ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025 ರಲ್ಲಿ ಈ ರಾಶಿಯವರು ಶನಿ ಸಾಡೇಸಾತಿ ಪ್ರಭಾವದಿಂದ ಮುಕ್ತಿ ಹೊಂದುತ್ತಾರೆ; ಇನ್ಮುಂದೆ ನಿಮ್ಮ ಜೀವನದಲ್ಲಿ ಕಷ್ಟಕ್ಕೆ ಅವಕಾಶವೇ ಇಲ್ಲ

2025 ರಲ್ಲಿ ಈ ರಾಶಿಯವರು ಶನಿ ಸಾಡೇಸಾತಿ ಪ್ರಭಾವದಿಂದ ಮುಕ್ತಿ ಹೊಂದುತ್ತಾರೆ; ಇನ್ಮುಂದೆ ನಿಮ್ಮ ಜೀವನದಲ್ಲಿ ಕಷ್ಟಕ್ಕೆ ಅವಕಾಶವೇ ಇಲ್ಲ

ಶನಿಯು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ನೆಲಸಿರುತ್ತಾನೆ. ಆದರೂ ಶನಿಯ ಪ್ರಭಾವ ಅವನು ನೆಲೆಸಿರುವ ಹಿಂದಿನ, ಮುಂದಿನ ರಾಶಿಗಳಿಗೆ ಇರುತ್ತದೆ. 2025 ರಲ್ಲಿ ಮಕರ ರಾಶಿಯವರು ಶನಿ ಸಾಡೇಸಾತಿ ಪ್ರಭಾವದಿಂದ ಮುಕ್ತಿ ಹೊಂದುತ್ತಾರೆ. ಇನ್ಮುಂದೆ ನಿಮ್ಮ ಜೀವನದಲ್ಲಿ ಕಷ್ಟಕ್ಕೆ ಅವಕಾಶವೇ ಇರುವುದಿಲ್ಲ.

2025 ರಲ್ಲಿ ಈ ರಾಶಿಯವರು ಶನಿ ಸಾಡೇಸಾತಿ ಪ್ರಭಾವದಿಂದ ಮುಕ್ತಿ ಹೊಂದುತ್ತಾರೆ; ಇನ್ಮುಂದೆ ನಿಮ್ಮ ಜೀವನದಲ್ಲಿ ಕಷ್ಟಕ್ಕೆ ಅವಕಾಶವೇ ಇಲ್ಲ
2025 ರಲ್ಲಿ ಈ ರಾಶಿಯವರು ಶನಿ ಸಾಡೇಸಾತಿ ಪ್ರಭಾವದಿಂದ ಮುಕ್ತಿ ಹೊಂದುತ್ತಾರೆ; ಇನ್ಮುಂದೆ ನಿಮ್ಮ ಜೀವನದಲ್ಲಿ ಕಷ್ಟಕ್ಕೆ ಅವಕಾಶವೇ ಇಲ್ಲ

ಶನಿ ಸಂಕ್ರಮಣ: ಶನಿಯು ಕರ್ಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ಈ ವರ್ಷ ಪೂರ್ತಿ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಾರೆ. ಕುಂಭ, ಶನಿಯ ಸ್ವಂತ ರಾಶಿ ಆಗಿದ್ದು ಸುಮಾರು 30 ವರ್ಷಗಳ ನಂತರ ಶನಿಯು ತನ್ನದೇ ಆದ ರಾಶಿಯಲ್ಲಿ ಸಾಗುತ್ತಿದ್ದಾನೆ. ಆದರೆ ಶೀಘ್ರದಲ್ಲೇ ಶನಿಯು ಹಿಮ್ಮುಖ ಚಲನೆ ಆರಂಭಿಸಲಿದ್ದು ಕೆಲವೊಂದು ರಾಶಿಯವರಿಗೆ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀಡುತ್ತಾನೆ.

ಸಾಡೇಸಾತಿಯಿಂದ ಮುಕ್ತಿ ಹೊಂದುವ ರಾಶಿ ಯಾವುದು?

ಶನಿಯು ಅಧರ್ಮದಿಂದ ನಡೆದುಕೊಳ್ಳುವವರಿಗೆ ಶಿಕ್ಷೆ ಹಾಗೂ ನ್ಯಾಯದಿಂದ ನಡೆದುಕೊಳ್ಳುವವರಿಗೆ ಆಶೀರ್ವಾದ ಮಾಡುತ್ತಾನೆ. ದಾನ ಧರ್ಮಗಳನ್ನು ಕಾರ್ಯಗಳನ್ನು ಮಾಡುವವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಆದ್ದರಿಂದ ಶನಿಯನ್ನು ನ್ಯಾಯದೇವ ಎಂದು ಕರೆಯಲಾಗುತ್ತದೆ. ಶನಿಯು ಎರಡೂವರೆ ವರ್ಷಗಳ ಕಾಲ ರಾಶಿ ಚಕ್ರದಲ್ಲಿ ಇರುತ್ತಾನೆ. ಸಾಡೇಸಾತಿ ಅಥವಾ ಏಳರಾಳ ಶನಿಯ ಪ್ರಭಾವವು, ಆತ ವಾಸಿಸುವ ಮುಂದಿನ ಹಾಗೂ ಹಿಂದಿ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಮತ್ತು ಹಿಂದಿನ ಚಿಹ್ನೆಗಳ ಮೇಲೆ ಪ್ರಭಾವ ಬೀರುತ್ತದೆ. ಶನಿ ಮಹಾದಶಾ, ಸಾಡೇ ಸತಿ ಮತ್ತು ದಯ್ಯ ಶನಿಯ ವಿಶೇಷ ಹಂತಗಳು. 2025 ರಲ್ಲಿ ಶನಿಯು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಮೇ 2025 ರ ನಂತರ, ಶನಿಯು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ .

ಶನಿಯು ತನ್ನ ರಾಶಿಯನ್ನು ಬದಲಾಯಿಸುವುದರಿಂದ 2025 ರಲ್ಲಿ ಮಕರ ರಾಶಿಯವರು ಸಾಡೇಸಾತಿಯಿಂದ ವಿಮುಕ್ತಿ ಹೊಂದುತ್ತಾಋೆ. ಮೀನ ರಾಶಿಯಲ್ಲಿ ಶನಿ ಸಂಕ್ರಮಣದ ಸಮಯದಲ್ಲಿ, ಮಕರ ರಾಶಿಯ ಜಾತಕನು ಶನಿಯಿಂದ ಮುಕ್ತನಾಗುತ್ತಾನೆ . ಕುಂಭ ರಾಶಿಯ ಮೇಲೆ ಶನಿ ಸಾಡೇ ಸತಿ ಪ್ರಭಾವ ಪ್ರಾರಂಭವಾಗುತ್ತದೆ. ಪರಿಣಾಮವಾಗಿ, ಅನೇಕ ಸಮಸ್ಯೆಗಳು ಉದ್ಭವಿಸಬಹುದು. 23 ಜನವರಿ 2028 ರಂದು ರಂದು ಕುಂಭ ರಾಶಿಯವರು ಸಾಡೇಸಾತಿಯಿಂದ ಮುಕ್ತರಾಗುತ್ತಾರೆ.

ಶನಿ ಹಿಮ್ಮುಖ ಚಲನೆ ಪರಿಣಾಮಗಳು

ಜೂನ್ 29 ರಿಂದ ಶನಿಯು ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ರಾಶಿಚಕ್ರ ಚಿಹ್ನೆಯ ಜನರಿಗೆ ಯಾವ ರೀತಿಯ ಪರಿಹಾರಗಳು ಉತ್ತಮವೆಂದು ನೋಡೋಣ.

ಮೇಷ: ಈ ರಾಶಿಯವರು ಸ್ವಲ್ಪ ಜಾಗರೂಕರಾಗಿರಬೇಕು. ಶನಿ ದೇವರಿಗೆ ಇಷ್ಟವಾದ ಪದಾರ್ಥಗಳನ್ನು ದಾನ ಮಾಡುವುದು ಒಳ್ಳೆಯದು. ಎಲ್ಲರಲ್ಲೂ ಪ್ರೀತಿ ತೋರಿಸಿ ಯಾರನ್ನೂ ನಿಂದಿಸಬೇಡಿ.

ವೃಷಭ: ಶನಿಯ ಪ್ರಭಾವದಿಂದ ವೃಷಭ ರಾಶಿಯವರಿಗೆ ಕೆಲಸದಲ್ಲಿ ಸಮಸ್ಯೆಗಳಿರಬಹುದು. ಆದ್ದರಿಂದ ನಿಮ್ಮ ಮಾತುಗಳನ್ನು ನಿಯಂತ್ರಿಸಿ. ನಿಂದನೀಯ ಭಾಷೆಯನ್ನು ಬಳಸಬೇಡಿ.

ಮಿಥುನ: ಶನಿ ಹಿಮ್ಮುಖ ಚಲನೆ ಸಮಯದಲ್ಲಿ ಮಿಥುನ ರಾಶಿಯವರು ಎಲ್ಲಿಯಾದರೂ ಹಣವನ್ನು ಹೂಡಿಕೆ ಮಾಡುವ ಮೊದಲು ಜಾಗರೂಕರಾಗಿರಬೇಕು. ವಹಿವಾಟುಗಳನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು.

ಕರ್ಕಾಟಕ: ಶನಿಯ ಹಿಮ್ಮುಖ ಹಂತವು ಕರ್ಕ ರಾಶಿಯವರಿಗೆ ಒತ್ತಡದ ಸಮಯವನ್ನು ನೀಡುತ್ತದೆ. ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಆತುರದ ನಿರ್ಧಾರ ಬೇಡ.

ಸಿಂಹ: ಶನಿಯು ಹಿಮ್ಮೆಟ್ಟುವಿಕೆ ಈ ರಾಶಿಯವರಿಗೆ ಶುಭ ಫಲಿತಾಂಶ ನೀಡಲಿದೆ. ವ್ಯಾಪಾರದಲ್ಲಿ ಲಾಭ ಬರುವ ಸಾಧ್ಯತೆ ಇದೆ.

ವೃಶ್ಚಿಕ: ಶನಿಯ ಪ್ರಭಾವದಿಂದ ವೃಶ್ಚಿಕ ರಾಶಿಯವರು ದಿಢೀರ್‌ ಲಾಭವನ್ನು ಹೊಂದಬಹುದು. ಆದರೆ ಯಾರಿಗೂ ತೊಂದರೆ ಕೊಡದಿರುವುದು ಉತ್ತಮ.

ಧನು ರಾಶಿ: ಧನಸ್ಸು ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಶನಿದೇವನ ಪ್ರಭಾವದಿಂದ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

ಮಕರ ರಾಶಿ : ಶನಿಯ ಹಿಮ್ಮುಖ ಚಲನೆ ಅವಧಿಯಲ್ಲಿ ಮಕರ ರಾಶಿಯ ಜಾತಕರು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಯಾವುದೇ ಕೆಲಸವನ್ನು ಮುಂದೂಡಬಾರದು. ಹೀಗೆ ಮಾಡುವುದರಿಂದ ಮುಂದೆ ಸಮಸ್ಯೆಗಳು ಎದುರಾಗಬಹುದು.

ಕುಂಭ ರಾಶಿ : ಈ ರಾಶಿಯವರಿಗೆ ಸಾಡೇ ಸತಿಯ ಪ್ರಭಾವವಿದೆ. ಆದ್ದರಿಂದ ಶನಿಯ ಸಂಚಾರದ ಬಗ್ಗೆ ಜಾಗರೂಕರಾಗಿರಬೇಕು . ಯಾರಿಗೂ ನೋಯಿಸದಂತೆ ಎಚ್ಚರಿಕೆ ವಹಿಸಿ.

ಮೀನ: ಶನಿಯ ಪ್ರಭಾವದಿಂದ ಉದ್ಯೋಗದಲ್ಲಿ ವರ್ಗಾವಣೆಯಾಗುವ ಸಾಧ್ಯತೆ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)