ಕಟಕ ರಾಶಿ ಭವಿಷ್ಯ ಜುಲೈ 20: ಸೈಡ್ ಬುಸ್ನೆಸ್ನಿಂದ ಹೆಚ್ಚಿನ ಆದಾಯ, ಉಸಿರಾಟದ ಸಮಸ್ಯೆ ಇರುವವರು ಆರೋಗ್ಯದ ಕಡೆ ಗಮನ ಹರಿಸಿ
Cancer Daily Horoscope July 20, 2024: ರಾಶಿಚಕ್ರಗಳ ಪೈಕಿ ನಾಲ್ಕನೇಯದು ಕಟಕ. ಜನನದ ಸಮಯದಲ್ಲಿ ಚಂದ್ರನು ಕರ್ಕಾಟಕದಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆ ಕರ್ಕಾಟಕ. ಇಂದು ನೀವು ಪ್ರೇಮಿಯೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ.

ಕಟಕ ರಾಶಿ ಭವಿಷ್ಯ ಜುಲೈ 20: ನಿಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಮನೋಭಾವವನ್ನು ಹೊಂದಿರಿ. ಕಚೇರಿಯಲ್ಲಿ ಹೊಸ ಕಾರ್ಯಗಳನ್ನು ಮಾಡಲು ಆಸಕ್ತಿ ಹೊಂದುವಿರಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುತ್ತೀರಿ. ಹಣಕಾಸಿನ ಪರಿಸ್ಥಿತಿ ಕೂಡಾ ಉತ್ತಮವಾಗಿರಲಿದೆ. ಇಂದು ಪ್ರೇಮ ಜೀವನ ಸುಂದರವಾಗಿರಲಿದೆ. ವೃತ್ತಿಯಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆಯುವಿರಿ. ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿ ಮತ್ತು ದೈಹಿಕವಾಗಿ ಸದೃಢರಾಗಿ. ಇಂದು ಸಂತೋಷವಾಗಿರಲು ಹಿಂದಿನ ಸಮಸ್ಯೆಗಳನ್ನು ಪರಿಹರಿಸಿ. ವೃತ್ತಿಪರ ಯಶಸ್ಸು ಉತ್ತಮ ಆರೋಗ್ಯ ಮತ್ತು ಸಂಪತ್ತನ್ನು ಸಹ ತರುತ್ತದೆ. ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಕಟಕ ರಾಶಿಯವರ ಪ್ರೇಮ ಜೀವನ (Cancer Love Horoscope)
ಇಂದು ಹೊಸ ಪ್ರೇಮ ಸಂಬಂಧವನ್ನು ಸ್ವೀಕರಿಸಲಿದ್ದೀರಿ. ಕಚೇರಿ, ಲಿಫ್ಟ್, ಮಾರುಕಟ್ಟೆ, ಸಂಜೆ ಪಾರ್ಟಿ, ಅಥವಾ ಪ್ರಯಾಣ ಮಾಡುವಾಗ ಯಾವಾಗಲಾದರೂ ನೀವು ಅವರನ್ನು ಭೇಟಿಯಾಗಬಹುದು. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನೀವು ಉತ್ಸುಕರಾಗಿದ್ದರೂ, ಸಂಬಂಧದ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಆ ವ್ಯಕ್ತಿ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದರಿಂದ ಸ್ವಲ್ಪ ಸಮಯ ಕಾದು ನೋಡಿ. ಸಂಬಂಧದಲ್ಲಿ ಹೊಸಬರು ವ್ಯಕ್ತಿಯನ್ನು ವಿವರವಾಗಿ ತಿಳಿದುಕೊಳ್ಳಲು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯಬೇಕಾಗುತ್ತದೆ. ವಿವಾಹಿತ ಕರ್ಕಾಟಕ ರಾಶಿಯವರು ಇಂದು ಸಂಬಂಧದಲ್ಲಿ ಸಂಬಂಧಿಕರ ಹಸ್ತಕ್ಷೇಪವನ್ನು ನೋಡಬಹುದು.
ಕಟಕ ರಾಶಿಯವರ ವೃತ್ತಿ ಭವಿಷ್ಯ (Cancer Professional Horoscope)
ನೀವು ಇಂದು ಕಚೇರಿ ರಾಜಕೀಯಕ್ಕೆ ಬಲಿಯಾಗಬಹುದು. ನಿಮ್ಮ ಸಹೋದ್ಯೋಗಿಗಳ ಬಗ್ಗೆ ಜಾಗರೂಕರಾಗಿರಿ. ಏಕೆಂದರೆ ಕೆಲವರು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಕಚೇರಿ ಸಭೆಗಳಲ್ಲಿ ಮುಕ್ತವಾಗಿ ಮಾತನಾಡಬೇಡಿ ಮತ್ತು ಸಲಹೆಗಳನ್ನು ಕೇಳಿದಾಗ ಮಾತ್ರ ನೀಡುವುದು ಜಾಣತನ. ಕಚೇರಿಯಲ್ಲಿ ಉಂಟಾಗುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಜಾಣತನದಿಂದ ಪರಿಹಾರ ಮಾಡಿ. ಮಾರಾಟ ಮತ್ತು ಮಾರ್ಕೆಟಿಂಗ್ನಲ್ಲಿರುವವರು ಇಂದು ದೂರದ ಊರಿಗೆ ಪ್ರಯಾಣಿಸಬಹುದು. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗ ಪಡೆಯುತ್ತಾರೆ. ವಿದ್ಯಾರ್ಥಿಗಳು ಇಂದು ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ.
ಕಟಕ ರಾಶಿಯವರ ಆರ್ಥಿಕ ಜೀವನ (Cancer Money Horoscope)
ಇಂದು ಎಲ್ಲಾ ಹಣಕಾಸಿನ ಸಮಸ್ಯೆಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಸೈಡ್ ಬುಸ್ನೆಸ್ನಿಂದ ನೀವು ಸಂಪತ್ತನ್ನು ನಿರೀಕ್ಷಿಸಬಹುದು. ಹಿಂದಿನ ಕೆಲವು ಹೂಡಿಕೆಗಳು ಉತ್ತಮ ಆದಾಯವನ್ನು ತರುತ್ತವೆ, ಸಂಪತ್ತನ್ನು ಸುಧಾರಿಸುತ್ತವೆ. ಇಂದು, ನಿಮ್ಮ ಬಾಕಿಯನ್ನು ತೀರಿಸಲು ಮತ್ತು ಕಳೆದ ವರ್ಷಗಳಲ್ಲಿ ನೀವು ತೆಗೆದುಕೊಂಡ ಸಾಲವನ್ನು ತೀರಿಸಬಹುದು. ಕೆಲವು ಕರ್ಕಾಟಕ ರಾಶಿಯವರು ದಿನದ ಉತ್ತರಾರ್ಧದಲ್ಲಿ ವಾಹನವನ್ನು ಖರೀದಿಸುತ್ತಾರೆ.
ಕಟಕ ರಾಶಿಯವರ ಆರೋಗ್ಯ ಜಾತಕ(Cancer Health Horoscope)
ಇಂದು ಆರೋಗ್ಯ ಚೆನ್ನಾಗಿರಲಿದೆ. ಈ ದಿನ ಅಸಾಧಾರಣವಾಗಿರುತ್ತದೆ. ಆರೋಗ್ಯಕರ ಆಹಾರವನ್ನು ಸೇವಿಸಿ. ಕೆಲಸದ ಒತ್ತಡ, ಪ್ರೀತಿ ಮತ್ತು ಜೀವನದ ಇತರ ಅಂಶಗಳಿಂದ ದೂರವಿರಿ. ಕೆಲವು ಹಿರಿಯರಿಗೆ ಇಂದು ಉಸಿರಾಟದ ತೊಂದರೆ ಇರುತ್ತದೆ. ಎದೆ ಅಥವಾ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ನಕಾರಾತ್ಮಕ ಮನೋಭಾವ ಹೊಂದಿರುವ ಜನರಿಂದ ನೀವು ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು.
ಕಟಕ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಕಟಕ ರಾಶಿಯ ಅಧಿಪತಿ: ಚಂದ್ರ, ಶುಭ ದಿನಾಂಕಗಳು: 4, 5, 6, 15, 16, 30. ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ಸಂಖ್ಯೆಗಳು: 1, 2, 3, 4, 6, 7, 9. ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು. ಶುಭ ದಿಕ್ಕು: ಪೂರ್ವ ಮತ್ತು ಉತ್ತರ. ಶುಭ ತಿಂಗಳು: ಏಪ್ರಿಲ್ 15 ರಿಂದ ಮೇ 14, ಆಗಸ್ಟ್ 15ರಿಂದ ಸೆಪ್ಟೆಂಬರ್ 14. ಶುಭ ಹರಳು: ಮಾಣಿಕ್ಯ, ಹವಳ ಮತ್ತು ಹಳದಿ ಪುಷ್ಯ ರಾಗ. ಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೀನ. ಅಶುಭ ರಾಶಿ: ಕನ್ಯಾ, ಮಕರ, ಕುಂಭ ಮತ್ತು ಮಿಥುನ.
ಕಟಕ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ದಕ್ಷಿಣಾಮೂರ್ತಿ ಸ್ತೋತ್ರ: ಪ್ರತಿದಿನ ದಕ್ಷಿಣಾಮೂರ್ತಿಯ ಸ್ತೋತ್ರ ಪಠಿಸುವುದರಿಂದ ಅಥವ ಕೇಳುವುದರಿಂದ ಆತ್ಮಶಕ್ತಿ ಹೆಚ್ಚುತ್ತದೆ. ವಾಕ್ ಶುದ್ಧಿ ಉಂಟಾಗಲಿದೆ.
2) ಈ ದಾನಗಳಿಂದ ಶುಭ ಫಲ: ಬಂಗಾರದ ಬಣ್ಣದ ಬಟ್ಟೆ ಮತ್ತು ಅಕ್ಕಿಯನ್ನು ದಾನ ನೀಡುವುದರಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು. ಗುರುಗಳನ್ನು ಸತ್ಕರಿಸಿದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಬಿಳಿ ಮತ್ತು ಕೆಂಪು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.