ತೋರು ಬೆರಳು, ಮಧ್ಯದ ಬೆರಳುಗಳಲ್ಲಿ ಚಕ್ರಗಳಿದ್ದರೆ ಭಾರಿ ಅದೃಷ್ಟವಂತರು; ಹಣದ ಕೊರತೆಯೇ ಇರಲ್ಲ, ಹತ್ತಾರು ಲಾಭಗಳು-horoscope chakras in index finger middle fingers are very lucky benefits details here ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತೋರು ಬೆರಳು, ಮಧ್ಯದ ಬೆರಳುಗಳಲ್ಲಿ ಚಕ್ರಗಳಿದ್ದರೆ ಭಾರಿ ಅದೃಷ್ಟವಂತರು; ಹಣದ ಕೊರತೆಯೇ ಇರಲ್ಲ, ಹತ್ತಾರು ಲಾಭಗಳು

ತೋರು ಬೆರಳು, ಮಧ್ಯದ ಬೆರಳುಗಳಲ್ಲಿ ಚಕ್ರಗಳಿದ್ದರೆ ಭಾರಿ ಅದೃಷ್ಟವಂತರು; ಹಣದ ಕೊರತೆಯೇ ಇರಲ್ಲ, ಹತ್ತಾರು ಲಾಭಗಳು

ನಮ್ಮ ಕೈಬೆರಳುಗಳಿಂದ ಜೀವನದಲ್ಲಾಗುವ ಲಾಭ, ನಷ್ಟಗಳನ್ನು ತಿಳಿಯಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತೋರು ಬೆರಳು ಮತ್ತು ಮಧ್ಯದ ಬೆರಳುಗಳಲ್ಲಿ ಚಕ್ರಗಳಿದ್ದರೆ ಭಾರಿ ಅದೃಷ್ಟ ಎಂದು ಪರಿಗಣಿಸಲಾಗಿದೆ. ಏನೆಲ್ಲಾ ಲಾಭಗಳಿವೆ ಅನ್ನೋದರ ವಿವರ ಇಲ್ಲಿದೆ.

ತೋರು ಬೆರಳು, ಮಧ್ಯದ ಬೆರಳುಗಳಲ್ಲಿ ಚಕ್ರಗಳಿದ್ದರೆ ಭಾರಿ ಅದೃಷ್ಟವಂತರು; ಹಣದ ಕೊರತೆಯೇ ಇರಲ್ಲ, ಹತ್ತಾರು ಲಾಭಗಳು
ತೋರು ಬೆರಳು, ಮಧ್ಯದ ಬೆರಳುಗಳಲ್ಲಿ ಚಕ್ರಗಳಿದ್ದರೆ ಭಾರಿ ಅದೃಷ್ಟವಂತರು; ಹಣದ ಕೊರತೆಯೇ ಇರಲ್ಲ, ಹತ್ತಾರು ಲಾಭಗಳು

ತೋರುಬೆರಳು ಮತ್ತುಮಧ್ಯದ ಬೆರಳುಗಳಲ್ಲಿ ಚಕ್ರಗಳಿದ್ದರೆ ಜೀವನವು ಸುಖ ಸಮೃದ್ಧಿಯಿಂದ ಕೂಡಿರುತ್ತದೆ. ನಂಬಿದವರ ಜೊತೆಯಲ್ಲಿ ಉತ್ತಮ ಬಾಂಧವ್ಯ ಮತ್ತು ಹೊಂದಾಣಿಕೆಯಿಂದ ಬಾಳುವರು. ಹಣದ ತೊಂದರೆ ಕಾಣುವುದಿಲ್ಲ. ಯಾವುದೇ ಕೆಲಸವನ್ನು ಆರಂಭಿಸಿದರೂ ಆತ್ಮೀಯರ ಸಹಾಯ ಸಹಕಾರ ದೊರೆಯುತ್ತದೆ. ಸಂತ ಉದ್ದಿಮೆ ಇದ್ದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮ ಅನುಬಂಧ ಉಂಟಾಗುತ್ತದೆ. ಇದರಿಂದಾಗಿ ವರಮಾನದಲ್ಲಿ ಕೊರತೆ ಉಂಟಾಗುವುದಿಲ್ಲ. ಆತ್ಮೀಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಲು ಪ್ರಯತ್ನಿಸುವಿರಿ. ಇವರ ಭಾಗ್ಯದಲ್ಲಿ ಇಚ್ಛೆ ಪಟ್ಟ ಎಲ್ಲಾ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ. ಸಹಾಯ ಸಹಕಾರ ಸದಾ ಕಾಲ ಲಭಿಸುತ್ತದೆ. ವೈವಾಹಿಕ ಜೀವನದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ನಡುವೆ ಉತ್ತಮ ಹೊಂದಾಣಿಕೆ ಕಂಡು ಬರುತ್ತದೆ. ಆದರೆ ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗುತ್ತದೆ.

ಇವರಿಗೆ ಹಣ ಉಳಿತಾಯ ಮಾಡಲು ಸಾಧ್ಯವಾಗದು. ಆದರೆ ಹಣದ ತೊಂದರೆ ಇರುವುದಿಲ್ಲ. ಸುಲಭವಾಗಿ ಯಾರನ್ನು ನಂಬುವುದಿಲ್ಲ. ಆದರೆ ಒಮ್ಮೆ ಇವರ ಮನಸ್ಸನ್ನು ಗೆದ್ದರೆ ಅವರಿಂದ ದೂರವಾಗುವುದು ಇಲ್ಲ. ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತದೆ. ಆದರೆ ದೀರ್ಘಕಾಲ ಕಾಡಬಲ್ಲ ರೋಗ ಇರುವುದಿಲ್ಲ. ಇಳಿಯಸ್ಸಿನಲ್ಲಿಯೂ ಸಹ ಬೇರೆಯವರನ್ನು ಅವಲಂಬಿಸದೆ ಸ್ವತಂತ್ರವಾದ ಜೀವನ ನಡೆಸುವಿರಿ.

ತೋರು ಬೆರಳು ಮತ್ತು ಉಂಗುರದ ಬೆರಳುಗಳಲ್ಲಿ ಚಕ್ರಗಳಿದ್ದರೆ ಏನು ಲಾಭಗಳಿವೆ

ತೋರು ಬೆರಳು ಮತ್ತು ಉಂಗುರದ ಬೆರಳುಗಳಲ್ಲಿ ಚಕ್ರಗಳಿದ್ದಲ್ಲಿ ಪ್ರತಿಯೊಂದು ವಿಚಾರಗಳಲ್ಲಿಯೂ ವಿಶೇಷತೆ ಕಂಡು ಬರುತ್ತದೆ. ಕುಟುಂಬದ ಎಲ್ಲಾ ವಿಚಾರಗಳು ಇವರ ನಿರ್ದೇಶನದಂತೆ ನಡೆಯಲಿದೆ. ಇಷ್ಟವಿಲ್ಲದೆ ಹೋದರು ಅನಿವಾರ್ಯವಾಗಿ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕುಟುಂಬದ ಹಿರಿಯರ ಜೊತೆಯಲ್ಲಿ ಪ್ರೀತಿ ವಿಶ್ವಾಸ ಮತ್ತು ಗೌರವದಿಂದ ನಡೆದುಕೊಳ್ಳುವರು. ಬಾಲ್ಯದಲ್ಲಿ ಎಲ್ಲರ ಗಮನ ಸೆಳೆಯುವ ಕೆಲಸಗಳನ್ನು ಮಾಡುವರು. ಹುಟ್ಟಿದ ಸ್ಥಳದಿಂದ ದೂರವಿರುವರು. ಇವರಿಗೆ ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುವ ಅವಕಾಶ ದೊರೆಯುತ್ತದೆ. ದೂರದ ಸಂಬಂಧಿಗಳ ಜೊತೆ ವಿವಾಹವಾಗುತ್ತದೆ. ಸಣ್ಣಪುಟ್ಟ ವಿಚಾರಗಳಿಗೂ ಬೇರೆಯವರ ಅಭಿಪ್ರಾಯವನ್ನು ಪರಿಗಣಿಸುವರು. ಬೇರೆಯವರಿಗೆ ಯಾವುದೇ ರೀತಿಯ ಸಲಹೆ ಸೂಚನೆಯನ್ನು ನೀಡುವುದಿಲ್ಲ.

ಇವರು ಅನಾವಶ್ಯಕವಾಗಿ ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ ಇವರಿಗೆ ಒಳ್ಳೆಯ ಮಕ್ಕಳಿರುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ಕುಟುಂಬದ ಮತ್ತು ಸಮಾಜದ ನಾಯಕನಾಗಿ ಮುಂದುವರೆಯುವಿರಿ. ಬೇರೊಬ್ಬರನ್ನು ಅವಲಂಬಿಸದೆ ಸ್ವತಂತ್ರವಾದ ಜೀವನ ನಡೆಸುವೆ ಕಷ್ಟಕಾಲಕ್ಕೆಂದು ಕೂಡಿಟ್ಟ ಹಣವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವುದಿಲ್ಲ. ಅನಾವಶ್ಯಕ ಖರ್ಚುರ್ಚಿವಚ್ಚಗಳು ಮನಸ್ಸಿಗೆ ಬೇಸರವನ್ನು ಉಂಟುಮಾಡುತ್ತದೆ ಕಷ್ಟವಿಲ್ಲದ ಸುಖಕರವಾದ ಜೀವನವನ್ನು ನಡೆಸುವರು.

ತೋರು ಬೆರಳು ಮತ್ತು ಕಿರು ಬೆರಳುಗಳಲ್ಲಿ ಚಕ್ರವಿದ್ದರೆ ಈ ಅರ್ಥವನ್ನು ಕೊಡುತ್ತೆ

ತೋರು ಬೆರಳು ಮತ್ತು ಕಿರು ಬೆರಳುಗಳಲ್ಲಿ ಚಕ್ರವಿದ್ದಲ್ಲಿ ಕುಟುಂಬದಲ್ಲಿ ವಿಶೇಷವಾದಂತಹ ಪ್ರೀತಿ ವಿಶ್ವಾಸ ನೆಲೆಯೂರುತ್ತದೆ. ಸೋದರ ಮಾವನ ಜೊತೆಯಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಯಾರಲ್ಲಿಯೂ ಯಾವುದೇ ರೀತಿಯ ಭೇದ ಭಾವ ತೋರುವುದಿಲ್ಲ. ಎಲ್ಲರನ್ನು ಸಮಾನವಾದ ದೃಷ್ಟಿಕೋನದಿಂದ ಕಾಣುವ ಕಾರಣ ಕುಟುಂಬದಲ್ಲಿ ವಿಶೇಷವಾದಂತಹ ಸ್ಥಾನಮಾನ ದೊರೆಯುತ್ತದೆ. ಸಮಾಜದಲ್ಲಿನ ನಾಯಕತ್ವ ಇವರದಾಗುತ್ತದೆ. ಬಾಲ್ಯದಿಂದಲೂ ಪರೋಪಕಾರದ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಆಟ ಪಾಠಗಳನ್ನು ಲಘುವಾಗಿ ಪರಿಗಣಿಸುವ ಕಾರಣ ಮಧ್ಯಮ ಗತಿಯ ಯಶಸ್ಸು ದೊರೆಯುತ್ತದೆ. ವಿವಾಹವನ್ನು ಪ್ರಮುಖ ವಿಚಾರವಾಗಿ ಪರಿಗಣಿಸುವುದಿಲ್ಲ. ಕೇವಲ ತಮ್ಮ ಕರ್ತವ್ಯವನ್ನು ಮಾತ್ರ ಪಾಲಿಸುವಲ್ಲಿ ಯಶಗಳಿಸುವರು.

ಸಂಬಂಧದಲ್ಲಿ ವಿವಾಹವಾದಲ್ಲಿ ಅನಾವಶ್ಯಕ ವಾದ ವಿವಾದಗಳು ಎದುರಾಗುತ್ತವೆ. ಉದ್ಯೋಗದಲ್ಲಿ ಇವರ ಸರಿ ಸಮಾನವಾಗಿ ಯಾರು ಬರಲಾರರು. ಅನಾವಶ್ಯಕವಾಗಿ ಉದ್ಯೋಗವನ್ನು ಬದಲಿಸುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿಉತ್ತಮ ವರಮಾನ ಇರುತ್ತದೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿಆಸಕ್ತಿ ತೋರುವುದಿಲ್ಲ. ಅಸಾಧ್ಯವೆನಿಸಬಹುದಾದ ಕೆಲಸವನ್ನು ಸುಲಭವಾಗಿ ಬೇರೆಯವರಿಗೆ ವಹಿಸುವಿರಿ. ವಯಸ್ಸಾದ ನಂತರ ಮಕ್ಕಳ ಮೇಲೆ ಅವಲಂಬಿತರಾಗದೆ ಹೋದರು ಮಕ್ಕಳಿಂದ ದೂರ ಹೋಗಲಾರರು. ಸಾಲವನ್ನು ಕೊಡುವುದಾಗಲಿ ಅಥವಾ ಪಡೆಯುವುದಾಗಲಿ ಇವರಿಗೆ ಆಗದ ಮಾತು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.