ಮಕರ ರಾಶಿ ಭವಿಷ್ಯ ಜು. 27: ಇಂದು ಪ್ರೇಮ ಜೀವನ ರೊಮ್ಯಾಂಟಿಕ್ ಆಗಿರಲಿದೆ, ಸ್ನೇಹಿತರಿಗೆ ನೀಡಿದ್ದ ಸಾಲದ ಹಣ ವಾಪಸ್ ದೊರೆಯಲಿದೆ
Capricorn Daily Horoscope 27 July 2024: ಇದು ರಾಶಿಚಕ್ರದ 10 ನೇ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ಮಕರದಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆಯನ್ನು ಮಕರ ರಾಶಿ ಎಂದು ಪರಿಗಣಿಸಲಾಗುತ್ತದೆ. ಇಂದು ಮಕರ ರಾಶಿಯವರ ದಿನ ಭವಿಷ್ಯ ಹೇಗಿದೆ ನೋಡೋಣ.

ಮಕರ ರಾಶಿ ಭವಿಷ್ಯ ಜುಲೈ 27: ಪ್ರೇಮ ಜೀವನ ರೊಮ್ಯಾಂಟಿಕ್ ಆಗಿರುತ್ತದೆ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಗೆ ಸಿದ್ಧರಾಗಿರಿ. ಇದು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ಇಂದು ನೀವು ಹಣಕಾಸಿನ ವಿಷಯಗಳಲ್ಲಿ ಅದೃಷ್ಟಶಾಲಿಯಾಗುತ್ತೀರಿ. ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮಕರ ರಾಶಿಯ ಇಂದಿನ ಪ್ರೇಮ ಭವಿಷ್ಯ (Capricorn Love Horoscope)
ಪ್ರೇಮಿಯೊಂದಿಗೆ ರೊಮ್ಯಾಂಟಿಕ್ ಆಗಿರಲಿದ್ದೀರಿ. ಮುಕ್ತ ಸಂವಹನವು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ. ಒಬ್ಬಂಟಿ ವೃಷಭ ರಾಶಿಯ ಜನರು ಅನಿರೀಕ್ಷಿತ ಸ್ಥಳಗಳಲ್ಲಿ ಪ್ರೀತಿ ಪಡೆಯಯುತ್ತಾರೆ. ನಿಮ್ಮ ಜೀವನದ ಅತಿ ದೊಡ್ಡ ಬದಲಾವಣೆಯನ್ನು ಸ್ವೀಕರಿಸಿ. ಪ್ರೇಮಿಯೊಂದಿಗೆ ತಾಳ್ಮೆಯಿಂದ ಮಾತನಾಡಿ. ಅವರ ಭಾವನೆಗಳಿಗೆ ನೋವುಂಟು ಮಾಡಬೇಡಿ.
ಮಕರ ರಾಶಿ ಇಂದಿನ ವೃತ್ತಿ ಭವಿಷ್ಯ (Capricorn Professional Horoscope)
ವೃತ್ತಿಪರ ಜೀವನದಲ್ಲಿ ಬಹಳ ಬದಲಾವಣೆಗಳಾಗಲಿವೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಕೆಲಸದಲ್ಲಿ ಅಪಾರ ಯಶಸ್ಸು ಸಿಗಲಿದೆ. ಕೆಲಸದ ಸ್ಥಳದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಇಂದು ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಕೆಲಸಗಳಿಗೆ ಮೆಚ್ಚುಗೆ ದೊರೆಯಲಿದೆ. ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳು ದೊರೆಯಲಿವೆ. ಆರ್ಥಿಕ ಲಾಭದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ.
ಮಕರ ರಾಶಿ ಇಂದಿನ ಆರ್ಥಿಕ ಭವಿಷ್ಯ (Capricorn Money Horoscope)
ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಬಹಳ ದಿನಗಳಿಂದ ಮತ್ತೊಬ್ಬರ ಬಳಿ ಉಳಿದಿದ್ದ ಹಣ ವಾಪಸ್ ಕೈ ಸೇರಲಿದೆ. ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಫಾರಿನ್ ಟ್ರಿಪ್ ಪ್ಲಾನ್ ಮಾಡುತ್ತಿರುವವರು ಬಜೆಟ್ ಸಿದ್ಧಪಡಿಸಿಕೊಳ್ಳಿ. ಮಕರ ರಾಶಿಯ ಕೆಲವು ಜನರು ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆ ಇದೆ. ಆಸ್ತಿ, ಹೊಸ ವ್ಯಾಪಾರ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಲು ಇಂದು ಸೂಕ್ತ ದಿನವಾಗಿದೆ.
ಮಕರ ರಾಶಿ ಇಂದಿನ ಆರೋಗ್ಯ ಭವಿಷ್ಯ (Capricorn Health Horoscope)
ನೀವು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತರಾಗುವಿರಿ. ಇಂದು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಹೆಚ್ಚು ನೀರು ಕುಡಿಯುವುದನ್ನು ಮರೆಯಬೇಡಿ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ. ಮಕರ ರಾಶಿಯ ಗರ್ಭಿಣಿಯರು ಬಸ್ ಅಥವಾ ರೈಲು ಹತ್ತುವಾಗ ಮತ್ತು ಇಳಿಯುವಾಗ ಬಹಳ ಜಾಗರೂಕರಾಗಿರಬೇಕು. ತಂಬಾಕು ಮತ್ತು ಮದ್ಯದ ಸೇವನೆಯನ್ನು ತಪ್ಪಿಸಿ.
ಮಕರ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಮಕರ ರಾಶಿಯ ಅಧಿಪತಿ: ಶನಿ, ಮಕರ ರಾಶಿಯವರಿಗೆ ಶುಭ ದಿನಾಂಕಗಳು: 6, 8 ಮತ್ತು 9. ಮಕರ ರಾಶಿಯವರಿಗೆ ಶುಭ ವಾರಗಳು: ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ. ಮಕರ ರಾಶಿಯವರಿಗೆ ಶುಭ ವರ್ಣ: ನೀಲಿ, ಬಿಳಿ ಮತ್ತು ಕೆಂಪು. ಮಕರ ರಾಶಿಯವರಿಗೆ ಅಶುಭ ವರ್ಣ: ಹಳದಿ ಮತ್ತು ಬಾದಾಮಿ ಬಣ್ಣ. ಮಕರ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ಪಶ್ಚಿಮ. ಮಕರ ರಾಶಿಯವರಿಗೆ ಶುಭ ತಿಂಗಳು: ಸೆಪ್ಟೆಂಬರ್ 15ರಿಂದ ಅಕ್ಟೋಬರ್ 14. ಮಕರ ರಾಶಿಯವರಿಗೆ ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ. ಮಕರ ರಾಶಿಯವರಿಗೆ ಹೊಂದಾಣಿಕೆ ಇರುವ ರಾಶಿ: ಕುಂಭ, ವೃಷಭ ಮತ್ತು ಕನ್ಯಾ. ಮಕರ ರಾಶಿಯವರಿಗೆ ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ, ಸಿಂಹ ಮತ್ತು ಧನು.
ಮಕರ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ಮಹಾ ಮೃತ್ಯುಂಜಯ ಮಂತ್ರ: ಪ್ರತಿದಿನ ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಮಾತಿನ ಮೇಲೆ ಹತೋಟಿ ಸಾಧಿಸುವಿರಿ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.
2) ಈ ದಾನಗಳಿಂದ ಶುಭ ಫಲ: ಕಡಲೆ ಬೇಳೆ ಮತ್ತು ಹಳದಿ ವಸ್ತ್ರವನ್ನು ದಾನ ನೀಡುವುದರಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಪಂಚಮುಖಿ ಆಂಜನೇಯಸ್ವಾಮಿ ಪೂಜೆ ಮಾಡುವುದರಿಂದ ಮನದ ಆತಂಕ ದೂರವಾಗಲಿದೆ. ದಂಪತಿ ನಡುವೆ ಉತ್ತಮ ಸಾಮರಸ್ಯ ಏರ್ಪಡುತ್ತದೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು ಮತ್ತು ನೀಲಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಆಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.