿಗಳು ಹೆಚ್ಚಿನ ಲಾಭಗಳಿವೆ ಅನ್ನೋದನ್ನು ನೋಡೋಣ.
ಚತುರ್ಗ್ರಾಹಿ ಯೋಗದಿಂದ ಮಿಥುನ ರಾಶಿಯವರಿಗೆ ಇಷ್ಟೊಂದು ಲಾಭ
ಚತುರ್ಗ್ರಾಹಿ ಯೋಗದ ಪ್ರಭಾವದಿಂದಾಗಿ ಮಿಥುನ ರಾಶಿಯವರಿಗೆ ಕೆಲಸ ಮತ್ತು ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿದೆ. ವೃತ್ತಿ ಬೆಳವಣಿಗೆಗೆ ಹಲವು ಸುವರ್ಣಾವಕಾಶಗಳಿವೆ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಸಂಬಲ ಹೆಚ್ಚಳವಾಗುತ್ತದೆ. ವ್ಯಾಪಾರದಲ್ಲಿ ಲಾಭವನ್ನು ಕಾಣುವಿರಿ.
ಕನ್ಯಾ ರಾಶಿಯವರಿಗೂ ಅದೃಷ್ಟ
ಶುಕ್ರ ಮತ್ತು ಸೂರ್ಯ ಸಂಯೋಗದಿಂದ ಕನ್ಯಾರಾಶಿಯರ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ವೃತ್ತಿ ಬೆಳವಣಿಗೆಗೆ ಹಲವು ಅವಕಾಶಗಳಿವೆ. ವ್ಯಾಪಾರದಲ್ಲಿ ಲಾಭವಿದೆ. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಿಹಿ ಸುದ್ದಿಯನ್ನು ಕೇಳುತ್ತಾರೆ. ಸ್ನೇಹಿತರೊಂದಿಗೆ ಇರುವ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಸಂತೋಷದ ಜೀವನ ನಡೆಸುತ್ತೀರಿ.
ಧನು ರಾಶಿಯವರಿಗೆ ಹಣದ ಹೊಳೆಯೇ ಹರಿಯುವ ನಿರೀಕ್ಷೆ
ಸೂರ್ಯ, ಬುಧ, ರಾಹು ಮತ್ತು ಶುಕ್ರರ ಸಂಯೋಗದಿಂದ ಧನು ರಾಶಿಯವರಿಗೆ ಅತ್ಯುತ್ತಮ ಲಾಭಗಳಿವೆ. ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಭೂಮಿ ಅಥವಾ ವಾಹನ ಖರೀದಿಯ ಸಾಧ್ಯತೆ ಇದೆ. ಹಣದ ಹರಿವಿನ ಹೊಸ ಮಾರ್ಗಗಳು ಸುಗಮವಾಗಲಿವೆ. ನಿಮ್ಮ ಸಂಗಾತಿಯಿಂದ ನೀವು ಅನೇಕ ಆಶ್ಚರ್ಯಗಳನ್ನು ಪಡೆಯುತ್ತೀರಿ. ಆರಾಮದಾಯಕ ಮತ್ತು ಐಷಾರಾಮಿ ಜೀವನ ನಡೆಸುತ್ತೀರಿ.
ಮೀನ ರಾಶಿಯಲ್ಲಿ ಚತುರ್ಗ್ರಾಹಿ ಯೋಗದ ಜೊತೆಗೆ ಬುಧಾದಿತ್ಯ ಯೋಗ ಹಾಗೂ ಲಕ್ಷ್ಮೀನಾರಾಯಣ ಯೋಗ ಮಿಥುನ, ಕನ್ಯಾ ಹಾಗೂ ಧನು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಸುಮಾರು 100 ವರ್ಷಗಳ ನಂತರ ಮೀನ ರಾಶಿಯಲ್ಲಿ 2 ರಾಜಯೋಗಗಳು ಉಂಟಾಗುತ್ತಿವೆ. ಈ ಯೋಗಗಳನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.