ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sun Transit: ಗ್ರಹಗಳ ರಾಜ ಸೂರ್ಯ ಸಂಚಾರ; ಈ 6 ರಾಶಿಯವರಿಗೆ ಆರ್ಥಿಕ ಲಾಭ, ಸಮಾಜದಲ್ಲಿ ಗೌರವ ಹೆಚ್ಚಳ

Sun Transit: ಗ್ರಹಗಳ ರಾಜ ಸೂರ್ಯ ಸಂಚಾರ; ಈ 6 ರಾಶಿಯವರಿಗೆ ಆರ್ಥಿಕ ಲಾಭ, ಸಮಾಜದಲ್ಲಿ ಗೌರವ ಹೆಚ್ಚಳ

ಗ್ರಹಗಳ ರಾಜ ಸೂರ್ಯ ಅತಿ ಶೀಘ್ರದಲ್ಲೇ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತೆ. ಯಾವ ರಾಶಿಯವರಿಗೆ ಆದೃಷ್ಟ ಇರಲಿದೆ ಎಂಬುದನ್ನ ತಿಳಿಯಿರಿ.

ತನ್ನ ಸ್ಥಾನವನ್ನು ಬದಲಾಯಿಸುತ್ತಿರುವ ಗ್ರಹಗಳ ರಾಜ ಸೂರ್ಯ. ಪ್ರಮುಖವಾಗಿ 6 ರಾಶಿಯವರಿಗೆ ಆರ್ಥಿಕ ಲಾಭಗಳಿವೆ.
ತನ್ನ ಸ್ಥಾನವನ್ನು ಬದಲಾಯಿಸುತ್ತಿರುವ ಗ್ರಹಗಳ ರಾಜ ಸೂರ್ಯ. ಪ್ರಮುಖವಾಗಿ 6 ರಾಶಿಯವರಿಗೆ ಆರ್ಥಿಕ ಲಾಭಗಳಿವೆ.

ಪ್ರಸ್ತುತ ಮೇಷ ರಾಶಿಯಲ್ಲಿರುವ (Aries) ಗ್ರಹಗಳ ರಾಜ ಸೂರ್ಯ (Sun Transit) ಇನ್ನ ಕೆಲವೇ ದಿನಗಳಲ್ಲಿ ಶುಕ್ರ ರಾಶಿಗೆ ಸಾಗಲಿದ್ದಾನೆ. ಸೂರ್ಯನ ಸ್ಥಾನ ಬದಲಾವಣೆ ಶುಭಕರವಾಗಿರುವುದರಿಂದ ಕೆಲವು ರಾಶಿಯವರಿಗೆ ಅದೃಷ್ಟ ತರಲಿದೆ. ಆರ್ಥಿಕ ಲಾಭದ ತೊಡೆಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ (Horoscope).

ಸೂರ್ಯ ಸಾಮಾನ್ಯವಾಗಿ ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಜ್ಯೋತಿಷ್ಯಶಾಸ್ತ್ರದಲ್ಲಿ (Astrology In Kannada) ಹೇಳುವಂತೆ ಯಾವ ರಾಶಿಗೆ ಪ್ರವೇಶಿಸಿದರೆ ಆ ರಾಶಿಗೆ ಸಂಕ್ರಾಂತಿ ಎಂದು ಕರೆಯುತ್ತಾರೆ. ಮೇ 13 ರಂದು ಭಗವಾನ್ ಸೂರ್ಯ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಅಕ್ಷಯ ತೃತೀಯ ನಡೆದ ಮೂರು ದಿನಕ್ಕೆ ಸೂರ್ಯ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನು ತನ್ನ ರಾಶಿಚಕ್ರವನ್ನು ಬದಲಾಯಿಸುವುದರಿಂದ, ಕೆಲವು ರಾಶಿಯವರಿಗೆ ಅದೃಷ್ಟ ತರಲಿದೆ. ಸೂರ್ಯ ಸಂಚಾರವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಶುಕ್ರ ರಾಶಿಗೆ ಸೂರ್ಯನ ಪ್ರವೇಶದಿಂದಾಗಿ ಯಾವ ರಾಶಿಯವರಿಗೆ ಹೆಚ್ಚಿನ ಲಾಭಗಳಿವೆ ಎಂಬುದನ್ನ ಕಂಡುಹಿಡಿಯೋಣ.

ಮೇಷ ರಾಶಿ (Aries)

ಸೂರ್ಯ ಮೇಷ ರಾಶಿಯನ್ನು ಬಿಟ್ಟು ವೃಷಭ ರಾಶಿಗೆ ಹೋಗುತ್ತಾನೆ. ಪರಿಣಾಮವಾಗಿ ಈ ರಾಶಿಯವರಿಗೆ ಒಳ್ಳೆಯದಾಗುತ್ತೆ. ಆತ್ಮವಿಶ್ವಾಸದಿಂದ ಗುರಿಗಳತ್ತ ಗಮನ ಹರಿಸಿ, ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಇವರ ಕೆಲಸವು ಮೆಚ್ಚುಗೆಗೆ ಪಾತ್ರವಾಗುತ್ತೆ. ಕೋರ್ಟ್‌ ಕೇಸ್‌ಗಳಲ್ಲಿ ಜಯ ಸಿಗಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಕುಟುಂಬದ ಸದಸ್ಯರ ಸಹಕಾರದಿಂದ ಕೆಲವು ಸಮಸ್ಯೆಗಳಿಂದ ಹೊರಬರುವ ಸಾಧ್ಯತೆ ಇದೆ.

ವೃಷಭ ರಾಶಿ (taurus)

ವೃಷಭ ರಾಶಿಯವರಿಗೆ ಸೂರ್ಯನ ಸಂಚಾರ ಉತ್ತಮವಾಗಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹೊಸ ವಾಹನ ಅಥವಾ ಮನೆ ಖರೀದಿಸುವ ಸಾಧ್ಯತೆ ಇದೆ. ನೀವು ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಲಾಭ ಇರುತ್ತದೆ. ಅಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಮಿಥುನ ರಾಶಿ (Gemini)

ಸೂರ್ಯ ಸಂಚಾರಿಂದ ಮಿಥುನ ರಾಶಿಯವರು ತಮ್ಮ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಾರೆ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗುತ್ತದೆ. ಸಮಾಜದಲ್ಲಿ ಸಾಕಷ್ಟು ಗೌರವವನ್ನು ಪಡೆಯುತ್ತೀರಿ. ಸಮಾಜದಲ್ಲಿ ಪ್ರತಿಷ್ಠೆ ಮತ್ತು ಸ್ಥಾನಮಾನ ಹೆಚ್ಚುತ್ತದೆ. ಆರ್ಥಿಕ ಲಾಭ ಇರುತ್ತದೆ.

ಸಿಂಹ ರಾಶಿ (Leo)

ಸೂರ್ಯನ ಸಂಕ್ರಮಣದಿಂದ ಸಿಂಹ ರಾಶಿಯವರಿಗೆ ಆರ್ಥಿಕ ಲಾಭ ಇರುತ್ತದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಸಿಂಹ ರಾಶಿಯವರಿಗೆ ಈ ಸಮಯ ತುಂಬಾ ಶುಭಕರವಾಗಿದೆ. ಉದ್ಯೋಗ ವ್ಯವಹಾರಗಳಿಗೆ ಸೂಕ್ತವಾಗಿದೆ. ಗೌರವ ಹೆಚ್ಚಾಗುತ್ತೆ. ಕೆಲಸದ ಸ್ಥಳದಲ್ಲಿ ನಿಮ್ಮ ನೀಡಲಾಗುತ್ತಿರುವ ತೊಂದರೆಗಳು ಕೊನೆಗೊಳ್ಳುತ್ತವೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ ರಾಶಿ (Virgo)

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ಯಾ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಕೌಟುಂಬಿಕ ಜೀವನ ಆನಂದಮಯವಾಗಿರುತ್ತದೆ. ಕಚೇರಿಯಲ್ಲಿ ಎಲ್ಲರೂ ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಹಣಕಾಸಿನ ಲಾಭಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಗೌರವ ಹೆಚ್ಚಾಗಲಿದೆ. ಉದ್ಯೋ ವ್ಯವಾರಗಳಲ್ಲಿ ಲಾಭವಿದೆ.

ಕುಂಭ ರಾಶಿ (Aquarius)

ಕುಂಭ ರಾಶಿಯವರಿಗೆ ಸೂರ್ಯನ ಸಂಚಾರವು ಮಂಗಳಕರವಾಗಿದೆ. ಆರೋಗ್ಯ ಸುಧಾರಿಸುತ್ತದೆ. ವ್ಯಾಪಾರದಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ನಿಮ್ಮ ಪ್ರತಿಭೆಯಿಂದ ಕಷ್ಟಗಳನ್ನು ಸುಲಭವಾಗಿ ಜಯಿಸಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಜೊತೆಗೆ ಸಿಹಿ ಸುದ್ದಿ ಕೇಳುವಿರಿ.